ಗೂಗಲ್‌ನ ಹೊಸ ನೆಕ್ಸಸ್ 6 ಚಿತ್ರಗಳು ಸೋರಿಕೆ

By Shwetha
|

ಮುಂದಿನ ಜನರೇಶನ್‌ನ ನೆಕ್ಸಸ್ 6 ನ ಆಗಮನದೊಂದಿಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆ ವದಂತಿಗಳ ಹೆಚ್ಚಿನ ಖ್ಯಾತಿಯಿಂದ ತುಂಬಿಹೋಗಿದೆ. ಆಪಲ್ ಐಫೋನ್ ಪ್ಲಸ್ ಮತ್ತು ಸ್ಯಾಮ್‌ಸಂಗ್ ನೋಟ್ 4 ನ ಮೆಚ್ಚುಗೆಯನ್ನು ಕಬಳಿಸುವ ಹುನ್ನಾರವನ್ನು ಗೂಗಲ್ ಮಾಡಿಕೊಂಡಿದ್ದು ಮುಂಬರಲಿರುವ ಮೋಟೋರೋಲಾ ಜೊತೆಗೆ ನೆಕ್ಸಸ್ 6 ಅನ್ನು ಗೂಗಲ್ ಲಾಂಚ್ ಮಾಡಹೊರಟಿದೆ. ಇನ್ನು ವರದಿಗಳ ಪ್ರಕಾರ ಗೂಗಲ್ ದೊಡ್ಡ ಪರದೆಯ ನೆಕ್ಸಸ್ 6 ಅನ್ನು ಮುಂದಿನ ತಿಂಗಳು ಲಾಂಚ್ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ಸೋನಿಯ ಹೊಸ ಎಕ್ಸ್‌ಪೀರಿಯಾ Z3 ಲಾಂಚ್

ನೆಕ್ಸಸ್ 6, 5.92 ಇಂಚಿನ FHD ಡಿಸ್‌ಪ್ಲೇಯೊಂದಿಗೆ ಬಂದಿದ್ದು, ಗೂಗಲ್‌ನ ವರದಿಯ ಪ್ರಕಾರ 9 ರಿಂದ 5 ಎಂದಾಗಿದೆ. ಇನ್ನು ಹಿಂದಿನ ವದಂತಿಯ ಪ್ರಕಾರ ನೆಕ್ಸಸ್ 6, 5.2 ಇಂಚಿನ FHD ಡಿಸ್‌ಪ್ಲೇಯೊಂದಿಗೆ ಬರಲಿದೆ ಎಂದಾಗಿದೆ. ಡಿವೈಸ್ ಪ್ರಸ್ತುತ ಜನರೇಶನ್ ಮೋಟೋರೋಲಾ ಎಕ್ಸ್‌ನಂತಿದ್ದು ಅದೇ ವಿನ್ಯಾಸವನ್ನು ಪಡೆದುಕೊಂಡಿದೆ ಎಂದಾಗಿದೆ. ಇದೇ ಸಮಯದಲ್ಲಿ ನಮಗೆ ನೆಕ್ಸಸ್ 6 ನ ಕೆಲವೊಂದು ಸೋರಿಕೆ ಚಿತ್ರಗಳು ದೊರಕಿದ್ದು ಈ ಮಾಹಿತಿಗಳನ್ನು ಪುಷ್ಟೀಕರಿಸಿದಂತಿದೆ.

ಗೂಗಲ್ ನೆಕ್ಸಸ್ 6 ಮೋಟೋ ಎಕ್ಸ್ ಪಡಿಯಚ್ಚೇ?

ಇನ್ನು ಚಿತ್ರವನ್ನು ವಿವರವಾಗಿ ಗಮನಿಸಿದಾಗ, ಗೂಗಲ್ ನೆಕ್ಸಸ್ 6, ಮೋಟೋ X 2 ನ ಅದೇ ಮಾದರಿಯಂತೆ ಕಂಡುಬಂದಿದೆ. ನೆಕ್ಸಸ್ 6 ನ ಮೈಕ್ರೋಫೋನ್, ಹೆಡ್‌ಫೋನ್ ಪೋರ್ಟ್ ಮತ್ತು ಸಿಮ್ ಕಾರ್ಡ್ ಎಲ್ಲವೂ ಮೋಟೋ ಎಕ್ಸ್ 2 ಇಟ್ಟಂತೆಯೇ ಕಂಡುಬಂದಿದ್ದು, ಧ್ವನಿ ಮತ್ತು ಲಾಕ್ ಬಟನ್‌ಗಳನ್ನು ಕೆಳಕ್ಕೆ ಸರಿಸಲಾಗಿದೆ .

ಇದನ್ನೂ ಓದಿ:ಹೊಸ ಮೋಟೋ ಎಕ್ಸ್‌ಗೆ ಎದುರಾಗಿದೆ ಅಗ್ನಿಪರೀಕ್ಷೆ

ಇನ್ನು ಗೂಗಲ್ ನೆಕ್ಸಸ್ 6 ನ ವಿಶೇಷತೆಗಳು ತಿಳಿದು ಬಂದಿದ್ದು, ಇದು 5.9 ಇಂಚಿನ FHD ಪರದೆಯೊಂದಿಗೆ ಬಂದಿದೆ. 2.5GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಇದರಲ್ಲಿದ್ದು, 3 ಜಿಬಿ RAM ಅನ್ನು ಡಿವೈಸ್ ಒಳಗೊಂಡಿದೆ. 16/32 ಜಿಬಿಯ ಆಂತರಿಕ ಸಂಗ್ರಹಣೆ ಫೋನ್‌ನಲ್ಲಿದ್ದು, ಮೈಕ್ರೋಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಡಿವೈಸ್ ಒಳಗೊಂಡಿದೆ. ಇನ್ನು ಫೋನ್‌ನ ಪ್ರಿಡ್ರೆಸರ್‌ಗೆ ಹೋಲಿಸಿದಾಗ ಬ್ಯಾಟರಿ ಲೈಫ್ ಇನ್ನೂ ಸುಧಾರಿಸಬೇಕಾಗಿದೆ.

Best Mobiles in India

English summary
This article tells about Google Nexus 6 Alleged Image Spotted Online Ahead of Launch.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X