ಪರ್ಫೆಕ್ಟ್ ಪ್ರೊಫೈಲ್ ಚಿತ್ರವನ್ನು ಈ ವಿಧಾನಗಳಲ್ಲಿ ತೆಗೆಯಿರಿ

Written By:

ಮೊದಲ ನೋಟದಲ್ಲೇ ಮನಸೆಳೆಯುವಂತಹ ಅವಕಾಶ ನಿಮಗೆ ಎರಡನೆಯ ಬಾರಿ ದೊರಕಲಿಕ್ಕಿಲ್ಲ. ಹೌದು ಇಂದು ಅಂತರ್ಜಾಲ ಬಹಳಷ್ಟು ಸುಧಾರಣೆಗಳನ್ನು ಬದಲಾವಣೆಗಳನ್ನು ಮಾಡಿದ್ದು ನಿಮ್ಮ ಸುಂದರವಾದ ಪ್ರೊಫೈಲ್ ಫೋಟೋದಿಂದ ಲಿಂಕ್‌ಡ್ ಇನ್, ಟ್ವಿಟ್ಟರ್, ಗೂಗಲ್ ಪ್ಲಸ್ ಜಾಲತಾಣಗಳಲ್ಲಿ ನೀವು ಮಿಂಚಬಹುದು.ಇಲ್ಲಿರುವ ನಿಮ್ಮ ಸ್ನೇಹಿತರು ನಿಮ್ಮ ಸುಮದರವಾದ ಮುದ್ದಾ ಪ್ರೊಫೈಲ್ ಫೋಟೋವನ್ನು ವೀಕ್ಷಿಸಿ ನಿಜಕ್ಕೂ ಮನಸೋಲಬಹುದು.

ಹಾಗಿದ್ದರೆ ಈ ತಾಣಗಳಲ್ಲಿ ನಿಮ್ಮ ಆಕರ್ಷಕವಾದ ಫೋಟೋವನ್ನು ಅಳವಡಿಸಿ ಇನ್ನಷ್ಟು ಸ್ನೇಹಿತರನ್ನು ಲೈಕ್‌ಗಳನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿಸುವುದಕ್ಕಾಗಿ ಈ ಲೇಖನವನ್ನು ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ. ನೀವು ನಿಮ್ಮ ಮೆಚ್ಚಿನ ತಾಣಗಳಲ್ಲಿ ಫೋಟೋಗಳನ್ನು ಹಾಕುವ ಮೊದಲು ಅದನ್ನು ಇನ್ನಷ್ಟು ಆಕರ್ಷಕವಾಗಿ ಹೇಗೆ ಪ್ರಸ್ತುತಪಡಿಸಬಹುದೆಂಬುದನ್ನು ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಇತ್ತೀಚಿನ ಫೋಟೋವನ್ನು ಬಳಸಿ

ನಿಮ್ಮ ಇತ್ತೀಚಿನ ಫೋಟೋವನ್ನು ಬಳಸಿ

#1

ಇದು ಅತ್ಯಂತ ಮೂಲ ಅಂಶವಾಗಿದೆ. ನಿಮ್ಮ ಬಾಲ್ಯದ ಫೋಟೋಗಳು ಅಥವಾ ಮುದ್ದಿನ ಸಾಕುಪ್ರಾಣಿಯ ಫೋಟೋಗಳನ್ನು ಅಪ್‌ಲೋಡ್ ಮಾಡದಿರಿ. ನಿಮ್ಮದೇ ಫೋಟೋ ಆಗಿರುವುದು ಕಡ್ಡಾಯವಾಗಿದೆ. ಇದರಿಂದ ನಿಮ್ಮ ಸ್ನೇಹಿತರು ನಿಮ್ಮನ್ನು ಸುಲಭವಾಗಿ ಗುರುತಿಸುತ್ತಾರೆ ಮತ್ತು ನಿಮ್ಮ ಸೌಂದರ್ಯವನ್ನು ಮೆಚ್ಚಿಕೊಳ್ಳುತ್ತಾರೆ.

ಬೇರೆಯವರು ನಿಮ್ಮ ಫೋಟೋ ತೆಗೆಯಲಿ

ಬೇರೆಯವರು ನಿಮ್ಮ ಫೋಟೋ ತೆಗೆಯಲಿ

#2

ನಿಮ್ಮ ಫೋಟೋವನ್ನು ನೀವೇ ತೆಗೆಯುವುದಕ್ಕಿಂತ ಬೇರೆಯವರು ನಿಮ್ಮ ಫೋಟೋ ತೆಗೆಯುವುದು ಒಳ್ಳೆಯದು. ಇದರಿಂದ ನಿಮ್ಮ ಮುಖದ ಭಾವನೆ ಸ್ವಾಭಾವಿಕ ಹಾಗೂ ಸುಂದರವಾಗಿರುತ್ತದೆ. ಸ್ವಲ್ಪ ನಗುವುದು ಉತ್ತಮ ಅಂಶವಾಗಿದೆ.

ನಿಮ್ಮ ಬ್ರ್ಯಾಂಡ್ ಅನ್ನು ಪ್ರಮೋಟ್ ಮಾಡುವಲ್ಲಿ ವೃತ್ತಿಪರರಾಗಿರಿ

ನಿಮ್ಮ ಬ್ರ್ಯಾಂಡ್ ಅನ್ನು ಪ್ರಮೋಟ್ ಮಾಡುವಲ್ಲಿ ವೃತ್ತಿಪರರಾಗಿರಿ

#3

ನಿಮ್ಮ ಫೋಟೋವನ್ನು ಅಥವಾ ಪ್ರೊಫೈಲ್ ಅನ್ನು ಸಾಮಾಜಿಕ ತಾಣದಲ್ಲಿ ನೀವು ಪ್ರಚಾರ ಮಾಡುವಾಗ ವೃತ್ತಿಪರರಾಗಿರುವುದು ಅಗತ್ಯವಾಗಿರುತ್ತದೆ. ನೀವು ಸ್ವತಂತ್ರ ಉದ್ಯಮಿಗಳಾಗಿಯೇ ಇರಿ ಅಥವಾ ಸ್ವತಂತ್ರ ವ್ಯಕ್ತಿಗಳಾಗಿರಿ. ಆದರೆ ಸೋಶಿಯಲ್ ಸೈಟ್‌ನಲ್ಲಿ ನಿಮ್ಮ ಪ್ರಸ್ತುತತೆ ಅತಿ ಮುಖ್ಯವಾಗಿರುತ್ತದೆ.

ಫೋಕಸ್ ಅನ್ನು ನಿಮ್ಮ ಮುಖದ ಮೇಲಿಡಿ

ಫೋಕಸ್ ಅನ್ನು ನಿಮ್ಮ ಮುಖದ ಮೇಲಿಡಿ

#4

ಫೋಟೋ ತೆಗೆಯುವಾಗ ನಿಮ್ಮ ಮುಖ ಚೆನ್ನಾಗಿ ಕಾಣುವಂತೆ ಫೋಟೋ ತೆಗೆಯಿರಿ. ನಿಮ್ಮ ಮುಖ ಸ್ಪಷ್ಟವಾಗುವಂತಿರಲಿ. ಹೆಚ್ಚು ಚಿನ್ನಾಭರಣಗಳನ್ನು ಧರಿಸಿದ ಫೋಟೋ ತೆಗೆದು ಅದರ ಅಂದಗೆಡಿಸದಿರಿ. ಆದಷ್ಟ ಸರಳ ಮತ್ತು ನೈಸರ್ಗಿಕ ತನಕ್ಕೆ ಬೆಲೆ ಕೊಡಿ.

ಓವರ್ ಪೋಸ್ ಬೇಡ

ಓವರ್ ಪೋಸ್ ಬೇಡ

#5

ನಿಮ್ಮ ಫೋಟೋ ಈ ಅಂಶವನ್ನು ಮೀರದಂತಿರಲಿ. ಹೆಚ್ಚು ಸೆಕ್ಸಿ ಲುಕ್‌ಗಳು, ಓವರ್ ಎಕ್ಸ್‌ಪೋಸಿಂಗ್ ನಿಮ್ಮ ಫೋಟೋದಲ್ಲಿರದಂತೆ ಜಾಗ್ರತೆ ವಹಿಸಿ.

ಫ್ಲಾಟರಿಂಗ್ ಲೈಟ್ ಬಳಸಿ

ಫ್ಲಾಟರಿಂಗ್ ಲೈಟ್ ಬಳಸಿ

#6

ನೀವು ಹೊರಗಡೆ ಶೂಟಿಂಗ್ ಮಾಡುತ್ತಿದ್ದೀರಿ ಎಂದಾದಲ್ಲಿ, ನೇರವಾದ ಸೂರ್ಯನ ಬೆಳಕನ್ನು ಅವೋಯ್ಡ್ ಮಾಡಿ. ಇದರಿಂದ ನಿಮ್ಮ ಕಣ್ಣುಗಳು ಹಾಗೂ ಮೂಗಿನ ಮೇಲೆ ಬೆಳಕಿನ ನೆರಳು ಬೀಳಬಹುದು. ನೆರಳು ನಿಮ್ಮ ಫೋಟೋವನ್ನು ತಿಂದುಹಾಕದಂತೆ ನೋಡಿಕೊಳ್ಳಿ.

ಸರಿಯಾದ ಫೋಕಲ್ ಲೆಂತ್ ಅನ್ನು ಬಳಸಿ

ಸರಿಯಾದ ಫೋಕಲ್ ಲೆಂತ್ ಅನ್ನು ಬಳಸಿ

#7

ಲೆನ್ಸ್ ಅಥವಾ ಜೂಮ್ ಲೆನ್ಸ್ ಆಯ್ಕೆಯನ್ನು ಮಾಡುವ ಅವಕಾಶ ನಿಮಗೆ ಒದಗಿದ್ದರೆ, 70 ರಿಂದ 135 ಮಿಲಿಮೀಟರ್‌ಗಳಲ್ಲಿ ಫೋಕಲ್ ಲೆಂತ್ ಇರುವಂತೆ ನೋಡಿಕೊಳ್ಳಿ. ನಿಮ್ಮ ಮೊಬೈಲ್ ಫೋನ್ ನಿಮ್ಮ ಪ್ರೊಫೈಲ್ ಫೋಟೋವನ್ನು ತೆಗೆಯಲು ಉತ್ತಮ ಆಯ್ಕೆಯಲ್ಲ ಏಕೆಂದರೆ ನಿಮ್ಮ ಮುಖವನ್ನು ಫೋನ್‌ನಲ್ಲಿರುವ ಲೆನ್ಸ್ ತಿರುಚುತ್ತದೆ ಇದರಿಂದ ನಿಮ್ಮ ಪ್ರೊಫೈಲ್ ಫೋಟೋ ಆಕರ್ಷಣೆಯನ್ನು ಕಳೆದುಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot