ಟ್ರಿಪಲ್ ಹಿಂಭಾಗದ ಕ್ಯಾಮರಾವಿರುವ ಹುವಾಯಿ ಮೇಟ್ 20 ಪ್ರೋ ಭಾರತದಲ್ಲಿ ಬಿಡುಗಡೆ – ಬೆಲೆ 69,990 ರುಪಾಯಿ

  |

  ಹುವಾಯಿ ಇಂದು ಹೊಸದಾಗಿರುವ ಫ್ಲ್ಯಾಗ್ ಶಿಪ್ ಮೇಟ್ 20 ಪ್ರೋ ವನ್ನು ಭಾರತದಲ್ಲಿ ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ಮೇಟ್ ಸಿರೀಸ್ ನ್ನು ಕಂಪೆನಿಯು ಭಾರತಕ್ಕೆ ತರುತ್ತಿದೆ. ತನ್ನ ಪ್ರೀಮಿಯಂ ಲೈನ್ ನ್ನು ಭಾರತೀಯ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಪಡಿಸುವ ವಿಶ್ವಾಸವನ್ನು ಸಂಸ್ಥೆ ಹೊಂದಿದೆ.

  ಟ್ರಿಪಲ್ ಹಿಂಭಾಗದ ಕ್ಯಾಮರಾವಿರುವ ಹುವಾಯಿ ಮೇಟ್ 20 ಪ್ರೋ ಭಾರತದಲ್ಲಿ ಬಿಡುಗಡೆ

  ಮೇಟ್ 20 ಪ್ರೋ ಮೇಟ್10 ನ ಯಶಸ್ಸಿನ ಸರಣಿಯಾಗಿದ್ದು ಪಿ20 ಪ್ರೋ ಭಾರತದಲ್ಲಿ ಬಿಡುಗಡೆಗೊಂಡ ಕೆಲವೇ ತಿಂಗಳಿಗೆ ಇಲ್ಲಿಗೆ ಬರುತ್ತಿದೆ. ಮೇಟ್-20 ಪ್ರೋ ಪ್ರೀಮಿಯಂ ಆನ್-ಗ್ಲಾಸ್ ಡಿಸೈನ್ ನ್ನು ಹೊಂದಿದೆ, ಲೈಕಾ ಬ್ರಾಂಡ್ ನ ಟ್ರಿಪಲ್ ಹಿಂಭಾಗದ ಕ್ಯಾಮರಾವನ್ನು ಹೊಂದಿದೆ ಮತ್ತು ಹೊಸದಾಗಿರುವ 7ಎನ್ಎಂ ಆಧಾರಿತ ಕಿರಿನ್ 980 ಚಿಪ್ ಸೆಟ್ ನ್ನು ಒಳಗೊಂಡಿದ್ದು ಇನ್ನೂ ಹಲವಾರು ವೈಶಿಷ್ಟ್ಯತೆಗಳಿಂದ ಕೂಡಿದೆ.

  ಮೇಟ್ -20 ಪ್ರೋ ಭಾರತೀಯ ಬೆಲೆ 6ಜಿಬಿ ಮೆಮೊರಿಯ ಮಾಡೆಲ್ ಗೆ 69,999 ರುಪಾಯಿಗಳು. ಡಿಸೆಂಬರ್ 3 ರಿಂದ ಅಮೇಜಾನ್ ಪ್ರೈಮ್ ಗ್ರಾಹಕರಿಗೆ ಎಕ್ಸ್ ಕ್ಲೂಸೀವ್ ಆಗಿ ಅಮೇಜಾನ್ ಇಂಡಿಯಾದಲ್ಲಿ ಖರೀದಿಗೆ ಲಭ್ಯವಾಗುತ್ತದೆ.

  ಒಂದು ವೇಳೆ ನೀವು ಮೇಟ್ 20 ಪ್ರೋ ವನ್ನು 71,990 ರುಪಾಯಿಗೆ ಖರೀದಿಸಿದರೆ 29,990 ರುಪಾಯಿ ಬೆಲೆಬಾಳುವ Sennheiser PXC-500 ಹೆಡ್ ಸೆಟ್ ನಿಮಗೆ ಹುವಾಯಿ ಕಡೆಯಿಂದ ಉಚಿತವಾಗಿ ಲಭ್ಯವಾಗುತ್ತದೆ. ಹುವಾಯಿ ಕೆಲವೇ ವಾರಗಳಲ್ಲಿ ಮೇಟ್ 20 ಪ್ರೋ ನ ವಿಶೇಷ ಪೊರ್ಚೆ ಎಡಿಷನ್ ನ್ನು ಹೊರತರಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಹುವಾಯಿ ಮೇಟ್ 20 ಪ್ರೋ ನ ವೈಶಿಷ್ಟ್ಯತೆಗಳು:

  ಮೇಟ್ 20 ಪ್ರೋ ನಲ್ಲಿ ಗ್ಯಾಲಕ್ಸಿ ಎಸ್9 ರೀತಿಯ ಕರ್ವ್ಡ್ ಡಿಸೈನ್ ಇದೆ. ಇದರಲ್ಲಿ 3ಡಿ ಗ್ಲಾಸ್ ಪ್ರೊಟೆಕ್ಷನ್ ಮುಂಭಾಗದಲ್ಲಿದ್ದು ಹಿಂಭಾಗದಲ್ಲಿ ಬದಿಗಳಲ್ಲಿ ಕರ್ವ್ಡ್ ಆಗಿದೆ ಮತ್ತು ಪ್ರೀಮಿಯಂ ಲುಕ್ ನ್ನು ಹೈಲೆಟ್ ಮಾಡುವಂತಹ ಬೆಸ್ಟ್ ಫ್ರೇಮ್ ಇದೆ ಮತ್ತು ಕೈಗಳಿಗೆ ಹೆಚ್ಚು ಆರಾಮದಾಯಕ ಅನುಭವವನ್ನು ನೀಡುತ್ತದೆ.ಹಿಂಭಾಗದ ಪೆನಲ್ ಗ್ರೇಡಿಯಂಟ್ ಕಲರ್ ಡಿಸೈನ್ ನ್ನು ಹೊಂದಿದೆ. ಎಮರಾಲ್ಡ್ ಗ್ರೀನ್ ಕಲರ್ ನ ಆವೃತ್ತಿಯಲ್ಲೂ ಕೂಡ ಫೋನ್ ಬರಲಿದ್ದು ನ್ಯಾನೋ ಪ್ಯಾಟರ್ನ್ ಡಿಸೈನ್ ನ್ನು ಹೊಂದಿದೆ ಜೊತೆಗೆ ಕೈಯಲ್ಲಿ ಗಟ್ಟಿಯಾಗಿ ಹಿಡಿಯಬಹುದಾಗಿದ್ದು ಜಾರಿಹೋಗದಂತ ಡಿಸೈನ್ ನ್ನು ಮಾಡಲಾಗಿದೆ.

  3ಡಿ ಸೆಲ್ಫೀ ಗೆ ಅವಕಾಶ:

  ಮೇಟ್ 20 ಪ್ರೋ 6.39 ಇಂಚಿನ 2ಕೆ+ (1440x3120) OLED ಡಿಸ್ಪ್ಲೇಯನ್ನು ಹೊಂದಿದೆ ಜೊತೆಗೆ 538 ppi ಪಿಕ್ಸಲ್ ಡೆನ್ಸಿಟಿ ಮತ್ತು 86.90 ಸ್ಕ್ರೀನ್ ಟು ಬಾಡಿ ಅನುಪಾತವಿದೆ. ಡಿಸ್ಪ್ಲೇಯಲ್ಲಿ ಅಗಲವಾದ ನಾಚ್ ಇದೆ ಅದು ಹಲವು ಸೆನ್ಸರ್ ಗಳನ್ನು ಒಳಗೊಂಡಿದೆ ಉದಾಹರಣೆಗೆ ಫ್ಲಡ್ ಇಲ್ಯೂಮಿನೇಟರ್, ಡಾಟ್ ಪ್ರೊಜೆಕ್ಟರ್, ಐಆರ್ ಕ್ಯಾಮರಾಗಳು, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಸೆಲ್ಫೀ ಕ್ಯಾಮರಾಗಳು. ಇದರಲ್ಲಿನ ಕೆಲವು ಸೆನ್ಸರ್ ಗಳನ್ನು 3ಡಿ ಫೇಸ್ ಅನ್ ಲಾಕ್ ಗೆ ಬಳಸಲಾಗುತ್ತದೆ ಮತ್ತು 3ಡಿ ಮಾಡೆಲ್ ನಲ್ಲಿ ಮುಖವನ್ನು ಡಿಟೆಕ್ಟ್ ಮಾಡಿ ಸೆಲ್ಫೀ ಕ್ಲಿಕ್ಕಿಸಿಕೊಳ್ಳುವುದಕ್ಕೆ ನೆರವಾಗುತ್ತದೆ.

  ನೂತನ Kirin 980 ಚಿಪ್ ಸೆಟ್ ನ್ನು ಇದು ಹೊಂದಿದ್ದು 7nm ಪ್ರೊಸೆಸ್ ನೊಂದಿಗೆ ಉತ್ತಮ ಪ್ರದರ್ಶನಕ್ಕೆ ನೆರವು ನೀಡುತ್ತದೆ ಮತ್ತು ಕಡಿಮೆ ಶಕ್ತಿ ಸಾಮರ್ಥ್ಯ ಬಳಸುತ್ತದೆ. ಚಿಪ್ ಸೆಟ್ ಡುಯಲ್ NPU ಹೊಂದಿದ್ದು ನೂತನ ಎಐ ಕಂಪ್ಯೂಟೇಷನ್ ನ್ನು ಒಳಗೊಂಡಿದೆ.

  ಮೇಟ್ 20 ಪ್ರೋ 6ಜಿಬಿ RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದ್ದು ಅಗತ್ಯವಿದ್ದರೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಸ್ಟೋರೇಜ್ ನ್ನು ಹಿಗ್ಗಿಸಿಕೊಳ್ಳಬಹುದಾಗಿದೆ.

  ಟ್ರಿಪಲ್ ಕ್ಯಾಮರಾ ವ್ಯವಸ್ಥೆ:

  ಎಲ್ಲಕ್ಕಿಂತ ಪ್ರಮುಖ ಹೈಲೆಟ್ ಅಂದರೆ ಮೇಟ್ 20 ಪ್ರೋ ನಲ್ಲಿ ಟ್ರಿಪಲ್ ಹಿಂಭಾಗದ ಕ್ಯಾಮರಾವಿದೆ ಮತ್ತು ಅದು Leica- ಬ್ರಾಂಡೆಡ್ ಆಗಿದೆ. ಇದು 40MP ವೈಡ್-ಆಂಗಲ್ ಲೆನ್ಸ್ ಜೊತೆಗೆ f/1.8 ಅಪರ್ಚರ್, 20MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಜೊತೆಗೆ f/2.2 ಅಪರ್ಚರ್ ಮತ್ತು 8MP ಟೆಲಿಫೋಟೋ ಲೆನ್ಸ್ ಜೊತೆಗೆ f/2.4 ಅಪರ್ಚರ್ ನ್ನು ಹೊಂದಿದೆ. ಕ್ಯಾಮರಾ ಗಳು ಲೇಸರ್ ಮತ್ತು ಫೇಸ್ ಡಿಟೆಕ್ಷನ್ ಆಟೋ ಫೋಕಸ್ ನ್ನು ಬೆಂಬಲಿಸುತ್ತದೆ ಮತ್ತು AIS (AI-based stabilisation) ನ್ನು ಹೊಂದಿದೆ. ಮುಂಭಾಗದಲ್ಲಿ ಮೇಟ್ 20 ಪ್ರೋ 24MP 3D ಡೆಪ್ತ್ ಇರುವ ಸೆನ್ಸಿಂಗ್ ಕ್ಯಾಮರಾವನ್ನು ಹೊಂದಿದೆ.

  ಬೆಸ್ಟ್ ಫೋಟೋಗ್ರಫಿಗೆ ನೆರವು:

  ಹುವಾಯಿ ಯಲ್ಲಿ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ಕ್ಲಿಕ್ಕಿಸುವುದಕ್ಕೆ ನೆರವಾಗುವ ಹಲವು ವಿಶಿಷ್ಟತೆಗಳಿದೆ.ಸೂಪರ್ HDR ಮೋಡ್ ಇದ್ದು ಹಗಲಿನ ಬೆಳಕಿನಲ್ಲೂ ಕೂಡ ಕ್ರಿಸ್ಪ್ ಆಗಿರುವ ಫೋಟೋವನ್ನು ಕ್ಲಿಕ್ಕಿಸಲು ಸಹಕಾರಿಯಾಗಿದೆ. ಎಐ ಮೂಲಕ ಹಾಲಿವುಡ್ ನಂತಹ ಎಫೆಕ್ಟ್ ನ್ನು ನೀಡಬಹುದು. ಇವಿಷ್ಟೇ ಅಲ್ಲದೆ ಇನ್ನೂ ಹಲವು ಮೋಡ್ ಗಳು ಕ್ಯಾಮರಾವನ್ನು ಮತ್ತಷ್ಟು ಬಲಿಷ್ಟಗೊಳಿಸಿದೆ.

  ಕ್ಯಾಮರಾದಲ್ಲಿ 16~270mm ವೈಡ್ ರೇಂಜಿನ ಫೋಕಲ್ ಲೆಂಥ್ ಇದೆ. ಟೆಲಿಫೋಟೋ ಲೆನ್ಸ್ 3x ಆಪ್ಟಿಕಲ್ ಝೂಮ್ ಮತ್ತು 5x ಹೈಬ್ರಿಡ್ ಝೂಮ್ ಗೆ ಬೆಂಬಲ ನೀಡುತ್ತದೆ.

  ಮೂರು ಕ್ಯಾಮರಾ ಸಿಸ್ಟಮ್ ನಿಂದಾಗಿ ಹುವಾಯಿ ಅಲ್ಟ್ರಾ ವೈಡ್ ಪನೋರಮಾ ಮತ್ತು ಮ್ಯಾಕ್ರೋ ಫೋಟೋಗ್ರಫಿಯನ್ನು ಅಲ್ಟ್ರಾ ವೈಡ್ ಲೆನ್ಸ್ ಮೂಲಕ ಅತ್ಯಂತ ಹತ್ತಿರ ಅಂದರೆ 2.5ಸೆಂಮೀನಲ್ಲಿ ತೆಗೆಯಲು ಅವಕಾಶ ನೀಡುತ್ತದೆ.

  ರಿವರ್ಸ್ ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ:

  ಮೇಟ್ 20 ಪ್ರೋ 4,200mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ ಜೊತೆಗೆ 40W ಸೂಪರ್ ಚಾರ್ಜ್ ಗೆ ಬೆಂಬಲಿಸುತ್ತದೆ. ಇದರ ಜೊತೆಗೆ 15W ವಯರ್ ಲೆಸ್ ಚಾರ್ಜಿಂಗ್ ಕೂಡ ಬೆಂಬಲ ನೀಡುತ್ತದೆ. ಭಾರತಕ್ಕೂ ಕೂಡ ಹುವಾಯಿ ವಯರ್ ಲೆಸ್ ಚಾರ್ಜರ್ ವ್ಯವಸ್ಥೆಯನ್ನು ತರುತ್ತಿದೆ. ಬಹಳ ಗಮನಿಸಬೇಕಾಗಿರುವ ವೈಶಿಷ್ಟ್ಯತೆಯೆಂದರೆ ರಿವರ್ಸ್ ವಯರ್ ಲೆಸ್ ಚಾರ್ಜಿಂಗ್ ಗೆ ಈ ಫೋನ್ ಬೆಂಬಲ ನೀಡುತ್ತದೆ.

  ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ಮೇಟ್ 20 ಪ್ರೋ 4G LTE, ಹೈಬ್ರಿಡ್ SIM ಸ್ಲಾಟ್, , ವೈ-ಫೈ 802.11ac, ಬ್ಲೂಟೂತ್ 5.0, GPS, GLONASS ಮತ್ತು USB Type-C ಗೆ ಬೆಂಬಲಿಸುತ್ತದೆ. ಇದರಲ್ಲಿ EMUI 9 ಆಧಾರಿತ ಆಂಡ್ರಾಯ್ಡ್ 9 ಪೈ ಇದೆ.

  200 ಮಿಲಿಯನ್ ಶಿಪ್ಪಿಂಗ್ ಗುರಿ:

  ಕಾರ್ಯಕ್ರಮದಲ್ಲಿ ಹುವಾಯಿ ಹೇಳಿರುವಂತೆ ಸುಮಾರು 100 ಮಿಲಿಯನ್ ಡಿವೈಸ್ ಗಳನ್ನು 2018 ರ ಜುಲೈ ಗೆ ಶಿಪ್ ಮಾಡಲಾಗಿದೆ ಇನ್ನು ಈ ವರ್ಷದ ಅತ್ಯಂಕ್ಕೆ 200 ಮಿಲಿಯನ್ ಗುರಿ ತಲುಪುವ ಸಾಧ್ಯತೆ ಇದೆ. ಭಾರತದಲ್ಲೂ ಕೂಡ ಮೇಟ್ 20 ಪ್ರೋ ಗೆ ಧನಾತ್ಮಕ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ಹುವಾಯಿ ಸಂಸ್ಥೆ ಇದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Huawei Mate 20 Pro with triple rear cameras, Kirin 980 AI chip launched in India at Rs 69,990

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more