ಜಿಯೋಗೆ ಬಿಗ್‌ಶಾಕ್!..ಗೂಗಲ್‌ನಿಂದ ಕೇವಲ 490 ರೂ.ಗೆ 4G ಫೋನ್ ಬಿಡುಗಡೆ!!

|

ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ಎಂದೂ ಹಿಂದೆ ಉಳಿದಿರುವ ಟೆಕ್ ದೈತ್ಯ ಗೂಗಲ್ ಕಂಪೆನಿ ಇದೀಗ ಅತ್ಯಂತ ಕಡಿಮೆ ಬೆಲೆಯ 4G ಮೊಬೈಲ್ ಅನ್ನು ಬಿಡುಗಡೆಗೊಳಿಸಿ ಅಚ್ಚರಿ ಮೂಡಿಸಿದೆ. ರಿಲಯನ್ಸ್ ಜಿಯೋ ಫೋನ್‌ಗೆ ಸೆಡ್ಡು ನೀಡಿರುವ ಸರ್ಚ್ ಎಂಜಿನ್ ದೈತ್ಯ ಗೂಗಲ್, ಇಂಡೋನೇಷ್ಯಾದಲ್ಲಿ ತನ್ನ ಮೊದಲ ಅಗ್ಗದ 4G ಮೊಬೈಲ್ ಅನ್ನು ಬಿಡುಗಡೆ ಮಾಡಿದೆ.

ಹೌದು, ಸ್ಮಾರ್ಟ್ ಕಾರ್ಯಕ್ಷಮತೆಗಳೊಂದಿಗೆ ಗೂಗಲ್‌ನ ಫೀಚರ್ 4G ಮೊಬೈಲ್ ಒಂದು 'ವಿಝ್ಫೋನ್ ಡಬ್ಲ್ಯುಪಿ006' ಎಂಬ ವಿಲಕ್ಷಣ ಹೆಸರಿನೊಂದಿಗೆ ಕಾಲಿಟ್ಟಿದೆ. ಕಾಯ್ ಓಪರೇಟಿಂಗ್ (KaiOS) ಸಿಸ್ಟಂ ಮತ್ತು ಧ್ವನಿ ಆಜ್ಞೆಗಳನ್ನು ನೀಡಬಹುದಾದ ಗೂಗಲ್ ಅಸಿಸ್ಟೆಂಟ್‌ನಂತಹ ಕೆಲ ವಿಶೇಷ ಫೀಚರ್ಸ್‌ಗಳನ್ನು ಹೊತ್ತು ಈ ಫೀಚರ್ 4G ಫೋನ್ ಈಗ ಬಿಡುಗಡೆಯಾಗಿದೆ.

ಜಿಯೋಗೆ ಬಿಗ್‌ಶಾಕ್!..ಗೂಗಲ್‌ನಿಂದ ಕೇವಲ 490 ರೂ.ಗೆ 4G ಫೋನ್ ಬಿಡುಗಡೆ!!

ಈ ಫೋನಿನ ಗಮನಾರ್ಹ ಅಂಶವೆಂದರೆ ಕಾಯ್ ಆಪರೇಟಿಂಗ್ ಸಿಸ್ಟಂ ಜಿಯೋ ಫೋನಿ‌ನಲ್ಲೂ ಅಡಕವಾಗಿದೆ. ನೂತನ ಫೋನ್ ಗೂಗಲ್‌ನ ಜನಪ್ರಿಯ ಗೂಗಲ್ ಅಸಿಸ್ಟನ್ಸ್, ಗೂಗಲ್ ಮ್ಯಾಪ್, ಗೂಗಲ್ ಸರ್ಚ್ ಇತ್ಯಾದಿ ಆಪ್‌ಗಳನ್ನು ಹೊಂದಿರುತ್ತದೆ. ಹಾಗಾದರೆ, ಗೂಗಲ್ ಬಿಡುಗಡೆ ಮಾಡಿರುವ ಝ್ಫೋನ್ ಡಬ್ಲ್ಯುಪಿ006 ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

 ಜಿಯೋ ಫೋನಿಗೆ ಸೆಡ್ಡು!

ಜಿಯೋ ಫೋನಿಗೆ ಸೆಡ್ಡು!

ಭಾರತದಂತಹ ರಾಷ್ಟ್ರದಲ್ಲಿ ಜಿಯೋ ತನ್ನ ಫೀಚರ್ 4G ಜಿಯೋಫೋನ್ ಬಿಡುಗಡೆಗೊಳಿಸಿ ಯಶಸ್ವಿಯಾದ ನಂತರ ಗೂಗಲ್ ಈಗ ಜಿಯೋ ಕಂಪೆನಿಗೆ ಸೆಡ್ಡುಹೊಡೆದಿದೆ. ಆದರೆ, ಈ ಫೋನ್ ಅನ್ನು ಭಾರತದಲ್ಲಿ ಮೊದಲು ಲಾಂಚ್ ಮಾಡದೇ, ಇಂಡೋನೇಷ್ಯಾ ಮಾರುಕಟ್ಟೆಗೆ ಮೊದಲು ಬಿಡುಗಡೆ ಮಾಡಿದೆ. ಅಲ್ಲಿ ಜಿಯೋ ಪಡೆದ ಯಶಸ್ಸನ್ನು ಪಡೆಯಲು ಯತ್ನಿಸುತ್ತಿದೆ ಎನ್ನಲಾಗಿದೆ.

ಕೇವಲ 490 ರೂ. ಬೆಲೆ!

ಕೇವಲ 490 ರೂ. ಬೆಲೆ!

ಗೂಗಲ್ ಫಾರ್ ಇಂಡೋನೇಷ್ಯಾ ಸಮಾರಂಭದಲ್ಲಿ 'ವಿಝ್ಫೋನ್ ಡಬ್ಲ್ಯುಪಿ006' ಫೋನ್ ಅನ್ನು ಗೂಗಲ್ ಪ್ರಾರಂಭಿಸಿದ್ದು, ಈ ಫೋನ್ ಬೆಲೆಯನ್ನು 99,000 ಐಆರ್ಆರ್‌ಗಳಿಗೆ ನಿಗದಿಪಡಿಸಲಾಗಿದೆ. ಡಾಲರ್ ಲೆಕ್ಕದಲ್ಲಿ ಕೇವಲ 7 ಡಾಲರ್‌ಗಳು ಮಾತ್ರವಾಗಿದ್ದು, ಇನ್ನು ಇದು ಭಾರತೀಯ ಕರೆನ್ಸಿಯಲ್ಲಿ ಸರಿ ಸುಮಾರಾಗಿ 490 ರೂಪಾಯಿಗಳಾಗುತ್ತವೆ.

ಹೇಗಿದೆ 'ವಿಝ್ಫೋನ್ ಡಬ್ಲ್ಯುಪಿ006'?

ಹೇಗಿದೆ 'ವಿಝ್ಫೋನ್ ಡಬ್ಲ್ಯುಪಿ006'?

'ವಿಝ್ಫೋನ್ ಡಬ್ಲ್ಯುಪಿ006' ಜಿಯೋಫೋನಿನಂತರ ಹೋಲುತ್ತದೆ ಎಂದು ನೀವು ಭಾವಿಸಿದರೆ ಅದು ನಿಜ ಕೂಡ ಹೌದು. ಏಕೆಂದರೆ, 'ವಿಝ್ಫೋನ್ ಡಬ್ಲ್ಯುಪಿ006' ಫೀಚರ್ 4G ಪೋನ್ ಬಹುತೇಕ ಜಿಯೋಫೋನಿಂತೇ ಕಾಣುತ್ತಿದೆ. ಮುಂಬಾಗದಲ್ಲಿ ಸೆಲ್ಫಿ ಕ್ಯಾಮೆರಾ, 2.4 ಇಂಚಿನ ಸ್ಕೀನ್ ಹಾಗೂ ಹಿಂಬಾಗದಲ್ಲಿ ಕ್ಯಾಮೆರಾ ಮತ್ತು ಫ್ಲಾಶ್‌ ಹೊಂದಿರುವುದನ್ನು ನಾವು ನೋಡಬಹುದಾಗಿದೆ.

ಕಾಯ್ ಓಪರೇಟಿಂಗ್ (KaiOS) ಸಿಸ್ಟಂ!

ಕಾಯ್ ಓಪರೇಟಿಂಗ್ (KaiOS) ಸಿಸ್ಟಂ!

'ವಿಝ್ಫೋನ್ ಡಬ್ಲ್ಯುಪಿ006' ಫೀಚರ್ ಫೋನಿನಲ್ಲಿ ಜಿಯೋಫೋನಿನಲ್ಲಿ ನೀಡಲಾಗಿದ್ದ ಕಾಯ್ ಓಪರೇಟಿಂಗ್ (KaiOS) ಸಿಸ್ಟಂ ಅನ್ನೇ ನೀಡಲಾಗಿದೆ. ವಿಶ್ವೆದೆಲ್ಲೆಡೆ 50 ದಶಲಕ್ಷ ಫೋನ್‌ಗಳಲ್ಲಿ ಕಾಯ್ ಆಪರೇಟಿಂಗ್ ಸಿಸ್ಟಂ ಚಾಲ್ತಿಯಲ್ಲಿದ್ದು, ಇದೇ ಸಂದರ್ಭದಲ್ಲಿ ಕಾಯ್ ಆಪರೇಟಿಂಗ್ ಸಿಸ್ಟಂಗಳಿಗಾಗಿ ಗೂಗಲ್ ಪ್ರತ್ಯೇಕ ಯೂಟ್ಯೂಬ್ ಆಪ್ ಅನ್ನು ಕೂಡಾ ಬಿಡುಗಡೆ ಮಾಡಿದೆ.

ಏನೆಲ್ಲಾ ವಿಶೇಷತೆಗಳು?

ಏನೆಲ್ಲಾ ವಿಶೇಷತೆಗಳು?

'ವಿಝ್ಫೋನ್ ಡಬ್ಲ್ಯುಪಿ006' ಫೀಚರ್ ಫೋನಿನಲ್ಲಿ 512MB RAM, 4GB ಆಂತರಿಕ ಸ್ಟೋರೇಜ್, 2.4 ಇಂಚಿನ ಸ್ಕ್ರೀನ್, 2MP ಹಿಂಬದಿಯ ಕ್ಯಾಮೆರಾ ಮತ್ತು ವಿಜಿಎ ​​ಫ್ರಂಟ್ ಕ್ಯಾಮೆರಾ, 1800 mAh ಬ್ಯಾಟರಿ ಮತ್ತು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ MSM8905 ಚಿಪ್ಸೆಟ್‌ನಂತಹ ಫೀಚರ್ಸ್ ಅನ್ನು ನೀಡಲಾಗಿದೆ. ಇದು ಜಿಯೋ ಫೋನಿನ ನಕಲಿನಂತೆ ಕಾಣುತ್ತಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಬಿಡುಗಡೆ?

ಭಾರತದಲ್ಲಿ ಬಿಡುಗಡೆ?

ಸದ್ಯ ಇಂಡೋನೇಷ್ಯಾ ಮಾರುಕಟ್ಟೆ ಪ್ರವೇಶಿಸಿರುವ ಫೋನ್ ಭಾರತದಲ್ಲೂ ಬಿಡುಗಡೆಯಾಗಲಿದೆಯೇ ಎಂಬುದು ತಿಳಿದು ಬಂದಿಲ್ಲ. ಆದರೆ, ಭಾರತದಲ್ಲಿ ಜಿಯೋ ಗಳಿಸಿರುವ ಯಶಸ್ಸನ್ನೇ ಅಲ್ಲಿ ಗಳಿಸಲು ಯತ್ನಿಸಿರುವ ಗೂಗಲ್ ಭಾರತದಲ್ಲಿ ಈ ಫೋನ್ ಅನ್ನು ಬಿಡುಗಡೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕು. ಏಕೆಂದರೆ, ನಾವು ಬಿಡುಗಡೆಯ ನಿರೀಕ್ಷೆಯಲ್ಲಿ ಇದ್ದೇವೆ.

Best Mobiles in India

English summary
The new Google phone looks like a feature phone, similar to the JioPhone, but comes with KaiOS and some smart functionality including Google Assistant. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X