ಬಜೆಟ್ ಬೆಲೆಯಲ್ಲಿ ಚೀನಾ ಫೋನ್‌ಗಳ ಕಾರುಬಾರು

Written By:

ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ, ಹುವಾಯಿ ಭಾರತೀಯ ಮಾರುಕಟ್ಟೆಗೆ ಎರಡು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಹೋನರ್ 4 ಸಿ, ಮತ್ತು ಹೋನರ್ ಬೀ. ಬಜೆಟ್ ಸ್ನೇಹಿ ಬಳಕೆದಾರರನ್ನು ಕೇಂದ್ರೀಕರಿಸಿ ಈ ಎರಡೂ ಫೋನ್‌ಗಳು ಬಿಡುಗಡೆಗೊಂಡಿವೆ. ಇನ್ನು ಬಜೆಟ್ ಬೆಲೆಯಲ್ಲಿ ತಮ್ಮೆಲ್ಲಾ ಬಯಕೆಗಳನ್ನು ಈಡೇರಿಸುವಂತೆ ಬಂದಿರುವ ಈ ಫೋನ್‌ಗಳು ವಿಶೇಷ ವಿನ್ಯಾಸಗಳನ್ನು ಪಡೆದುಕೊಂಡಿವೆ.

ಓದಿರಿ: ಹುವಾಯಿ ಹೋನರ್ 4ಸಿ ಉತ್ತಮ ಫೋನ್ ಎಂಬುದಕ್ಕೆ 10 ಕಾರಣಗಳು

ಹೋನರ್ 4ಸಿ ಅತ್ಯಾಧುನಿಕ ಹಾರ್ಡ್‌ವೇರ್ ಮತ್ತು ಫೀಚರ್‌ಗಳೊಂದಿಗೆ ಬಂದಿದ್ದು ಕಂಪೆನಿಯ ಸಾಂಪ್ರದಾಯಿಕ ವಿನ್ಯಾಸವನ್ನು ಒಳಗೊಂಡಿದೆ. ಇನ್ನು ಹೋನರ್ ಬೀ ಶಕ್ತಿಯುತ ಸ್ಪೆಕ್ಸ್ ಮತ್ತು ಬೆಲೆಯ ಸೂಕ್ತ ಮಿಶ್ರಣವಾಗಿದೆ. ಎರಡೂ ಫೋನ್‌ಗಳ ಫೀಚರ್‌ಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡಿದ್ದು ಇದು ರೂ 10,000 ಬೆಲೆಯಲ್ಲಿ ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಾಂಪ್ರದಾಯಿಕ ವಿನ್ಯಾಸ

ಸಾಂಪ್ರದಾಯಿಕ ವಿನ್ಯಾಸ

ವಿನ್ಯಾಸ ಮತ್ತು ರಚನೆ

ಹೋನರ್ 4ಸಿ ಅದರದ್ದೇ ಆದ ಸಾಂಪ್ರದಾಯಿಕ ವಿನ್ಯಾಸದೊಂದಿಗೆ ಬಂದಿದ್ದು ಅತ್ಯಾಕರ್ಷಕ ಪೂರ್ಣತೆಯೊಂದಿಗೆ ಬಂದಿದೆ. ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಫೋನ್ ಇದಾಗಿದ್ದು ಗುಣಮಟ್ಟದ ರಚನೆಗೆ ಹೋನರ್ 4ಸಿ ಅತ್ಯುತ್ತಮ ಉದಾಹರಣೆಯಾಗಿದೆ. ನಿಮ್ಮ ಕೈಗಳಿಗೆ ಆರಾಮದಾಯಕ ಡಿವೈಸ್ ಇದಾಗಿದೆ.

ಉತ್ತಮ ಬಣ್ಣ

ಉತ್ತಮ ಬಣ್ಣ

ಡಿಸ್‌ಪ್ಲೇ

ಎರಡೂ ಸ್ಮಾರ್ಟ್‌ಫೋನ್‌ಗಳು ಭಾರತೀಯ ಫೋನ್ ಬಳಕೆದಾರರಿಗೆ ಅದ್ಭುತ ಕೊಡುಗೆಗಳು ಎಂದೆನಿಸಿವೆ. ದೊಡ್ಡದಾದ ಡಿಸ್‌ಪ್ಲೇ ಮತ್ತು ಹೆಚ್ಚಿನ ಪಿಕ್ಸೆಲ್ ರೆಸಲ್ಯೂಶನ್ ಹೋನರ್ 4ಸಿಯಲ್ಲಿದ್ದು ಸಿನಿಮಾಗಳನ್ನು ವೀಕ್ಷಿಸಲು ಇದು ಹೇಳಿಮಾಡಿಸಿರುವಂಥದ್ದಾಗಿದೆ. 5 ಇಂಚಿನ ಎಚ್‌ಡಿ ಡಿಸ್‌ಪ್ಲೇ ಜೊತೆಗೆ 1,280 x 720 ಪಿಕ್ಸೆಲ್ ರೆಸಲ್ಯೂಶನ್ ಇದು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ನ ದೊಡ್ಡ ಪ್ಯಾನೆಲ್ ಟೈಪ್ ಮಾಡಲು ಆರಾಮದಾಯಕವಾಗಿದೆ. ಇನ್ನು ಹೋನರ್ ಬೀ 4.5 ಇಂಚಿನ 480 x 854 ಪಿಕ್ಸೆಲ್ ರೆಸಲ್ಯೂಶನ್ ಉಳ್ಳ ಸಣ್ಣ ಡಿಸ್‌ಪ್ಲೇಯನ್ನು ಹೊಂದಿದೆ. ಹೋನರ್ ಬೀ 16:9 ಸ್ಕ್ರೀನ್ ರೇಶಿಯೊವನ್ನು ಒದಗಿಸುತ್ತಿದ್ದು, ವೀಡಿಯೋಗಳನ್ನು ಇನ್ನಷ್ಟು ಉತ್ತಮ ಬಣ್ಣಗಳಲ್ಲಿ ತೋರಿಸಲು ಇದು ಸಹಕಾರಿಯಾಗಿದೆ.

ಡಿವೈಸ್ ವೇಗ

ಡಿವೈಸ್ ವೇಗ

ಪ್ರೊಸೆಸರ್

64 ಬಿಟ್ ಕಿರಿನ್ 620 ಓಕ್ಟಾ ಕೋರ್ ಸಾಕ್‌ನೊಂದಿಗೆ ಬಂದಿದ್ದು ಡಿವೈಸ್ ವೇಗ 1.2GHz ಆಗಿದೆ. ಇದರಲ್ಲಿರುವ RAM ಸಾಮರ್ಥ್ಯ 2ಜಿಬಿಯಾಗಿದೆ. ಸ್ಪ್ರೆಡ್‌ಟರ್ಮ್ SC7731 ಕೋರ್ಟೆಕ್ಸ್ A7 ಕ್ವಾಡ್ ಕೋರ್ ಪ್ರೊಸೆಸರ್ 1.2GHz ಕ್ಲಾಕ್ ವೇಗದೊಂದಿಗೆ ಇದು ಬಂದಿದೆ. ಪ್ರೊಸೆಸರ್ 1 ಜಿಬಿ RAM ಸಾಮರ್ಥ್ಯವನ್ನು ಹೊಂದಿದೆ.

ವಿಸ್ತರಣಾ ಸಾಮರ್ಥ್ಯ

ವಿಸ್ತರಣಾ ಸಾಮರ್ಥ್ಯ

ಸಂಗ್ರಹಣೆ

ಎರಡೂ ಫೋನ್‌ಗಳು ವಿಸ್ತರಣಾ ಸಾಮರ್ಥ್ಯವನ್ನು ಪಡೆದುಕೊಂಡಿರುವುದು ಧನಾತ್ಮಕ ಅಂಶವಾಗಿದೆ. ಹೋನರ್ 4ಸಿ, 8ಜಿಬಿ ROM ನೊಂದಿಗೆ ಬಂದಿದ್ದು, ಎಸ್‌ಡಿ ಕಾರ್ಡ್ ಬಳಸಿ ಇದನ್ನು 32ಜಿಬಿಗೆ ವಿಸ್ತರಿಸಬಹುದು. ಹೋನರ್ 4ಸಿಯಲ್ಲಿ ಸಾಕಷ್ಟು ಅಂಶಗಳನ್ನು ನಿಮಗೆ ಸಂಗ್ರಹಿಸಿಡಬಹುದಾಗಿದೆ. 8ಜಿಬಿ ಆಂತರಿಕ ಸಂಗ್ರಹಣೆಯನ್ನು ಡಿವೈಸ್ ಪಡೆದುಕೊಂಡಿದ್ದು 32ಜಿಬಿಗೆ ಇದನ್ನು ವಿಸ್ತರಿಸಬಹುದು.

ಕ್ಯಾಮೆರಾ ಅಪ್ಲಿಕೇಶನ್

ಕ್ಯಾಮೆರಾ ಅಪ್ಲಿಕೇಶನ್

ಕ್ಯಾಮೆರಾ

ಫೋಟೋಗ್ರಫಿ ಹುಚ್ಚು ಇರುವವರಿಗೆ ಹೋನರ್ 4ಸಿ ಮತ್ತು ಹೋನರ್ ಬೀ ಅದ್ಭುತ ಕ್ಯಾಮೆರಾದೊಂದಿಗೆ ಬಂದಿದೆ. ಹೋನರ್ 4ಸಿ, 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಬಂದಿದ್ದು ಅತಿ ಶ್ರೀಮಂತ ಬಣ್ಣಗಳೊಂದಿಗೆ ಅದ್ಭುತ ಚಿತ್ರಗಳನ್ನು ಒದಗಿಸುತ್ತದೆ. ಕ್ಯಾಮೆರಾ ಅಪ್ಲಿಕೇಶನ್ ಹಲವಾರು ಸೆಟ್ಟಿಂಗ್‌ಗಳೊಂದಿಗೆ ಬಂದಿದ್ದು ಸುಂದರ ಚಿತ್ರಗಳನ್ನು ಸೆರೆಹಿಡಿಯಲು ಪೂರಕವಾಗಿದೆ. ಹೋನರ್ ಬೀ 8 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬಂದಿದ್ದು ಎಲ್‌ಇಡಿ ಫ್ಲ್ಯಾಶ್ ಅನ್ನು ಉತ್ತಮ ಫೋಟೋ ತೆಗೆಯುವಿಕೆ ಸೂಕ್ತವಾಗಿ ಪಡೆದುಕೊಂಡಿದೆ.

ಸುಂದರ ಸೆಲ್ಫಿ

ಸುಂದರ ಸೆಲ್ಫಿ

ಸೆಲ್ಫಿ ಶೂಟರ್

ಹುವಾಯಿ 4ಸಿ, 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾದೊಂದಿಗೆ ಬಂದಿದ್ದು ಸುಂದರ ಸೆಲ್ಫಿ ತೆಗೆಯಲು ಪೂರಕವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಾಕರ್ಷಕ ಮುಂಭಾಗ ಕ್ಯಾಮೆರಾವನ್ನು ಹೊಂದಿರುವ ಅತ್ಯುತ್ತಮ ಆಂಡ್ರಾಯ್ಡ್ ಫೋನ್ ಇದಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಹೋನರ್ ಬೀ, 2 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಬಂದಿದ್ದು ಸೆಲ್ಫಿ ಪ್ರಿಯರಿಗೆ ಇದು ಹೇಳಿಮಾಡಿಸಿರುವ ಡಿವೈಸ್ ಎಂದೆನಿಸಿದೆ.

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌

ಬಳಕೆದಾರ ಇಂಟರ್ಫೇಸ್

ಎರಡೂ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬಂದಿದ್ದು ತನ್ನದೇ ಎಮೋಶನ್ 3.0 ಬಳಕೆದಾರ ಇಂಟರ್ಫೇಸ್‌ನೊಂದಿಗೆ ಬಂದಿದೆ. ಸ್ಮಾರ್ಟ್‌ಫೋನ್‌ಗಳಿಗಾಗಿ ಎಮೋಶನ್ ಯುಐ ಅನ್ನು ಅತ್ಯುತ್ತಮ ಮೊಬೈಲ್ ಇಂಟರ್ಫೇಸ್‌ನ್ನಾಗಿ ಪರಿಗಣಿಸಲಾಗಿದೆ. ಈ ಎಮೋಶನ್ ಹೋನರ್ 4ಸಿ ಮತ್ತು ಹೋನರ್ ಬೀಯನ್ನು ಉತ್ತಮ ಕಾರ್ಯಕ್ಷಮತೆ ಮೊಬೈಲ್ ಅನ್ನಾಗಿ ಪರಿವರ್ತಿಸಿದೆ.

ತಂತ್ರಜ್ಞಾನ

ತಂತ್ರಜ್ಞಾನ

ಬ್ಯಾಟರಿ ಜೀವನ

ಇನ್ನು ಫೋನ್‌ನ ಪರ್ಫಾಮೆನ್ಸ್‌ನಲ್ಲಿ ಬ್ಯಾಟರಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಹುವಾಯಿ ಸ್ಮಾರ್ಟ್‌ಫೋನ್ ಪವರ್ ಸೇವಿಂಗ್ ತಂತ್ರಜ್ಞಾನದೊಂದಿಗೆ ಬಂದಿದ್ದು ಬ್ಯಾಟರಿ ಕಾರ್ಯಕ್ಷಮತೆಯನ್ನು ಇದು ಹೆಚ್ಚಿಸುತ್ತದೆ. ಇನ್ನು ಹೆಚ್ಚು ಮೊಬೈಲ್ ಬಳಕೆದಾರರಿಗೆ ಈ ಫೋನ್ ಉತ್ತಮ ಎಂದೆನಿಸಿದೆ. ಹೋನರ್ 4ಸಿ 2550mAh ಬ್ಯಾಟರಿಯೊಂದಿಗೆ ಬಂದಿದ್ದು 15 ಗಂಟೆಗಳ ನಿರಂತರ ಬಳಕೆಗೆ ಸಹಕಾರಿ ಎಂದೆನಿಸಿದೆ. ಇನ್ನು ಹೋನರ್ ಬೀ 1730mAh ಬ್ಯಾಟರಿಯೊಂದಿಗೆ ಬಂದಿದ್ದು, ಪೂರ್ಣ ಚಾರ್ಜ್‌ನಲ್ಲಿ 24 ಗಂಟೆಗಳಿಗಿಂತಲೂ ಅಧಿಕ ಕಾರ್ಯನಿರ್ವಹಣೆಯನ್ನು ಒದಗಿಸುತ್ತದೆ.

ಡ್ಯುಯಲ್ ಸಿಮ್ ಬೆಂಬಲ

ಡ್ಯುಯಲ್ ಸಿಮ್ ಬೆಂಬಲ

ಸಂಪರ್ಕ

ಎರಡೂ ಸ್ಮಾರ್ಟ್‌ಫೋನ್‌ಗಳು ಡ್ಯುಯಲ್ ಸಿಮ್ ಬೆಂಬಲವನ್ನು ಪಡೆದುಕೊಂಡಿದ್ದು ನಿಮ್ಮ ವೈಯಕ್ತಿಕ ಅಂತೆಯೇ ವೃತ್ತಿಪರ ಜೀವನವನ್ನು ಸುಧಾರಿಸುತ್ತದೆ. ಇನ್ನು ಪ್ರಮಾಣಿತ ಸಂಪರ್ಕ ವಿಶೇಷತೆಗಳಾದ ವೈಫೈ, ವೈಫೈ ಹಾಟ್‌ಸ್ಪಾಟ್, ಬ್ಲ್ಯೂಟೂತ್, 3ಜಿ, ಮೈಕ್ರೊಯುಎಸ್‌ಬಿ ಚಾರ್ಜಿಂಗ್ ವ್ಯವಸ್ಥೆಯನ್ನು ಇದು ಪಡೆದುಕೊಂಡು ಬಂದಿದೆ.

ಕೈಗೆಟಕುವ ಬೆಲೆ

ಕೈಗೆಟಕುವ ಬೆಲೆ

ಬೆಲೆ

ಹುವಾಯಿ ಈ ಎರಡೂ ಫೋನ್‌ಗಳನ್ನು ಕೈಗೆಟಕುವ ಬೆಲೆಯಲ್ಲಿ ನೀಡುತ್ತಿದೆ. ಹೋನರ್ 4ಸಿ ರೂ 8,999 ಕ್ಕೆ ಬಂದಿದ್ದು, ಹೋನರ್ ಬೀ ರೂ 4,499 ಕ್ಕೆ ಲಭ್ಯವಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Chinese smartphone maker, Huawei had recently introduced two new smartphones in the Indian market. Here are the features of both smartphones, which makes it most durable handsets under the price tag or Rs. 10,000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot