ಕ್ಯಾಮೆರಾ ಪ್ರೇಮಿಗಳಿಗೆ ಹೋನರ್ 5ಸಿ ಅತ್ಯುತ್ತಮ

Written By:

ಕಳೆದ ಕೆಲವು ವಾರಗಳ ಹಿಂದೆಯಷ್ಟೇ, ಹೋನರ್ 5ಸಿ ದೆಹಲಿಯಲ್ಲಿ ಲಾಂಚ್ ಆಯಿತು. ಇದೊಂದು ಫೀಚರ್ ಫೋನ್ ಆಗಿದ್ದು ಇದೇ ಬೆಲೆಯ ಇತರ ಫೋನ್‌ಗಳಿಗೆ ಕಠಿಣ ಪೈಪೋಟಿಯನ್ನು ನೀಡುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಹೋನರ್ 5ಸಿಯ ಲಾಂಚ್‌ನ ನಂತರ ಹುವಾವೆಯ ಗರಿಮೆ ಮತ್ತಷ್ಟು ಏರಿದೆ. ಹೆಚ್ಚು ಬೆಲೆಯ ಫೋನ್‌ಗಳಿಗೂ ಹೋನರ್ 5ಸಿ ಕಠಿಣ ಸ್ಪರ್ಧಿ ಎಂದೆನಿಸಿದೆ.

ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5 V/S ಹೋನರ್ 5ಸಿ

ಹೋನರ್ 5ಸಿ ಒಂದು ಮೆಟಲ್ ಕ್ಲಾಡ್ ಸ್ಮಾರ್ಟ್‌ಫೋನ್ ಎಂದೆನಿಸಿದ್ದು ಕಿರಿನ್ 650 ಚಿಪ್‌ಸೆಟ್‌ನೊಂದಿಗೆ ಬಂದಿದೆ 16 ಎನ್‌ಎಮ್ ತಂತ್ರಜ್ಞಾನವನ್ನು ಇದು ಪಡೆದುಕೊಂಡಿದೆ, ಬ್ಯಾಟರಿ ಸಮರ್ಥ ಸ್ಮಾರ್ಟ್‌ಫೋನ್ ಎಂಬ ಹಿರಿಮೆಯನ್ನು ಪಡೆದುಕೊಂಡಿರುವ ಈ ಡಿವೈಸ್ ಬೆಲೆ ರೂ 10,999 ಆಗಿದೆ. ಶ್ಯೋಮಿ ರೆಡ್ಮೀ ನೋಟ್ 3 ಗೆ ಸ್ಪರ್ಧೆಯನ್ನು ಒಡ್ಡಲಿರುವ ಈ ಡಿವೈಸ್ ಅನ್ನು ಬೆಲೆಯಲ್ಲೂ ಹಿಂದೆ ತಳ್ಳಿದೆ. ಶ್ಯೋಮಿ ಬೆಲೆ ರೂ 11,999 ಆಗಿದೆ.

ಓದಿರಿ: ಶ್ಯೋಮಿ ರೆಡ್ಮೀ ನೋಟ್ 3 ಯನ್ನು ಹಿಂದಿಕ್ಕಿದ ಹೋನರ್ 5ಸಿ

ಇಂದಿನ ಲೇಖನದಲ್ಲಿ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ವಿಶೇಷತೆಯನ್ನು ನಾವು ತಿಳಿದುಕೊಳ್ಳಲಿದ್ದು ಇವೆರಡೂ ಡಿವೈಸ್‌ಗಳು ಹೇಗೆ ವಿಭಿನ್ನವಾಗಿದೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸರಳ ಕ್ಯಾಮೆರಾ ಕಾರ್ಯಕ್ಷಮತೆ

ಸರಳ ಕ್ಯಾಮೆರಾ ಕಾರ್ಯಕ್ಷಮತೆ

ಹೋನರ್ 5ಸಿ,ಯ ಪ್ರೈಮರಿ ಕ್ಯಾಮೆರಾ 13 ಎಮ್‌ಪಿ ಎಂದೆನಿಸಿದ್ದು ಮುಂಭಾಗ ಕ್ಯಾಮೆರಾ 8 ಎಮ್‌ಪಿಯಾಗಿದೆ. ಉತ್ತಮ ಫೋಟೋಗ್ರಫಿಗಾಗಿ ಬೇಕಾದ ಅಗತ್ಯತೆಗಳನ್ನು ಈ ಡಿವೈಸ್ ಪಡೆದುಕೊಂಡಿದೆ. ಎಲ್‌ಇಡಿ ಫ್ಲ್ಯಾಶ್ ಲೈಟ್ ಇದರಲ್ಲಿದ್ದು, ಪಿಡಿಎಫ್ ಅನ್ನು ಪಡೆದುಕೊಂಡಿದೆ. ರೆಡ್ಮೀ ನೋಟ್ 3 ಯ ಕ್ಯಾಮೆರಾ 16 ಎಮ್‌ಪಿಯದಾಗಿದೆ.

ಸೆಲ್ಫಿ ಪ್ರಿಯರಿಗೆ ಹಬ್ಬ

ಸೆಲ್ಫಿ ಪ್ರಿಯರಿಗೆ ಹಬ್ಬ

ಸೆಲ್ಫಿ ಪ್ರಿಯರಿಗಾಗಿ, ಹೋನರ್ 5ಸಿಯು ಮುಂಭಾಗದಲ್ಲಿ 8 ಎಮ್‌ಪಿಯನ್ನು ಪಡೆದುಕೊಂಡಿದ್ದು ವೈಡ್ ಏಂಗಲ್ ಸ್ನ್ಯಾಪರ್ ಇದರಲ್ಲಿದೆ. ರೆಡ್ಮೀ ನೋಟ್ 3 ಯು ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾವನ್ನು ಹೊಂದಿದೆ. 8 ಎಮ್‌ಪಿ ಕ್ಯಾಮೆರಾವುಳ್ಳ ಹೋನರ್ 5ಸಿ ಸೆಲ್ಫಿ ಪ್ರಿಯರಿಗಾಗಿ ಹೇಳಿಮಾಡಿಸಿರುವಂತಿದ್ದು, ರೆಡ್ಮೀ ನೋಟ್ 3 ಗಿಂತಲೂ ಹೆಚ್ಚು ಅತ್ಯದ್ಭುತ ಎಂದೆನಿಸಿದೆ.

ಎಡಿಟಿಂಗ್ ಟೂಲ್ಸ್ ಮತ್ತು ಫೀಚರ್ಸ್

ಎಡಿಟಿಂಗ್ ಟೂಲ್ಸ್ ಮತ್ತು ಫೀಚರ್ಸ್

ಉತ್ತಮ ಫೋಟೋಗ್ರಫಿ ಅನುಭವವನ್ನು ಬಳಕೆದಾರರಿಗೆ ಒದಗಿಸುವುದಕ್ಕಾಗಿ, ಹೋನರ್ 5 ಸಿಯು ನೈಟ್ ಮೋಡ್, ಗುಡ್ ಫುಡ್, ಬ್ಯೂಟಿ ಮತ್ತು ಲೈಟ್ ಪೇಂಟಿಂಗ್ ಮೋಡ್ಸ್, ಪ್ರೊ ಮೋಡ್ ಅನ್ನು ಪಡೆದುಕೊಂಡು ಬಂದಿದೆ. ಇದು ಐಎಸ್‌ಓಗೆ ಪ್ರವೇಶವನ್ನು ಬಳಕೆದಾರರಿಗೆ ಸುಲಭವಾಗಿ ಒದಗಿಸುತ್ತದೆ, ವೈಟ್ ಬ್ಯಾಲೆನ್ಸ್, ಎಕ್ಸ್‌ಪೋಶರ್ ಮತ್ತು ಫೋಟೋ ವರ್ಧಿಸಲು ಇದು ಎಡಿಟಿಂಗ್ ಟೂಲ್ಸ್‌ಗಳನ್ನು ಪಡೆದುಕೊಂಡು ಬಂದಿದೆ.

ಪ್ರೊಸೆಸಿಂಗ್ ಪವರ್

ಪ್ರೊಸೆಸಿಂಗ್ ಪವರ್

ಫೋಟೋಗಳನ್ನು ಪ್ರೊಸೆಸ್ ಮಾಡಲು, ಹೆಚ್ಚಿನ ದೊಡ್ಡ ಟಾಸ್ಕ್‌ಗಳನ್ನು ನಿರ್ವಹಿಸಲು ಉತ್ತಮ ಪ್ರೊಸೆಸರ್‌ನ ಅಗತ್ಯವಿದೆ. ಕಿರಿನ್ 650 ಯೊಂದಿಗೆ ಕ್ಯಾಮೆರಾ ಪ್ರೇಮಿಗಳಿಗೆ ಉತ್ತಮ ಕಾರ್ಯಕ್ಷಮತೆ ದೊರೆಯಲಿದೆ. ಉತ್ತಮ ಬಳಕೆದಾರ ಅನುಭವವನ್ನು ಇದು ಸ್ಮಾರ್ಟ್‌ಫೋನ್ ಪ್ರಿಯರಿಗೆ ಒದಗಿಸಲಿದೆ.

ಉತ್ತಮ ವಿಶುವಲ್ಸ್

ಉತ್ತಮ ವಿಶುವಲ್ಸ್

ಫೋನ್‌ನ 5.2 ಇಂಚಿನ ಎಫ್‌ಎಚ್‌ಡಿ ಸ್ಕ್ರೀನ್, ಹೋನರ್ 5ಸಿ ಉತ್ತಮ ವಿಶುವಲ್ ಅನುಭವವನ್ನು ಬಳಕೆದಾರರಿಗೆ ಒದಗಿಸಲಿದೆ. ಇದು ಅತ್ಯುತ್ತಮವಾಗಿದ್ದು, ಉತ್ತಮ ಬಣ್ಣವನ್ನು ರಿಪ್ರೊಡ್ಯೂಸ್ ಮಾಡುತ್ತದೆ, ಇದು ಸ್ಕ್ರೀನ್‌ನಲ್ಲಿರುವ ಚಿತ್ರಗಳನ್ನು ಇನ್ನಷ್ಟು ಉತ್ತಮವಾಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Today we take a look at the camera specs of both the Honor 5C and Redmi Note 3 to check which one has better specs on paper. Have a look.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot