ಹುವಾಯಿ ಹೋನರ್ 4ಸಿ: ಮಾರುಕಟ್ಟೆಯಲ್ಲಿರುವ ಸೂಪರ್ ಬಜೆಟ್ ಫೋನ್

By Shwetha
|

ಹುವಾಯಿ ಹೋನರ್ 4 ಎಕ್ಸ್‌ನ ಅದ್ವಿತೀಯ ಯಶಸ್ಸಿನ ನಂತರ ಚೀನಾದ ಹ್ಯಾಂಡ್‌ಸೆಟ್ ತಯಾರಕ ಇನ್ನಷ್ಟು ಬಜೆಟ್ ಸ್ನೇಹಿ ಅಂತೆಯೇ ಬಳಕೆದಾರ ಸ್ನೇಹಿ ಫೋನ್‌ಗಳ ತಯಾರಿಕೆಗೆ ಸಜ್ಜಾಗಿದೆ. ಹೋನರ್ 4ಸಿಯ ಲಾಂಚ್‌ನೊಂದಿಗೆ ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಬಲವನ್ನು ಸದೃಢವಾಗಿಸಿದೆ.

ಹುವಾಯಿ ಹೋನರ್ 4ಸಿ ದುಬಾರಿ ಸ್ಮಾರ್ಟ್‌ಫೋನ್ ಅಲ್ಲದಿದ್ದರೂ ಕಂಪೆನಿಯ ಸಾಂಪ್ರದಾಯಿಕ ವಿನ್ಯಾಸೊಂದಿಗೆ ಅತ್ಯುನ್ನತ ಫೀಚರ್‌ಗಳನ್ನು ಪಡೆದುಕೊಂಡು ಬಂದಿದೆ. ಇಂದಿನ ಲೇಖನದಲ್ಲಿ ಹೋನರ್ 4ಸಿ ಒಂದು ಅದ್ಭುತ ಬಜೆಟ್ ಸ್ಮಾರ್ಟ್‌ಫೋನ್ ಏಕೆ ಎಂಬುದನ್ನು ಅರಿತುಕೊಳ್ಳೋಣ.

ಹುವಾಯಿ ಹೋನರ್ 4ಸಿ: ಸುಂದರ ವಿನ್ಯಾಸ

ಹುವಾಯಿ ಹೋನರ್ 4ಸಿ: ಸುಂದರ ವಿನ್ಯಾಸ

ಅದ್ಭುತವಾದ ರಚನೆ ಮತ್ತು ಪರಿಪೂರ್ಣತೆಯೊಂದಿಗೆ ಹುವಾಯಿ ಹೋನರ್ 4ಸಿಯನ್ನು ಬಿಡುಗಡೆ ಮಾಡಿದೆ. ಪ್ಲಾಸ್ಟಿಕ್‌ನಿಂದಲೇ ಈ ಫೋನ್ ಅನ್ನು ತಯಾರಿಸಲಾಗಿದ್ದು ಹಿಂಭಾಗ ಸುಂದರವಾಗಿದೆ.

ಹುವಾಯಿ ಹೋನರ್ 4ಸಿ: ಎಚ್‌ಡಿ ಡಿಸ್‌ಪ್ಲೇ

ಹುವಾಯಿ ಹೋನರ್ 4ಸಿ: ಎಚ್‌ಡಿ ಡಿಸ್‌ಪ್ಲೇ

ಹೋನರ್ 4ಸಿ, 5 ಇಂಚಿನ ಎಚ್‌ಡಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ಇದರ ರೆಸಲ್ಯೂಶನ್ 1,280 x 720 ಪಿಕ್ಸೆಲ್ ಆಗಿದೆ. ದೊಡ್ಡದಾದ ಡಿಸ್‌ಪ್ಲೇಯೊಂದಿಗೆ ಮತ್ತು ಹೆಚ್ಚಿನ ಪಿಕ್ಸೆಲ್‌ಗಳೊಂದಿಗೆ ಹೋನರ್ 4ಸಿ ಚಲನ ಚಿತ್ರಗಳು ಮತ್ತು ಫೋಟೋಗಳ ವೀಕ್ಷಣೆಗೆ ಹೇಳಿ ಮಾಡಿಸಿರುವಂಥದ್ದಾಗಿದೆ.

ಹುವಾಯಿ ಹೋನರ್ 4ಸಿ: ಶಕ್ತಿಯುತ ಪ್ರೊಸೆಸರ್

ಹುವಾಯಿ ಹೋನರ್ 4ಸಿ: ಶಕ್ತಿಯುತ ಪ್ರೊಸೆಸರ್

ಹೋನರ್ 4ಸಿನಲ್ಲಿ ಹೆಚ್ಚು ಶಕ್ತಿಯುತವಾದ 1.2GHz Kirin 620 ಓಕ್ಟಾ ಕೋರ್ 64 ಬಿಟ್ ಪ್ರೊಸೆಸರ್ ಅನ್ನು ಒಳಗೊಂಡಿದೆ. ಕೆಲವೊಂದು ರಹಸ್ಯ ಶಕ್ತಿಗಳನ್ನು ಈ ಡಿವೈಸ್ ಪಡೆದುಕೊಂಡಿದೆ.

ಹುವಾಯಿ ಹೋನರ್ 4ಸಿ: ವೇಗವಾದ RAM ಮತ್ತು ಮಲ್ಟಿ ಟಾಸ್ಕಿಂಗ್

ಹುವಾಯಿ ಹೋನರ್ 4ಸಿ: ವೇಗವಾದ RAM ಮತ್ತು ಮಲ್ಟಿ ಟಾಸ್ಕಿಂಗ್

ಹೋನರ್ 4ಸಿಯಲ್ಲಿ ನಿಮಗೆ 2ಜಿಬಿ RAM ಅನ್ನು ಕಾಣಬಹುದಾಗಿದ್ದು ಶಕ್ತಿಯುತ ಪ್ರೊಸೆಸರ್ ಅನ್ನು ಇದು ಹೊಂದಿದೆ. ಒಮ್ಮೆಗೆ ಹಲವಾರು ಕಾರ್ಯಕ್ರಮಗಳನ್ನು ಇದರಲ್ಲಿ ನಿಮಗೆ ನಿರ್ವಹಿಸಬಹುದಾಗಿದೆ. ಇನ್ನು ಹೋಲಿಕೆ ಮಾಡಿದಾಗ, ಐಫೋನ್ 6 ಅರ್ಧ ಮೆಮೊರಿಯನ್ನು ಮಾತ್ರ ಪಡೆದುಕೊಂಡಿದೆ, ಕಡಿಮೆ ಸುಧಾರಿತ ಮಲ್ಟಿ ಟಾಸ್ಕಿಂಗ್ ಸಾಮರ್ಥ್ಯ ಇದರಲ್ಲಿದೆ.

ಹುವಾಯಿ ಹೋನರ್ 4ಸಿ: ಇಮೋಶನ್ 3.0 ಯೂಸರ್ ಇಂಟರ್ಫೇಸ್

ಹುವಾಯಿ ಹೋನರ್ 4ಸಿ: ಇಮೋಶನ್ 3.0 ಯೂಸರ್ ಇಂಟರ್ಫೇಸ್

ಇಮೋಶನ್ 3.0 ಯೂಸರ್ ಇಂಟರ್ಫೇಸ್ ಹೋನರ್ 4ಸಿಯನ್ನು ಇನ್ನಷ್ಟು ಕಾರ್ಯಕ್ಷಮತೆಯುಳ್ಳ ಡಿವೈಸ್ ಆಗಿ ರೂಪಿಸಿದೆ. ಬಳಸಲು ಇದು ಇನ್ನಷ್ಟು ಸರಳವಾಗಿದ್ದು ಒಂದೇ ಕೈಯಲ್ಲಿ ಬಳಸಬಹುದಾದ ಯುಐ ಮತ್ತು ಸಸ್ಪೆಂಡ್ ಬಟನ್ ಅದ್ಭುತ ಅನುಭವವನ್ನು ನೀಡುತ್ತದೆ.

ಹುವಾಯಿ ಹೋನರ್ 4ಸಿ: ರಿಯರ್ ಕ್ಯಾಮೆರಾ

ಹುವಾಯಿ ಹೋನರ್ 4ಸಿ: ರಿಯರ್ ಕ್ಯಾಮೆರಾ

ಹೋನರ್ 4ಸಿ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್‌ಗಳೊಂದಿಗೆ ಬಂದಿದ್ದು, ಇದು ನಿಜಕ್ಕೂ ಸುಂದರ ಚಿತ್ರಗಳನ್ನು ನಿಮಗೆ ಒದಗಿಸಲಿದೆ. ಸುಂದರ ಚಿತ್ರಗಳನ್ನು ಸೆರೆಹಿಡಿಯುವುದು ಮಾತ್ರವಲ್ಲದೆ ವಿವಿಧ ಸೆಟ್ಟಿಂಗ್‌ಗಳನ್ನು ಇದು ಹೊಂದಿದೆ.

ಹುವಾಯಿ ಹೋನರ್ 4ಸಿ: ಅತ್ಯುತ್ತಮ ಸೆಲ್ಫಿ ಶೂಟರ್

ಹುವಾಯಿ ಹೋನರ್ 4ಸಿ: ಅತ್ಯುತ್ತಮ ಸೆಲ್ಫಿ ಶೂಟರ್

ವೈಡ್ ಆಂಗಲ್ ಉಳ್ಳ 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್ ಹೊಂದಿದ್ದು, ಉತ್ತಮ ಸೆಲ್ಫಿ ತೆಗೆಯಲು ಇದು ಹೇಳಿಮಾಡಿಸಿರುವಂಥದ್ದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಮುಂಭಾಗ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್ ಇದಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಹುವಾಯಿ ಹೋನರ್ 4ಸಿ: ಸ್ಪೀಕರ್‌ಗಳು

ಹುವಾಯಿ ಹೋನರ್ 4ಸಿ: ಸ್ಪೀಕರ್‌ಗಳು

ಇನ್ನು ಹ್ಯಾಂಡ್‌ಸೆಟ್‌ನ ಸ್ಪೀಕರ್ ನಿಜಕ್ಕೂ ಅದ್ಭುತವಾಗಿದೆ. ಇದೇ ಶ್ರೇಣಿಯಲ್ಲಿ ಬರುವ ಇತರ ಫೋನ್‌ಗಳಿಗೆ ಹೋಲಿಸಿದಾಗ ಇದು ಉತ್ತಮ ಸ್ಪೀಕರ್‌ಗಳನ್ನು ಪಡೆದುಕೊಂಡಿದೆ.

ಹುವಾಯಿ ಹೋನರ್ 4ಸಿ: ಹೆಚ್ಚು ವರ್ಧಿಸಬಹುದಾದ ಸಂಗ್ರಹಣೆ

ಹುವಾಯಿ ಹೋನರ್ 4ಸಿ: ಹೆಚ್ಚು ವರ್ಧಿಸಬಹುದಾದ ಸಂಗ್ರಹಣೆ

ಹೋನರ್ 4ಸಿಯ ಇನ್ನೊಂದು ವಿಶೇಷತೆ ಎಂದರೆ ಇದರ ಸಂಗ್ರಹಣೆಯನ್ನು ವಿಸ್ತರಿಸಬಹುದಾಗಿದೆ. ಇದರಲ್ಲಿ 8 ಜಿಬಿ ROM ಅನ್ನು ನಾವು ಕಾಣಬಹುದಾಗಿದ್ದು, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದಾಗಿದೆ.

ಹುವಾಯಿ ಹೋನರ್ 4ಸಿ: ದೀರ್ಘ ಬ್ಯಾಟರಿ ಲೈಫ್

ಹುವಾಯಿ ಹೋನರ್ 4ಸಿ: ದೀರ್ಘ ಬ್ಯಾಟರಿ ಲೈಫ್

ಹೆಚ್ಚು ಬಾಳಿಕೆಯ 2550mAh ಬ್ಯಾಟರಿಯೊಂದಿಗೆ ಡಿವೈಸ್ ಬಂದಿದ್ದು, 15 ಗಂಟೆಗಳ ಬಳಕೆಯಲ್ಲೂ ಇದರ ಬ್ಯಾಟರಿ ಮಿಸುಕಾಡುವುದಿಲ್ಲ. ಹೆಚ್ಚುಚ್ಚು ಪ್ರಯಾಣಿಸುವ ಬಳಕೆದಾರರಿಗೆ ಹೋನರ್ 4ಸಿ ಉತ್ತ ಡಿವೈಸ್ ಆಗಿದೆ.

Best Mobiles in India

English summary
The Honor 4C is not a high-end smartphone but comes an extraordinary specifications along with the company's traditional design attributes, all packed in an entry-level price segment. Here are the reasons for Honor 4C to be a super budget smartphone on the market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X