ಎಚ್‌ಟಿಸಿ ಡಿಸೈರ್ 816ಜಿ ಯ ಖರೀದಿ ನಡೆಯಲಿ ಈ ತಾಣಗಳಲ್ಲಿ

By Shwetha
|

ಡಿಸೈರ್ 816ಜಿಯನ್ನು ಕೆಲವೇ ದಿನಗಳ ಹಿಂದೆ ಆನ್‌ಲೈನ್‌ನಲ್ಲಿ ಪಟ್ಟಿ ಮಾಡಿದ್ದು ಇದೀಗ ಭಾರತದಲ್ಲಿ ಡಿವೈಸ್ ಅನ್ನು ಮಾರಾಟ ಮಾಡಲು ಪ್ರಾರಂಭಿಸಲಾಗಿದೆ. ಎಚ್‌ಟಿಸಿಯ ಈ ಅತ್ಯಾಧುನಿಕ ಸ್ಮಾರ್ಟ್‌ಫೋನ್ ನಿಜಕ್ಕೂ ಕಣ್ಸೆಳೆಯುವ ಮಾಡೆಲ್ ಆಗಿದ್ದು ಡಿಸೈರ್ 816 ಸ್ಮಾರ್ಟ್‌ಫೋನ್‌ನ ಮಧ್ಯಮ ಶ್ರೇಣಿಯ ಉತ್ತಮ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸ್ಮಾರ್ಟ್‌ಫೋನ್ ಬೆಲೆ ರೂ 18,359 ಆಗಿದ್ದು ಇಂದಿನ ಗಿಜ್‌ಬಾಟ್ ಲೇಖನದಲ್ಲಿ ಈ ಫೋನ್ ಅನ್ನು ಖರೀದಿಸಬಹುದಾದ ಹತ್ತು ಆನ್‌ಲೈನ್ ತಾಣಗಳ ಮಾಹಿತಿಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಖರೀದಿಸಬಹುದಾದ ದೀಪಾವಳಿ ಬಂಪರ್ ಮೈಕ್ರೋಮ್ಯಾಕ್ಸ್ ಫೋನ್

ಇದಕ್ಕೂ ಮುನ್ನ ಹ್ಯಾಂಡ್‌ಸೆಟ್‌ನ ವಿಶೇಷತೆಗಳತ್ತ ಕೂಡ ಕೊಂಚ ಗಮನ ಹರಿಸೋಣ. ಇದು 5.5 ಇಂಚಿನ (1280 x 720 pixels) ಡಿಸ್‌ಪ್ಲೇಯೊಂದಿಗೆ ಬಂದಿದ್ದು, 1.3 GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಅನ್ನು ಹೊಂದಿದೆ, ಫೋನ್ 13 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಒದಗಿಸುತ್ತಿದ್ದು LED ಫ್ಲ್ಯಾಶ್ ಇದರಲ್ಲಿ ಸೇರಿದೆ. 5 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಸೆಟ್ ಹೊಂದಿದ್ದು ಎಚ್‌ಡಿ ರೆಕಾರ್ಡಿಂಗ್‌ಗೆ ಫೋನ್ ಹೇಳಿಮಾಡಿಸಿದ್ದಾಗಿದೆ. 1.5 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದ್ದು 8 ಜಿಬಿ ಆಂತರಿಕ ಮೆಮೊರಿಯನ್ನು ಪಡೆದುಕೊಂಡಿದ್ದು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಇದನ್ನು ವಿಸ್ತರಿಸಬಹುದಾಗಿದೆ.

ಇದನ್ನೂ ಓದಿ: ಆಂಡ್ರಾಯ್ಡ್ ಫೋನ್‌ಗಳ ಮೇಲೆ ಭಾರೀ ದರ ಕಡಿತ

ಫೋನ್ 7.9 ಎಮ್‌ಎಮ್ ದಪ್ಪವಾಗಿದ್ದು ತೂಕ 158 ಗ್ರಾಮ್‌ಗಳಾಗಿದೆ. HTC ಬೂಮ್‌ಸೌಂಡ್ ಮತ್ತು ಡ್ಯುಯಲ್ ಫ್ರಂಟಲ್ ಸ್ಟಿರಿಯೋ ಸ್ಪೀಕರ್ ಅನ್ನು ಫೋನ್ ಪಡೆದುಕೊಂಡಿದೆ. ಇನ್ನು ಸೆಟ್‌ನಲ್ಲಿರುವ ಸಂಪರ್ಕ ಅಂಶಗಳೆಂದರೆ 3G HSPA+, WiFi b/g/n/ac, ಬ್ಲ್ಯೂಟೂತ್ 4.0 aptX, ಹಾಗೂ GPS ಜೊತೆಗೆ a-GPS ಆಗಿದೆ. 2600mAh ಬ್ಯಾಟರಿಯನ್ನು ಫೋನ್ ಒಳಗೊಂಡಿದೆ.

ಇನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಡೀಲ್‌ಗಳನ್ನು ನಿಮಗೆ ಪರಿಶೀಲಿಸಿಕೊಳ್ಳಬಹುದಾಗಿದೆ.

Best Mobiles in India

English summary
The Desire 816G was listed online just a couple of days ago and now the device has started selling in India. The latest smartphone from HTC is not the high-end model but is just a variant of the Desire 816 smartphone, which is one of the best mid-range devices to buy in India a the moment.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X