ಭಾರತದಲ್ಲಿ ಸದ್ಯದಲ್ಲಿಯೇ ಬಜೆಟ್ ಐಫೋನ್

By Shwetha
|

ಭಾರತವು ಹೆಚ್ಚಿನ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಹೊಂದಿರುವುದರಿಂದ ಆಪಲ್ ಸಿಇಒ ಟಿಮ್ ಕುಕ್ ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದಾರೆ. ದೇಶದಲ್ಲಿ ನವೀಕೃತ ಐಫೋನ್‌ಗಳ ಮಾರುಕಟ್ಟೆಯನ್ನು ತೆರೆಯುವ ಇರಾದೆಯನ್ನು ಕುಕ್ ಹೊಂದಿದ್ದು ನವೀಕರಣಗೊಂಡ ಐಫೋನ್‌ಗಳನ್ನು ಭಾರತದಲ್ಲಿ ಕಾಣಬಹುದಾಗಿದೆ.

ಭಾರತದಲ್ಲಿ ತನ್ನ ಈ ವ್ಯವಹಾರವನ್ನು ಸದ್ಯದಲ್ಲಿಯೇ ಆಪಲ್ ಆರಂಭಿಸಲಿದ್ದು ಭಾರತದ ಮಾರುಕಟ್ಟೆಯನ್ನು ಏಕೆ ಕೈಗೆತ್ತಿಕೊಂಡಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಭಾರತದ ಮಾರುಕಟ್ಟೆಯು ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮ ಭವಿಷ್ಯವನ್ನು ಒದಗಿಸುತ್ತಿರುವುದು ಇದಕ್ಕೆ ಒಂದು ಕಾರಣವೂ ಆಗಿರಬಹುದು.

ನೀವು ಬಜೆಟ್ ಬೆಲೆಯಲ್ಲಿ ಐಫೋನ್ ಖರೀದಿಸುವ ಹಂಬಲವನ್ನು ಹೊಂದಿದ್ದೀರಿ ಎಂದಾದಲ್ಲಿ ನವೀಕೃತ ಐಫೋನ್ ಮಾದರಿಯನ್ನು ಆಯ್ಕೆಮಾಡಿಕೊಳ್ಳಿ. ಇದು ಕಡಿಮೆ ದರದಲ್ಲಿದ್ದರೂ ಐಫೋನ್‌ನ ಗುಣಮಟ್ಟವನ್ನು ಕಳೆದುಕೊಂಡಿರುವುದಿಲ್ಲ. ಇಂದಿನ ಲೇಖನದಲ್ಲಿ ನವೀಕೃತ ಐಫೋನ್‌ಗಳ ಐದು ಅದ್ಭುತ ಅಂಶಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.

#1

#1

ಹೊಸ ಐಫೋನ್‌ನ ಅದೇ ಮಾದರಿಯನ್ನು ಖರೀದಿಸುವ ಕಡಿಮೆ ಬೆಲೆಯಲ್ಲಿ ನವೀಕೃತ ಐಫೋನ್ ದೊರೆಯಲಿದೆ. ಇದು ಕಡಿಮೆ ದರದ್ದಾಗಿರುವುದರಿಂದ ಯಾವುದೇ ಗುಣಮಟ್ಟ ಅಥವಾ ಕಾರ್ಯಕ್ಷಮತೆ ಸಮಸ್ಯೆಗಳಿಗೆ ಹೊಂದಿಕೊಳ್ಳುತ್ತದೆ. ಇದು ನವೀಕೃತಗೊಂಡಿರುವುದರಿಂದ ಯಾವುದೇ ಸ್ಕ್ರಾಚ್‌ಗಳನ್ನು ತಡೆದುಕೊಳ್ಳುತ್ತದೆ ಪ್ರೀಮಿಯಮ್ ಮಾರುಕಟ್ಟೆಯಲ್ಲಿ ಇದರ ಯೂನಿಟ್‌ ಅನ್ನು ಮಾರಾಟ ಮಾಡಬಹುದಾಗಿದೆ.

#2

#2

ನವೀಕೃತ ಐಫೋನ್ ಅನ್ನು ಖರೀದಿಸುವ ಇನ್ನೊಂದು ಪ್ರಯೋಜವೆಂದರೆ ಇದು ಹಳೆಯ ಅಪ್‌ಡೇಟ್‌ಗಳೊಂದಿಗೆ ಕಾರ್ಯನಿರ್ವಹಣೆ ಪ್ರಮಾಣ ಪತ್ರವನ್ನು ಸ್ವೀಕರಿಸಿರುತ್ತದೆ ಮತ್ತು ಆಪಲ್‌ನಿಂದ ದೃಢೀಕರಣವನ್ನು ಪಡೆದುಕೊಂಡಿರುತ್ತದೆ. ಅದೇ ಹೊಸ ಯೂನಿಟ್ ಆದಲ್ಲಿ, ಬಳಸಿದ ಯೂನಿಟ್‌ಗೆ ಹೋಲಿಸಿದಾಗ ಇದು ಗಂಭೀರವಾಗಿರುತ್ತದೆ. ನವೀಕೃತ ಐಫೋನ್ ಅನ್ನು ಖರೀದಿಸಿದಲ್ಲಿ ನಿಮ್ಮ ಫೋನ್ ಸಾಫ್ಟ್‌ವೇರ್ ಪರೀಕ್ಷೆಯ ಎಲ್ಲಾ ಹಂತಗಳನ್ನು ಪೂರೈಸಿಕೊಂಡಿರುತ್ತದೆ.

#3

#3

ಹೆಚ್ಚಿನ ಸಂದರ್ಭಗಳಲ್ಲಿ ನವೀಕೃತ ಐಫೋನ್‌ಗಳೆಂದರೆ ಸಣ್ಣ ಸಣ್ಣ ದೋಷಗಳನ್ನು ಒಳಗೊಂಡು ಬಳಕೆದಾರರು ವಾಪಾಸು ಮಾಡಿರುವಂಥದ್ದಾಗಿದೆ. ಇದನ್ನು ಸಂಪೂರ್ಣವಾಗಿ ರಿಪೇರಿ ಮಾಡಲಾಗಿರುತ್ತದೆ ಮತ್ತು ಗುಣಮಟ್ಟ ಪರೀಕ್ಷೆಯನ್ನು ನಡೆಸಲಾಗಿರುತ್ತದೆ. ತ್ತು ಹೊ ಬಳಕೆದಾರರಿಗೆ ಈ ರೀತಿಯ ಅನುಭವವಾಗಬಾರದು ಎಂದು ಸಂಪೂರ್ಣ ಪರೀಕ್ಷೆಯನ್ನು ಮಾಡಿರುತ್ತಾರೆ. ಹೊಸ ಫೋನ್ ಅನ್ನು ಖರೀದಿಸಿ ಸಣ್ಣ ಸ್ಕ್ರಾಚ್‌ನ ಕಾರಣವನ್ನು ಹೇಳಿ ಪುನಃ ಅದನ್ನು ಫೋನ್ ಮಾಲೀಕರಿಗೆ ನೀಡುವ ತಲೆನೋವು ನವೀಕೃತ ಐಫೋನ್ ಖರೀದಿಸಿದವರಿಗೆ ಇರುವುದಿಲ್ಲ.

#4

#4

ಹೆಚ್ಚಿನವರು ಹಳೆಯ ಐಫೋನ್‌ಗಳನ್ನು ತಮ್ಮ ಸ್ನೇಹಿತರಿಂದ ಅಥವಾ ಗ್ರೇ ಮಾರುಕಟ್ಟೆಗಳಿಂದ ಖರೀದಿಸುತ್ತಾರೆ. ಆದರೆ ಇದು ಹೆಚ್ಚು ವಿಶ್ವಾಸನೀಯವಾಗಿರುವುದಿಲ್ಲ. ಹಾಗೆಯೇ ಯಾವುದೇ ವಾರೆಂಟಿ ಅಥವಾ ಗ್ಯಾರಂಟಿಯನ್ನು ಇದು ನೀಡುವುದಿಲ್ಲ. ನವೀಕೃತ ಐಫೋನ್‌ಗಳನ್ನು ಆಪಲ್ ತನ್ನ ನೋಂದಾಯಿತ ಮಾರಾಟಗಾರರ ಮೂಲಕ ಮಾರುತ್ತದೆ ಹಾಗೂ ಈ ಅನುಮೋದಿತ ಮಾರಟಗಾರರು ತಯಾರಕರ ಸಂಪರ್ಕದಲ್ಲಿರುತ್ತಾರೆ ಹಾಗೂ ವಿಶ್ವಾಸಾಕ್ಕೆ ಪಾತ್ರರಾಗಿರುತ್ತಾರೆ. ನಿಮ್ಮ ಖರೀದಿ ಹೆಚ್ಚು ಸುರಕ್ಷಿತವಾಗಿರುತ್ತದೆ.

#5

#5

ನವೀಕೃತ ಐಫೋನ್‌ಗಳನ್ನು ಖರೀದಿಸುವುದರಿಂದ ಪರಿಸರ ಶುದ್ಧವಾಗಿರುತ್ತದೆ ಮತ್ತು ಕೈಗೆಟಕುವ ತಂತ್ರಜ್ಞಾನವನ್ನು ಪಡೆದುಕೊಳ್ಳಲು ಗ್ರಾಹಕರಿಗೆ ಆಯ್ಕೆಗಳಿರುತ್ತವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸೆಲ್‌ ಫೋನ್‌ಗಳು ಅತ್ಯಲ್ಪ ಸಮಯದಲ್ಲೇ ಅಪ್‌ಗ್ರೇಡ್ ಆಗುತ್ತಿವೆ, ಸಾಮಾನ್ಯವಾಗಿ ಆರರಿಂದ ಹನ್ನೆರಡು ತಿಂಗಳುಗಳು; ಹೆಚ್ಚಿನ ಸಮಯಗಳಲ್ಲಿ ಬಳಸಲಾದ ಸೆಲ್ ಫೋನ್‌ಗಳನ್ನು ರೀಸೈಕಲ್ ಮಾಡಲಾಗುತ್ತದೆ ಮತ್ತು ಮರುಮಾರಾಟ ಮಾಡಲಾಗುತ್ತದೆ ಇದಕ್ಕೆ ಕಾರಣ ಗ್ರಾಹಕರು ಫೋನ್‌ನಲ್ಲಿರುವ ನಿರ್ದಿಷ್ಟ ಅಂಶವನ್ನು ಇಷ್ಟಪಡದೇ ಇರುವುದಾಗಿದೆ. ಈ ಫೋನ್ ಅನ್ನು ಅಲ್ಪ ಸಮಯ ಮಾತ್ರವೇ ಬಳಸಲಾಗಿರುತ್ತದೆ, ಡಿವೈಸ್ ಚೆನ್ನಾಗಿ ಕಾರ್ಯನಿರ್ವಹಿಸುತ್ತಿರುತ್ತದೆ ಮತ್ತು ಇತರ ಬಳಕೆದಾರರೂ ಇದನ್ನು ಸ್ವಲ್ಪ ಸಮಯದ ನಂತರ ಬಳಸಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಸೆಲ್ಫಿ ಪ್ರಿಯರನ್ನೇ ತಲ್ಲಣಿಸುವ ಅಪಾಯಕಾರಿ ಸೆಲ್ಫಿಗಳು</a><br /><a href=ಸ್ಮಾರ್ಟ್‌ಫೋನ್‌ಗೆ ಮಾರಕ ಈ ಅಪ್ಲಿಕೇಶನ್‌ಗಳು
ಫೌಂಡಿಂಗ್ ಫಾದರ್ಸ್ ರಹಸ್ಯ ಬಯಲು ಮಾಡಿದ ವಿಜ್ಞಾನ
ಖರ್ಚಿಲ್ಲದೇ ವಾಟರ್‌ ಬಾಟಲ್‌ನಿಂದ ಟೇಬಲ್‌ ಫ್ಯಾನ್‌ ತಯಾರಿಸಿ" title="ಸೆಲ್ಫಿ ಪ್ರಿಯರನ್ನೇ ತಲ್ಲಣಿಸುವ ಅಪಾಯಕಾರಿ ಸೆಲ್ಫಿಗಳು
ಸ್ಮಾರ್ಟ್‌ಫೋನ್‌ಗೆ ಮಾರಕ ಈ ಅಪ್ಲಿಕೇಶನ್‌ಗಳು
ಫೌಂಡಿಂಗ್ ಫಾದರ್ಸ್ ರಹಸ್ಯ ಬಯಲು ಮಾಡಿದ ವಿಜ್ಞಾನ
ಖರ್ಚಿಲ್ಲದೇ ವಾಟರ್‌ ಬಾಟಲ್‌ನಿಂದ ಟೇಬಲ್‌ ಫ್ಯಾನ್‌ ತಯಾರಿಸಿ" />ಸೆಲ್ಫಿ ಪ್ರಿಯರನ್ನೇ ತಲ್ಲಣಿಸುವ ಅಪಾಯಕಾರಿ ಸೆಲ್ಫಿಗಳು
ಸ್ಮಾರ್ಟ್‌ಫೋನ್‌ಗೆ ಮಾರಕ ಈ ಅಪ್ಲಿಕೇಶನ್‌ಗಳು
ಫೌಂಡಿಂಗ್ ಫಾದರ್ಸ್ ರಹಸ್ಯ ಬಯಲು ಮಾಡಿದ ವಿಜ್ಞಾನ
ಖರ್ಚಿಲ್ಲದೇ ವಾಟರ್‌ ಬಾಟಲ್‌ನಿಂದ ಟೇಬಲ್‌ ಫ್ಯಾನ್‌ ತಯಾರಿಸಿ

ಗಿಜ್‌ಬಾಟ್ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಫೇಸ್‌ಬುಕ್ ತಾಣ

ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
you are on a budget but want an iPhone nonetheless, getting a certified refurbished model is one of the best options.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X