Subscribe to Gizbot

5 ಶ್ರೇಷ್ಟ ಸ್ಯಾಮ್ಸಂಗ್ ನೋಟ್ 7 ಅನ್ನು ಬದಲಿಸಲು ಭಾರತದಲ್ಲಿ ಲಭ್ಯವಿರುವಂತಹುದು

ಕೆಲ ಸ್ಪೋಟಗೊಂಡ ವರದಿಯ ನಂತರ ಸ್ಯಾಮ್ಸಂಗ್ ನೋಟ್ 7 ಅನ್ನು ಹೊಸದರಿಂದ ಬದಲಾಯಿಸುವ ನಿರ್ಣಯ ತೆಗೆದುಕೊಂಡಿತು ಸ್ಯಾಮ್ಸಂಗ್ ಕಂಪನಿ. ಆದರೆ ಹೊಸದು ಕೂಡ ಸ್ಪೋಟಗೊಂಡಾಗ ತಯಾರಕರು ಬೇರೆ ದಾರಿಯಿಲ್ಲದೆ ಎಲ್ಲಾ ನೋಟ್ 7 ಹಿಂದಕ್ಕೆ ಪಡೆಯಬೇಕಾಯಿತು.

5 ಶ್ರೇಷ್ಟ ಸ್ಯಾಮ್ಸಂಗ್ ನೋಟ್ 7 ಅನ್ನು ಬದಲಿಸಲು ಭಾರತದಲ್ಲಿ ಲಭ್ಯವಿರುವಂತಹುದು

ಓದಿರಿ: ಹೋನರ್ 8 ನ ವಿಶೇಷ ಕ್ಯಾಮೆರಾ ಸ್ಮಾರ್ಟ್‌ಫೋನ್ ವಿಶೇಷತೆಗಳೇನು?

ಅದೇನೆ ಇರಲಿ ನೀವು ದೊಡ್ಡ ಸ್ಕ್ರೀನ್, ದೊಡ್ಡ ಮೆಮೊರಿ ಸ್ಪೇಸ್ ಮತ್ತು ಉತ್ತಮ ಡಿಜೈನ್ ನೋಡಿ ನೋಟ್ 7 ತೆಗೆದುಕೊಂಡಿದ್ದಲ್ಲಿ ಅದನ್ನು ಈ 5 ಫೋನ್ ಗಳಿಂದ ಬದಲಾಯಿಸಬಹುದು ನಿಮ್ಮ ಬಡ್ಜೆಟ್ ನ ಒಳಗೆ. ಕೆಳಗಿವೆ ನೋಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒನ್‍ಪ್ಲಸ್3

ಒನ್‍ಪ್ಲಸ್3

ಒನ್‍ಪ್ಲಸ್ ಸದ್ಯಕ್ಕೆ ಇನ್ನೂ ಪ್ರಚಲಿತವಾಗಿಲ್ಲಾ, ಕಳೆದ 3 ವರ್ಷಗಳಲ್ಲಿ ಬಿಡುಗಡೆಯಾದ ಅವರ 4ನೇ ಫೋನ್ ಅನುಮಾನವಿಲ್ಲದೆ ನೋಟ್ 7 ನಷ್ಟೆ ಪರಿಣಾಮಕಾರಿಯಾಗಿದೆ ಎಲ್ಲಾ ವಿಧದಲ್ಲು. ಬೆಲೆ ರೂ. 27,999 . 5.5 ಇಂಚ್ ಸ್ಕ್ರೀನ್ ಕ್ವ್ಯಾಡ್ ಎಚ್‍ಡಿ ಅಮೊಲೆಡ್ ಡಿಸ್ಪ್ಲೆ ನೋಟ್ 7 ನಂತೆಯೆ ಕಾಣುತ್ತದೆ. ಅದರಂತೆಯೆ ಕ್ವ್ಯಾಡ್ ಕೊರ್ ಸ್ನಾಪ್‍ಡ್ರಾಗನ್ 820 ಪ್ರೊಸೆಸರ್, 6ಜಿಬಿ ರ್ಯಾಮ್ 64ಜಿಬಿ ಮೆಮೊರಿ ಹೊಂದಿದೆ. ಯುಎಸ್‍ಬಿ ಟೈಪ್-ಸಿ ಪೊರ್ಟ್ ನಿಂದ ವೇಗವಾಗಿ ಚಾರ್ಜ್ ಆಗುವ ಅನುಭವ ಪಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಐಫೋನ್ 7 ಪ್ಲಸ್

ಐಫೋನ್ 7 ಪ್ಲಸ್

ಎಲ್ಲಾ ಆಂಡ್ರೊಯಿಡ್ ಬಳಕೆದಾರರಿಗೆ ಐಒಎಸ್ ಕಡೆಗೆ ತಿರುಗುವುದು ಅಷ್ಟು ಸುಲಭವಲ್ಲಾ. ನೋಟ್ 7 ನಷ್ಟೆ ಉತ್ತಮ ಫೋನ್ ಹುಡುಕುತ್ತಿದ್ದಲ್ಲಿಐಫೋನ್ ಉತ್ತಮ ಆಯ್ಕೆ.

ಸ್ಯಾಮ್ಸಂಗ್ ಗೆಲಾಕ್ಸಿ ಎಡ್ಜ್ ಎಸ್7

ಸ್ಯಾಮ್ಸಂಗ್ ಗೆಲಾಕ್ಸಿ ಎಡ್ಜ್ ಎಸ್7

ಅದೆಲ್ಲಾ ಸುದ್ದಿಗಳ ನಂತರವು ನೀವು ಸ್ಯಾಮ್ಸಂಗ್ ಅನ್ನು ನಂಬುತ್ತೀರಾದಲ್ಲಿ ಸ್ಯಾಮ್ಸಂಗ್ ಗೆಲಾಕ್ಸಿ ಎಸ್7 ಎಡ್ಜ್ ತೆಗೆದುಕೊಳ್ಳಿ. ನೋಟ್ 7 ಗಿಂತ ಚಿಕ್ಕದಾದರು ಕೂಡ ಅದರಂತೆ ಕರ್ವ್‍ಡ್ ಸ್ಕ್ರೀನ್ ಡಿಜೈನ್ ಹೊಂದಿದೆ ಸ್ಪೋಟವಿಲ್ಲದೆ. ಅದರಂತೆ ಕೊಂಪನೆಂಟ್‍ಗಳನ್ನು ಹೊಂದಿದೆ. ಅದೇ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 820 ಪ್ರೊಸೆಸರ್, ಇಂಟಿಗ್ರೆಟೆಡ್ ಎಕ್ಸ್12 ಎಲ್‍ಟಿಇ ಮೊಡೆಮ್, ಕ್ಯಾಮೆರಾ 12 ಎಮ್‍ಪಿ ಬ್ಯಾಕ್ 5 ಎಮ್‍ಪಿ ಫ್ರಂಟ್. ಎಸ್‍ಪೆನ್ ಒಂದಿಲ್ಲಾ ಅಷ್ಟೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೂಗಲ್ ಪಿಕ್ಸೆಲ್ ಎಕ್ಸ್‍ಎಲ್

ಗೂಗಲ್ ಪಿಕ್ಸೆಲ್ ಎಕ್ಸ್‍ಎಲ್

ನೋಟ್ 7 ಅನ್ನು ದೊಡ್ಡದಿದೆ, ಶಕ್ತಿಯುತ ಆಂಡ್ರೊಯಿಡ್ ಫೋನ್ ಎಂದು ಕೊಂಡಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪಿಕ್ಸೆಲ್ ಎಕ್ಸ್‍ಎಲ್ ಅದಕ್ಕೆ ಸರಿಸಮನಾಗಿದೆ ಜೊತೆಗೆ ಮಾರುಕಟ್ಟೆಯಲ್ಲಿ ಎಲ್ಲಕಿಂತ ಉತ್ತಮ ಕ್ಯಾಮೆರಾ ಹೊಂದಿದೆ. ಇದೊಂದೆ ಫೋನ್ ಇನ್ ಬಿಲ್ಟ್ ಗೂಗಲ್ ಅಸಿಸ್ಟೆನ್ಸ್ ಜೊತೆಗೆ ಬರುತ್ತದೆ. ಬೆಲೆ ರೂ. 76000. 1.6 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 821 ಪ್ರೊಸೆಸರ್, 4ಜಿಬಿ ರ್ಯಾಮ್ ಹೊಂದಿದ್ದು ಆಂಡ್ರೊಯಿಡ್ 7.1(ನೌಗಾಟ್) ಮೇಲೆ ನಡೆಯುತ್ತದೆ.

ಮೊಟೊ ಜೆಡ್ ಪ್ಲೆ

ಮೊಟೊ ಜೆಡ್ ಪ್ಲೆ

ನೀವು ಮೊಟೊ ಅಭಿಮಾನಿಯಾಗಿದ್ದಲ್ಲಿ ಮೊಟೊ ಜೆಡ್ ಪ್ಲೆ ಗೆ ಹೋಗಬಹುದು. ಇದು ಇತ್ತೀಚೆಗಷ್ಟೆ ಬಿಡುಗಡೆಯಾಯಿತು. ಬೆಲೆ 24,999. ಭಾರತದಲ್ಲಿ ಅಕ್ಟೊಬರ್ 17 ರ ನಂತರ ಲಭ್ಯ. ಕಪ್ಪು ಬೆಳ್ಳಿ ಟ್ರಿಮ್ ನೊಂದಿಗೆ ಹಾಗೂ ಬಿಳಿ ಬಂಗಾರದ ಟ್ರಿಮ್ ನೊಂದಿಗೆ 2 ಬಣ್ಣಗಳಲ್ಲಿ ಬರುತ್ತದೆ. ವಾಟರ್ ರೆಪೆಲೆಂಟ್ ನಾನೊ ಕೋಟಿಂಗ್ ಮತ್ತು ಹೋಮ್ ಬಟನ್ ಮೇಲೆ ಫಿಂಗರ್‍ಪ್ರಿಂಟ್ ಸೆನ್ಸರ್ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung may soon pull the plug on its explosive Note 7, but there are still plenty of big-screen phones out there to choose from. Here are 5 best alternatives.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot