ಹೋನರ್‌ನ ಬಜೆಟ್ ಬೆಲೆಯ ಟ್ಯಾಬ್ಲೆಟ್ ಲಾಂಚ್

By Shwetha
|

ಹೋನರ್ 7 ಮತ್ತು ಹೋನರ್ 5‍X ಲಾಂಚ್‌ನ ನಂತರ ಹುವಾವೆಯ ಹೋನರ್ ಇನ್ನೊಂದು ಡಿವೈಸ್ ಅನ್ನು ಲಾಂಚ್ ಮಾಡಿದ್ದು ಹೋನರ್ 5ಸಿ ಎಂಬುದಾಗಿ ಇದಕ್ಕೆ ನಾಮಕರಣ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಡಿವೈಸ್ ಬಜೆಟ್ ಬೆಲೆಯಲ್ಲಿ ನಿಮ್ಮೆದುರಿಗೆ ಬರಲಿದೆ.

ಓದಿರಿ: ಟ್ಯಾಬ್ಲೆಟ್ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಲಿರುವ ಹೋನರ್ ಬ್ರ್ಯಾಂಡ್

ಡಿವೈಸ್ ಬೆಲೆ ರೂ 10,999 ಆಗಿದ್ದು ಹೋನರ್ 5ಸಿ ಯು ಗ್ರೇ, ಸಿಲ್ವರ್ ಮತ್ತು ಗೋಲ್ಡನ್ ಬಣ್ಣದಲ್ಲಿ ಲಭ್ಯವಿದೆ. ಹೋನರ್ ಸ್ಟೋರ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಈ ಡಿವೈಸ್ ನಿಮಗೆ ದೊರೆಯಲಿದ್ದು ಇಂದಿನಿಂದ ಫೋನ್‌ಗಾಗಿ ರಿಜಿಸ್ಟ್ರೇಶನ್ ಆರಂಭವಾಗಲಿದೆ. ಜೂನ್ 30 ರಿಂದ ಡಿವೈಸ್ ಮಾರಾಟ ಆರಂಭವಾಗಲಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಡಿವೈಸ್ ಕುರಿತು ಮತ್ತಷ್ಟು ಮಾಹಿತಿಗಳನ್ನು ಅರಿತುಕೊಳ್ಳೋಣ.

#1

#1

ಹೋನರ್ 5ಸಿ, 5.2 ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ರೆಸಲ್ಯೂಶನ್ 1920x1080 ಪಿಕ್ಸೆಲ್‌ಗಳಾಗಿದೆ. ಪ್ರೊಸೆಸರ್ ಕುರಿತು ಹೇಳುವುದಾದರೆ, ಹೋನರ್ 5ಸಿ ಓಕ್ಟಾ ಕೋರ್ ಕಿರಿನ್ 650 ಇದರಲ್ಲಿದ್ದು ಮಾಲಿ T830 ಫೋನ್‌ನಲ್ಲಿದೆ ಅಂತೆಯೇ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 ಸಾಕ್ ಇದರಲ್ಲಿದೆ.

#2

#2

ಹೋನರ್ 5ಸಿ, 2 ಜಿಬಿ RAM ಅನ್ನು ಒಳಗೊಂಡಿದ್ದು, 16 ಜಿಬಿ ROM ಇದರಲ್ಲಿದೆ ಇದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದೆ. ಮೆಟಲ್ ತಯಾರಿತ ಸ್ಮಾರ್ಟ್‌ಫೋನ್ ಇದಾಗಿದ್ದು ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದ್ದು 8 ಎಮ್‌ಪಿ ಮುಂಭಾಗ ಮತ್ತು 13 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದೆ.

#3

#3

ಹೋನರ್ 5 ಸಿ ಕ್ಯಾಮೆರಾ ಶ್ರೀಮಂತವಾಗಿದ್ದು ಸೂಪರ್ ನೈಟ್ ಮೋಡ್, ಬ್ಯೂಟಿ, ಲೈಟ್ ಪೈಂಟಿಂಗ್ ಅಂಶಗಳನ್ನು ಒಳಗೊಂಡಿದೆ. ಐಎಸ್‌ಒ, ಶಟರ್ ಸ್ಪೀಡ್, ಫೋಕಸ್, ವೈಟ್ ಬ್ಯಾಲೆನ್ಸ್, ಎಕ್ಸ್‌ಪೋಶರ್ ಮೊದಲಾದ ಅಂಶಗಳನ್ನು ಇದು ಹೊಂದಿದೆ.

#4

#4

ಕಂಪೆನಿ ತಿಳಿಸಿರುವಂತೆ, ಹೋನರ್ 5ಸಿ ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊನೊಂದಿಗೆ ಬಂದಿದ್ದು ಹುವಾವೆ EMUI 4.1 ಅನ್ನು ಪಡೆದುಕೊಂಡಿದೆ. ಈ ಬ್ಲ್ಯೂಟೂತ್ 4.1 LE, GPS, and 3.5mm ಆಡಿಯೊ ಜಾಕ್ ಅನ್ನು ಇದು ಪಡೆದುಕೊಂಡಿದೆ.

#5

#5

ಭಾರತದ ಮಾರುಕಟ್ಟೆಗೆ ಹೋನರ್ 7.0 ಟ್ಯಾಬ್ ಅನ್ನು ಲಾಂಚ್ ಮಾಡಿದ್ದು ವಿಶೇಷತೆಗಳನ್ನು ನೋಡಹೊರಟಲ್ಲಿ, 7 ಇಂಚಿನ WSVGA ಐಪಿಎಸ್ ಡಿಸ್‌ಪ್ಲೇಯನ್ನು ಇದು ಪಡೆದುಕೊಂಡಿದೆ.

#6

#6

ಇದು 4.4 ಕಿಟ್‌ಕ್ಯಾಟ್ ಅನ್ನು ಹೊಂದಿದ್ದು ಹುವಾವೆ ಎಮೋಶನ್ 3.0 ಅನ್ನು ಒಳಗೊಂಡಿದ್ದು 2 ಎಮ್‌ಪಿ ಕ್ಯಾಮೆರಾವನ್ನು ಎರಡೂ ಭಾಗಗಳಲ್ಲಿ ಹೊಂದಿದೆ.

#7

#7

ಡಿವೈಸ್ 4100mAh ಬ್ಯಾಟರಿಯನ್ನು ಪಡೆದುಕೊಂಡಿದೆ. ಬೆಲೆ ರೂ 6,999 ಆಗಿದೆ. ಹೋನರ್ ಟಿ1 7.0 ಮುಕ್ತ ಮಾರಾಟದಲ್ಲಿ ಲಭ್ಯವಿದ್ದು ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯಲಿದೆ.

Best Mobiles in India

English summary
Priced at Rs. Rs. 10,999, the Honor 5C will be available in Grey, Silver and Gold variant exclusively in Honor store and Flipkart through flash sale concept.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X