ಕೈಗೆಟುಕುವ ಬೆಲೆಯಲ್ಲಿ ಹೈ-ಎಂಡ್ ಫೀಚರ್‌ಗಳ ಹಾನರ್‌ 8X ಬೆಸ್ಟ್‌..!

|

ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳಲ್ಲಿರುವ ಹಲವು ಫೀಚರ್‌ಗಳು ಇಲ್ಲದ ಮಧ್ಯಮ ವರ್ಗದ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿದ್ದ ಕಾಲ ಮುಗಿದುಹೋಗಿದೆ. ಆ ಸ್ಮಾರ್ಟ್‌ಫೋನ್‌ಗಳು ದೊಡ್ಡದಾಗಿ ಮತ್ತು ಆಕರ್ಷಕವಲ್ಲದ ವಿನ್ಯಾಸದೊಂದಿಗೆ ಲಾಂಚ್‌ ಆಗಿ ಖರೀದಿದಾರರಿಂದ ಉತ್ತಮ ಪ್ರತಿಕ್ರಿಯೆ ಪಡೆಯಲು ವಿಫಲವಾದವು. ಆದರೆ, ಮೊಬೈಲ್‌ ಟೆಕ್ನಾಲಜಿ ದೊಡ್ಡ ಪ್ರಮಾಣದಲ್ಲಿ ಮುಂದುವರೆದಿದ್ದು, ಮಧ್ಯಮ ವರ್ಗದ ದರ ವಿಭಾಗದಲ್ಲಿ ಭಾರೀ ಬದಲಾವಣೆಯನ್ನು ತಂದಿದೆ.

ಪ್ರಸ್ತುತ ಕೈಗೆಟಕುವ ಬೆಲೆ ಶ್ರೇಣಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಹಲವು ಪ್ರಭಾವಶಾಲಿ ಮತ್ತು ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ನಾವು ನೋಡಬಹುದಾಗಿದೆ. ವಿಭಿನ್ನ ಬ್ರಾಂಡ್‌ಗಳ ಹಲವು ಸ್ಮಾರ್ಟ್‌ಫೋನ್‌ಗಳು ಉತ್ತಮ ಬೆಲೆಯಲ್ಲಿ ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತಹ ಆಯ್ಕೆಗಳೊಂದಿಗೆ ಅದ್ಭುತ ಮೊಬೈಲ್ ಅನುಭವವನ್ನು ನೀಡುತ್ತಿವೆ. ಮತ್ತು ಪ್ರಮುಖವಾಗಿ ಗಮನಿಸುವುದಾದರೆ ಹಾನರ್‌ ಮಧ್ಯಮ ವರ್ಗ ಬೆಲೆ ಶ್ರೇಣಿಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ಉತ್ತಮ ಕಾರ್ಯಕ್ಷಮತೆ ನೀಡುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಈ ವಿಭಾಗದಲ್ಲಿ ಉತ್ತಮ ಸ್ಥಾನ ಪಡೆದಿದೆ.

ಕೈಗೆಟುಕುವ ಬೆಲೆಯಲ್ಲಿ ಹೈ-ಎಂಡ್ ಫೀಚರ್‌ಗಳ ಹಾನರ್‌ 8X ಬೆಸ್ಟ್‌..!

ಇತ್ತೀಚೆಗಷ್ಟೇ, ಹಾನರ್‌ ಕಂಪನಿ ಹಾನರ್‌ 8X ಸ್ಮಾರ್ಟ್‌ಫೋನ್‌ನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ ರೂ.14,999ಕ್ಕೆ ಭಾರತದಲ್ಲಿ ಲಭ್ಯವಿದ್ದು, ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಉತ್ತಮ ಸ್ಮಾರ್ಟ್‌ಫೋನ್‌ ಆಗಿದೆ. ಹಾನರ್‌ 8X ಸ್ಮಾರ್ಟ್‌ಫೋನ್‌ ಆಕರ್ಷಕ ವಿನ್ಯಾಸ ಹೊಂದಿದ್ದು, ಉತ್ತಮವಾದ ಫೀಚರ್‌ಗಳು ಹಾಗೂ ಕಾರ್ಯನಿರ್ವಹಣೆ ಸಾಮರ್ಥ್ಯ ಹೊಂದಿದ್ದು, ಮಧ್ಯಮ ವರ್ಗದ ಬೆಲೆ ಶ್ರೇಣಿಯಲ್ಲಿ ಸಾಟಿಯಿಲ್ಲದ ಮೊಬೈಲ್ ಅನುಭವವನ್ನು ನೀಡುತ್ತದೆ. ಈ ಅಂಶಗಳಿಂದ ಹಾನರ್‌ 8X ಇತರೆ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳಿಂದ ಎದುರಾಗುವ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸುತ್ತಿದೆ. ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ನಡುವೆ ವಿಭಿನ್ನವಾಗಿ ಮಿಂಚುತ್ತಿದೆ ಎಂಬುದನ್ನು ಮುಂದೆ ನೋಡಿ.

ಅತ್ಯುತ್ತಮ ಮಲ್ಟಿಮೀಡಿಯಾ ಅನುಭವ

ಅತ್ಯುತ್ತಮ ಮಲ್ಟಿಮೀಡಿಯಾ ಅನುಭವ

ಹಾನರ್‌ 8X ಸ್ಮಾರ್ಟ್‌ಫೋನ್‌ ಅದ್ಭುತ ಮಲ್ಟಿಮೀಡಿಯಾ ಅನುಭವವನ್ನು ಆನಂದಿಸಲು ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್‌ ಆಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಬಳಕೆದಾರರು ಮಲ್ಟಿಮೀಡಿಯಾ ಆನಂದವನ್ನು ಅನುಭವಿಸಲು ಅಗತ್ಯವಾದ ಎಲ್ಲಾ ಅಂಶಗಳನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ. ಅಷ್ಟೇ ಅಲ್ಲದೇ, ಮಧ್ಯಮ ವರ್ಗದ ಬೆಲೆ ಶ್ರೇಣಿಯಲ್ಲಿ ಇಲ್ಲಿಯವರೆಗೂ ನೋಡಿದ ಸ್ಮಾರ್ಟ್‌ಫೋನ್‌ಗಳಿಗಿಂತ ಅತ್ಯಂತ ದೊಡ್ಡ ಮತ್ತು ಅತ್ಯಂತ ರೋಮಾಂಚಕ ಡಿಸ್‌ಪ್ಲೇ ಹೊಂದಿದೆ.

ಹಾನರ್‌ 8X ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ HD+ ಜತೆ ಟಾಪ್‌ ನೋಚ್‌ನೊಂದಿಗೆ ಬಾರ್ಡರ್‌ಲೆಸ್‌ ಡಿಸ್‌ಪ್ಲೇ ಹೊಂದಿದೆ. 2340 x 1080 ಪಿಕ್ಸೆಲ್ಸ್‌ ರೆಸಲ್ಯೂಶನ್‌ ಮತ್ತು 19.5:9 ಆಸ್ಪೆಕ್ಟ್‌ ರೇಷಿಯೋ ಹೊಂದಿದೆ. ಇದರಿಂದ ಬಳಕೆದಾರರಿಗೆ ಅತ್ಯುತ್ತಮ ದರ್ಜೆಯ ಮಲ್ಟಿಮೀಡಿಯಾ ಅನುಭವವನ್ನು ನೀಡುತ್ತದೆ ಹಾಗೂ ವಿಡಿಯೋ ವೀಕ್ಷಣೆ ಮತ್ತು ಗೇಮಿಂಗ್‌ ನೈಜತೆಯನ್ನು ಪಡೆಯುತ್ತವೆ.

ಅಡೆತಡೆಯಿಲ್ಲದ ಗೇಮಿಂಗ್‌

ಅಡೆತಡೆಯಿಲ್ಲದ ಗೇಮಿಂಗ್‌

ಆಕರ್ಷಕ ಡಿಸ್‌ಪ್ಲೇ ಜತೆಗೆ ಕೆಳಭಾಗದಲ್ಲಿ ಶಕ್ತಿಯುತ ಸ್ಪೀಕರ್ ಅಳವಡಿಸಲಾಗಿದ್ದು, ಹೆಚ್ಚಿನ ಹಾಗೂ ಸ್ಪಷ್ಟ ಆಡಿಯೊ ಔಟ್‌ಪುಟ್‌ ನೀಡುವಲ್ಲಿ ಯಶಸ್ವಿಯಾಗುತ್ತದೆ. ಅದಲ್ಲದೇ, ಹಾನರ್‌ 8X ಸ್ಮಾರ್ಟ್‌ಫೋನ್‌ ದೀರ್ಘಾವಧಿಯ 3,750mAh ಬ್ಯಾಟರಿ ಹೊಂದಿದ್ದು, ಅಡೆತಡೆಯಿಲ್ಲದ ಗೇಮಿಂಗ್‌ ಮತ್ತು ವಿಡಿಯೋ ವೀಕ್ಷಣೆಗೆ ಹೇಳಿ ಮಾಡಿಸಿದಂತಿದೆ. ಇದರ ಜತೆ ಬ್ಯಾಟರಿ ಸಾಮರ್ಥ್ಯವನ್ನು ಶೇ.33ರಷ್ಟು ವಿಸ್ತರಿಸಲು ಬುದ್ಧಿವಂತ ಪವರ್ ಸೇವಿಂಗ್ ತಂತ್ರಜ್ಞಾನವನ್ನು ಹಾನರ್‌ 8X ಹೊಂದಿದೆ.

ಇವುಗಳಷ್ಟೆ ಅಲ್ಲದೆ, ಗೇಮಿಂಗ್ ಕಾರ್ಯನಿರ್ವಹಣೆಯನ್ನು GPU ಟರ್ಬೋ ತಂತ್ರಜ್ಞಾನದೊಂದಿಗೆ ಸಂಯೋಜಿಸಲಾಗಿರುವ Kirin 710 ಚಿಪ್‌ಸೆಟ್‌ನೊಂದಿಗೆ ಹೆಚ್ಚಿಸಲಾಗಿದೆ. ಈ ಸಂಯೋಜನೆಯು ಹಾನರ್ 8X ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಯಲ್ಲಿ ಅತ್ಯುತ್ತಮ ಗೇಮಿಂಗ್ ಅನುಭವವನ್ನು ನೀಡುವುದು ಖಂಡಿತ.

ಅತ್ಯುತ್ತಮ ಕ್ಯಾಮೆರಾ

ಅತ್ಯುತ್ತಮ ಕ್ಯಾಮೆರಾ

ಮಲ್ಟಿಮೀಡಿಯಾದ ಅದ್ಭುತವಾಗಿರುವ ಹಾನರ್‌ 8X ಸ್ಮಾರ್ಟ್‌ಫೋನ್‌ ಉತ್ತಮ ದರ್ಜೆಯ ಕ್ಯಾಮೆರಾಗಳೊಂದಿಗೆ ಬರುತ್ತಿದೆ. ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ವ್ಯವಸ್ಥೆ ಹೊಂದಿರುವ ಹಾನರ್‌ 8X ಸ್ಮಾರ್ಟ್‌ಫೋನ್‌ 20MP ಪ್ರಾಥಮಿಕ ಸೆನ್ಸಾರ್‌ ಹಾಗೂ 2MP ಸೆಕೆಂಡರಿ ಸೆನ್ಸಾರ್‌ನೊಂದಿಗೆ ಬರುತ್ತಿದೆ.

ಹಾನರ್‌ 8X ಕ್ಯಾಮೆರಾ ಬೋಕೆ ಎಫೆಕ್ಟ್‌ನೊಂದಿಗೆ ಬರುತ್ತಿದ್ದು, ಬ್ಲರ್‌ ಮುಕ್ತ ಮತ್ತು ಕಡಿಮೆ ಬೆಳಕಿನಲ್ಲಿಯೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಹಾಯಕವಾಗಿದೆ. ಕೈಗೆಟುಕುವ ಮಾರುಕಟ್ಟೆಯ ವಿಭಾಗದಲ್ಲಿ ಅತ್ಯುತ್ತಮ ಕ್ಯಾಮರಾ ಅನುಭವವನ್ನು ನೀಡುತ್ತಿರುವ ಹಾನರ್‌ 8X ಸ್ಮಾರ್ಟ್‌ಫೋನ್‌ ಹಿಂಬದಿ ಮತ್ತು ಸೆಲ್ಫೀ ಕ್ಯಾಮೆರಾಗಳನ್ನು AIನೊಂದಿಗೆ ಸಂಯೋಜಿಸಲಾಗಿದೆ. ಹೆಚ್ಚುವರಿಯಾಗಿ, Honor 8X ನಲ್ಲಿನ ಕ್ಯಾಮೆರಾ ಆಪ್‌, ಹೆಚ್ಚು ವೈಶಿಷ್ಟ್ಯಪೂರ್ಣವಾಗಿದೆ, ಇದು ಸ್ಮಾರ್ಟ್‌ಫೋನ್‌ ಫೋಟೋಗ್ರಫಿಯನ್ನು ಅದ್ಭುತ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿಯೇ ಕೂಲ್‌ ಮೋಡ್‌ಗಳನ್ನು ಫಿಲ್ಟರ್‌ಗಳನ್ನು ಒದಗಿಸುತ್ತಿದೆ. ಸೆಲ್ಫೀ ಪ್ರಿಯರಿಗಾಗಿ ಹಾನರ್‌ 8X ಸ್ಮಾರ್ಟ್‌ಫೋನ್‌ 16MP ಸೆಲ್ಫೀ ಕ್ಯಾಮೆರಾ ಹೊಂದಿದ್ದು, ಸಾಫ್ಟ್‌ವೇರ್‌ ಆಧಾರಿತ ಬೋಕೆ ಎಫೆಕ್ಟ್‌, AI ಸ್ಟುಡಿಯೋ ಲೈಟಿಂಗ್‌ ಮತ್ತಿತರ ಫೀಚರ್‌ಗಳೊಂದಿಗೆ ಬಂದಿದೆ.

ಮೈಕ್ರೋ SD ಕಾರ್ಡ್‌ ಸ್ಲಾಟ್‌

ಮೈಕ್ರೋ SD ಕಾರ್ಡ್‌ ಸ್ಲಾಟ್‌

ಹಾನರ್‌ 8X ಸ್ಮಾರ್ಟ್‌ಫೋನ್‌ ಒಂದೇ ಸಮಯದಲ್ಲಿ ಎರಡು ಸಿಮ್ ಕಾರ್ಡ್‌ಗಳನ್ನು ಮತ್ತು ಮೈಕ್ರೋ SD ಕಾರ್ಡ್ ಬಳಸಲು ಅನುವು ಮಾಡಿಕೊಡುತ್ತದೆ. ಮೈಕ್ರೋ SD ಕಾರ್ಡ್‌ ಸ್ಲಾಟ್‌ ಡ್ಯುಯಲ್‌ ಸಿಮ್‌ ಸಂಪರ್ಕದ ಜತೆ ರಾಜಿ ಮಾಡಿಕೊಳ್ಳದೆ ಆಂತರಿಕ ಮೆಮೊರಿಯನ್ನು ವಿಸ್ತರಿಸಬಹುದಾಗಿದೆ. ಅದಲ್ಲದೇ ಹಾನರ್‌ 8X ಸ್ಮಾರ್ಟ್‌ಫೋನ್‌ 3,700mAh ಬ್ಯಾಟರಿಯೊಂದಿಗೆ ಬರುತ್ತಿದ್ದು, ಬಳಕೆದಾರರ ನೆಚ್ಚಿನ ಮಲ್ಟಿಮೀಡಿಯಾ ಹಬ್‌ ಆಗಿ ಹೊರಹೊಮ್ಮಿದೆ.

Best Mobiles in India

English summary
How Honor 8X shines out in the crowd of affordable smartphones. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X