ಹುವಾಯಿ ಹಾಲಿಡೇ ಸೇಲ್: ಕ್ರಿಸ್ ಮಸ್ ಮತ್ತು ಹೊಸ ವರ್ಷದ ಆಫರ್ ಗಳು

|

ಕ್ರಿಸ್ ಮಸ್ ಬಂದೇ ಬಿಂಡ್ತು. ಅದಕ್ಕೆ ಸರಿಯಾಗಿ ಹೊಸ ವರ್ಷದ ಆರಂಭ ಕೂಡ ಸನ್ನಿಹಿತವಾಗಿದೆ. ಹಾಗಾಗಿ ಹುವಾಯಿ ಸಂಸ್ಥೆ ಹುವಾಯಿ ಹಾಲಿಡೇ ಸೇಲ್ ನ್ನು ಆರಂಭಿಸಿದೆ. ಡಿಸೆಂಬರ್ 21 ರಿಂದ ಜನವರಿ 2,2019 ರ ವರೆಗೆ ಈ ಸೇಲ್ ಅಮೇಜಾನ್ ನಲ್ಲಿ ಎಕ್ಸ್ ಕ್ಲೂಸೀವ್ ಆಗಿ ನಡೆಯಲಿದೆ.

ಹುವಾಯಿ ಹಾಲಿಡೇ ಸೇಲ್: ಕ್ರಿಸ್ ಮಸ್ ಮತ್ತು ಹೊಸ ವರ್ಷದ ಆಫರ್ ಗಳು

15 ದಿನಗಳ ಕಾಲ ನಡೆಯುವ ಈ ಸೇಲ್ ನಲ್ಲಿ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಮತ್ತು ಆಫರ್ ಗಳು ಹುವಾಯಿ ಡಿವೈಸ್ ಗಳಿಗೆ ಲಭ್ಯವಾಗುತ್ತದೆ.

15,000 ರುಪಾಯಿ ವರಗೆ ಹುವಾಯಿಯ ಬೆಸ್ಟ್ ಸೇಲ್ ಆಗಿರುವ ಸ್ಮಾರ್ಟ್ ಫೋನ್ ಗಳು ಉದಾಹರಣೆಗೆ ಹುವಾಯಿ ಪಿ20 ಪ್ರೋ, ಪಿ20 ಲೈಟ್, ನೋವಾ 3 ಮತ್ತು ನೋವಾ 3ಐ ಇತ್ಯಾದಿಗಳ ಮೇಲೆ ರಿಯಾಯಿತಿ ಪಡೆಯಲು ಈ ಸೇಲ್ ನಲ್ಲಿ ಸಾಧ್ಯವಿದೆ. ಅಷ್ಟೇ ಅಲ್ಲ ಕಂಪೆನಿಯು ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಕೂಡ ನೀಡುತ್ತಿದೆ. ಎಕ್ಸ್ ಚೇಂಜ್ ಮತ್ತು ಕ್ಯಾಷ್ ಬ್ಯಾಕ್ ಆಫರ್ ಗಳು ಕೂಡ ಈ ಸೇಲ್ ನಲ್ಲಿ ಲಭ್ಯವಿದೆ.

ಸೇಲ್ ನಲ್ಲಿ ಹೆಚ್ ಡಿಎಫ್ ಸಿ ಕ್ರೆಡಿಟ್& ಡೆಬಿಟ್ ಕಾರ್ಡ್ ಬಳಸಿದರೆ ಗ್ರಾಹಕರಿಗೆ 10% ಮತ್ತು 5% ಇನ್ಸೆಂಟ್ ರಿಯಾಯಿತಿಯು ಇಎಂಐ ಟ್ರಾನ್ಸ್ಯಾಕ್ಷನ್ ನಡೆಸಿದರೆ ಲಭ್ಯವಾಗುತ್ತದೆ. ಆಫರ್ ಗಳು ಹೆಚ್ಚಿನ ಎಲ್ಲಾ ಹುವಾಯಿ ಡಿವೈಸ್ ಗಳಿಗೆ ಲಭ್ಯವಿದೆ. ಗರಿಷ್ಟ 1,500 ರುಪಾಯಿ ಬ್ಯಾಂಕ್ ನ ರಿಯಾಯಿತಿಯನ್ನು ಪಡೆಯಲು ಅವಕಾಶವಿರುತ್ತದೆ.

ಹುವಾಯಿ ನೋವಾ 3, ನೋವಾ 3ಐ, ಪಿ20 ಪ್ರೋ, ಪಿ20 ಲೈಟ್ ನ ಮಾರಾಟದ ಬೆಲೆ :

ಹುವಾಯಿ ನೋವಾ 3ಐ

ಹುವಾಯಿ ನೋವಾ 3ಐ

ಕಪ್ಪು ಮತ್ತು ಐರಿಸ್ ಪರ್ಪಲ್ ಬಣ್ಣದ ಹುವಾಯಿ ನೋವಾ 3ಐ ಬೆಲೆ 16,990 ರುಪಾಯಿಗಳಾಗಿದ್ದು ಎಂಆರ್ ಪಿ ಮೇಲೆ 7,009 ರುಪಾಯಿ ರಿಯಾಯಿತಿ ಲಭ್ಯವಾದಂತಾಗುತ್ತದೆ. 3 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಕೂಡ ಕಂಪೆನಿ ನೀಡುತ್ತಿದೆ.

ನೋವಾ 3

ನೋವಾ 3

39,999 ರುಪಾಯಿ ಎಂಆರ್ ಪಿ ಇರುವ ನೋವಾ 3 ಬೆಲೆ 29.999 ರುಪಾಯಿ ಆಗಲಿದೆ ಅಂದರೆ 10,000 ರುಪಾಯಿ ರಿಯಾಯಿತಿ ನಿಮಗೆ ಈ ಫೋನಿನ ಮೇಲೆ ಸಿಗುತ್ತದೆ. 3 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಇದ್ದು ತಿಂಗಳ ಕಂತಿನ ರೂಪದಲ್ಲೂ ಕೂಡ ಈ ಫೋನ್ ನ್ನು ಖರೀದಿಸುವುದಕ್ಕೆ ಅವಕಾಶವಿದೆ.

ಹುವಾಯಿ ಪಿ20 ಲೈಟ್

ಹುವಾಯಿ ಪಿ20 ಲೈಟ್

ಮಿಡ್ ನೈಟ್ ಬ್ಲಾಕ್ ಮತ್ತು ಬ್ಲೂ ಎಡಿಷನ್ ನ ಹುವಾಯಿ ಪಿ20 ಲೈಟ್ ಗೆ ಎಂಆರ್ ಪಿ ಮೇಲೆ 8,000 ರುಪಾಯಿ ರಿಯಾಯಿತಿ ಇದ್ದು 14,999 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ. 3 ತಿಂಗಳ ಕಂತಿನ ಪಾವಿತಿಯಲ್ಲೂ ಕೂಡ ಖರೀದಿಸುವುದಕ್ಕೆ ಗ್ರಾಹಕರಿಗೆ ಅವಕಾಶವಿದೆ.

ಹುವಾಯಿ ಪಿ20 ಪ್ರೋ

ಹುವಾಯಿ ಪಿ20 ಪ್ರೋ

ಹುವಾಯಿ ಪಿ20 ಪ್ರೋ ನ ಬ್ಲೂ ಎಡಿಷನ್ ಗೆ ಎಂಆರ್ ಪಿ ಮೇಲೆ 15,000 ರುಪಾಯಿ ರಿಯಾಯಿತಿ ಇದ್ದು ಇದೀಗ 54,999 ರುಪಾಯಿ ಬೆಲೆಗೆ ಹುವಾಯಿ ಪಿ20 ಪ್ರೋ ಖರೀದಿಸುವುದಕ್ಕೆ ಈ ಸೇಲ್ ನಲ್ಲಿ ಗ್ರಾಹಕರಿಗೆ ಅವಕಾಶವಿದೆ. 6 ತಿಂಗಳ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸುವುದಕ್ಕೆ ಗ್ರಾಹಕರಿಗೆ ಅವಕಾಶವಿರುತ್ತದೆ.

Most Read Articles
Best Mobiles in India

Read more about:
English summary
Huawei Holiday Sale: Christmas and New Year offers on smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X