ಹೋನರ್ 5ಸಿ ಬಜೆಟ್ ಬೆಲೆಯ ಸೂಪರ್ ಫೋನ್ ಹೇಗೆ?

Written By:

ಹುವಾವೆಯ ಬ್ರ್ಯಾಂಡ್ ಹೋನರ್ ಹೋನರ್ 5ಸಿ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದ್ದು ಕೆಲವೇ ವಾರಗಳ ಹಿಂದೆ ತನ್ನ ಎದುರಾಳಿ ಶ್ಯೋಮಿ ರೆಡ್ಮೀ ನೋಟ್ 3 ಗೆ ಭರ್ಜರಿ ಪೈಪೋಟಿಯನ್ನು ನೀಡಿದೆ. ಉತ್ತಮ ವಿಶೇಷತೆಗಳುಳ್ಳ ಸ್ಮಾರ್ಟ್‌ಫೋನ್ ಅನ್ನು ಬಜೆಟ್ ಬೆಲೆಯಲ್ಲಿ ನೀಡುವುದರ ಮೂಲಕ ಹೋನರ್ ಮಾರುಕಟ್ಟೆಯಲ್ಲಿ ತನ್ನದೇ ಹೊಸ ಹವಾ ಸೃಷ್ಟಿಸುತ್ತಿದೆ. ಹೋನರ್ 5ಸಿ ಉತ್ತಮ ನೋಟ ಮತ್ತು ಶಕ್ತಿಯುತ ವಿಶೇಷತೆಗಳನ್ನೊಳಗೊಂಡು ಬರುತ್ತಿದ್ದು, ತನ್ನ ಈ ಬೆಲೆಯಲ್ಲಿ ಹೆಚ್ಚು ಅನುರೂಪ ಮತ್ತು ಅಪರೂಪದ್ದನ್ನು ಗ್ರಾಹಕರಿಗೆ ನೀಡುತ್ತಿದೆ.

ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5 V/S ಹೋನರ್ 5ಸಿ

ಇಂದಿನ ಲೇಖನದಲ್ಲಿ ಹೋನರ್ 5ಸಿ ಕುರಿತು ಮತ್ತಷ್ಟು ಅಂಶಗಳನ್ನು ಅರಿತುಕೊಳ್ಳೋಣ ಮತ್ತು ಮಾರುಕಟ್ಟೆಯಲ್ಲಿ ಇದು ಸೃಷ್ಟಿಸಿರುವ ಸ್ಪರ್ಧೆಯನ್ನು ಅವಲೋಕಿಸೋಣ.

ಓದಿರಿ: ಕ್ಯಾಮೆರಾ ಪ್ರೇಮಿಗಳಿಗೆ ಹೋನರ್ 5ಸಿ ಅತ್ಯುತ್ತಮ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೋನರ್ 5ಸಿ ರೂ 10,999 ಬೆಲೆ

ಹೋನರ್ 5ಸಿ ರೂ 10,999 ಬೆಲೆ

ಹೋನರ್ 5ಸಿ ರೂ 10,999 ಬೆಲೆಗೆ ಬರುತ್ತಿದ್ದು ಹೆಚ್ಚು ಪವರ್ ಫುಲ್ ಫೋನ್ ಆಗಿ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಕಿರಿನ್ 650 ಚಿಪ್‌ಸೆಟ್ ಅನ್ನು ಡಿವೈಸ್ ಪಡೆದುಕೊಂಡಿದ್ದು ಉತ್ತಮ ಕಾರ್ಯಕ್ಷಮತೆಯನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಫೋನ್ ನೋಡಲು ಹೆಚ್ಚು ಆಕರ್ಷಕವಾಗಿದ್ದು, ಇದರ ವಿನ್ಯಾಸ ಯುವಜನರಿಗೆ ಮತ್ತು ಹಿರಿಯರಿಗೆ ಹೆಚ್ಚು ಆಕರ್ಷಣೆಯನ್ನು ಉಂಟುಮಾಡಲಿದೆ.

ಪ್ರೀಮಿಯಮ್ ಮೆಟಲ್ ಬಾಡಿ

ಪ್ರೀಮಿಯಮ್ ಮೆಟಲ್ ಬಾಡಿ

ಮೆಟಲ್ ಚಾಸಿಸ್ ಯಾವಾಗಲೂ ದುಬಾರಿ ಫೋನ್‌ಗಳಲ್ಲಿ ನಮಗೆ ಕಾಣಬಹುದಾಗಿದೆ. ಹೋನರ್ ಮೆಟಲ್ ಬಾಡಿಯನ್ನು ಒಳಗೊಂಡು ಬಂದಿದ್ದು ಇದರಿಂದ ಇದು ಪ್ರೀಮಿಯಮ್ ಡಿವೈಸ್ ಎಂದೆನಿಸಿದೆ. ಅಲ್ಯುಮಿನಿಯಮ್ ಚಾಸಿಸ್ ನಿಜಕ್ಕೂ ಡಿವೈಸ್‌ಗೆ ಸ್ಟೈಲಿಶ್ ನೋಟವನ್ನು ಉಂಟುಮಾಡಿದೆ.

ತೆಳು ದೇಹ

ತೆಳು ದೇಹ

ಸೂಕ್ತವಾದ ವಿನ್ಯಾಸಗಳನ್ನು ಡಿವೈಸ್ ಪಡೆದುಕೊಂಡಿದ್ದು ಬೋಟ್ ಆಕಾರದ ಫೋನ್ ವಿನ್ಯಾಸವು ಫೋನ್ ಸ್ಲಿಪ್ ಆಗುವುದರಿಂದ ಸಂರಕ್ಷಿಸಲಿದೆ. ಇತರ ಮೆಟಲ್ ಬಾಡಿಯುಳ್ಳ ಡಿವೈಸ್‌ಗಳಂತೆಯೇ, ಫೋನ್ ಕೂಡ ಗಂಭೀರವಾಗಿದೆ. ಇದರ ಟಫ್‌ನೆಸ್ ಯಾರನ್ನೂ ಕೂಡ ಹಿಡಿದಿಡಬಲ್ಲುದಾಗಿದೆ.

ಲೈಟ್ ವೈಟ್

ಲೈಟ್ ವೈಟ್

ಮೆಟಲ್ ಬಾಡಿಯನ್ನು ಡಿವೈಸ್ ಪಡೆದುಕೊಂಡಿದ್ದು ಹೆಚ್ಚು ಶಕ್ತಿಯುತ ಬ್ಯಾಟರಿಯನ್ನು ಪಡೆದುಕೊಂಡಿದೆ, ಹೋನರ್ 5ಸಿ ಸ್ಮಾರ್ಟ್‌ಫೋನ್ ಹಗುರವಾಗಿದೆ. ದೀರ್ಘಾವಧಿಯ ಕರೆಗಳಲ್ಲಿ ನಿರತರಾಗಿರುವವರಿಗೂ ಫೋನ್ ಹೇಳಿಮಾಡಿಸಿರುವಂಥದ್ದಾಗಿದೆ. ಸಿಂಗಲ್ ಹ್ಯಾಂಡ್ಲಿಯಾಗಿ ಕೂಡ ಡಿವೈಸ್ ಅನ್ನು ನಿರ್ವಹಿಸಬಹುದಾಗಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಫೋನ್ ಉತ್ತಮ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದರೆ, ಇದು ಉತ್ತಮ ನೋಟವನ್ನು ಪಡೆದುಕೊಂಡಿರುತ್ತದೆ. ಉತ್ತಮ ಡಿಸ್‌ಪ್ಲೇಯು ಫೋನ್‌ನ ಗಂಭೀರತೆಯನ್ನು ಹೆಚ್ಚಿಸುತ್ತದೆ. ಹೋನರ್ 5ಸಿ ಉತ್ತಮ ಗಾತ್ರವನ್ನು ಪಡೆದುಕೊಂಡಿದ್ದು ಎಚ್‌ಡಿ ರೆಸಲ್ಯೂಶನ್ ಇದರಲ್ಲಿದೆ. ಅಂತೆಯೇ ಉತ್ತಮ ವೀಕ್ಷಣಾ ವಲಯಗಳನ್ನು ಇದು ಒದಗಿಸುತ್ತದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್

ಹೋನರ್ 5ಸಿಯು ಯುಎಸ್‌ಬಿ ಟೈಪ್ ಸಿ ಕನೆಕ್ಟಿವಿಟಿಯನ್ನು ಪಡೆದುಕೊಂಡು ಬಂದಿದ್ದು ವೇಗವಾದ ಡೇಟಾ ಟ್ರಾನ್ಸಫರ್ ಸ್ಪೀಡ್ ಅನ್ನು ಒದಗಿಸಿದೆ. ಇದು ಫಿಂಗರ್ ಪ್ರಿಂಟ್ ಸ್ಕ್ಯಾನರ್ ವಿಶೇಷತೆಯನ್ನು ಹೊಂದಿದ್ದು, ರಿಯರ್ ಕ್ಯಾಮೆರಾದ ಕೆಳಭಾಗದಲ್ಲಿ ನಿಮಗಿದನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Honor 5C is one phone that combines good looks with powerful specifications, which is a rear combination in its price range.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot