ಹುವಾಯಿಯ ಹೊಸ 'ಎಪಿಕ್' ಹಾನರ್ ಫೋನ್

|

ಹುವಾಯಿ ಒಡೆತನದ ಹಾನರ್ ಕಂಪನಿಯು ತನ್ನ ಟ್ವಿಟರ್ ಖಾತೆಯಲ್ಲಿ ಹೊಸ ಫೋನಿನ ಬಗೆಗಿನ ವಿವರಗಳನ್ನು ಹಂಚಿಕೊಂಡಿದೆ. ಜನವರಿ ಮೂರರಂದು ನಡೆಯಲಿರುವ ಸಿ.ಇ.ಎಸ್2017ರಲ್ಲಿ ಈ ಹೊಸ ಫೋನ್ ಬಿಡುಗಡೆಯಾಗಲಿದೆ. ಈ ಹೊಸ ಫೋನಿನ ಹೆಸರು 'ಎಪಿಕ್'.

ಹುವಾಯಿಯ ಹೊಸ 'ಎಪಿಕ್' ಹಾನರ್ ಫೋನ್

ಇಷ್ಟನ್ನು ಹೊರತುಪಡಿಸಿದರೆ ಈ ಫೋನಿನ ಬಗ್ಗೆ ಇನ್ಯಾವುದೇ ಮಾಹಿತಿಯೂ ಇಲ್ಲ. ಈ ಮುಂಚಿನ ಗಾಳಿ ಸುದ್ದಿಗಳ ಪ್ರಕಾರ ಈ ಹೊಸ ಫೋನನ್ನು ಕಂಪನಿಯು ಅಮೆರಿಕಾ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಗೊಳಿಸುತ್ತದೆ ಎನ್ನಲಾಗುತ್ತಿತ್ತು; ಎಪಿಕ್ ಅಲ್ಲಿ ಮಾತ್ರ ಬಿಡುಗಡೆಯಾಗುತ್ತದಾ? ವಿವರಗಳಿಲ್ಲ.

ಅಮೆರಿಕಾದ ಮಾರುಕಟ್ಟೆಯಲ್ಲಿ ಹಾನರ್ ಫೋನುಗಳು ಅಷ್ಟಾಗಿಲ್ಲ. ಹಾನರ್ 5ಎಕ್ಸ್ ಮತ್ತು ಹಾನರ್ 8 ಫೋನುಗಳಷ್ಟೇ ಅಮೆರಿಕಾದಲ್ಲಿ ಲಭ್ಯವಿದೆ. ಅಮೆರಿಕಾದಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಹಾನರ್ ಹುರುಪಿನಲ್ಲಿರುವುದಂತೂ ಹೌದು.

ಓದಿರಿ: "ಹಾನರ್ 6ಎಕ್ಸ್" ಎಸ್‌ಕ್ಲೂಸಿವ್ ಸೇಲ್ ಇಂದು 12 ಗಂಟೆಗೆ..!!

ಫೋನ್ ಅರಿನಾ ಪ್ರಕಾರ ಹುವಾಯಿ ಕಂಪನಿಯು ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದ್ದ ಕಾನ್ಸೆಪ್ಟ್ ಫೋನನ್ನು ಹಾನರ್ ಮ್ಯಾಜಿಕ್ ಹೆಸರಿನಲ್ಲಿ ಅಮೆರಿಕಾದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಇವೆಲ್ಲವೂ ಸಾಧ್ಯತೆಗಳಷ್ಟೇ.

ಅಧಿಕೃತ ದಿನಾಂಕವೇನೂ ದೂರವಿಲ್ಲ. 'ಎಪಿಕ್' ಬಗೆಗಿನ ಮತ್ತಷ್ಟು ಮಾಹಿತಿಯನ್ನು ಶೀಘ್ರದಲ್ಲೇ ಹೊತ್ತು ತರುತ್ತೇವೆ.

Best Mobiles in India

Read more about:
English summary
Huawei's sub-brand Honor officially confirmed that they are going to launch a new smartphone called 'Honor Epic' at the CES 2017. Read on...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X