48ಎಂಪಿ ಹಿಂಭಾಗದ ಕ್ಯಾಮರಾವಿರುವ ಹಾನರ್ ವ್ಯೂ20 ಈಗ ಅಮೇಜಾಜ್‌ನಲ್ಲಿ ಲಭ್ಯ!

|

ಹುವಾಯಿ ಸಬ್ ಬ್ರ್ಯಾಂಡ್ ಆಗಿರುವ ಹಾನರ ಸಂಸ್ಥೆ ಹಾನರ್ ವಿ20 ಸ್ಮಾರ್ಟ್ ಫೋನ್ ನ್ನು ನಿನ್ನೆ ಚೀನಾದಲ್ಲಿ ಬಿಡುಗಡೆಗೊಳಿಸಿದೆ.ಈ ಹ್ಯಾಂಡ್ ಸೆಟ್ 48ಮೆಗಾಪಿಕ್ಸಲ್ ನ ಪ್ರೈಮರಿ ಹಿಂಭಾಗ ಕ್ಯಾಮರಾ ಹೊಂದಿದ್ದು ಇದರ ಅಪರ್ಚರ್ f/1.8 ಆಗಿದೆ. ಹಾನರ್ ವ್ಯೂ20 ಜನವರಿ 22 ರಂದು ಜಗತ್ತಿನಾದ್ಯಂತ ಬಿಡುಗಡೆಗೊಳ್ಳಲಿದೆ.

48ಎಂಪಿ ಹಿಂಭಾಗದ ಕ್ಯಾಮರಾವಿರುವ ಹಾನರ್ ವ್ಯೂ20 ಈಗ ಅಮೇಜಾಜ್‌ನಲ್ಲಿ ಲಭ್ಯ!

ಕಂಪೆನಿಯು ತಿಳಿಸಿರುವಂತೆ ಅಮೇಜಾನ್ ಇಂಡಿಯಾದಲ್ಲಿ ಈ ಫೋನ್ ಎಕ್ಸ್ ಕ್ಲೂಸೀವ್ ಆಗಿ ಲಭ್ಯವಾಗುತ್ತದೆ. ಇನ್ನು ಅಮೇಜಾನ್ ವೆಬ್ ಪೇಜ್ ನಲ್ಲೂ ಕೂಡ ಇದನ್ನು ನಮೂದಿಸಲಾಗಿದ್ದು ಹಾನರ್ ವಿ20 ಸದ್ಯದಲ್ಲೇ ಬರಲಿದೆ ಎಂದು ಹೇಳಿಕೊಳ್ಳಲಾಗಿದೆ. ಈ ಫೋನ್ ನಲ್ಲಿ ಇನ್-ಸ್ಕ್ರೀನ್ ಕ್ಯಾಮರಾವಿದ್ದು ಅದು ಲಂಬವಾಗಿ ಜೋಡಿಸಲಾಗಿದೆ. ಈ ಕ್ಯಾಮರಾದಲ್ಲಿ LED ಫ್ಲ್ಯಾಶ್ ವ್ಯವಸ್ಥೆ ಕೂಡ ಇರುತ್ತದೆ.

ಹಾನರ್ ವ್ಯೂ20 ಯ ವೈಶಿಷ್ಟ್ಯತೆಗಳು:

ಹಾನರ್ ವ್ಯೂ20 ಯ ವೈಶಿಷ್ಟ್ಯತೆಗಳು:

ಹಾನರ್ ವ್ಯೂ20 ಜಗತ್ತಿನಾದ್ಯಂತ ಬಿಡುಗಡೆಗೊಳ್ಳಲಿರುವ ಹಾನರ್ ವಿ20ಯ ವೇರಿಯಂಟ್ ಫೋನ್ ಆಗಿದೆ.ಹಾಗಾಗಿ ಇದು ಹಾನರ್ ವ್ಯೂ20ಯಲ್ಲಿ ಕೂಡ ಹೆಚ್ಚು ಕಡಿಮೆ ಹಾನರ್ ವಿ20ಯಲ್ಲಿರುವಂತಹ ವೈಶಿಷ್ಟ್ಯತೆಗಳೇ ಅಡಕವಾಗಿದೆ.

ವೈಶಿಷ್ಟ್ಯತೆಗಳ ವಿಚಾರವನ್ನು ಗಮನಿಸಿದಾಗ ಇದರಲ್ಲಿ ಹಾನರ್ ವಿ20 6.4-ಇಂಚಿನ ಫುಲ್ HD+ TFT LCD ಡಿಸ್ಪ್ಲೇ ಜೊತೆಗೆ 19.5:9 ಅನುಪಾತವನ್ನು ಹೊಂದಿದೆ ಮತ್ತು 1080x2310 ಪಿಕ್ಸಲ್ ರೆಸಲ್ಯೂಷನ್ ಹೊಂದಿದೆ. 7nm ಆಕ್ಟಾ-ಕೋರ್ HiSilicon Kirin 980 ಪ್ರೊಸೆಸರ್ (2 Cortex-A76 ಕೋರ್ಸ್ 2.6GHz + 2 Cortex-A76 ಕೋರ್ಸ್ 1.92GHz + 4 Cortex-A55 cores clocked at 1.8GHz).

ಕ್ಯಾಮರಾ ಮತ್ತು ಮೆಮೊರಿ:

ಕ್ಯಾಮರಾ ಮತ್ತು ಮೆಮೊರಿ:

ಈ ಸ್ಮಾರ್ಟ್ ಫೋನ್ ಎರಡು RAM ವೇರಿಯಂಟ್ ನ್ನು ಹೊಂದಿದೆ. - 6GB/8GB ಮೆಮೊರಿಯು 128GB ಮತ್ತು 256GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ.ಈ ಫೋನಿನ ಕೀ ಹೈಲೆಟ್ ಎಂದರೆ ಅದು ಕ್ಯಾಮರಾ ಫೀಚರ್ ಗಳು 48-ಮೆಗಾಪಿಕ್ಸಲ್ ನ ಪ್ರೈಮರಿ ಕ್ಯಾಮರಾವು f/1.8 ಅಪರ್ಚರ್ ಹೊಂದಿದೆ. ಸೆಕೆಂಡರಿ 3D ಟೈಮ್ ಆಫ್ ಫ್ಲೈಟ್ (ToF) ಸೆನ್ಸರ್ ನ್ನು ಹೊಂದಿದೆ.

ಸೆಲ್ಫೀ ಕ್ಯಾಮರಾ:

ಸೆಲ್ಫೀ ಕ್ಯಾಮರಾ:

ಸೆಲ್ಫೀ ತೆಗೆದುಕೊಳ್ಳುವುದಕ್ಕೆ ಇದರಲ್ಲಿ 25-ಮೆಗಾಪಿಕ್ಸಲ್ ನ ಸೆನ್ಸರ್ ಇದ್ದು f/2.0 ಅಪರ್ಚರ್ ನ್ನು ಹೊಂದಿದೆ ಮತ್ತು ಫಿಕ್ಸ್ಡ್ ಫೋಕಸ್ ಗೆ ಬೆಂಬಲ ನೀಡುತ್ತದೆ.ಹಾನರ್ ವಿ20 4000mAh ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ ಮತ್ತು ಲಿಂಕ್ ಟರ್ಬೋ ತಂತ್ರಜ್ಞಾನದೊಂದಿಗೆ ಕೂಡಿದೆ.ಡಾಟಾ ಮತ್ತು ವೈ-ಫೈ ನ್ನು ತನ್ನಷ್ಟಕ್ಕೆ ತಾನೇ ಸ್ವಿಚ್ ಆಗುವುದಕ್ಕೆ ಇದು ನೆರವು ನೀಡುತ್ತದೆ.

ಹಾನರ್ ವ್ಯೂ20 : ಭಾರತೀಯ ನಿರೀಕ್ಷಿತ ಬೆಲೆ

ಹಾನರ್ ವ್ಯೂ20 : ಭಾರತೀಯ ನಿರೀಕ್ಷಿತ ಬೆಲೆ

ಚೀನಾದಲ್ಲಿ ಹಾನರ್ ವಿ20 6GB RAM ವೇರಿಯಂಟ್ ನ ಬೆಲೆ CNY 2,999 ಆಗಿದೆ ಹಾಗಾಗಿ ಅದನ್ನು ಭಾರತೀಯ ಬೆಲೆಯಲ್ಲಿ ಹೇಳುವುದಾದರೆ ಅಂದಾಜು 30,000 ರುಪಾಯಿಗಳಾಗುತ್ತದೆ. ಇತರೆ ವೇರಿಯಂಟ್ ನ ಬೆಲೆ CNY 3,499 (ಅಂದಾಜುRs 35,000). ಭಾರತದಲ್ಲಿ ಹಾನರ್ ವ್ಯೂ20 ಬೆಲೆ ಅಂದಾಜು Rs 25,000 ದಿಂದ Rs 35,000 ರುಪಾಯಿಗಳವರೆಗೆ ಇರುವ ಸಾಧ್ಯತೆ ಇದೆ.

Most Read Articles
Best Mobiles in India

Read more about:
English summary
Honor View20 with 48MP rear camera to be available exclusively on Amazon in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X