'ಒನ್‌ಪ್ಲಸ್ 6ಟಿ' ಕ್ಯಾಮೆರಾ ಇಷ್ಟೆಲ್ಲಾ ವಿಶೇಷತೆ ಹೊಂದಿದೆ ಎಂದರೆ ನೀವು ನಂಬಲ್ಲ!

|

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಪ್ರೀಮಿಯಮ್ ಫೋನ್ 'ಒನ್‌ಪ್ಲಸ್ 6ಟಿ' ಈಗ ಭಾರತೀಯರ ಒಂದು ನೆಚ್ಚಿನ ಸ್ಮಾರ್ಟ್‌ಫೋನ್ ಆಗಿರುವುದು ಈಗಾಗಲೇ ನಿಮಗೆಲ್ಲಾ ತಿಳಿದಿದೆ ಎನ್ನಬಹುದು. ಅತ್ಯುತ್ತಮ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಯ 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನ್ ಈಗಾಗಲೇ ಲಕ್ಷಾಂತರ ಮೊಬೈಲ್ ಬಳಕೆದಾರರ ಕೈ ಸೇರಿದೆ. ಆದರೆ, ನಿಮಗೆ ಗೊತ್ತಾ?, ಒನ್‌ಪ್ಲಸ್ 6ಟಿ ಬಳಕೆದಾರರು ತಮ್ಮ ಒನ್‌ಪ್ಲಸ್ 6ಟಿ' ಫೋನಿನ 'ಗೂಗಲ್‌ ಲೆನ್ಸ್ ಮೋಡ್‌' ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದಾರೆಯೇ ಎಂಬುದು ಇನ್ನು ಸಂಶಯವಾಗಿಯೇ ಉಳಿದಿದೆ.

'ಒನ್‌ಪ್ಲಸ್ 6ಟಿ' ಕ್ಯಾಮೆರಾ ಇಷ್ಟೆಲ್ಲಾ ವಿಶೇಷತೆ ಹೊಂದಿದೆ ಎಂದರೆ ನೀವು ನಂಬಲ್ಲ!

ಹೌದು, ಲಕ್ಷಾಂತರ ಬಳಕೆದಾರರನ್ನು ಹೊಂದಿರುವ 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನ್ ಕ್ಯಾಮೆರಾದ ವಿಶೇಷತೆಗಳು ಬಹಳಷ್ಟಿವೆ. ಆದರೆ, ಅತ್ಯುತ್ತಮ ಚಿತ್ರಗಳನ್ನು ಚಿತ್ರಿಸುವ, 4ಕೆ ವಿಡಿಯೋಗಳನ್ನು ರೆಕಾರ್ಡ್ ಮಾಡುವ ಸೂಪರ್ ರಿಚ್ ಮತ್ತು ಸೂಪರ್ ಫಾಸ್ಟ್ ಕ್ಯಾಮೆರಾ ಎಂದಷ್ಟೇ ಸ್ಮಾರ್ಟ್‌ಪೋನ್ ಬಳಕೆದಾರರು ತಿಳಿದಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ನಮ್ಮ ದೈನಂದಿನ ಜೀವನವನ್ನು ಸರಳವಾಗಿ ಮತ್ತು ಚುರುಕಾಗಿಸಲು 'ಒನ್‌ಪ್ಲಸ್ 6ಟಿ' ಗೂಗಲ್‌ ಲೆನ್ಸ್ ಮೋಡ್‌' ಕ್ಯಾಮೆರಾ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಟ್ಯಾಪ್‌ನಲ್ಲಿ ಇಂಟಿಗ್ರೇಟೆಡ್ ಗೂಗಲ್ ಲೆನ್ಸ್ ಮೋಡ್

ಟ್ಯಾಪ್‌ನಲ್ಲಿ ಇಂಟಿಗ್ರೇಟೆಡ್ ಗೂಗಲ್ ಲೆನ್ಸ್ ಮೋಡ್

ಪ್ರಖ್ಯಾತ ಗೂಗಲ್ ಲೆನ್ಸ್ ಮೋಡ್ 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನ್ ಕ್ಯಾಮೆರಾ ಅಪ್ಲಿಕೇಶನ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ನೀವು ಕ್ಯಾಮೆರಾ ಅಪ್ಲಿಕೇಶನ್ ತೆರೆದ ತಕ್ಷಣ ಎಡ ಮೂಲೆಯಲ್ಲಿರುವ 'ಲೆನ್ಸ್' ಐಕಾನ್ ಅನ್ನು ಟ್ಯಾಪ್ ಮಾಡಿ. ಹೀಗೆ ಒಮ್ಮೆ ನೀವು ಅದನ್ನು ಸಕ್ರಿಯಗೊಳಿಸಿದಾಗ ಕ್ಯಾಮೆರಾವನ್ನು ಒಂದು ನಿರ್ದಿಷ್ಟ ವಸ್ತುವಿಗೆ ಸೂಚಿಸಬಹುದು. ಜೊತೆಗೆ ಗೂಗಲ್ ಲೆನ್ಸ್ ಕೃತಕ ಬುದ್ದಿಮತ್ತೆ ಕ್ಯಾಮರಾಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು ಗೂಗಲ್‌ನ ರೆಪೊಸಿಟರಿಯ ಡೇಟಾವನ್ನು ಹೊಂದಿಸುತ್ತದೆ.

ಪ್ರವಾಸದಲ್ಲಿ ಒನ್‌ಪ್ಲಸ್ 6ಟಿ

ಪ್ರವಾಸದಲ್ಲಿ ಒನ್‌ಪ್ಲಸ್ 6ಟಿ

ಪ್ರವಾಸಿಗರಿಗೆ 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನಿನ ಕ್ಯಾಮೆರಾ ತಂತ್ರಜ್ಞಾನವು ಅತ್ಯುತ್ತಮ ದಾರಿಹೋಕನಾಗಿಯೂ ಕೆಲಸ ಮಾಡಲಿದೆ ಎಂದರೆ ಆಶ್ಚರ್ಯವಾಗಬಹುದು. ಆದರೆ, ಎಐ ಚಾಲಿತ ಗೂಗಲ್ ಲೆನ್ಸ್ ಸಹಾಯದಿಂದ ಸ್ಥಳೀಯ ಭಾಷೆಯ ತಿಳುವಳಿಕೆ, ಅಜ್ಞಾತ ಜಾಗಗಳ ನ್ಯಾವಿಗೇಟ್ ಹಾಗೂ ಇಂತಹ ಹಲವು ಉಪಯುಕ್ತ ಮಾಹಿತಿಗಳನ್ನು ಒದಗಿಸಲು 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನ್ ಕ್ಯಾಮೆರಾ ಸಹಾಯಮಾಡಲಿದೆ. ಪ್ರವಾಸದ ವೇಳೆಯಲ್ಲಿ ನಿಮ್ಮ ಪ್ರಯಾಣದ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವಲ್ಲಿ ಸ್ಮಾರ್ಟ್‌ಫೋನ್ ಸಹಕರಿಸಲಿದೆ.

ಒಂದೇ ಶೈಲಿಯ ವಸ್ತುಗಳನ್ನು ಗುರುತಿಸಿ

ಒಂದೇ ಶೈಲಿಯ ವಸ್ತುಗಳನ್ನು ಗುರುತಿಸಿ

ಆನ್‌ಲೈನ್ ಮೂಲಕ ಶಾಪಿಂಗ್ ಮಾಡುವಾದ ಒಂದು ಜೋಡಿ ಶೂಗಳನ್ನು ನೀವು ಎಷ್ಟು ಬಾರಿ ನೋಡಿದ್ದೇವೆ ಅಲ್ಲವೇ?. ಏಕೆಂದರೆ, ನಾವು ನೋಡುವ ಆ ವಸ್ತುವಿನಲ್ಲಿ ಸ್ವಲ್ಪ ಕೊರತೆ ಕಾಣುತ್ತಿರುತ್ತದೆ. ಆದರೆ, 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನಿನ ಕ್ಯಾಮೆರಾ ಸಹಾಯದಿಂದ ಒಂದೇ ಶೈಲಿಯ ವಸ್ತುಗಳನ್ನು ಗುರುತಿಸಿ ತಕ್ಷಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಗೂಗಲ್ ಲೆನ್ಸ್ ನಿಮಗೆ ಉಪಯುಕ್ತವಾದ ಉತ್ಪನ್ನ ವಿವರಗಳನ್ನು ನೀಡುತ್ತದೆ ಮತ್ತು ನೀವು ಖರೀದಿಸಲು ಸಹಾಯ ಮಾಡುವ ವೆಬ್‌ಸೈ ಲಿಂಕ್ ಅನ್ನು ಸಹ ನೀಡುತ್ತದೆ.

ತಕ್ಷಣವೇ ಕ್ಯಾಲೆಂಡರ್ ರಚನೆ!

ತಕ್ಷಣವೇ ಕ್ಯಾಲೆಂಡರ್ ರಚನೆ!

ಕೃತಕ ಬುದ್ದಿಮತ್ತೆ ಚಾಲಿತ ಗೂಗಲ್ ಲೆನ್ಸ್ ತಂತ್ರಜ್ಞಾನವನ್ನು ಹೊಂದಿರುವವ 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನಿನಲ್ಲಿ ತಕ್ಷಣವೇ ಕ್ಯಾಲೆಂಡರ್ ರಚನೆ ಮಾಡಲು ಸ್ಕ್ಯಾನಿಂಗ್ ತಂತ್ರಜ್ಞಾನ ಸಹಾಯವಾಗಲಿದೆ. ಯಾವುದೇ ದಿನಾಂಕವನ್ನು ಸ್ಕ್ಯಾನ್ ಮಾಡುವ ಮೂಲಕ ಪ್ರಮುಖ ಕ್ಯಾಲೆಂಡರ್ ಈವೆಂಟ್‌ಗಳನ್ನು ರಚಿಸಬಹುದಾಗಿದೆ. ಇನ್ವಿಟೇಷನ್ ಕಾರ್ಡ್ ಸ್ಕ್ಯಾನ್ ಮಾಡಿ ದಿನಾಂಕವನ್ನು ಟ್ಯಾಪ್ ಮಾಡಿದರೆ ಸಾಕು ಕ್ಯಾಲೆಂಡರ್ ಈವೆಂಟ್ ಅನ್ನು ತಕ್ಷಣವೇ ರಚಿಸಬಹುದು.

ಕ್ಯೂಆರ್ ಕೋಡ್ ಸ್ಕ್ಯಾನ್!

ಕ್ಯೂಆರ್ ಕೋಡ್ ಸ್ಕ್ಯಾನ್!

ಕ್ಯೂಆರ್ ಕೋಡ್‌ಗಳು ಮತ್ತು ಬಾರ್‌ಕೋಡ್‌ಗಳನ್ನು ಸ್ಕ್ಯಾನ್ ಮಾಡಲು ನಿಮಗೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅಗತ್ಯವಿಲ್ಲ. ಏಕೆಂದರೆ, 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನಿನ ಕ್ಯಾಮೆರಾದ ಮೂಲಕವೇ ಯಾವುದೇ ಕ್ಯೂಆರ್ ಮತ್ತು ಬಾರ್‌ಕೋಡ್‌ಗಳನ್ನು ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಲು ಸಾಧ್ಯವಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುವ ಲೆನ್ಸ್ ಸರಳವಾಗಿ ದೈನಂದಿನ ಜೀವನವನ್ನು ಸುಲಭವಾಗಿಸುತ್ತದೆ.

ಫೋನ್ ಪರದೆಯಲ್ಲಿ ತಕ್ಷಣ ಫಲಿತಾಂಶಗಳು

ಫೋನ್ ಪರದೆಯಲ್ಲಿ ತಕ್ಷಣ ಫಲಿತಾಂಶಗಳು

'ಒನ್‌ಪ್ಲಸ್ 6ಟಿ' ಫೋನಿನ ಪ್ರಬಲ ಹಾರ್ಡ್‌ವೇರ್, ಆಕ್ಸಿಜನ್ ಒಎಸ್ ಹಾಗೂ ಗೂಗಲ್ ಲೆನ್ಸ್ ಒನ್‌ಪ್ಲಸ್ 6ಟಿ ಸಂಯೋಜನೆಯು ಫೋನ್ ಪರದೆಯಲ್ಲಿ ತಕ್ಷಣ ಅತ್ಯುತ್ತಮ ಫಲಿತಾಂಶಗಳನ್ನು ದೊರೆಯುವಂತೆ ಮಾಡುತ್ತದೆ. ಯಾವುದೇ ಒಂದು ವಸ್ತುವಿನ ಮೇಲೆ ಒನ್‌ಪ್ಲಸ್ 6ಟಿ ಪಾಯಿಂಟ್ ಮಾಡಿದರೆ ಅದರ ಎಲ್ಲಾ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ನೀಡುವಂತಹ ತಂತ್ರಜ್ಞಾನವನ್ನು ಫೋನ್ ಹೊಂದಿದೆ. ಸ್ಕ್ರೀನ್ ಪರದೆಯಲ್ಲಿ ಕಾಣುವ ಮಾಹಿತಿ ಹೆಚ್ಚು ಉಪಯುಕ್ತ ಮಾಹಿತಿಯೇ ಆಗಿರುತ್ತದೆ ಎಂದು ಒನ್‌ಪ್ಲಸ್ ಕಂಪೆನಿ ಹೇಳಿಕೊಂಡಿದೆ.

Most Read Articles
Best Mobiles in India

English summary
Google Lens camera in OnePlus 6T uses AI and computer vision to extract useful information from your surroundings . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X