ಆಪಲ್ ಸ್ಮಾರ್ಟ್‌ಫೊನ್ 10ನೇ ವರ್ಷದ ಸಂಭ್ರಮಕ್ಕೆ ಐಫೋನ್ 8 ಹೇಗಿರಲಿದೆ ಗೊತ್ತಾ!?

Written By:

ಪ್ರಪಂಚದಲ್ಲಯೇ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಎನ್ನುವ ಹೆಗ್ಗಳಿಕೆ ಹೊಂದಿರುವ ಆಪಲ್ ಕಂಪೆನಿಗೆ 2017 ನೇ ವರ್ಷ ಅತ್ಯಂತ ಮಹತ್ವವಾದುದ್ದು.! ಹೌದು, ಆಪಲ್‌ ಕಂಪೆನಿ 2017 ರಲ್ಲಿ ತನ್ನ 10 ವರ್ಷದ ಸಂಭ್ರಮಾಚರಣೆಯನ್ನು ಆಚರಿಸಿಕೊಳ್ಳಲಿದೆ.! 2017 ರ ಈ ಸಂಭ್ರಮಾಚರಣೆಗಾಗಿ ಆಪಲ್ ತನ್ನ ಸೀರಿಸ್‌ನ ಆಪಲ್‌ ಐಫೋನ್ 8 ಸ್ಮಾರ್ಟ್‌ಫೊನ್‌ ಬಿಡುಗಡೆ ಮಾಡುತ್ತಿದೆ!!

2007 ರಲ್ಲಿ ಶುರುವಾಗಿದ್ದ ಆಪಲ್ ಕಂಪೆನಿ ಶುರುವಾಗಿನಿಂದ ಬಹುತೇಕ ಪ್ರತಿವರ್ಷವೂ ಸರಣಿ ಐಫೋನ್‌ ಸ್ಮಾರ್ಟ್‌ಫೊನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ತನ್ನ ಐಫೋನ್ ಸ್ಮಾರ್ಟ್‌ಫೊನ್‌ಗಳಲ್ಲಿ ಪ್ರತಿಬಾರಿಯೂ ಹೊಸ ಹೊಸ ಫಿಚರ್‌ಗಳನ್ನು ಬಿಡುಗಡೆ ಮಾಡುವ ಆಪಲ್ ವಿಶ್ವದಾಧ್ಯಂತ ಹೆಚ್ಚು ಗ್ರಾಹಕರನ್ನು ಸೆಳೆದುಕೊಂಡಿದೆ.

ಬೆಂಗಳೂರಿಗರೇ ಆನ್ ಲೈನ್ ನಲ್ಲಿ ಕ್ಯಾಶ್ ಬುಕ್ ಮಾಡಿ, ಮನೆಯಲ್ಲೇ ಕೂತು ಹಣ ಎಣಿಸಿ..!

ಇನ್ನು ಇದೀಗ 2017 ನೇ ವರ್ಷದಲ್ಲಿ ಆಪಲ್‌ ಐಫೋನ್ 8 ಬಿಡುಗಡೆಯಾಗುತ್ತಿದ್ದು, 5 ಇಂಚ್ ಅಥವಾ 5.5 ಇಂಚ್ ಫುಲ್ ಟಚ್‌ಪ್ಯಾಡ್‌ ಮತ್ತು ಫ್ಲೆಕ್ಸಿಬಲ್ ಆಗುವಂತಹ "ಒಎಲ್ಇಡಿ" ಡಿಸ್‌ಪ್ಲೇ ಹೊಂದಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ.!

ಹೀಗೆ ಪ್ರಪಂಚದಾಧ್ಯಂತ ಹಲವು ರೂಮರ್ಸ್‌ಗಳನ್ನು ಹೊಂದಿರುವ ಆಪಲ್ ಐಫೋನ್ 8 ಸ್ಮಾರ್ಟ್‌ಫೋನ್‌ ಯಾವ ಯಾವ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರುತ್ತದೆ. ಅವುಗಳ ವಿಶೇಷತೆ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಲೆಕ್ಸಿಬಲ್ ಒಎಲ್ಇಡಿ (OLED)ಡಿಸ್‌ಪ್ಲೇ!!

ಫ್ಲೆಕ್ಸಿಬಲ್ ಒಎಲ್ಇಡಿ (OLED)ಡಿಸ್‌ಪ್ಲೇ!!

ಸ್ಮಾರ್ಟ್‌ಫೋನ್‌ಗಳು ಬದಲಾಗುತ್ತಿರುವ ವೇಗಕ್ಕೆ ಸಮಯ ಕೂಡ ನಿಂತಿದೆ ಎನ್ನುವ ಮಾತು ಅಕ್ಷರಹ ನಿಜ. ಕೆಲವೇ ವರ್ಷಗಳಲ್ಲಿ ಟಚ್‌ಸ್ಕ್ರೀನ್ ಮೊಬೈಲ್‌ ಉಪಯೋಗವೇ ಎನ್ನುವ ಮಾತೊಂದಿತ್ತು! ಹಾಗಾಗಿ ಆಪಲ್ ಮೂಲಕ ಪ್ಲೆಕ್ಸಿಬಲ್ ಸ್ಮಾರ್ಟ್‌ಫೊನ್ ಹೊಂದುವ ಸಮಯ ದೂರವಿಲ್ಲ! ಇನ್ನು ಆಪಲ್ 8 ಫ್ಲೆಕ್ಸಿಬಲ್ ಒಎಲ್ಇಡಿ (OLED)ಡಿಸ್‌ಪ್ಲೇ ಹೊಂದಿರುತ್ತದೆ ಎನ್ನಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೈರ್‌ಲೆಸ್‌ ಚಾರ್ಜಿಂಗ್ !

ವೈರ್‌ಲೆಸ್‌ ಚಾರ್ಜಿಂಗ್ !

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಇರುವ ದೊಡ್ಡ ಸಮಸ್ಯೆ ಎಂದರೆ ಬ್ಯಾಟರಿ ಬ್ಯಾಕಪ್ ಹೆಚ್ಚು ಇಲ್ಲದಿರುವುದು. ಮತ್ತು ಸ್ಮಾರ್ಟ್‌ಫೋನ್‌ ಕಾರ್ಯನಿರ್ವಹಣೆಯಲ್ಲಿಯೂ ಚಾರ್ಜಿಂಗ್‌ ಹಾಕಿ ಒಂದೆಡೆ ಕುಳಿತಿರುವುದು. ಹಾಗಾಗಿ ಆಪಲ್ ತನ್ನ ನೂತನ ಆಪಲ್ ಐಫೋನ್ 8 ಸ್ಮಾರ್ಟ್‌ಫೋನ್‌ನಲ್ಲಿ ವೈರ್‌ಲೆಸ್‌ ಚಾರ್ಜಿಂಗ್ ಫೀಚರ್‌ ಅನ್ನು ನೀಡಲಿದೆ ಎನ್ನಲಾಗಿದೆ.

ಐಫೋನ್ 8 ಕ್ಯಾಮೆರಾ ಯಾವುದು?

ಐಫೋನ್ 8 ಕ್ಯಾಮೆರಾ ಯಾವುದು?

ಐಫೋನ್ 8 ಕ್ಯಾಮೆರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೆಶನ್ ತಂತ್ರಜ್ಞಾನ ಹೊಂದಿದ್ದು, ವೈಡ್ ಆಂಗಲ್ ಮತ್ತು ಟೆಲಿಫೋಟೊ ಲೆನ್ಸಸ್‌ ಮೂಲಕ 3D ಇಮೇಜ್‌ಗಳನ್ನು ತೆಗೆಯುವ ಸಾಮರ್ಥ್ಯ ಹೊಮದಿದೆ ಎನ್ನಲಾಗಿದೆ. ಇನ್ನು ಆಪಲ್ ಎಲ್‌ಜಿ ಮಾಡೆಲ್ ಕ್ಯಾಮೆರಾ ಬಳಸುತ್ತದೆ ಎಂದು ತಿಳಿದುಬಂದಿದೆ.

ಇನ್ನೇನು ಅತ್ಯುತ್ತಮ ಫೀಚರ್?

ಇನ್ನೇನು ಅತ್ಯುತ್ತಮ ಫೀಚರ್?

ಪ್ರಸ್ತುತ ಆಪಲ್‌ನ ಐಫೋನ್ 7 ಹೊಂದಿರುವ ಎಲ್ಲಾ ಫೀಚರ್‌ ಜೊತೆಗೆ ಇನ್ನು ಹೆಚ್ಚಿನ ಸೆಕ್ಯುರೆಟಿ ಹೊಂದಿರುವಂತೆ ಐಫೋನ್ 8 ಸ್ಮಾರ್ಟ್‌ಫೋನ್ ರೂಪಿತವಾಗಿದೆ ಎನ್ನಲಾಗಿದೆ. ಇನ್ನು 10-ನ್ಯಾನೊಮಿಟರ್ ಪ್ರೊಸೆಸ್ ಹೊಂದಿರುವ A11 ಚಿಪ್‌ಸೆಟ್ ಐಫೋನ್ 8 ಹೊಮದಿರುತ್ತದೆ.

ಐಫೋನ್ 8 ಬಿಡುಗಡೆ ಯಾವಾಗ?

ಐಫೋನ್ 8 ಬಿಡುಗಡೆ ಯಾವಾಗ?

ಪ್ರತಿವರ್ಷವೂ ಐಫೋನ್ ಸರಣಿಯ ಸ್ಮಾರ್ಟ್‌ಫೊನ್‌ಗಳು ಬಿಡುಗಡೆಯಾಗುವುದು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ. ಹಾಗಾಗಿ ಐಫೋನ್ 8 ಬಿಡುಗಡೆಯ ಸಮಯ ಹೇಳುವ ಅವಶ್ಕಕತೆ ಇಲ್ಲ ಎನ್ನಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A summary of the anticipated model of iphone.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot