Subscribe to Gizbot

ಶೀಘ್ರವೇ ಮಾರುಕಟ್ಟೆಗೆ ಮಧ್ಯಮ ಸರಣಿಯ ಗೂಗಲ್ ಸ್ಮಾರ್ಟ್‌ಫೋನ್‌..!

Written By:

ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸದ್ದು ಮಾಡುತ್ತಿದ್ದು, ಮಾರುಕಟ್ಟೆಯ ಪ್ರಮಾಣವು ವಿಸ್ತಾರವಾಗುತ್ತಿದೆ. ಅದರಲ್ಲಿಯೂ ಬಜೆಟ್ ಮತ್ತು ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಟಾಪ್ ಎಂಡ್ ಫೋನ್‌ಗಳು ಸದ್ದು ಮಾಡುತ್ತಿವೆಯಾದರು ಮಾರಾಟದ ಪ್ರಮಾಣವು ಕಡಿಮೆಯಲ್ಲಿದೆ. ಹೀಗಾಗಿ ಟಾಪ್‌ ಎಂಡ್ ಕಂಪನಿಗಳು ಸಹ ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಯೋಜನೆಯನ್ನು ರೂಪಿಸುತ್ತಿವೆ.

ಶೀಘ್ರವೇ ಮಾರುಕಟ್ಟೆಗೆ ಮಧ್ಯಮ ಸರಣಿಯ ಗೂಗಲ್ ಸ್ಮಾರ್ಟ್‌ಫೋನ್‌..!

ಆಪಲ್ ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಮಧ್ಯಮ ಬೆಲೆಯಲ್ಲಿ ಐಫೋನ್ X SE ಅನ್ನು ಲಾಂಚ್ ಮಾಡಲು ಮುಂದಾಗುತ್ತಿರುವ ಮಾದರಿಯಲ್ಲಿ , ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಹ ತನ್ನ ಪಿಕ್ಸಲ್ ಸ್ಮಾರ್ಟ್‌ಫೋನ್‌ಗಳ ಮಧ್ಯಮ ಸರಣಿಯನ್ನು ಪರಿಚಯಿಸಲು ಮುಂದಾಗಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಕಾರಣ ಮಾರುಕಟ್ಟೆಯಲ್ಲಿ ಪಿಕ್ಸಲ್ 2 ಮತ್ತು ಪಿಕ್ಸಲ್ XL 2 ಸ್ಮಾರ್ಟ್‌ಫೋನ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲು ವಿಫಲವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾರುಕಟ್ಟೆಯ ಪಾಲನ್ನು ಹೊಂದಲು ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ಈಗಾಗಲೇ ಪಿಕ್ಸಲ್ ಸ್ಮಾರ್ಟ್‌ಫೋನ್‌ಗಳು ಟಾಪ್‌ ಎಂಡ್ ಆವೃತ್ತಿಯಲ್ಲಿ ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಬಳಕೆದಾರರನ್ನು ಆಪಲ್ ಮಾದರಿಯಲ್ಲಿ ಆಕರ್ಷಿಸಲು ವಿಫಲವಾಗಿದೆ. ಇದನ್ನು ಮರೆ ಮಾಚಿಕೊಳ್ಳಲು ಮತ್ತು ಮಾರುಕಟ್ಟೆಯಲ್ಲಿ ಪಿಕ್ಸಲ್ ಸ್ಮಾರ್ಟ್‌ಫೋನ್ ಹೆಸರನ್ನು ಖ್ಯಾತಿಗೆ ತರುವ ಸಲುವಾಗಿ ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿರುವ ಆಪಲ್, ಸ್ಯಾಮ್‌ಸಂಗ್, ಅಮೆಜಾನ್ ಕಂಪನಿಗಳು ಸ್ಮಾರ್ಟ್‌ಫೋನ್ ಮಾತ್ರವಲ್ಲದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಹೆಚ್ಚಾಗಿ ಮಾರುಕಟ್ಟೆಗೆ ಬಿಡುವ ಮೂಲಕ ಗ್ರಾಹರನ್ನು ಒಲಿಸಿಕೊಂಡಿವೆ. ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಚಹರೆಯನ್ನು ಮೂಡಿಸುವ ಸಲುವಾಗಿ ಗೂಗಲ್ ತನ್ನ ಸ್ಮಾರ್ಟ್ ಸ್ಪೀಕರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಇದಾದ ನಂತರದಲ್ಲಿ ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ.

ಶೀಘ್ರವೇ ಮಾರುಕಟ್ಟೆಗೆ ಮಧ್ಯಮ ಸರಣಿಯ ಗೂಗಲ್ ಸ್ಮಾರ್ಟ್‌ಫೋನ್‌..!

ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಮಾದರಿಯಲ್ಲಿಯೇ ಗೂಗಲ್ ಪಿಕ್ಸಲ್ ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಳ್ಳಲು ಮುಂದಾಗಿದ್ದು, ಇದಕ್ಕಾಗಿ ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಸಾಧ್ಯತೆಯನ್ನು ಹೊಂದಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಗೂಗಲ್ ಭಾರತೀಯ ಮಾರುಕಟ್ಟೆಯಲ್ಲಿಯೂ ತನ್ನ ಹವಾ ಎಬ್ಬಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
Google working on a mid-range Pixel smartphone for India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot