ಹೋನರ್ 8 ಮತ್ತು ಒನ್‌ಪ್ಲಸ್ 3: ಯಾವುದು ಬೆಸ್ಟ್‌? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

Written By:

ಭಾರತೀಯ ಮಾರುಕಟ್ಟೆಯಲ್ಲಿ ಈಗ ಮಧ್ಯ ಶ್ರೇಣಿಯ ಬೆಲೆ ಸ್ಮಾರ್ಟ್‌ಫೋನ್‌ ಮಾರಾಟ ಎಂದರೆ ಎಲ್ಲಿಲ್ಲದ ಕುತೂಹಲ. ಅಲ್ಲದೇ ಉತ್ತಮ ಹಾರ್ಡ್‌ವೇರ್‌, ವಿಶೇಷತೆಗಳು ಮತ್ತು ಫೀಚರ್‌ಗಳಿಂದ ಮಧ್ಯಮ ಕ್ರಮಾಂಕದ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಸ್ಪರ್ಧೆಯು ಏರ್ಪಟ್ಟಿದೆ. ಆದರೆ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಪಾಕೆಟ್‌ ಅನ್ನು ಪೂರ್ಣಾಂಶವಾಗಿ ಖಾಲಿ ಮಾಡುವುದಿಲ್ಲ.

ಅಂದಹಾಗೆ ಇಂದಿನ ಲೇಖನದಲ್ಲಿ ಭಾರತೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಇರುವ ಮಧ್ಯಮ ಬೆಲೆಯ ಟಾಪ್‌ 2 ಡಿವೈಸ್‌ಗಳ ಬಗ್ಗೆ ಹೋಲಿಕೆ ಮಾಡುತ್ತಿದ್ದೇವೆ. ಈ ಡಿವೈಸ್‌ಗಳು ಆಪಲ್‌, ಸ್ಯಾಮ್‌ಸಂಗ್, ಎಲ್‌ಜಿ.ಗಳಿಗಿಂತ ಅರ್ಧ ಬೆಲೆಯವಾಗಿವೆ. ಎಲ್ಲರೂ ಈ ಡಿವೈಸ್‌ಗಳ ಹಾರ್ಡ್‌ವೇರ್‌ ಮತ್ತು ಫೀಚರ್‌ಗಳ ಬಗ್ಗೆ ತಿಳಿಯಲೇಬೇಕು.

ಗೂಗಲ್‌ ಪಿಕ್ಸೆಲ್‌' ಫೋನ್‌ಗಳ 5 ಸಾಮಾನ್ಯ ಸಮಸ್ಯೆಗಳು ಮತ್ತು ಪರಿಹಾರಗಳು

ಈ ಸ್ಪರ್ಧೆ ನಡೆಯುತ್ತಿರುವುದು 'ಒನ್‌ಪ್ಲಸ್ 3'(OnePlus 3) ಮತ್ತು ಇತ್ತೀಚೆಗೆ ಲಾಂಚ್‌ ಆದ 'ಹುವಾವೆ ಹೋನರ್ 8'(Huawei Honor 8)ಸ್ಮಾರ್ಟ್‌ಫೋನ್‌ಗಳ ನಡುವೆ. ಇವುಗಳ ಬೆಲೆ 30,000 ರೂಗಿಂತ ಕಡಿಮೆ ಇದ್ದು, ಈಗಾಗಲೇ ಹ್ಯಾಂಡ್‌ಸೆಟ್‌ಗಳು ಬೆಲೆಯ ಎರಡರಷ್ಟು ಮಾರಾಟವಾಗಿವೆ. ಹಾಗಾದ್ರೆ ಟೈಮ್‌ ವೇಸ್ಟ್‌ ಮಾಡದೇ ಯಾವುದು ಬೆಸ್ಟ್‌ ಹೋಲಿಕೆ ಸಹಿತ ಇಂದಿನ ಲೇಖನ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿನ್ಯಾಸ

ವಿನ್ಯಾಸ

ಎಲ್ಲರೂ ಸ್ಮಾರ್ಟ್‌ಫೋನ್‌ನಲ್ಲಿ ಮೊದಲು ಇಷ್ಟಪಡುವುದು ವಿನ್ಯಾಸ ಮತ್ತು ಅನುಭವ ಬಗ್ಗೆ. ಹ್ಯಾಂಡ್‌ಸೆಟ್‌ ನಮ್ಮ ಸ್ಟೈಲ್‌ಗೆ ಸರಿಹೊಂದಬಹುದೇ ಎಂದು. ಅಂದಹಾಗೆ 'ಒನ್‌ಪ್ಲಸ್ 3' ಮತ್ತು 'ಹುವಾವೆ ಹೋನರ್ 8' ಎರಡು ಡಿವೈಸ್‌ಗಳು ಸಹ ಪ್ರೀಮಿಯಮ್ ಲುಕ್‌ ಹೊಂದಿದ್ದು, ಉತ್ತಮ ಗುಣಮಟ್ಟದ ಮೆಟಲ್‌ ಮತ್ತು ಗ್ಲಾಸ್‌ನಿಂದ ಡಿಸೈನ್‌ ಮಾಡಲಾಗಿದೆ. ಅಲ್ಲದೇ ಎರಡು ಡಿವೈಸ್‌ಗಳು ನೋಡಲು ಅತ್ಯಾಕರ್ಷಕವಾಗಿದ್ದು, ಹೊನರ್ 8 ಡ್ಯುಯಲ್ 2.5 ವಕ್ರ ಗಾಜಿನ ವಿನ್ಯಾಸದಿಂದ ಹೆಚ್ಚು ಆಕರ್ಷಿಸುತ್ತದೆ.

'ಒನ್‌ಪ್ಲಸ್ 3' ಮೆಟಾಲಿಕ್ ಹಿಂಭಾಗ ಪ್ಯಾನೆಲ್‌ ಹೊಂದಿದೆ, ಹೋನರ್ 8 ಅಲ್ಯುಮಿನಿಯಮ್ ಮಿಶ್ರಲೋಹದ ಫ್ರೇಮ್‌ ಅನ್ನು ವಕ್ರ ಗಾಜುಗಳ ನಡುವೆ ಹೊಂದಿದೆ. ಹೋನರ್ 8' ಮೊಬೈಲ್ ಕ್ಷೇತ್ರದಲ್ಲೇ ಮೊದಲು ಅನನ್ಯ ಅನುಭವ ನೀಡುವ ಹ್ಯಾಂಡ್‌ಸೆಟ್ ಆಗಿದೆ. ಹೋನರ್ 8' ಈ ಮೇಲಿನ ಅಂಶಗಳನ್ನು ನೋಡಿದಲ್ಲಿ ಉತ್ತಮ ಮೊಬೈಲ್ ಆಗಿದೆ ಎಂದೇಳಬಹುದು.

ಡಿಸ್‌ಪ್ಲೇ

ಡಿಸ್‌ಪ್ಲೇ

'ಒನ್‌ಪ್ಲಸ್ 3' ಮತ್ತು 'ಹುವಾವೆ ಹೋನರ್ 8' ಎರಡು ಡಿವೈಸ್‌ಗಳು ಸಹ ಸಂಪೂರ್ಣ HD ಸ್ಕ್ರೀನ್‌ ಅನ್ನು 1920*1080p ರೆಸಲ್ಯೂಶನ್‌ನೊಂದಿಗೆ ಹೊಂದಿವೆ. ಆದರೆ ಕಡಿಮೆ ಫೂಟ್‌ಪ್ರಿಂಟ್ ಹೊಂದಿವೆ. 'ಹೋನರ್ 8' 5.2 ಇಂಚು ಅನ್ನು ಹೊಂದಿದ್ದು, 'ಒನ್‌ಪ್ಲಸ್ 3' 5.5 ಇಂಚಿನ ಡಿವೈಸ್‌ ಹೊಂದಿದೆ. ಆದರೆ ಹೋನರ್ 8 ಹೆಚ್ಚಿನ ಪಿಕ್ಸೆಲ್‌ ಸಾಂದ್ರತೆಯೊಂದಿಗೆ, ಉತ್ತಮ ಮಲ್ಟಿಮೀಡಿಯ ಅನುಭವ ನೀಡಲಿದೆ.

'ಹೋನರ್ 8' ಡಿಸ್‌ಪ್ಲೇ ಹೆಚ್ಚು ಶಾರ್ಪರ್ ಆಗಿ ಕಾಣುತ್ತಿದ್ದು, ಒನ್‌ಪ್ಲಸ್ 3 ಗೆ ಹೋಲಿಸಿದಲ್ಲಿ ಉತ್ತಮವಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಕ್ಯಾಮೆರಾ ಫೀಚರ್‌ನಲ್ಲಿಯೂ ಸಹ ಹೋನರ್‌ 8 ಉತ್ತಮವಾಗಿದ್ದು, ಯಾವುದೇ ಹಿಂಜರಿಕೆ ಇಲ್ಲದೇ ಖರೀದಿಸಬಹುದು.

'ಹೋನರ್ 8' 6 ಲೆನ್ಸ್‌ಗಳು, ವೈಡ್‌ ಆಂಗಲ್ ಡ್ಯುಯಲ್ ಲೆನ್ಸ್ ಹಿಂಭಾಗ ಕ್ಯಾಮೆರಾ ಸೆಟಪ್‌ ಹೊಂದಿದ್ದು, 12MP ಸೋನಿ IMX286 ಸೆನ್ಸಾರ್ ಜೊತೆಗೆ f/2.2 ಅಪರ್ಚರ್ ಮತ್ತು 1.25 µm ಪಿಕ್ಸೆಲ್ ಸೈಜ್‌ ಹೊಂದಿದೆ. ಹೋನರ್ 8'ನಲ್ಲಿ ಸಾಮಾನ್ಯವಾಗಿ RGB ಸೆನ್ಸಾರ್'ನೊಂದಿಗೆ ಕಲರ್ ಮಾಹಿತಿ ಕ್ಯಾಪ್ಚರ್ ಮಾಡಬಹುದು. ಎರಡನೇಯದಾಗಿ ಮೊನೊಕ್ರೋಮ್ ಸೆನ್ಸಾರ್‌'ನೊಂದಿಗೆ ಬ್ರೈಟ್‌ನೆಸ್ ಅಂದಾಜಿಸಬಹುದು. ಫೋಟೋ ಕ್ಲಿಕ್ಕಿಸಿದ ನಂತರ ವಿಶೇಷವಾಗಿ ಹೋನರ್‌ 8' ಸಾಫ್ಟ್‌ವೇರ್ ಎರಡು ಇಮೇಜ್‌ಗಳನ್ನು ಒಂದು ಇಮೇಜ್‌ ಆಗಿ ಒಟ್ಟುಗೂಡಿಸುತ್ತದೆ. ಕಡಿಮೆ ಬೆಳಕಿನಲ್ಲೂ ಸಹ ಉತ್ತಮ ಇಮೇಜ್‌ ನೀಡುತ್ತದೆ.

'ಒನ್‌ಪ್ಲಸ್ 3' 16MP ಹಿಂಭಾಗ ಕ್ಯಾಮೆರಾ ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟಬಿಲೈಜೇಶನ್ ಹೊಂದಿದೆ. ಇದು ಸಹ ಉತ್ತಮ ಇಮೇಜ್‌ಗಳನ್ನು ನೀಡುವ ಸಾಮರ್ಥ್ಯ ಹೊಂದಿದ್ದರೂ, ಹೋನರ್ 8 ರೀತಿಯ ಅತ್ಯಾಧುನಿಕ ಫೀಚರ್ ಹೊಂದಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್ ಕಾರ್ಯಕ್ಷಮತೆ

ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್ ಕಾರ್ಯಕ್ಷಮತೆ

ಒನ್‌ಪ್ಲಸ್ 3 ಡಿವೈಸ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 820 ಕ್ವಾಡ್‌ಕೋರ್ ಪ್ರೊಸೆಸರ್ ಯೋಜಿನವಾಗಿದೆ. ಇದು ಸಿಪಿಯು ಮಾರುಕಟ್ಟೆಯಲ್ಲಿ ಉನ್ನತ ಸಾಲಿನಲ್ಲಿದೆ.

ಹೋನರ್ 8 ಹುವಾವೆಯ ಕಿರಿನ್ 950 ಆಕ್ಟಾಕೋರ್ ಪ್ರೊಸೆಸರ್ ಯೋಜಿತವಾಗಿದೆ.

ಸಾಫ್ಟ್‌ವೇರ್ ಬಗ್ಗೆ ಹೇಳುವುದಾದರೆ 'ಒನ್‌ಪ್ಲಸ್ 3 ಮತ್ತು ಹೋನರ್ 8' ಡಿವೈಸ್‌ಗಳು ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್‌ನಿಂದ ರನ್‌ ಆಗುತ್ತವೆ. ಒನ್‌ಪ್ಲಸ್ 3 ಆಕ್ಸಿಜನ್ಓಏಸ್ ಹೊಂದಿದೆ, ಹೋನರ್ 8 ಕಂಪನಿಯ ಎಮೋಶನ್ ಯುಐ ಹೊಂದಿದೆ.

ಮೆಮೊರಿ ಸಾಮರ್ಥ್ಯ

ಮೆಮೊರಿ ಸಾಮರ್ಥ್ಯ

ಮೆಮೊರಿ ಸಾಮರ್ಥ್ಯದಲ್ಲಿ ಹೋನರ್ 8, ಒನ್‌ಪ್ಲಸ್ 3 ಅನ್ನು ಮೀರಿಸಿದೆ. ಹೋನರ್ 8 32GB ಆಂತರಿಕ ಮೆಮೊರಿ ಹೊಂದಿದೆ. ಅಲ್ಲದೇ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಆಫರ್ ಮಾಡಿದೆ. ಒನ್‌ಪ್ಲಸ್ 3 ಈ ಆಪ್ಶನ್ ಹೊಂದಿಲ್ಲ. ಆದರೆ 64GB ಆಂತರಿಕ ಮೆಮೊರಿ ಹೊಂದಿದೆ.

ಇತರೆ ಫೀಚರ್‌ಗಳು

ಇತರೆ ಫೀಚರ್‌ಗಳು

ಎರಡು ಸ್ಮಾರ್ಟ್‌ಫೋನ್‌ಗಳು ಫ್ರಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಸುರಕ್ಷತೆಗಾಗಿ ಹೊಂದಿವೆ. ಒನ್‌ಪ್ಲಸ್ 3 ಮುಂಭಾಗದಲ್ಲಿ ಸೆನ್ಸಾರ್‌ ಹೊಂದಿದೆ. ಹೋನರ್ 8 ಬಯೋಮೆಟ್ರಿಕ್ ಸೆನ್ಸಾರ್‌ ಅನ್ನು ಹಿಂಭಾಗದಲ್ಲಿ ಹೊಂದಿದೆ.

ಹೋನರ್ 8'ನ ಸಣ್ಣ ಫಿಂಗರ್ ಪ್ರಿಂಟ್ ಸ್ಕ್ಯಾನರ್‌ ಅನ್ನು ಅನ್‌ಲಾಕ್‌ ಮಾಡಲು, ಫೋಟೋ ಕ್ಲಿಕ್‌ ಮಾಡಲು, ಗ್ಯಾಲರಿಯಲ್ಲಿ ಇಮೇಜ್‌ ಬ್ರೌಸ್‌ ಮಾಡಲು, ನೋಟಿಫಿಕೇಶನ್ ಚೆಕ್‌ ಮಾಡಲು, ಕರೆ ಸ್ವೀಕರಿಸಲು ಮತ್ತು ಅಲಾರಂ ಡಿಸ್‌ಮಿಸ್‌ಗಾಗಿ, ಹೀಗೆ ಹಲವು ಆಪ್ಶನ್‌ಗಳಿಗಾಗಿ ಹೋನರ್ ಸೆನ್ಸಾರ್ ಅನ್ನು ಬಳಸಬಹುದು.

ಎರಡು ಸ್ಮಾರ್ಟ್‌ಫೋನ್‌ಗಳು ಸಹ 3,000mAH ಬ್ಯಾಟರಿ ಯುನಿಟ್ ಹೊಂದಿದ್ದು, ಹೋನರ್ 8 ಡಿವೈಸ್‌ ಬ್ಯಾಟರಿ, ಒನ್‌ಪ್ಲಸ್‌ 3 ಬ್ಯಾಟರಿಗಿಂತ ದೀರ್ಘಕಾಲ ಬಾಳಿಕೆ ಬರುತ್ತದೆ.

 ಯಾವುದು ಬೆಸ್ಟ್‌?

ಯಾವುದು ಬೆಸ್ಟ್‌?

ಎರಡು ಡಿವೈಸ್‌ಗಳು ಸಹ ಅದ್ಭುತ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಫೀಚರ್ ಹೊಂದಿವೆ. ಆದರೆ ಹೋನರ್ 8 ಹೆಚ್ಚು ಅತ್ಯಾಧುನಿಕತೆಯಿಂದ ಕ್ಯಾಮೆರಾ ಮತ್ತು ವಿನ್ಯಾಸದಲ್ಲಿ ಹೆಚ್ಚು ಆಕರ್ಷಕವಾಗಿದೆ. ಅಲ್ಲದೇ ಭಾರತೀಯ ಟೆಕ್‌ ಪ್ರಿಯರಿಗಾಗಿಯೇ ವಿನ್ಯಾಸಗೊಳಿಸಿದ ಡಿವೈಸ್‌ ಇದಾಗಿದೆ. ಸ್ಟೈಲ್ ಮತ್ತು ಕಾರ್ಯಕ್ಷಮತೆಯಲ್ಲಿ ಇತರೆ ಡಿವೈಸ್‌ಗಳೊಂದಿಗೆ ರಾಜಿ ಇಲ್ಲವೇಇಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Honor 8 vs OnePlus 3: Find Out Who Wins the Title of Best Mid-Range Android Flagship Smartphone. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot