ಪೆಟ್ರೋಲ್ ಬಂಕಿನಲ್ಲಿ ಸ್ಮಾರ್ಟ್ ಫೋನನ್ನು ಯಾಕೆ ಉಪಯೋಗಿಸಬಾರದು ಗೊತ್ತೇ?

|

ಪೆಟ್ರೋಲ್ ಬಂಕಿನಲ್ಲಿ ಮೊಬೈಲ್ ಉಪಯೋಗಿಸುವುದರಿಂದ ಸ್ಪೋಟವಾಗಿಬಿಡಬಹುದು ಎಂದು ಬಹುತೇಕ ಎಲ್ಲರಿಗೂ ಗೊತ್ತಿದೆ. ಆ ರೀತಿಯ ಸ್ಪೋಟ ಹಲವೆಡೆ ಆಗಿದೆ ಕೂಡ.

ಪೆಟ್ರೋಲ್ ಬಂಕಿನಲ್ಲಿ ಸ್ಮಾರ್ಟ್ ಫೋನನ್ನು ಯಾಕೆ ಉಪಯೋಗಿಸಬಾರದು ಗೊತ್ತೇ?

ಪೆಟ್ರೋಲ್ ಬಂಕುಗಳಲ್ಲಿ ಮೊಬೈಲ್ ಫೋನನ್ನು ಸ್ವಿಚ್ ಆಫ್ ಮಾಡಿ ಅಥವಾ ಪೆಟ್ರೋಲ್ ಬಂಕಿನಲ್ಲಿ ಫೋನು ಉಪಯೋಗಿಸಬೇಡಿ ಎಂಬ ಎಚ್ಚರಿಕೆಯ ಸಂದೇಶಗಳನ್ನು ಹಾಕಿರುತ್ತಾರೆ.

ಓದಿರಿ: ಸ್ಯಾಮ್‌ಸಂಗ್‌ ಇಯರ್‌ಫೋನ್‌ ಬಳಸುತ್ತಿದ್ದೀರಾ? ಹಾಗಿದ್ರೆ ನೀವ್ ತುಂಬಾ ಸ್ಪೆಷಲ್‌!

ಆದರೆ ಎಲ್ಲರೂ ಈ ಕಾರಣದಿಂದ ಸಮಾಧಾನಗೊಳ್ಳುವುದಿಲ್ಲ. ಪೆಟ್ರೋಲ್ ಬಂಕುಗಳಲ್ಲಿ ಮೊಬೈಲನ್ನು ಯಾಕೆ ಉಪಯೋಗಿಸಬಾರದು ಎಂದು ನೀವು ಗೊಂದಲದಲ್ಲಿರಬಹುದು. ಈ ಕೆಳಗಿನ ಮಾಹಿತಿಯನ್ನು ಓದಿದ ಮೇಲೆ ನಿಮ್ಮ ಗೊಂದಲಗಳು ಬಗೆಯರಿಯುತ್ತವೆ, ಓದಿ ಬಿಡಿ!

ಓದಿರಿ:ಒರ್ಕುಟ್ ಸಂಸ್ಥಾಪಕ ಸಾಮಾಜಿಕ ತಾಣದ ಜಗತ್ತಿಗೆ ಪುನಃ ಹೆಲೊ ಹೇಳಲಿದ್ದಾರೆ: ಇಲ್ಲಿದೆ ಹೆಚ್ಚಿನ ಮಾಹಿತಿ

ಫೋನಿನ ವಿದ್ಯುದ್ಕಾಂತೀಯ ತರಂಗಗಳು ಸ್ಫೋಟಕ್ಕೆ ಕಾರಣವಾಗಬಹುದು.

ಫೋನಿನ ವಿದ್ಯುದ್ಕಾಂತೀಯ ತರಂಗಗಳು ಸ್ಫೋಟಕ್ಕೆ ಕಾರಣವಾಗಬಹುದು.

ಮೊಬೈಲ್ ಫೋನಿನಿಂದ ಹೊರಹೊಮ್ಮುವ ವಿದ್ಯುದ್ಕಾಂತೀಯ ತರಂಗಗಳು ನೇರವಾಗಿ ಆವಿಯಾಗುತ್ತಿರುವ ಪೆಟ್ರೋಲನ್ನು ಹೊತ್ತಿಸಿಬಿಡಬಹುದು ಅಥವಾ ತರಂಗವು ಹತ್ತಿರವಿರುವ ಮೆಟಲ್ ವಸ್ತುಗಳನ್ನು ತಲುಪಿ ಆ ವಸ್ತುಗಳಿಂದ ಕಿಡಿ ಹೊತ್ತಿಕೊಳ್ಳುವಂತೆ ಮಾಡಿಬಿಡಬಹುದು ಎಂದು ನಂಬಲಾಗಿದೆ. ಈ ತರಂಗಗಳು ನಿಮ್ಮ ಫೋನು ಮತ್ತು ನೆಟ್ ವರ್ಕ್ ಟವರ್ ನಡುವೆ ಸಂಪರ್ಕವೇರ್ಪಡಿಸುತ್ತವೆ. ಈ ತರಂಗಗಳಿಗಿರುವ ಹೆಚ್ಚಿನ ಶಕ್ತಿಯು ಸ್ಪೋಟದ ಕಾರಣವಾಗಿಬಿಡಬಹುದು.

ಮೊಬೈಲ್ ಉಪಯೋಗಿಸುವುದರಿಂದ ಸ್ಪೋಟವಾಗುತ್ತದೆ ಎನ್ನುವುದಕ್ಕೆ ಸರಿಯಾದ ಸಾಕ್ಷ್ಯಗಳಿಲ್ಲ.

ಮೊಬೈಲ್ ಉಪಯೋಗಿಸುವುದರಿಂದ ಸ್ಪೋಟವಾಗುತ್ತದೆ ಎನ್ನುವುದಕ್ಕೆ ಸರಿಯಾದ ಸಾಕ್ಷ್ಯಗಳಿಲ್ಲ.

ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದಾಗ ಪೆಟ್ರೋಲ್ ಬಂಕುಗಳ ಸ್ಪೋಟಕ್ಕೂ ಮೊಬೈಲ್ ಫೋನಿನ ಬಳಕೆಗೂ ಸಂಬಂಧವಿರುವ ಬಗ್ಗೆ ಸಾಕ್ಷ್ಯಗಳಿಲ್ಲ. ವಾಸ್ತವದಲ್ಲಿ ಅನೇಕ ಪೆಟ್ರೋಲ್ ಬಂಕ್ ಸ್ಪೋಟ ಹಿಂದಿನ ಕಾರಣಗಳನ್ನು ಅಧ್ಯಯನ ಮಾಡಿದಾಗ ಮೊಬೈಲ್ ಬಳಕೆಗೆ ಸಂಬಂಧವಿರುವುದರ ಬಗ್ಗೆ ಯಾವುದೇ ಆಧಾರ ಲಭಿಸಿಲ್ಲ. ಮೊಬೈ ಲ್ ಫೋನುಗಳನ್ನು ಚಾಲ್ತಿಯಲ್ಲಿಡುವ ಬ್ಯಾಟರಿಗಳ ವೋಲ್ಟೇಜ್ ತುಂಬಾನೇ ಕಡಿಮೆಯಿರುವ ಕಾರಣ ಫೋನುಗಳು ಪೆಟ್ರೋಲ್ ಬಂಕುಗಳಲ್ಲಿ ಬೆಂಕಿ ಹೊತ್ತಿಸಲಾರವು.

ದೋಷವಿರುವ ಬ್ಯಾಟರಿ ಸ್ಫೋಟಕ್ಕೆ ಕಾರಣವಾಗಬಹುದು

ದೋಷವಿರುವ ಬ್ಯಾಟರಿ ಸ್ಫೋಟಕ್ಕೆ ಕಾರಣವಾಗಬಹುದು

ಚೆನ್ನಾಗಿ ಕಾರ್ಯನಿರ್ವಹಿಸುತ್ತಿರುವ ಸ್ಮಾರ್ಟ್ ಫೋನಿನ ಬ್ಯಾಟರಿ ಸ್ಫೋಟಕ್ಕೆ ಕಾರಣವಾಗುವ ಸಾಧ್ಯತೆಗಳಿಲ್ಲ, ಆದರೆ ಪೆಟ್ರೋಲ್ ಬಂಕಿನಲ್ಲಿ ದೋಷವಿರುವ ಬ್ಯಾಟರಿ ಹೊಂದಿದ ಮೊಬೈಲ್ ಅನ್ನು ಉಪಯೋಗಿಸುವುದರಿಂದ ಸ್ಫೋಟವಾಗಬಹುದು. ಆದರೆ, ಕೆಟ್ಟ ಬ್ಯಾಟರಿಯ ಮೊಬೈಲನ್ನು ಉಪಯೋಗಿಸುವುದು ವಿರಳ.

ಹೋಸ್ ಪೈಪ್ ಸ್ಫೋಟಕ್ಕೆ ಕಾರಣ

ಹೋಸ್ ಪೈಪ್ ಸ್ಫೋಟಕ್ಕೆ ಕಾರಣ

ಗಾಡಿಗೆ ಪೆಟ್ರೋಲ್ ತುಂಬಿಸುವ ಹೋಸ್ ಪೈಪಿನಿಂದಾಗಿ ಪೆಟ್ರೋಲ್ ಬಂಕಿನಲ್ಲಿ ಸ್ಫೋಟವಾಗುತ್ತದೆಯೇ ಹೊರತು ಪೆಟ್ರೋಲಿನಿಂದಾಗಲೀ ಪೆಟ್ರೋಲ್/ಡೀಸೆಲ್ ಟ್ಯಾಂಕಿನಿಂದಾಗಲೀ ಸ್ಫೋಟವಾಗುವುದಿಲ್ಲ.

ಫೋನನ್ನು ಉಪಯೋಗಿಸದಿರುವುದು ಒಳ್ಳೆಯದೇ!

ಫೋನನ್ನು ಉಪಯೋಗಿಸದಿರುವುದು ಒಳ್ಳೆಯದೇ!

ಪೆಟ್ರೋಲ್ ಬಂಕಿನಲ್ಲಿ ಮೊಬೈಲನ್ನು ಉಪಯೋಗಿಸುವುದು ಸ್ಫೋಟಕ್ಕೆ ಕಾರಣವಲ್ಲದೇ ಹೋದರೂ ನಿಮ್ಮ ವಾಹನಕ್ಕೆ ಪೆಟ್ರೋಲು ತುಂಬಿಸುವಾಗ ಮೊಬೈಲ್ ಉಪಯೋಗಿಸದಿರುವುದು ಕೆಟ್ಟ ಯೋಚನೆಯೇನಲ್ಲ. ಫೋನು ಉಪಯೋಗಿಸದರಿವುದರ ಅರ್ಥವೆಂದರೆ ಮೆಸೇಜು ಕಳುಹಿಸುವುದು, ಮಾತನಾಡುವುದು ಅಥವಾ ನೋಟಿಫಿಕೇಶನ್ ನೋಡುವುದೆಲ್ಲವೂ ಸೇರಿದೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ.

Best Mobiles in India

English summary
You would know that you should not use your smartphone at a fuel station as it can result in an explosion. Here, we have come up with why you shouldn't use the same and the proof that it is a myth. Read more...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X