ಒಂದುವರೆ ಲಕ್ಷದ ಹುವಾಯಿ ಮೇಟ್ ಎಕ್ಸ್ ಮಡಚುವ ಸ್ಮಾರ್ಟ್ ಫೋನ್ ಈ ವರ್ಷ ಬಿಡುಗಡೆ

By Gizbot Bureau
|

2019 ರ ದ್ವಿತಿಯಾರ್ಧದಲ್ಲಿ ಹುವಾಯಿ ಸಂಸ್ಥೆಯ ಮೊದಲ ಮಡಚುವ ಸ್ಮಾರ್ಟ್ ಫೋನ್ ಮೇಟ್ ಎಕ್ಸ್ ನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಇದನ್ನು ವಿಶ್ವದ ಮೊದಲ 5ಜಿ ಮಡಚುವ ಸ್ಮಾರ್ಟ್ ಫೋನ್ ಎಂದು ಹೇಳಲಾಗಿದ್ದು ಹುವಾಯಿ ಮೇಟ್ ಎಕ್ಸ್ 8 ಇಂಚಿನ ಟ್ಯಾಬ್ಲೆಟ್ ಆಗಿದ್ದು ಮಡಚಿದಾಗ 6.6 ಇಂಚಿನ ಫುಲ್ ಸ್ಕ್ರೀನ್ ಸ್ಮಾರ್ಟ್ ಫೋನ್ ಆಗುತ್ತದೆ.

ಒಂದುವರೆ ಲಕ್ಷದ ಹುವಾಯಿ ಮೇಟ್ ಎಕ್ಸ್ ಮಡಚುವ ಸ್ಮಾರ್ಟ್ ಫೋನ್ ಈ ವರ್ಷ ಬಿಡುಗಡೆ

ಇದುವರೆಗೂ ಮೇಟ್ ಎಕ್ಸ್ ನ ಬೆಲೆ ಭಾರತದಲ್ಲಿ ಎಷ್ಟಾಗಿರುತ್ತದೆ ಎಂಬ ಬಗ್ಗೆ ಕಂಪೆನಿ ತುಟಿಬಿಚ್ಚಿಲ್ಲ.ಆದರೆ ಹುವಾಯಿ ಮೇಟ್ ಎಕ್ಸ್ ನ್ನು 2,299 ಯುರೋಸ್ ಗೆ ಅಂದರೆ ಅಂದಾಜು Rs 1.80 ಲಕ್ಷ ರುಪಾಯಿಗೆ ಬಿಡುಗಡೆಗೊಳಿಸಲಾಗುತ್ತದೆ ಎಂದು ಫೆಬ್ರವರಿಯಲ್ಲಿ ನಡೆದ ಮೊಬೈಲ್ ವಲ್ರ್ಡ್ ಕಾಂಗ್ರೆಸ್ 2019 ರಲ್ಲಿ ಹೇಳಲಾಗುತ್ತಿದೆ.

ಹುವಾಯಿ ಮೇಟ್ ಎಕ್ಸ್ 5ಜಿ ಫೋನಿನ ಸಾಮರ್ಥ್ಯಗಳು

ಹುವಾಯಿ ಮೇಟ್ ಎಕ್ಸ್ 5ಜಿ ಫೋನಿನ ಸಾಮರ್ಥ್ಯಗಳು

ಹುವಾಯಿ ಮೇಟ್ ಎಕ್ಸ್ ಬಲಾಂಗ್ 5000ಮಾಡೆಮ್ ಕೆಪಾಸಿಟಿಯನ್ನು ಹೊಂದಿದೆ. ಇದು ವಿಶ್ವದ ಮೊದಲ ಮೋಡ್ 5G SoC ಜೊತೆಗೆ 7nm ಪ್ರೊಸೆಸ್ ನ್ನು ಒಳಗೊಂಡಿದೆ. ಈ ಮಾಡೆಮ್ 2G, 3G, 4G ಮತ್ತು 5G ಕನೆಕ್ಟಿವಿಟಿಯನ್ನು ಬೆಂಬಲಿಸುತ್ತದೆ. "ಬಲಾಂಗ್ 5000 ಇಂಡಸ್ಟ್ರಿಯ ಬೆಂಚ್ ಮಾರ್ಕ್ ನಲ್ಲಿ 5ಜಿ ಪೀಕ್ ಡೌನ್ ಲೇಡ್ ರೇಟ್ ಹೊಂದಿರುವ ಮೊದಲ ಮಾಡೆಮ್ ಆಗದ್ದು ಇದು 4.6Gbps ನ್ನು Sub-6GHz ( ಕಡಿಮೆ ಫ್ರೀಕ್ವೆನ್ಸಿಯ ಬ್ಯಾಂಡ್, 5G ಪ್ರಮುಖ ಫ್ರೀಕ್ವೆನ್ಸಿ ಬ್ಯಾಂಡ್) ಯಲ್ಲಿ ಸಹಕರಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಇದರ ಜೊತೆಗೆ ಬಲಾಂಗ್ 5000 ಚಿಪ್ ಸೆಟ್ SA (Standalone) ಮತ್ತು NSA (Non-Standalone) ಯನ್ನು 5ಜಿ ನೆಟ್ ವರ್ಕ್ ನಲ್ಲಿ ನಿರಂತರವಾಗಿ ಬೆಂಬಲಿಸುತ್ತದೆ ಜೊತೆಗೆ ವಿಭಿನ್ನ ರೀತಿಯ ಹಾರ್ಡ್ ವೇರ್ ಅಗತ್ಯತೆಯನ್ನು ಅಡಾಪ್ಟ್ ಮಾಡಿಕೊಳ್ಳಲು ಇದು ಸಾಮರ್ಥ್ಯವನ್ನು ಹೊಂದಿದೆ ಮತ್ತು ಟೆಲಿಕಾಂ ಆಪರೇಟರ್ ಗಳಿಗೆ ಮತ್ತು ಬಳಕೆದಾರರಿಗೆ ಫಾರ್ಮೆಟ್ ಮಾಡುತ್ತದೆ.

ಹುವಾಯಿ ಮೇಟ್ ಎಕ್ಸ್ ನಲ್ಲಿ ಫೋಲ್ಡೇಬಲ್ ಡಿಸ್ಪ್ಲೇ ಹೇಗೆ ಕೆಲಸ ಮಾಡುತ್ತದೆ?

ಹುವಾಯಿ ಮೇಟ್ ಎಕ್ಸ್ ನಲ್ಲಿ ಫೋಲ್ಡೇಬಲ್ ಡಿಸ್ಪ್ಲೇ ಹೇಗೆ ಕೆಲಸ ಮಾಡುತ್ತದೆ?

ಹುವಾಯಿ ಮೇಟ್ ಎಕ್ಸ್ ಸ್ಮಾರ್ಟ್ ಫೋನ್ 8 ಇಂಚಿನ ಟ್ಯಾಬ್ಲೆಟ್ ಆಗಿ ಫೋಲ್ಡ್ ಮಾಡದೆಯೂ ಬಳಸಬಹುದು ಅಥವಾ ಪೋಲ್ಡ್ ಮಾಡಿ 6.6 ಇಂಚಿನ ಸ್ಮಾರ್ಟ್ ಫೋನ್ ಆಗಿ ಕೂಡ ಬಳಸಲು ಅವಕಾಶವಿರುತ್ತದೆ. ಆದರೆ ಮೇಟ್ ಎಕ್ಸ್ ಪ್ಲಾಸ್ಟಿಕ್ ಡಿಸ್ಪ್ಲೇ ಹೊಂದಿರುತ್ತದೆ ಗ್ಲಾಸ್ ಡಿಸ್ಪ್ಲೇಯನ್ನು ಇದು ಒಳಗೊಂಡಿರುವುದಿಲ್ಲ.

ಯಾವಾಗ ನೀವು ಡಿವೈಸ್ ನ್ನು ಫೋಲ್ಡ್ ಮಾಡುತ್ತೀರೋ ಆಗ ಡಿಸ್ಪ್ಲೇಯ ಹಿಂಭಾಗ ಸ್ವಯಂಚಾಲಿತವಾಗಿ ಕಪ್ಪಾಗುತ್ತದೆ. ಈ ಫೋಲ್ಡ್ ಮಾಡುವ ಮೆಕಾನಿಸಂ ಮೆಕಾನಿಕಲ್ ಹಿಂಗ್ ನಿಂದ ಅನೇಬಲ್ ಆಗಿರುತ್ತದೆ ಇದನ್ನು ಹುವಾಯಿ ಸಂಸ್ಥೆ "ಫಾಲ್ಕನ್ ವಿಂಗ್ ಮೆಕಾನಿಕಲ್ ಹಿಂಗ್" ಎಂದು ಕರೆಯುತ್ತದೆ.

ಹುವಾಯಿ ಮೇಟ್ ಎಕ್ಸ್ ನ ಇತರೆ ಫೀಚರ್ ಗಳು

ಹುವಾಯಿ ಮೇಟ್ ಎಕ್ಸ್ ನ ಇತರೆ ಫೀಚರ್ ಗಳು

ಹುವಾಯಿ ಮೇಟ್ ಎಕ್ಸ್ ಒಂದು ಭಾಗದಲ್ಲಿ ದಪ್ಪಾಗಿರುತ್ತದೆ ಮತ್ತು ಅಲ್ಲಿ ಕ್ಯಾಮರಾ ಸೆನ್ಸರ್ ಗಳು, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಗಳು, ಚಾರ್ಜಿಂಗ್ ಪೋರ್ಟ್ ಇತ್ಯಾದಿಗಳನ್ನು ಅಳವಡಿಸಲಾಗಿರುತ್ತದೆ ಮತ್ತು ಇನ್ನೊಂದೆಡೆ 5.4mm ತೆಳು ಎಡ್ಜ್ ಇರುತ್ತದೆ. ಡಿವೈಸ್ ಲೈಕಾ ಕ್ಯಾಮರಾ ಮಾಡ್ಯೂಲ್ ಜೊತೆಗೆ ಮೂರು ಲೆನ್ಸ್ ಗಳನ್ನು ಹೊಂದಿರುತ್ತದೆ.

ಪ್ರೈಮರಿ 40MP ಸೆನ್ಸರ್ ಜೊತೆಗೆ 16MP ಮತ್ತು 8MP ಸೆಕೆಂಡರಿ ಸೆನ್ಸರ್ ನ್ನು ಹೊಂದಿರುತ್ತದೆ. ಇದೇ ಕ್ಯಾಮರಾವನ್ನು ಸೆಲ್ಫೀ ಕ್ಯಾಮರಾವಾಗಿ ಕೂಡ ಬಳಕೆ ಮಾಡಬಹುದು. ಕುತೂಹಲಕಾರಿ ವಿಚಾರವೆಂದರೆ ಡಿವೈಸ್ ನ್ನು ಫೋಲ್ಡ್ ಮಾಡಿದಾಗ ವ್ಯೂಫೈಂಡರ್ ನ್ನು ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ತೋರಿಸುತ್ತದೆ.

ಪೋಲ್ಡೇಬಲ್ ಸ್ಮಾರ್ಟ್ ಫೋನ್ ಎರಡು ಬ್ಯಾಟರಿಯನ್ನು ಹೊಂದಿದೆ ಮತ್ತು ಇದರ ಕೆಪಾಸಿಟಿ 4,500mAh ಜೊತೆಗೆ ಫಾಸ್ಟ್ ಚಾರ್ಜಿಂಗ್ ಫೀಚರ್ ನ್ನು ಇದು ಹೊಂದಿದೆ. ಇದು 55W ಸೂಪರ್ ಚಾರ್ಜ್ ಅಡಾಪ್ಟರ್ ನ್ನು ಹೊಂದಿದೆ ಮತ್ತು 85% ಬ್ಯಾಟರಿ ಲೈಫ್ ನ್ನು ಕೇವಲ 30 ನಿಮಿಷ ಚಾರ್ಜ್ ಮಾಡುವುದರಿಂದ ಲಭ್ಯವಾಗುತ್ತದೆ. ಹುವಾಯಿ ಹೇಳುವ ಪ್ರಕಾರ ಮೇಟ್ ಎಕ್ಸ್ ನ ಚಾರ್ಜರ್ ಬಳಸಿ ಲ್ಯಾಪ್ ಟಾಪ್ ನ್ನು ಕೂಡ ಚಾರ್ಜ್ ಮಾಡಬಹುದು ಎಂದು ತಿಳಿಸಿದೆ.

ಹುವಾಯಿ ಮೇಟ್ ಎಕ್ಸ್ 1.8GHz ಆಕ್ಟಾ ಕೇರ್ ಹೈಸಿಲಿಕಾನ್ ಕಿರಿನ್ 980 ಪ್ರೊಸೆಸರ್ ಜೊತೆಗೆ 8GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯಲ್ಲಿ ರನ್ ಆಗುತ್ತದೆ. ಹುವಾಯಿ ಮೇಟ್ ಎಕ್ಸ್ ಸ್ಮಾರ್ಟ್ ಕೇಸ್ ಪ್ರೊಟೆಕ್ಷನ್ ನ್ನು ಹೊಂದಿದೆ ಮತ್ತು ಇದು ಇಂಟರ್ಸ್ಟೆಲ್ಲರ್ ಬ್ಲೂ ಕಲರ್ ನಲ್ಲಿ ಲಭ್ಯವಾಗುತ್ತದೆ.

Best Mobiles in India

Read more about:
English summary
Huawei Mate X foldable 5G Android phone to launch in India later this year

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X