Subscribe to Gizbot

ಫೋನ್ ಭದ್ರತೆಯಲ್ಲಿ ಎತ್ತಿದ ಕೈ: ಹುವಾವೆ ಹೋನರ್ 7

Written By:

ನೀವು ಖರೀದಿಸುವ ಸ್ಮಾರ್ಟ್‌ಫೋನ್‌ನಲ್ಲಿ ಗೌಪ್ಯತೆ ಮತ್ತು ಭದ್ರತೆಗೆ ನೀವು ಹೆಚ್ಚಿನ ಮಹತ್ವ ನೀಡುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀವು ಹೊಂದುವುದು ಅತ್ಯವಶ್ಯಕವಾಗಿದೆ.

ಹೆಚ್ಚಿನ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸೌಲಭ್ಯ ಲಭ್ಯವಿದ್ದರೂ ಚೀನಾ ಆಧಾರಿತ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಹುವಾವೆ, ತಮ್ಮ ಹ್ಯಾಂಡ್‌ಸೆಟ್‌ಗಳಲ್ಲಿಯೂ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಲಭ್ಯವಾಗಿಸಿದೆ. ಅದೂ ಕೂಡ ಕೈಗೆಟಕುವ ಬೆಲೆಯಲ್ಲಿ ಈ ಡಿವೈಸ್ ಲಭ್ಯವಾಗುತ್ತಿರುವುದು ಇನ್ನೂ ಸಂತಸದ ವಿಚಾರವಾಗಿದೆ. ಫೋನ್ ಕುರಿತ ಹೆಚ್ಚಿನ ಮಾಹಿತಿಗಾಗಿ ಸ್ಲೈಡರ್ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹುವಾವೆ ಹೋನರ್ 7

ಫೋನ್ ಕುರಿತು

ಭಾರತದಲ್ಲಿ ಬಿಡುಗಡೆಯಾಗಿರುವ ಹುವಾವೆಯ ಹೋನರ್ 7 ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಎಂದೆನಿಸಿದ್ದು ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿಯೇ ಹೊಸ ಇತಿಹಾಸವನ್ನೇ ಈ ಹ್ಯಾಂಡ್‌ಸೆಟ್ ಬರೆಯಹೊರಟಿದೆ. ಇಂಟರ್ನೆಟ್ ಬಳಕೆದಾರರಲ್ಲಿ ಇದು ಟಾಪ್ ಸ್ಥಾನವನ್ನು ಗಳಿಸಿಕೊಂಡಿದ್ದು ಇದರ ತಯಾರಿ ಅಷ್ಟೊಂದು ಅಮೂಲಾಗ್ರವಾಗಿದೆ.

ವಿಶೇಷತೆ

ಹುವಾವೆ ಹೋನರ್ 7 ವಿಶೇಷತೆ

ಹೋನರ್ 7, 5.2 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು 1080x1920 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಇದು ಪಡೆದುಕೊಂಡಿದೆ. ಕಂಪೆನಿಯ 64 ಬಿಟ್ ಓಕ್ಟಾ ಕೋರ್ Kirin 935 ಪ್ರೊಸೆಸರ್ ಅನ್ನು ಇದು ಪಡೆದುಕೊಂಡಿದ್ದು 3 ಜಿಬಿ RAM ಡಿವೈಸ್‌ನಲ್ಲಿದೆ. ಆಂಡ್ರಾಯ್ಡ್ ಮೇಲ್ಭಾಗದಲ್ಲಿ 3.1 ಸ್ಕಿನ್ ಅನ್ನು ಪಡೆದುಕೊಂಡಿದೆ.

ಫೇಸ್ ಡಿಟೆಕ್ಶನ್ ಆಟೊಫೋಕಸ್‌

ಕ್ಯಾಮೆರಾ

ಸ್ಮಾರ್ಟ್‌ಫೋನ್ 20 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡು ಬಂದಿದ್ದು ಫೇಸ್ ಡಿಟೆಕ್ಶನ್ ಆಟೊಫೋಕಸ್‌ನೊಂದಿಗೆ ಬಂದಿದೆ. ಸಫಾಯರ್ ಗ್ಲಾಸ್ ಭದ್ರತೆಯನ್ನು ಮೇಲ್ಭಾಗದಲ್ಲಿ ಹೊಂದಿದೆ. ಮುಂಭಾಗ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದೆ.

ಭದ್ರತೆ

ಫಿಂಗರ್ ಪ್ರಿಂಟ್ ವಿಶೇಷತೆ

ಭದ್ರತೆಯ ವಿಷಯಕ್ಕೆ ಬಂದಾಗ, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಡಿವೈಸ್ ಹೊಂದಿದ್ದು ಕ್ಯಾಮೆರಾದ ಕೆಳಗೆ ಇದು ಇರುವುದನ್ನು ನಮಗೆ ಕಾಣಬಹುದಾಗಿದೆ.

ಟಚ್ ಟೈಪ್ ಫಿಂಗರ್ ಪ್ರಿಂಟ್ ಸ್ನ್ಯಾನರ್

ಫೋನ್ ಇಷ್ಟವಾಗುವುದು ಏಕೆ

ಟಚ್ ಟೈಪ್ ಫಿಂಗರ್ ಪ್ರಿಂಟ್ ಸ್ನ್ಯಾನರ್ ಅನ್ನು ಡಿವೈಸ್ ಹೊಂದಿದ್ದು ಹೆಚ್ಚು ವೇಗದ್ದಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಫಿಂಗರ್ ಪ್ರಿಂಟ್ ಸ್ಕ್ಯಾನರ್‌ಗಿಂತಲೂ ಇದು ವೇಗವುಳ್ಳದ್ದಾಗಿದೆ. ಇದು ಹೆಚ್ಚು ನಿಖರವಾಗಿದ್ದು ನೀವು ಒದ್ದೆ ಬೆರಳುಗಳಲ್ಲಿ ಮುಟ್ಟಿದರೂ ಇದು ಪತ್ತೆಹಚ್ಚುತ್ತದೆ.

ಸುಭದ್ರ ಫೀಚರ್‌

ಭದ್ರತಾ ಫೀಚರ್

ಹೋನರ್ 7 ಸುಭದ್ರ ಫೀಚರ್‌ಗಳೊಂದಿಗೆ ಬಂದಿದ್ದು, ಆಯ್ಕೆಮಾಡಿದ ಫೋಟೋಗಳನ್ನು ನಿಮಗೆ ಸರಿಸಬಹುದಾಗಿದೆ ಅಂತೆಯೇ ವೀಡಿಯೊಗಳು ಮತ್ತು ಆಡಿಯೊ ಫೈಲ್‌ಗಳನ್ನು ಇತರ ಡಾಕ್ಯುಮೆಂಟ್‌ಗಳನ್ನು ಪೋಲ್ಡರ್‌ಗೆ ವರ್ಗಾಯಿಸಬಹುದಾಗಿದೆ. ಪಾಸ್‌ವರ್ಡ್ ಅಥವಾ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದಕ್ಕೆ ಅಗತ್ಯ.

ಫಿಂಗರ್ ಪ್ರಿಂಟ್ ರೀಡರ್

ಹೋನರ್ 7 ಫಿಂಗರ್ ಪ್ರಿಂಟ್ ರೀಡರ್

ಹೋನರ್ 7 ನಲ್ಲಿರುವ ಫಿಂಗರ್ ಪ್ರಿಂಟ್ ರೀಡರ್ ಲಾಕ್ ಸ್ಕ್ರೀನ್‌ಗೆ ಪರ್ಯಾಯ ವ್ಯವಸ್ಥೆಯಾಗಿದ್ದರೂ ಸನ್ನೆ ನಿಯಂತ್ರಣ, ಸೆಲ್ಫಿಗಾಗಿ ಶಟರ್ ಬಟನ್ ಅಂತೆಯೇ ಮಲ್ಟಿ ಫಂಕ್ಶನ್ ಫಿಂಗರ್ ಪ್ರಿಂಟ್ ರೀಡರ್‌ನಂತೆ ಇದು ಕಾರ್ಯನಿರ್ವಹಿಸುತ್ತದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The fingerprint scanner are mostly found in premium smartphone, but China-based smartphone maker, Huawei, have started implementing fingerprint scanner to their handsets and are available at comparatively affordable price.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot