Just In
Don't Miss
- News
ಅತ್ಯಾಚಾರ ಆರೋಪಿಗಳ ಕೊಂದ ಪೊಲೀಸರ ಮೇಲೆ ಹೂಮಳೆ
- Finance
ಆರ್ಬಿಐನಿಂದ ಡಿಜಿಟಲ್ ಪಾವತಿಗೆ ಉತ್ತೇಜನ: ಬರಲಿದೆ ಪಿಪಿಐ ಕಾರ್ಡ್
- Movies
50 ದಿನ ಪೂರೈಸಿದ ಶ್ರೀಮುರಳಿ 'ಭರಾಟೆ' ಸಿನಿಮಾ
- Automobiles
ಇನ್ಮುಂದೆ ಬಂಕ್ಗಳಲ್ಲಿ ಬಾಟಲ್ಗಳಿಗೆ ಪೆಟ್ರೋಲ್ ಹಾಕಲ್ಲ..!
- Sports
'ರಣಹದ್ದು'ಗಳಿಂದ ಯುವ ಕ್ರಿಕೆಟಿಗರ ರಕ್ಷಿಸಬೇಕಿದೆ: ಪೊಲಾರ್ಡ್ ಹೇಳಿದ್ಯಾರಿಗೆ?!
- Lifestyle
ಉಗುರು ಕತ್ತರಿಸುವಾಗ ಈ ತಪ್ಪು ಮಾಡಿದರೆ ಸೋಂಕು ತಗುಲಬಹುದು
- Travel
ಲಕ್ಷದ್ವೀಪಕ್ಕೆ ಪ್ರವಾಸ ಹೋಗುವವರಿದ್ದೀರಾ? ಈ ಸಂಗತಿಗಳ ಬಗ್ಗೆ ಎಚ್ಚರಿಕೆ ಇರಲಿ
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
ಭಾರತದಲ್ಲಿ ಕೇವಲ 14,990 ರೂ.ಗೆ 'ಹಾನರ್ 20ಐ' ರಿಲೀಸ್!..ಮಾರುಕಟ್ಟೆಯಲ್ಲಿ ಸಂಚಲನ!!
ಭಾರತದ ಮೊಬೈಲ್ ಮಾರುಕಟ್ಟೆಗೆ ನೆನ್ನೆ ಬಿಡುಗಡೆಯಾದ ಹಾನರ್ 20 ಪ್ರೊ ಮತ್ತು ಹಾನರ್ 20 ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಜೊತೆಗೆ 'ಹಾನರ್ 20ಐ' ಎಂಬ ಬಜೆಟ್ ಫೋನ್ ಒಂದು ಬಿಡುಗಡೆಯಾಗಿದೆ. ಹಾನರ್ 20 ಪ್ರೊ ಮತ್ತು ಹಾನರ್ 20 ಸ್ಮಾರ್ಟ್‌ಫೋನ್ ಬೆಲೆಗಳು ಹತ್ತಿರ ಹತ್ತಿರ 30 ಸಾವಿರ ರೂ.ಗಳ ಆಸುಪಾಸಿನಲ್ಲಿದ್ದರೆ, ಈ ಹಾನರ್ 20ಐ ಸ್ಮಾರ್ಟ್‌ಫೋನ್ ಬೆಲೆ ಮಾತ್ರ ಕೇವಲ 14,990 ರೂಪಾಯಿಗಳಾಗಿರುವುದರಿಂದ ಇಡೀ ಮೊಬೈಲ್ ಮಾರುಕಟ್ಟೆ ಹಾನರ್‌ನತ್ತ ತಿರುಗಿ ನೋಡುವಂತೆ ಮಾಡಿದೆ.
ಈ ಮೊದಲು ಹಾನರ್ ಬಿಡುಗಡೆ ಮಾಡಿದ್ದ ಜನಪ್ರಿಯ 'ಹಾನರ್ 10 ಲೈಟ್' ಸ್ಮಾರ್ಟ್‌ಫೋನ್ ದೇಶದಲ್ಲಿ ಭರ್ಜರಿ ಮಾರಾಟ ಕಂಡಿತ್ತು ಮತ್ತು ಈಗಲೂ ಕಾಣುತ್ತಿದೆ. ಹಾಗಾಗಿ, ಇದೇ ಯಶಸ್ಸನ್ನು ಪಡೆಯಲು ಹಾನರ್ ಸಂಸ್ಥೆ 'ಹಾನರ್ 20ಐ' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಫೋನಿನ ಫೀಚರ್ಸ್ ನೋಡಿದರೆ ಹಾನರ್ ಇತ್ತೀಚಿಗೆ ಚೀನಾದಲ್ಲಿ ಬಿಡುಗಡೆ ಮಾಡಿದ 'ಹಾನರ್ 20 ಲೈಟ್' ಸ್ಮಾರ್ಟ್‌ಫೋನೇ ಭಾರತದಲ್ಲಿ 'ಹಾನರ್ 20ಐ' ಹೆಸರಿನಲ್ಲಿ ಬಿಡುಗಡೆಯಾಗಿದೆ.
ಇಲ್ಲಿ ಒಂದೇ ಒಂದು ವ್ಯತ್ಯಾಸವೆಂದರೆ ಚೀನಾದಲ್ಲಿ 21 ಸಾವಿರ ರೂ.ಆಸುಪಾಸಿನಲ್ಲಿ 'ಹಾನರ್ 20 ಲೈಟ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿತ್ತು. ಆದರೆ, ಭಾರತದಲ್ಲಿ ಫೋನಿನ ಬೆಲೆ 14,990 ರೂಪಾಯಿಗಳಾಗಿರುವುದರಿಂದ ಮೊಬೈಲ್ ಪ್ರಿಯರನ್ನು ಸೆಳೆಯುತ್ತಿದೆ. ಹಾಗಾದರೆ, ದೇಶದ ಮೊಬೈಲ್ ಮಾರುಕಟ್ಟೆ ಹಾನರ್‌ನತ್ತ ತಿರುಗಿ ನೋಡುವಂತೆ ಮಾಡಿ 'ಹಾನರ್ 20ಐ' ಸ್ಮಾರ್ಟ್‌ಫೋನ್ ಹೇಗಿದೆ?, 14,990 ರೂಪಾಯಿಗಳಿಗೆ ಖರೀದಿಸಲು ಯೋಗ್ಯ ಫೋನ್ ಇದಾಗಿದೆಯೇ ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ಹಾನರ್ 20ಐ' ಡಿಸೈನ್
ಬಜೆಟ್ ಫೋನ್‌ಗಳಲ್ಲೇ ಆಕರ್ಷಕ ಡಿಸೈನ್ ಹೊಂದಿದೆ ಎಂದು ಹೇಳಬಹುದಾದ ವಿನ್ಯಾಸದಲ್ಲಿ 'ಹಾನರ್ 20ಐ' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಪಂಚ್‌ಹೋಲ್ ಸೆಲ್ಫೀ ಕ್ಯಾಮೆರಾ ನೋಚ್ ಡಿಸ್‌ಪ್ಲೇ ಹೊಂದಿರುವ ಈ ಫೋನ್ ಗ್ಲಾಸ್ ಬಾಡಿಯನ್ನು ಹೊಂದಿದೆ. ಇನ್ನು ಹಿಂಬಾಗದಲ್ಲಿ ಮೂರು ರಿಯರ್ ಕ್ಯಾಮೆರಾಗಳು ಮತ್ತು ಫಿಂಗರ್ ಪ್ರಿಂಟ್ ಆಯ್ಕೆಗಳನ್ನು ನೋಡಬಹುದು.

'ಹಾನರ್ 20ಐ' ಡಿಸ್‌ಪ್ಲೇ
1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.21 ಇಂಚಿನ FHD+ ಡಿಸ್‌ಪ್ಲೇಯನ್ನು 'ಹಾನರ್ 20ಐ' ಹೊಂದಿದೆ. ಸ್ಮಾರ್ಟ್‌ಫೋನ್ ಬಾಡಿಯಿಂದ ಸ್ಕ್ರೀನ್ ನಡುವಿನ ಅಂತರ ಶೇ.82.91 % ರಷ್ಟಿದ್ದು, ಪಿಕ್ಸಲ್ ಸಾಂದ್ರತೆಯು 415ppi ಮತ್ತು ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ. FHD+ ಡಿಸ್‌ಪ್ಲೇ ವೀಡಿಯೊಗೆ ಮತ್ತು ಗೇಮಿಂಗ್‌ಗೆ ಸರಿಯಾದ ರೆಸಲ್ಯೂಶನ್ ನೀಡಲಿದೆ.

'ಹಾನರ್ 20ಐ' ಪ್ರೊಸೆಸರ್
'ಹಾನರ್ 20ಐ' ಸ್ಮಾರ್ಟ್‌ಫೋನಿನಲ್ಲಿ ಆಕ್ಟಾಕೋರ್ ಹಿಲಿಸಿಲಿಕಾನ್ ಕಿರಿನ್ 710 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 4GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್‌ಫೋನ್ EMUI 9 ಆಂಡ್ರಾಯ್ಡ್ 9 ಪೈ ಮೂಲಕ ರನ್ ಆಗಲಿದೆ. Mali-G51 MP4 ಸಾಮರ್ಥ್ಯದ ಗ್ರಾಫಿಕ್ ಸೌಲಭ್ಯ ಪಬ್‌ಜಿಯಂತಹ ಗೇಮ್ ಆಡಲು ಸಹಾಯಕ.

'ಹಾನರ್ 20ಐ' ಸೆಲ್ಫೀ ಕ್ಯಾಮೆರಾ
ಸೆಲ್ಫೀ ಪ್ರಿರಿಗೆ 'ಹಾನರ್ 20ಐ' ಸ್ಮಾರ್ಟ್‌ಫೋನ್ ಹೇಳಿಮಾಡಿಸಿದಂತಿದ್ದು, 32ಎಂಪಿ ಸಾಮರ್ಥ್ಯದ ಕೃತಕ ಬುದ್ದಿಮತ್ತೆ (ಎಐ) ಸೆಲ್ಫೀ ಕ್ಯಾಮೆರಾವನ್ನು ಫೋನಿನಲ್ಲಿ ಅಳವಡಿಲಾಗಿದೆ. ಬ್ಯೂಟಿ ಪ್ಲಸ್, ಆಟೊ ಫೋಕಸ್ ಸೇರಿದಂತೆ ಎಐಎಸ್ ಸೂಪರ್ ನೈಟ್ ಮೋಡ್‌ಗೆ ಬೆಂಬಲ ನೀಡುವಂತಹ ಹಲವು ಕೃತಕ ಬುದ್ದಿಮತ್ತೆ ಕ್ಯಾಮೆರಾ ತಂತ್ರಜ್ಞಾನಗಳು ಸೆಲ್ಫೀ ಪ್ರಿಯರನ್ನು ಸೆಳೆಯಲಿವೆ.

'ಹಾನರ್ 20ಐ' ರಿಯರ್ ಕ್ಯಾಮೆರಾ
'ಹಾನರ್ 20ಐ' ಫೋನ್ ತ್ರಿವಳಿ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾವು l f/1.8 ಅಪಾರ್ಚರ್‌ನಲ್ಲಿ 24ಎಂಪಿ ಸಾಮರ್ಥ್ಯದಾಗಿದ್ದರೆ, 8ಎಂಪಿ ವೈಡ್ ಆಂಗಲ್ ಮತ್ತು 2ಎಂಪಿ ಡೆಪ್ತ್ ಕ್ಯಾಮೆರಾಗಳು ರಿಯರ್ ಕ್ಯಾಮೆರಾ ಸಾಮರ್ಥ್ಯ ಎಂದು ಹೇಳಬಹುದು. ಇನ್ನು ರಿಯರ್ ಕ್ಯಾಮೆರಾವು ಸಂಪೂರ್ಣ 'ಎಐ' ಎಂಬುದನ್ನು ಕ್ಯಾಮೆರಾದ ಮೇಲೆಯೇ ಬರೆಯಲಾಗಿದೆ.

'ಹಾನರ್ 20ಐ' ಬ್ಯಾಟರಿ ಸಾಮರ್ಥ್ಯ
'ಹಾನರ್ 20ಐ' ಸ್ಮಾರ್ಟ್‌ಫೋನ್ 3,400mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ದೀರ್ಘಕಾಲ ಬಾಳಿಕೆ ಬರುವ ಬಲವನ್ನು ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಆದರೆ, ಈ ಫೋನ್ ಯಾವುದೇ ವೇಗವಾದ ಚಾರ್ಜಿಂಗ್ ಅನ್ನು ಬೆಂಬಲಿಸುವಂತೆ ಕಾಣಿಸುತ್ತಿಲ್ಲ. ಏಕೆಂದರೆ, ಮೊಬೈಲ್ ಬಾಕ್ಸ್ 10W ಚಾರ್ಜರ್ ಅನ್ನು ಒಳಗೊಂಡಿರುತ್ತದೆ ಎಂದು ತಿಳಿದುಬಂದಿದೆ.

'ಹಾನರ್ 20ಐ' ವಿಶೇಷತೆಗಳು
14,999 ರೂ.ಗಳಲ್ಲಿ ತ್ರಿವಳಿ ಕ್ಯಾಮರಾ ವ್ಯವಸ್ಥೆ ಹಾಗೂ 32 ಎಂಪಿ ಎಐ ಸೆಲ್ಫಿ ಕ್ಯಾಮರಾ ಹೊಂದಿರುವ ಫೋನ್‌ಗಳಲ್ಲಿ 'ಹಾನರ್ 20ಐ' ಮೊದಲ ಸ್ಥಾನದಲ್ಲಿದೆ ಎಂದು ಹೇಳಬಹುದು. ಇನ್ನು ಪ್ರೊಸೆಸರ್ ಕೂಡ ಬೆಲೆಗೆ ತಕ್ಕಂತಂಹ ಶಕ್ತಿಯುತವಾಗಿದೆ. FHD+ ಡಿಸ್‌ಪ್ಲೇ ಮೂಲಕ ಗಮನಸೆಳೆಯುವ ಈ ಫೋನ್ ಖರೀದಿಗೆ ಅತ್ಯುತ್ತಮವಾದ ಒಂದು ಬಜೆಟ್ ಫೋನ್ ಎಂದೆನ್ನಬಹುದು.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090