Just In
Don't Miss
- Movies
Super Queen:ರಜಿನಿಯ ಕಲ್ಪನಾ ಪರ್ಫಾಮೆನ್ಸ್ಗೆ ಫುಲ್ ಫಿದಾ : ರಿಪ್ಲೆ ಮಾಡೋಕಾಗದೆ ನಟಿ ಸುಸ್ತು..!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗೂಗಲ್ 'ಪಿಕ್ಸಲ್ 3a' ಮತ್ತು 'ಪಿಕ್ಸಲ್ 3a XL' ಲಾಂಚ್‌ಗೆ ಮೂಹೂರ್ತ ಫಿಕ್ಸ್!
ಟೆಕ್ ದೈತ್ಯ ಗೂಗಲ್ ಸಂಸ್ಥೆಯ ಬಹುನಿರೀಕ್ಷಿತ ಗೂಗಲ್ ಪಿಕ್ಸಲ್ 3a ಮತ್ತು ಪಿಕ್ಸಲ್ 3a XL ಸ್ಮಾರ್ಟ್‌ಫೋನ್‌ಗಳ ಲಾಂಚ್ ಮೂಹೂರ್ತ ಫಿಕ್ಸ್ ಆಗಿದೆ. ಇದೇ ಮೇ 8 ರಂದು ಇ ಕಾಮರ್ಸ್ ತಾಣದ ಮೂಲಕ ಮಾರುಕಟ್ಟೆಗೆ ಪರಿಚಯಿಸಲಿದ್ದು, ಗೂಗಲ್ 'ಪಿಕ್ಸಲ್ 3a' ಸ್ಮಾರ್ಟ್‌ಫೋನ್ ಮಿಡ್‌ರೇಂಜ್ ಬೆಲೆಯಲ್ಲಿ ಹೊರಬರಲಿದೆ ಎನ್ನುವ ಸುದ್ದಿ ಗ್ರಾಹಕರಲ್ಲಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಹೌದು, ಗೂಗಲ್ ಸಂಸ್ಥೆಯು 'ಪಿಕ್ಸಲ್ 3a' ಮತ್ತು 'ಪಿಕ್ಸಲ್ 3a XL' ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲು ದಿನಗಣನೆ ಶುರುವಾಗಿದ್ದು, ಆ ಕುರಿತಾಗಿ ಟೀಸರ್ ಸಹ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಗೂಗಲ್ ಹೈ ಎಂಡ್ ಮಾದರಿಯ ಪಿಕ್ಸಲ್ ಸ್ಮಾರ್ಟ್‌ಫೋನ್‌ಗಳು ಪರಿಚಯಿಸಿದ್ದು, ಆದರೆ ಈ ಭಾರಿ ಗೂಗಲ್ ಮಿಡ್ ರೇಂಜ್ ಬೆಲೆಯ ಗ್ರಾಹಕರನ್ನು ಸೆಳೆಯಲು ಮುಂದಾಗಲಿದೆ ಎನ್ನಲಾಗುತ್ತಿದೆ.

ಈ ಹೊಸ ಪಿಕ್ಸಲ್ ಸ್ಮಾರ್ಟ್‌ಫೋನ್‌ಗಳು ಬ್ಲ್ಯಾಕ್, ವೈಟ್ ಮತ್ತು ಐರಿಶ್ ಕಲರ್ ಸೇರಿದಂತೆ ಮೂರು ಕಲರ್ ವೇರಿಯಂಟ್ ಆಯ್ಕೆಗಳನ್ನು ಹೊಂದಿರಲಿದ್ದು, ಫೋನ್‌ಗಳಲ್ಲಿ ನೂತನ 'ಆಂಡ್ರಾಯ್ಡ್ Q ಬೀಟಾ' ಓಎಸ್ ಕಾರ್ಯನಿರ್ವಹಿಸಲಿದೆ ಎನ್ನಲಾಗುತ್ತಿದೆ. ಹಾಗಾದರೇ ಬಹುನಿರೀಕ್ಷಿತ 'ಗೂಗಲ್ ಪಿಕ್ಸಲ್ 3a' ಮತ್ತು ಗೂಗಲ್ ಪಿಕ್ಸಲ್ 3a XL ಸ್ಮಾರ್ಟ್‌ಫೋನ್‌ಗಳು ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿವೆ ಎಂಬುದನ್ನು ನೋಡೋಣ ಬನ್ನಿರಿ.

ಡಿಸ್‌ಪ್ಲೇ
ಗೂಗಲ್ ಪಿಕ್ಸಲ್ 3a ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಫೋನ್ ಆಗಲಿದ್ದು, 5.6 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಗೂಗಲ್ ಪಿಕ್ಸಲ್ 3a XL ಸ್ಮಾರ್ಟ್‌ಫೋನ್ 6 ಇಂಚಿನ OLED ಸಾಮರ್ಥ್ಯದ ಫುಲ್ ಹೆಚ್‌ಡಿ ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಪ್ರೊಸೆಸರ್
'ಪಿಕ್ಸಲ್ 3a' ಸ್ಮಾರ್ಟ್‌ಫೋನ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 670 ಪ್ರೊಸೆಸರ್ ಅನ್ನು ಒಳಗೊಂಡಿರಲಿದ್ದು, ಇದರೊಂದಿಗೆ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ. ಹಾಗೇ 'ಪಿಕ್ಸಲ್ 3a XL' ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 710 SoC ಪ್ರೊಸೆಸರ್ ಹೊಂದಿರಲಿದ್ದು, 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ.

ಕ್ಯಾಮೆರಾ
ಗೂಗಲ್ ಪಿಕ್ಸಲ್ 3a ಮತ್ತು ಗೂಗಲ್ ಪಿಕ್ಸಲ್ 3a XL ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ 12 ಮೆಗಾಪಿಕ್ಸಲ್ ಸಾಮರ್ಥ್ಯದ ರೇರ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸಲ್ ಕ್ಯಾಮೆರಾ ನೀಡುವ ಸಾಧ್ಯತೆಗಳಿದ್ದು, ಇದರೊಂದಿಗೆ LED ಫ್ಲ್ಯಾಶ್ ಇರಲಿದೆ. ಹೆಚ್‌ಡಿ ವಿಡಿಯೊ ಕಾಲಿಂಗ್ ಸೌಲಭ್ಯ ಸಹ ಇರಲಿದೆ ಎನ್ನಲಾಗುತ್ತಿದೆ.

ಬ್ಯಾಟರಿ
ಗೂಗಲ್ ಪಿಕ್ಸಲ್ 3a ಸ್ಮಾರ್ಟ್‌ಫೋನ್ ಸುಮಾರು 3,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒದಗಿಸಲಿದೆ ಎಂದು ಹೇಳಲಾಗುತ್ತಿದ್ದು, ಇನ್ನೂ ಪಿಕ್ಸಲ್ 3a XL ಸ್ಮಾರ್ಟ್‌ಪೋನ್‌ಗೆ ಪಿಕ್ಸಲ್ 3a ಸ್ಮಾರ್ಟ್‌ಫೋನ್‌ಗಿಂತ ಅತ್ಯುತ್ತಮ ಬಾಳಿಕೆಯ ಸಾಮರ್ಥ್ಯ ಬ್ಯಾಟರಿಯನ್ನು ಒದಗಿಸಲಾಗುವುದು ಎಂದು ಲೀಕ್ ಮಾಹಿತಿಯಿಂದ ತಿಳಿದುಬಂದಿದೆ.

ಲಭ್ಯತೆ
ಗೂಗಲ್ ಸಂಸ್ಥೆಯ 'ಪಿಕ್ಸಲ್ 3a' ಮತ್ತು 'ಪಿಕ್ಸಲ್ 3a XL' ಹೆಸರಿನ ಸ್ಮಾರ್ಟ್‌ಫೋನ್‌ಗಳ ಇದೇ ಮೇ 8 ರಂದು ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಮೂಲಕ ಲಾಂಚ್ ಆಗಲಿದ್ದು, ಆ ಕುರಿತಾಗಿ ಅಧಿಕೃತ ಲಾಂಚ್ ಟೀಸರ್ ನೀಡಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470