ಅಗ್ಗದ ಬೆಲೆಯ ಹಾನರ್‌ ಪ್ಲೇನಲ್ಲಿ ಟಾಪ್‌ ಎಂಡ್‌ ಆಯ್ಕೆಗಳು..!

|

ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬಹಳ ವಿಶಿಷ್ಟವಾದ ವರ್ಗವೆಂದರೆ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ ವರ್ಗ. ಅನೇಕ ಮೊಬೈಲ್‌ ಉತ್ಪಾದಕರು ಈ ವರ್ಗದಲ್ಲಿಯೇ ಬಹಳಷ್ಟು ಸ್ಪರ್ಧೆ ಎದುರಿಸಿ ಮಾರುಕಟ್ಟೆಯಲ್ಲಿ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ ವರ್ಗದಲ್ಲಿ ಇಷ್ಟೆಲ್ಲಾ ಸ್ಪರ್ಧೆ ಇದ್ದರೂ ಕೆಲವೇ ಕೆಲವು ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳು ಮಾತ್ರ ಕಾರ್ಯನಿರ್ವಹಣೆಯಲ್ಲಿ ರಾಜಿ ಮಾಡಕೊಳ್ಳದೆ ಹಣಕ್ಕೆ ತಕ್ಕಂತ ಉತ್ಪನ್ನ ನೀಡುವ ಕಾರ್ಯ ಮಾಡುತ್ತಿವೆ. ಅಂತಹ ಬ್ರಾಂಡ್‌ಗಳಲ್ಲಿ ಹಾನರ್‌ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಹಾನರ್ ಯಾವಾಗಲೂ ಮೊಬೈಲ್ ತಂತ್ರಜ್ಞಾನದ ಮಿತಿಗಳಾಚೆ ಕಾರ್ಯನಿರ್ವಹಿಸುತ್ತದೆ. ಮತ್ತು ಕೆಲವು ಅದ್ಭುತ ಪವರ್‌ಹೌಸ್‌ಗಳನ್ನು ಉತ್ಪಾದಿಸಿದೆ.

ಇತ್ತೀಚೆಗೆ ತಾನೇ ಹಾನರ್‌ ಭಾರತೀಯ ಬಳಕೆದಾರರಿಗಾಗಿ ಹಾನರ್‌ ಪ್ಲೇ ಸ್ಮಾರ್ಟ್‌ಫೋನ್‌ನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ ಗೇಮಿಂಗ್‌ನಂತಹ ಕಾರ್ಯಗಳಿಗೆ ಹೇಳಿ ಮಾಡಿಸಿದಂತಿದ್ದು, GPU Turbo ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಗೇಮಿಂಗ್‌ ಅಷ್ಟೇ ಅಲ್ಲದೇ ಹಾನರ್‌ ಪ್ಲೇ ತನ್ನ ಬಳಕೆದಾರರಿಗೆ ಅನೇಕ ಫೀಚರ್‌ಗಳನ್ನು ಪ್ರೊಸೆಸಿಂಗ್‌ ಮತ್ತು ಬಹುಕಾರ್ಯ, ಕ್ಯಾಮೆರಾ, ಸಾಫ್ಟ್‌ವೇರ್‌ ಮತ್ತು ಭದ್ರತೆಯಲ್ಲೂ ನೀಡುತ್ತಿದ್ದು, ಉತ್ತಮ ಸ್ಮಾರ್ಟ್‌ಫೋನ್‌ ಎನಿಸಿಕೊಳ್ಳುತ್ತಿದೆ.

ಅಗ್ಗದ ಬೆಲೆಯ ಹಾನರ್‌ ಪ್ಲೇನಲ್ಲಿ ಟಾಪ್‌ ಎಂಡ್‌ ಆಯ್ಕೆಗಳು..!

ಹಾನರ್‌ ಪ್ಲೇ ಸ್ಮಾರ್ಟ್‌ಫೋನ್‌ನ 4GB RAM ಮತ್ತು 64GB ROM ಆವೃತ್ತಿ ಕೇವಲ 19,990 ರೂ.ಗೆ ಲಾಂಚ್ ಆಗಿ, ಅಮೆಜಾನ್‌ನಲ್ಲಿ ಆಯೋಜಿಸಿದ್ದ ಮೊದಲ ಸೇಲ್‌ನಲ್ಲಿ ಕೇವಲ 20 ಸೆಕೆಂಡ್‌ಗಳಲ್ಲಿ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ಈ ದಾಖಲೆಗೆ ಪ್ರಮುಖವಾಗಿ ಅದ್ಭುತ ಹಾಗೂ ಸಮಂಜಸವಾದ ಬೆಲೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡುವಂತೆ ಸ್ಮಾರ್ಟ್‌ಫೋನ್‌ ವಿನ್ಯಾಸಗೊಳಿಸಿರುವುದು ಕಾರಣವಾಗಿದೆ. ನಿಮ್ಮ ಕಿಸೆ ಖಾಲಿ ಮಾಡಿಕೊಳ್ಳದೆ ಅತ್ಯುತ್ಕೃಷ್ಟ ಕಾರ್ಯನಿರ್ವಹಣೆಯನ್ನು ಅನುಭವಿಸಲು ಹಾನರ್ ಪ್ಲೇ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಮುಂದೆ ತಿಳಿಯೋಣ.

ಅಗ್ಗದ ಬೆಲೆಯ ಹಾನರ್‌ ಪ್ಲೇನಲ್ಲಿ ಟಾಪ್‌ ಎಂಡ್‌ ಆಯ್ಕೆಗಳು..!

GPU Turbo ತಂತ್ರಜ್ಞಾನ ನೀಡುತ್ತದೆ ಅದ್ಭುತ ಗೇಮಿಂಗ್‌ ಅನುಭವ

ಮೊದಲು ಗೇಮಿಂಗ್‌ ಫೀಚರ್‌ನಿಂದ ನಮ್ಮ ಹಾನರ್‌ ಪ್ಲೇ ಫೀಚರ್ ಆರಂಭಿಸೋಣ. ಗೇಮಿಂಗ್‌ ಫೀಚರ್ ಸ್ಮಾರ್ಟ್‌ಫೋನ್‌ನ ನೈಜತೆಯನ್ನು ಪ್ರದರ್ಶಿಸುತ್ತದೆ. ಗೇಮಿಂಗ್ ಕಾರ್ಯಕ್ಷಮತೆ ಸ್ಮಾರ್ಟ್‌ಫೋನ್‌ನಲ್ಲಿನ ಗ್ರಾಫಿಕಲ್ ಸಂಸ್ಕರಣ ಘಟಕ (GPU)ದ ಮೇಲೆ ಅವಲಂಭಿತವಾಗಿರುತ್ತದೆ ಎಂಬ ಅಂಶವನ್ನು ನೀವು ತಿಳಿದಿರಬೇಕು. ಅದ್ಭುತ ಗೇಮಿಂಗ್‌ ಅನುಭವ ನೀಡಲು ಸ್ಮಾರ್ಟ್‌ಫೋನ್‌ ಉತ್ತಮ GPU ಘಟಕ ಹೊಂದಿರುವುದು ಮುಖ್ಯವಾಗುತ್ತದೆ.

ಹಾನರ್‌ ಪ್ಲೇ ಸ್ಮಾರ್ಟ್‌ಫೋನ್‌ ಪ್ರಭಲ GPU-Mali G72 MP12 ಗ್ರಾಫಿಕಲ್ ಸಂಸ್ಕರಣ ಘಟಕ ಹೊಂದಿದ್ದು, ಫುಲ್‌ವೀವ್‌ ಡಿಸ್‌ಪ್ಲೇನಲ್ಲಿ ಗ್ರಾಫಿಕ್ಸ್‌ನ್ನು ಅದ್ಭುತವಾಗಿ ತೋರಿಸುತ್ತದೆ. ಈ ಸ್ಮಾರ್ಟ್‌ಫೋನ್ GPU Turbo ತಂತ್ರಜ್ಞಾನದ ಜತೆಯಲ್ಲಿಯೂ ಬರುತ್ತಿದ್ದು, ಮೊಬೈಲ್ ಗೇಮರ್‌ಗಳ ಅಗತ್ಯತೆಗೆ ತಕ್ಕಂತೆ ಸ್ಮಾರ್ಟ್‌ಫೋನ್‌ನ್ನು ವಿನ್ಯಾಸಗೊಳಿಸಲಾಗಿದೆ. GPU Turbo ತಂತ್ರಜ್ಞಾನ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್ಗಳನ್ನು ಸರಳೀಕರಿಸುವ ಮೂಲಕ ಹ್ಯಾಂಡ್‌ಸೆಟ್‌ನ ಗೇಮಿಂಗ್ ಪ್ರತಿಕ್ರಿಯೆಯನ್ನು ದ್ವಿಗುಣಗೊಳಿಸುತ್ತದೆ.

ತಾಂತ್ರಿಕ ಪರಿಭಾಷೆಯಲ್ಲಿ ಹೇಳುವುದಾದರೆ, ಗ್ರಾಫಿಕ್ಸ್‌ ಸಂಸ್ಕರಣ ದಕ್ಷತೆಯನ್ನು GPU Turbo ಶೇ.60ರಷ್ಟು ಹೆಚ್ಚಿಸುತ್ತದೆ. ಹಾಗೂ ಒಟ್ಟಾರೆ SoC ವಿದ್ಯುತ್ ಬಳಕೆಯಲ್ಲಿ ಶೇ.30ರಷ್ಟನ್ನು ಉಳಿಸುತ್ತದೆ. GPU Turbo ತಂತ್ರಜ್ಞಾನದೊಂದಿಗೆ ಬಳಕೆದಾರರು ಹಾನರ್‌ ಪ್ಲೇನಲ್ಲಿ ಗೇಮಿಂಗ್‌ ಶೈಲಿಯನ್ನು ಗುರುತಿಸಬಹುದಾಗಿದೆ. ಯುದ್ಧಗಳ ಗೇಮಿಂಗ್ ಸನ್ನಿವೇಶಗಳನ್ನು ಗುರುತಿಸಿ, ವಿಶೇಷ ಕೌಶಲ್ಯಗಳ ಬಳಕೆಗೆ ಅನುವು ಮಾಡಿಕೊಡುತ್ತದೆ. ಹಾಗೂ ಸ್ಮಾರ್ಟ್‌ಫೋನ್‌ನಲ್ಲಿ ಕನ್ಸೋಲ್ ಮಟ್ಟದ ಗೇಮಿಂಗ್ ಅನುಭವಕ್ಕಾಗಿ ಬುದ್ಧಿವಂತ ಪ್ರತಿಕ್ರಿಯೆಯನ್ನು GPU Turbo ತಂತ್ರಜ್ಞಾನ ನೀಡುತ್ತದೆ.

ಅಗ್ಗದ ಬೆಲೆಯ ಹಾನರ್‌ ಪ್ಲೇನಲ್ಲಿ ಟಾಪ್‌ ಎಂಡ್‌ ಆಯ್ಕೆಗಳು..!

AI ಬೆಂಬಲಿತ ಫ್ಲಾಗ್‌ಶಿಪ್‌ ಚಿಪ್‌ಸೆಟ್‌ ಮತ್ತು ಹೆಚ್ಚಿನ RAM

ಹಾನರ್ ಪ್ಲೇ ಸ್ಮಾರ್ಟ್‌ಫೋನ್‌ನಲ್ಲಿ ಗೇಮಿಂಗ್‌ ಒಂದು ಅನುಭವವಾಗಿ ನಮ್ಮನ್ನು ಖುಷಿಗೊಳಿಸುತ್ತದೆ. ಅದಲ್ಲದೇ ದೈನಂದಿನ ಪ್ರೊಸೆಸಿಂಗ್‌ ಹಾಗೂ ಬಹುಕಾರ್ಯ ನಿರ್ವಹಣೆಯಲ್ಲಿ ಹಾನರ್‌ ಪ್ಲೇ ಸಾಮರ್ಥ್ಯ ಮತ್ತಷ್ಟು ಸಾಬೀತಾಗುತ್ತದೆ. ಹಾನರ್‌ ಪ್ಲೇ ಸ್ಮಾರ್ಟ್‌ಫೋನ್‌ನಲ್ಲಿ ತನ್ನದೇ ಆದ ಫ್ಲಾಗ್‌ಶಿಪ್‌ Kirin 970 AI ಪ್ರೊಸೆಸರ್‌ ಹೊಂದಿದ್ದು, 10nm ಉತ್ಪಾದನಾ ಪ್ರಕ್ರಿಯೆ ಮತ್ತು ಒಂದು ಚದರ ಸೆಂಟಿಮೀಟರಿನಲ್ಲಿ 5.5 ಶತಕೋಟಿ ಟ್ರಾನ್ಸಿಸ್ಟರ್‌ಗಳನ್ನು ಸಂಯೋಜಿಸಲಾಗಿದೆ. ಸಿಪಿಯು ಸಹ "Neural Processing Unit' ಜತೆಯಲ್ಲಿ ಅಳವಡಿಸಲ್ಪಟ್ಟಿದ್ದು, ಅದು Machine Learning (ML) ಅಲ್ಗಾರಿಥಮ್‌ಗಳ ವೇಗವರ್ಧನೆ ಹಾಗೂ AI ಸಂಬಂಧಿತ ಕಾರ್ಯಗಳನ್ನು ನೋಡಿಕೊಳ್ಳುತ್ತದೆ.

ಹೆಚ್ಚಿನ ಸಂಖ್ಯೆಯಲ್ಲಿ ಟಾಸ್ಕ್‌ಗಳನ್ನು ನಿರ್ವಹಿಸುವಾಗ CPU ಮತ್ತು NPU ಜೋಡಿ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸುತ್ತದೆ. ಸರಳವಾಗಿ ಹೇಳಬೇಕೆಂದರೆ, AI ಬೆಂಬಲಿತ CPU + NPU ಯುನಿಟ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮಾಡುತ್ತಿರುವ ಎಲ್ಲಾ ಕಾರ್ಯಗಳನ್ನು ಉತ್ತಮಗೊಳಿಸುತ್ತೆ. ಈ ಕಾರ್ಯಕ್ಷಮತೆ ಫೋಟೋ-ವಿಡಿಯೋ ಎಡಿಟಿಂಗ್, ವೆಬ್ ಬ್ರೌಸಿಂಗ್, ಕ್ಯಾಮೆರಾ ಬಳಕೆ, ಬ್ಯಾಟರಿ ಕಾರ್ಯಕ್ಷಮತೆ, ಕರೆ, ಮೆಸೇಜಿಂಗ್ ಮತ್ತು ಇತರೆ ನಿಯಮಿತ ಕಾರ್ಯಗಳನ್ನು ಒಳಗೊಂಡಿದೆ.

ಬಹುಕಾರ್ಯಗಳ ಕಾರ್ಯನಿರ್ವಹಣೆಯಲ್ಲಿ ಹಾನರ್‌ ಪ್ಲೇ ಪ್ರದರ್ಶನ ಉತ್ತಮವಾಗಿದೆ. ಏಕೆಂದರೆ ಸ್ಮಾರ್ಟ್‌ಫೋನ್ 4GB ಮತ್ತು 6GB RAMಗಳ ಆವೃತ್ತಿಯಲ್ಲಿ ಬಿಡುಗಡೆಯಾಗಿದೆ. ಮಾರುಕಟ್ಟೆಯಲ್ಲಿ ನೀವು ಸುಲಭವಾಗಿ 4GB ಮತ್ತು 6GB RAM ಸ್ಮಾರ್ಟ್‌ಫೋನ್‌ಗಳನ್ನು ಹುಡುಕಿದರೂ, ಅವು ಬಳಸುವ RAM ಮತ್ತು ಸಂಗ್ರಹಣೆಯ ರೀತಿಯು ವಿಳಂಬ ರಹಿತ ಕಾರ್ಯನಿರ್ವಹಣೆ ನೀಡುವಲ್ಲಿ ಎಡವುತ್ತವೆ. ಆದರೆ, ಹಾನರ್‌ ಪ್ಲೇ ಫ್ಲಾಗ್‌ಶಿಪ್‌ LPDDR4x RAM ಮತ್ತು UFS2.1 ROM (built-in storage)ಅನ್ನು ಬಳಸುತ್ತದೆ. ಇದು ಅತ್ಯುತ್ತಮವಾದದ್ದು ಹಾಗೂ ಸ್ಮಾರ್ಟ್‌ಫೋನ್‌ನ ಕಾರ್ಯಗಳನ್ನು ಸುಗಮಗೊಳಿಸುತ್ತದೆ.

ಅದಲ್ಲದೆ, ಸ್ಮಾರ್ಟ್‌ಫೋನ್ Hi Touch ಫೀಚರ್‌ನೊಂದಿಗೆ ಬರುತ್ತಿದೆ. ಈ ಫೀಚರ್ AI ಬೆಂಬಲಿತವಾಗಿದ್ದು, ಸ್ಮಾರ್ಟ್ ಶಾಪಿಂಗ್‌ ಆಯ್ಕೆಯನ್ನು ನೀಡುತ್ತದೆ. ಹಾನರ್‌ ಪ್ಲೇ ಬಳಕೆದಾರರು ಕ್ಯಾಮೆರಾದಲ್ಲಿ ಯಾವುದಾದರೂ ಉತ್ಪನ್ನದ ಫೋಟೋ ಸೆರೆಹಿಡಿದು ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್‌ ವೆಬ್‌ಸೈಟ್‌ಗಳಲ್ಲಿ ಹುಡುಕಬಹುದು. ಈ ಫೀಚರ್ ಶಾಪಿಂಗ್ ಅನುಭವವನ್ನು ಒಂದೇ ಬಾರಿಗೆ ಸರಳ ಮತ್ತು ಅದ್ಭುತವನ್ನಾಗಿ ಮಾಡುತ್ತದೆ.

ಅಗ್ಗದ ಬೆಲೆಯ ಹಾನರ್‌ ಪ್ಲೇನಲ್ಲಿ ಟಾಪ್‌ ಎಂಡ್‌ ಆಯ್ಕೆಗಳು..!

ಫುಲ್‌ HD+ ಡಿಸ್‌ಪ್ಲೇ ಮತ್ತು 3D ಸೌಂಡ್‌ ಅನುಭವ

ಯಾವುದೇ ಸ್ಮಾರ್ಟ್‌ಫೋನ್‌ ಆಗಲಿ ಗ್ರಾಹಕನ ವೀಕ್ಷಣೆಡ ಅನುಭವ ಖಚಿತಪಡಿಸಲು ಉತ್ತಮ ಸ್ಕ್ರೀನ್ ಪ್ರಮುಖ ಪಾತ್ರ ವಹಿಸುತ್ತದೆ. ಹಾನರ್‌ ಪ್ಲೇ ಸ್ಮಾರ್ಟ್‌ಫೋನ್ 6.3 ಇಂಚ್‌ ಫುಲ್‌ ವೀವ್‌ ನೋಚ್‌ ಡಿಸ್‌ಪ್ಲೇ ಹೊಂದಿದ್ದು, 2340x1080 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿದೆ. 409ppi ಜತೆಯಲ್ಲಿ 19.5:9 ಆಸ್ಪೆಕ್ಟ್‌ ರೇಷಿಯೋ ಹೊಂದಿದೆ. ಉತ್ತಮ ವಿಡಿಯೋ ಪ್ಲೇ ಬ್ಯಾಕ್ ಮತ್ತು ಗೇಮ್‌ ಪ್ಲೇ ಮಾಡುವಾಗ ಫುಲ್‌ ವೀವ್‌ ಡಿಸ್‌ಪ್ಲೇ ಉತ್ತಮ ಫಲಿತಾಂಶ ನೀಡುತ್ತದೆ.

ಅಲ್ಲದೆ, ಹಾನರ್‌ ಪ್ಲೇ ಬಳಕೆದಾರರು 3D ಸೌಂಡ್‌ ಎಫೆಕ್ಟ್‌ನೊಂದಿಗೆ ಗೇಮಿಂಗ್‌ ಅನುಭವವನ್ನು ಸಂಪೂರ್ಣವಾಗಿ ಆನಂದಿಸಬಹುದು. ಶೇ.85ರಷ್ಟು NTSC Color Gamut ಸ್ಕ್ರೀನ್ ಕವ್‌ ಇರುವುದರಿಂದ ಬಣ್ಣಗಳು ನೈಸರ್ಗಿಕ ಹಾಗೂ ರೋಮಾಂಚನ ಹುಟ್ಟಿಸುತ್ತವೆ. ನೇರ ಸೂರ್ಯನ ಬೆಳಕಿನಲ್ಲಿಯೂ ಉತ್ತಮ ಬ್ರೈಟ್‌ನೆಸ್‌ನಲ್ಲಿ ಸ್ಮಾರ್ಟ್‌ಫೋನ್‌ನ್ನು ಬಳಸುವ ಆಯ್ಕೆಯನ್ನು ಹಾನರ್ ಪ್ಲೇ ನೀಡುತ್ತದೆ.

ಅಗ್ಗದ ಬೆಲೆಯ ಹಾನರ್‌ ಪ್ಲೇನಲ್ಲಿ ಟಾಪ್‌ ಎಂಡ್‌ ಆಯ್ಕೆಗಳು..!

ಆಂಡ್ರಾಯ್ಡ್‌ ಒರಿಯೋ ಬೆಂಬಲಿತ EMUI 8.1

ಹಾನರ್‌ ಪ್ಲೇ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ ಒರಿಯೋ ಬೆಂಬಲಿತ EMUI 8.2 UIನಿಂದ ಕಾರ್ಯನಿರ್ವಹಿಸುತ್ತದೆ. ಈ ಒಎಸ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಲಾಗಿರುವ ಅತ್ಯಂತ ವೈಶಿಷ್ಟ್ಯ ಪೂರ್ಣ ಇಂಟರ್‌ಫೇಸ್ ಆಗಿದೆ. ಹುವಾವೇಯ ಸ್ವಂತ UI ಫೀಚರ್ ಸಮೃದ್ಧವಾಗಿದ್ದು, ಹಲವಾರು ಉಪಯುಕ್ತ ಸಾಫ್ಟ್‌ವೇರ್‌ಗಳೊಂದಿಗೆ ಲೋಡ್ ಆಗಿದೆ. ಪ್ರಮಾಣಿತ ಆಪ್‌ ಡ್ರಾಯರ್ UI ಮತ್ತು ಸರಳ ಬಳಕೆದಾರ ಇಂಟರ್‌ಫೇಸ್‌ನ್ನು ನೀವು ಆಯ್ಕೆ ಮಾಡಬಹುದು. ಒನ್-ಕೀ ಸ್ಪ್ಲಿಟ್ ಸ್ಕ್ರೀನ್ ಆಯ್ಕೆಯಂತಹ ಉಪಯುಕ್ತ ಫೀಚರ್‌ಗಳಿದ್ದು, ವೇಗದ ಬಹು-ನಿರ್ವಹಣೆ ಅನುಭವ ನೀಡುತ್ತದೆ. ಒಂದೇ ಸಮಯದಲ್ಲಿ ಒಂದು ಆಪ್‌ಗೆ ಎರಡು ವಿಭಿನ್ನ ಖಾತೆಗಳಿಗಂದ ಲಾಗಿನ್‌ ಆಗುವ App Twin ಆಯ್ಕೆಯೂ ಇದೆ.

ಈ UI ಫೇಸ್‌ ಅನ್‌ಲಾಕ್‌ನ್ನು ಸಹ ಸಕ್ರಿಯಗೊಳಿಸುತ್ತದೆ. ಮತ್ತು ಬುದ್ಧಿವಂತ AI Gallery ಜತೆ ಹಾನರ್‌ ಪ್ಲೇ ಸ್ಮಾರ್ಟ್‌ಫೋನ್‌ ಬರುತ್ತಿದ್ದು, ಸಮಯ, ಸ್ಥಳ, ರಜೆ ಮತ್ತು ಹುಟ್ಟುಹಬ್ಬದ ಆಧಾರದ ಮೇಲೆ ಫೋಟೋಗಳನ್ನು ವರ್ಗಿಕರಿಸುತ್ತದೆ.

ಅಗ್ಗದ ಬೆಲೆಯ ಹಾನರ್‌ ಪ್ಲೇನಲ್ಲಿ ಟಾಪ್‌ ಎಂಡ್‌ ಆಯ್ಕೆಗಳು..!

ಅದ್ಭುತ AI ಬೆಂಬಲಿತ ಡ್ಯುಯಲ್‌ ಲೆನ್ಸ್‌ ಕ್ಯಾಮೆರಾ ವ್ಯವಸ್ಥೆ

ಅತ್ಯುತ್ತಮ ಕ್ಯಾಮೆರಾ ಅನುಭವವನ್ನು ನೀಡಲು ಹಾನರ್‌ ಪ್ಲೇ 16MP + 2MP ಡ್ಯುಯಲ್ AI ಕ್ಯಾಮೆರಾ ವ್ಯವಸ್ಥೆಯನ್ನು ಹಿಂಬದಿಯಲ್ಲಿ ಹೊಂದಿದೆ. ಕ್ಯಾಮೆರಾ ವೈಶಿಷ್ಟ್ಯಗಳಾದ EIS ಮತ್ತು AISಗಳನ್ನು ಅಳವಡಿಸಲಾಗಿದೆ. ಇದು ಚಿತ್ರವನ್ನು ಸೆರೆಹಿಡಿಯುವ ಸನ್ನಿವೇಶವನ್ನು ತ್ವರಿತವಾಗಿ ಅರ್ಥಮಾಡಿಕೊಂಡು ಅಂತಿಮ ಚಿತ್ರದಲ್ಲಿ ಸುಧಾರಣೆ ತರಲು ನೆರವನ್ನು ನೀಡುತ್ತದೆ.

ಹಾನರ್ ಪ್ಲೇ ಸ್ಮಾರ್ಟ್‌ಫೋನ್‌ನಲ್ಲಿ AI ಕ್ಯಾಮೆರಾ 22 ವಿಭಿನ್ನ ವರ್ಗಗಳು ಹಾಗೂ 500ಕ್ಕೂ ಹೆಚ್ಚಿನ ಸನ್ನಿವೇಶಗಳನ್ನು ಗುರುತಿಸುತ್ತದೆ. ನಂತರ ಉತ್ತಮ ಚಿತ್ರವನ್ನು ರಚಿಸಲು ಸ್ಯಾಚುರೇಶನ್, ಕಾಂಟ್ರಾಸ್ಟ್ ಮತ್ತು ವೈಟ್‌ ಬ್ಯಾಲೆನ್ಸ್‌ನಂತಹ ಕ್ಯಾಮೆರಾ ಸೆಟ್ಟಿಂಗ್‌ಗಳನ್ನು ಉತ್ತಮಗೊಳಿಸುತ್ತದೆ. ಪ್ರೋ ಮೋಡ್‌ ಮೂಲಕ ನಿಮಗೆ ಕ್ಯಾಮೆರಾದ ಮೇಲೆ ಸಂಪೂರ್ಣ ಹಿಡಿತವನ್ನು ನಿಮಗೆ ನೀಡುತ್ತದೆ. ISO , ಎಕ್ಸ್ಪೋಸರ್, ವೈಟ್ ಬ್ಯಾಲೆನ್ಸ್ ಮುಂತಾದ ಸೆಟ್ಟಿಂಗ್‌ಗಳನ್ನು ಉತ್ತಮ ಚಿತ್ರಕ್ಕಾಗಿ ಹೊಂದಿಸಿಕೊಳ್ಳಬಹುದು.

ಹಾನರ್‌ ಪ್ಲೇ ಸ್ಮಾರ್ಟ್‌ಫೋನ್‌ 16MP ಸ್ಪೋರ್ಟ್ಸ್‌ ಸೆಲ್ಫೀ ಕ್ಯಾಮೆರಾ ಹೊಂದಿದ್ದು, 2.0µm pixel ಜತೆ ಕಾರ್ಯನಿರ್ವಹಿಸುತ್ತದೆ. ಬೊಕ್ಕೆ ಎಫೆಕ್ಟ್‌ನ್ನು ಸೆಲ್ಫಿ ಕ್ಯಾಮೆರಾ ನೀಡುತ್ತದೆ. ಮತ್ತು ನಿಮ್ಮ ಸೆಲ್ಫಿಯನ್ನು ಉತ್ತಮಪಡಿಸಲು 5 ವಿಭಿನ್ನ ಸ್ಟುಡಿಯೋ ತರಹದ ಭಾವಚಿತ್ರಗಳೊಂದಿಗೆ ಪ್ರಾಯೋಗಿಕವಾಗಿ ಬಳಸಲು AI ಸಹಾಯ ಮಾಡುತ್ತದೆ.

ಅಗ್ಗದ ಬೆಲೆಯ ಹಾನರ್‌ ಪ್ಲೇನಲ್ಲಿ ಟಾಪ್‌ ಎಂಡ್‌ ಆಯ್ಕೆಗಳು..!

ಸ್ಮಾರ್ಟ್‌ಫೇಸ್‌ ಅನ್‌ಲಾಕ್‌

ಉತ್ತಮ ಸೆಲ್ಫಿಗಳನ್ನು ಸೆರೆಹಿಡಿಯುವುದರ ಜತೆಗೆ ಹಾನರ್‌ ಪ್ಲೇನಲ್ಲಿ ಮುಂಭಾಗದ ಕ್ಯಾಮೆರಾ ನಿಮ್ಮ ಸ್ಮಾರ್ಟ್‌ಫೋನ್‌ ಭದ್ರತೆಗಾಗಿ ಒಂದು ಉಪಯುಕ್ತ ವೈಶಿಷ್ಟ್ಯವನ್ನು ಸಹ ನೀಡುತ್ತದೆ. ಮುಂಭಾಗದ ಕ್ಯಾಮೆರಾ ಮತ್ತು ಸೆನ್ಸಾರ್‌ಗಳು ಹಾನರ್‌ ಪ್ಲೇನಲ್ಲಿ ಸುರಕ್ಷಿತ ಮತ್ತು ವೇಗದ ಫೇಸ್‌ ಅನ್‌ಲಾಕ್‌ ಫೀಚರ್‌ನ್ನು ಬಳಕೆದಾರರಿಗೆ ನೀಡುತ್ತದೆ. ಸ್ಮಾರ್ಟ್‌ಫೋನ್‌ ಬುದ್ಧಿವಂತ Machine Learning ಆಲ್ಗೋರೀಥಮ್‌ಗಳನ್ನು ಹೊಂದಿದ್ದು, AI ಫೇಸ್‌ ಅನ್ಲಾಕ್ ಮಾಡಲು ವಿವಿಧ ಬೆಳಕಿನ ಪರಿಸ್ಥಿತಿಗಳು ಹಾಗೂ ಮುಖದ ಸಣ್ಣ ಬದಲಾವಣೆಗಳನ್ನು ಸಹ ಗುರುತಿಸಿ ಫೇಸ್‌ ಅನ್‌ಲಾಕ್‌ಗೆ ಅವಕಾಶ ನೀಡುತ್ತದೆ.

ಇದಲ್ಲದೇ, AI ಆಲ್ಗೋರೀಥಮ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಭದ್ರತೆ ಕುರಿತು ತೀವ್ರ ಕಾಳಜಿ ವಹಿಸುತ್ತವೆ. AI ನಿಮ್ಮ ಅಧಿಸೂಚನೆಗಳನ್ನು ಭದ್ರಪಡಿಸುತ್ತದೆ. ಹಾಗೂ ಯಾರಾದರೂ ಫೇಸ್ ಅನ್ಲಾಕ್ ಬಿಟ್ಟು ಸಾಮಾನ್ಯ ಲಾಕ್‌ ಮೂಲಕ ಸ್ಮಾರ್ಟ್‌ಫೋನ್‌ ತೆರಯಬಹುದು. ಆದ್ದರಿಂದ ಪಿನ್‌ಗಳನ್ನು ಬಹಿರಂಗಪಡಿಸಬೇಡಿ. ನಿಮ್ಮ ಮುಖವನ್ನು ಗುರುತಿಸಿದಾಗ ಗೌಪ್ಯತೆ ಡೇಟಾವನ್ನು ಸುರಕ್ಷಿತ ಡಾಟಾಬೇಸ್‌ನೊಂದಿಗೆ ವಿಶ್ಲೇಷಿಸಿ ಪ್ರವೇಶ ನೀಡುತ್ತದೆ.

ಅಗ್ಗದ ಬೆಲೆಯ ಹಾನರ್‌ ಪ್ಲೇನಲ್ಲಿ ಟಾಪ್‌ ಎಂಡ್‌ ಆಯ್ಕೆಗಳು..!

ವೇಗದ ಚಾರ್ಜಿಂಗ್

ಹಾನರ್‌ ಪ್ಲೇ ನಿಮ್ಮ ಬ್ಯಾಟರಿ ಸಮಸ್ಯೆಗಳನ್ನು ಪರಿಹರಿಸುತ್ತದೆ. 3,750 mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ವೇಗದ ಚಾರ್ಜಿಂಗ್ ತಂತ್ರಜ್ಞಾನ ಹೊಂದಿದೆ. ಹಾಗೂ ದೀರ್ಘಾವಧಿ ಬಳಕೆಯನ್ನು ಖಚಿತಪಡಿಸುತ್ತದೆ. ನೀವು ಬಹಳಷ್ಟು ಸಮಯ ಗೇಮಿಂಗ್‌ನಲ್ಲಿ ಮುಳುಗಿರುವಿರೆಂದರೆ, ಹಾಗೂ ವಿಡಿಯೋಗಳನ್ನು ಸ್ಟ್ರೀಮ್ ಮಾಡುವಿರೆಂದರೆ ನೀವು ಯಾವುದೇ ರೀತಿ ಚಿಂತಿಸಬೇಕಾಗಿಲ್ಲ. ಬ್ಯಾಟರಿ ಖಾಲಿಯಾದಾಗ ವೇಗದ ಚಾರ್ಜರ್ ಪ್ಲಗ್ ಮಾಡಿ ಮತ್ತು ರಿಯಲ್‌ ಟೈಮ್‌ನಲ್ಲಿ ಸಾಟಿಯಿಲ್ಲದ ಚಾರ್ಜಿಂಗ್ ವೇಗವನ್ನು ಅನುಭವಿಸಬಹುದು.

ಒಟ್ಟಾರೆ, ಹಾನರ್‌ ಪ್ಲೇ ಸ್ಮಾರ್ಟ್‌ಫೋನ್‌ ಎಲ್ಲಾ ಮುಖ್ಯ ಅಂಶಗಳನ್ನು ಒಳಗೊಂಡಿದೆ. ಸಮಂಜಸ ಬೆಲೆಯಲ್ಲಿ ಬಳಕೆದಾರರಿಗೆ ಉತ್ತಮ ಅನುಭವ ನೀಡುತ್ತದೆ. ಕಾರ್ಯನಿರ್ವಹಣೆ ನಿಮಗೆ ಪ್ರಮುಖವಾಗಿದ್ದರೆ, ಹಾನರ್‌ ಪ್ಲೇ ನಿಮಗೆ ಉತ್ತಮ ಆಯ್ಕೆಯಾಗಿದ್ದು, ನಿಮ್ಮ ಕಿಸೆಗೂ ಭಾರವಾಗುವುದಿಲ್ಲ.

Best Mobiles in India

English summary
Honor Play: Experience flagship performance in mid-range price-point. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X