ಅಕ್ಟೋಬರ್ 4ಕ್ಕೆ ಗೂಗಲ್ ಪಿಕ್ಸೆಲ್ 2, ಪಿಕ್ಸೆಲ್ 2ಎಕ್ಸ್ಎಲ್ ಫೋನ್‌ಗಳು ಲಾಂಚ್!!
ನೀಲಿ, ಕಪ್ಪು ಮತ್ತು ಬಿಳಿ ಮೂರು ಬಣ್ಣಗಳಲ್ಲಿ ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 ಎಕ್ಸ್ಎಲ್ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿವೆ.!
ಐಫೋನ್ 8 ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಗೂಗಲ್ ಸಹ ತನ್ನ ನೂತನ ಪಿಕ್ಸೆಲ್ ಸರಣಿ ಸ್ಮಾರ್ಟ್ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಾಗಿದೆ.! ಭಾರೀ ನಿರೀಕ್ಷೆಯನ್ನು ಹೊಂದಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಾದ ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 ಎಕ್ಸ್ಎಲ್ ಸ್ಮಾರ್ಟ್‌ಫೋನ್‌ಗಳು ಇದೇ ಅಕ್ಟೋಬರ್ 4 ರಂದು ಬಿಡುಗಡೆಯಾಗುತ್ತವೆ ಎಂದು ಹೇಳಲಾಗಿದೆ.!!
ಪಿಕ್ಸೆಲ್ 2 ಆವೃತ್ತಿ ಫೋನ್‌ಗಳ ಗ್ರಾತ್ರ ಈ ಬಾರಿ ಚಿಕ್ಕದಾಗಿರಲಿದೆ ಎನ್ನಲಾಗಿದ್ದು, ನೀಲಿ, ಕಪ್ಪು ಮತ್ತು ಬಿಳಿ ಮೂರು ಬಣ್ಣಗಳಲ್ಲಿ ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 ಎಕ್ಸ್ಎಲ್ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿವೆ.! ಆಪಲ್ 8 ಗಿಂತಲೂ ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 ಎಕ್ಸ್ಎಲ್ ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿಮೆ ಇರಲಿದೆ ಎನ್ನಲಾಗಿದೆ.
ಯಾವಾಗಲೂ ಹೊಸತನವನ್ನೇ ಬಯಸುವ ಗೂಗಲ್, ಸ್ಮಾರ್ಟ್‌ಫೋನ್‌ಗಳ ವಿಚಾರದಲ್ಲಿ ಮಾತ್ರ ಸ್ವಲ್ಪ ಎಡವಿರುತ್ತದೆ.! ಹಾಗಾದರೆ, ಭಾರೀ ನಿರೀಕ್ಷೆ ಹುಟ್ಟಿಸಿರುವ ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 ಎಕ್ಸ್ಎಲ್ ಸ್ಮಾರ್ಟ್‌ಫೋನ್‌ಗಳ ಗುಣವೈಶಿಷ್ಟ್ಯಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಪಿಕ್ಸೆಲ್ 2 ಆವೃತ್ತಿ ಡಿಸ್‌ಪ್ಲೇ.!!
ಪಿಕ್ಸೆಲ್ 2 ಸ್ಮಾರ್ಟ್‌ಫೋನ್ 5 ಇಂಚಿನ ಡಿಸ್‌ಪ್ಲೆಯೊಂದಿಗೆ ಬರುತ್ತಿದ್ದರೆ, ಪಿಕ್ಸೆಲ್ 2 ಎಕ್ಸ್ಎಲ್ 5.7 ಇಂಚಿನ ಅಥವಾ 5.8 ಇಂಚಿನ ಪರದೆಯೊಂದಿಗೆ ಬರಬಹುದು ಎಂದು ಹೇಳಲಾಗಿದೆ.ಇನ್ನು ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 ಎಕ್ಸ್ಎಲ್ AMOLED ಪರದೆಯನ್ನು ಹೊಂದಿರಲಿದೆ.

ಪ್ರೊಸೆಸರ್ ಮತ್ತು RAM
ಪಿಕ್ಸೆಲ್ 2 ಎಕ್ಸ್ಎಲ್ ಮತ್ತು ಪಿಕ್ಸೆಲ್ 2 ಕ್ವಾಲ್ಕಮ್ ಕಂಪೆನಿಯ ಸ್ನ್ಯಾಪ್‌ಡ್ರ್ಯಾಗನ್ 835 ಪ್ರೊಸೆಸೆರ್ ಹಾಗೂ ಆಂಡ್ರಾಯ್ಡ್ ಓರಿಯೊ ಮೂಲಕ ರನ್ ಆಗಲಿವೆ.!! ಎರಡೂ ಫೋನ್‌ಗಳು 4 ಜಿಬಿ RAM ನೊಂದಿಗೆ ಹೊರಬರಲಿದ್ದು, ಕನಿಷ್ಠ 64GB ಆಂತರಿಕ ಮೆಮೊರಿ ಹೊಂದಿರಲಿವೆ ಎಂದು ಹೇಳಲಾಗಿದೆ.!!

ಎರಡು ರಿಯರ್ ಕ್ಯಾಮೆರಾ ಇಲ್ಲ!!
ಹೊಸದಾಗಿ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಎರಡು ರಿಯರ್ ಕ್ಯಾಮೆರಾಗಳನ್ನು ಹೊಂದಿರುತ್ತವೆ. ಆದರೆ, ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 ಎಕ್ಸ್ಎಲ್ ಸ್ಮಾರ್ಟ್‌ಫೋನ್‌ಗಳು ಎರಡು ರಿಯರ್ ಕ್ಯಾಮೆರಾ ಹೊಂದಿಲ್ಲ.! ಹಳೆ ಮಾದರಿಯ 12 ಮೆಗಾಪಿಕ್ಸೆಲ್ ಕ್ಯಾಮೆರಾದಲ್ಲಿಯೇ ಹೆಚ್ಚು ಸಾಫ್ಟ್‌ವೇರ್ ಜೊತೆಗೆ ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 ಎಕ್ಸ್ಎಲ್ ಹೊರಬರುತ್ತಿವೆ.!!

ವಾಟರ್ ಅಂಡ್ ಡಸ್ಟ್ ರೆಸಿಸ್ಟೆಂಟ್!!
ಗೂಗಲ್ ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 ಎಕ್ಸ್ಎಲ್ ಸ್ಮಾರ್ಟ್‌ಫೋನ್‌ಗಳು ನೀರು ಮತ್ತು ಧೂಳಿ ರೆಸಿಸ್ಟೆಂಟ್ ಹೊಂದಿವೆ ಎಂದು ಹೇಳಲಾಗುತ್ತಿದೆ. ಈ ವೈಶಿಷ್ಟ್ಯವನ್ನು ಹೊಂದಿರದ ಪ್ರಸ್ತುತ ಪಿಕ್ಸೆಲ್ ಫೋನ್‌ಗಳಿಗೆ ಹೋಲಿಸಿದರೆ ಇದು ಸುಧಾರಣೆಯಾಗಿದೆ. ಇನ್ನು ಸ್ಟಿರಿಯೊ ಸ್ಪೀಕರ್‌ಗಳು ಸ್ಮಾರ್ಟ್‌ಫೋನ್ ಅಲಂಕರಿಸಲಿವೆ.!!

ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 ಎಕ್ಸ್ಎಲ್ ಬೆಲೆ ಎಷ್ಟು?
ಪಿಕ್ಸೆಲ್ 2 64GB ವೆರಿಯಂಟ್ ಫೋನ್ ಬೆಲೆ 41750($ 649) ರೂಪಾಯಿಗಳಾದರೆ, 128GB ವೆರಿಯಂಟ್ ಫೋನ್ ಬೆಲೆ 48183 ($ 749) ರೂಪಾಯಿಗಳಾಗಿದೆ.!! ಇನ್ನು ಪಿಕ್ಸೆಲ್ 2 ಎಕ್ಸ್ಎಲ್ ಸ್ಮಾರ್ಟ್‌ಫೋನ್ ಬೆಲೆ 54616 ($ 849 ) ರೂಪಾಯಿಗಳಾಗಿರುತ್ತದೆ ಎನ್ನಲಾಗಿದೆ.


Click it and Unblock the Notifications








