39,999 ರುಪಾಯಿಯ ಹುವಾಯಿ ಪಿ9 ಸ್ಮಾರ್ಟ್ ಫೋನಿನ ಬಗ್ಗೆ ನಿಮಗೆ ತಿಳಿದಿರಬೇಕಾದ ಹತ್ತು ಸಂಗತಿಗಳು
ಶೆನ್ಝೆನ್ ಮೂಲದ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಹುವಾಯಿ ಬಹುನಿರೀಕ್ಷಿತ ಪಿ9 ಫೋನನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಈ ಸಾಧನದ ಪ್ರಮುಖಾಂಶವೆಂದರೆ ಲೈಕಾದಿಂದ ಪ್ರಮಾಣೀಕೃತವಾದ ಲೈಕಾ ಸಮ್ಮರಿಟ್ ಲೆನ್ಸುಗಳನ್ನು ಹೊಂದಿದ ಉತ್ಕೃಷ್ಟ ಚಿತ್ರಗಳನ್ನು ನೀಡುವ ಡುಯಲ್ ಕ್ಯಾಮೆರಾಗಳನ್ನು ಹಿಂಬದಿಯಲ್ಲಿ ಹೊಂದಿರುವುದು. ಅಮೆಜಾನ್ ಫ್ಯಾಷನ್ ವಾರದ ಅಧಿಕೃತ ಸ್ಮಾರ್ಟ್ ಫೋನ್ ಈ ಹುವಾಯಿ ಪಿ9.

ಕೆಲವು ತಿಂಗಳ ಹಿಂದೆ, ಲಂಡನ್ನಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುವಾಯಿ ಪಿ9 ಪ್ಲಸ್ ಫೋನನ್ನು ಬಿಡುಗಡೆಗೊಳಿಸಿತ್ತು. ಪೂರ್ತಿ ಮೆಟಲ್ ದೇಹವನ್ನೊಂದಿರುವ ಸ್ಮಾರ್ಟ್ ಫೋನಿನಲ್ಲಿ 3ಡಿ ಸೌಕರ್ಯವಿರುವ ಬೆರಳಚ್ಚು ಸಂವೇದಕವಿದ. ಈ ಸಂವೇದಕ ಫೋನಿನ ಹಿಂಬದಿಯಲ್ಲಿದೆ.

ಕಂಪನಿಯ ಪ್ರಕಾರ, ಈ ಬೆರಳಚ್ಚು ಸಂವೇದಕವು 3ಡಿ ಸೆನ್ಸಿಂಗ್ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಮೊಬೈಲಿಗೆ ಹೆಚ್ಚಿನ ರಕ್ಷಣೆಯನ್ನು ನೀಡುತ್ತದೆ. ಜೊತೆಗೆ ಈ ಸಂವೇದಕದಲ್ಲಿ ನಾಲ್ಕು ಹಂತಗಳಿವೆ – ರಿಡ್ಜ್ ಫ್ಲೋ, ರಿಡ್ಜ್ ಫಾರ್ಮೇಷನ್, ರಿಡ್ಜ್ ಪಾಥ್ ಹಾಗೂ ರಿಡ್ಜ್ ಡೆಪ್ತ್.
ಓದಿರಿ: ಸ್ಮಾರ್ಟ್‌ಫೋನ್ ಪ್ರಿಯರೇ ಹುವಾವೆಯಲ್ಲಿದೆ ವಿಶಿಷ್ಟ ಕ್ಯಾಮೆರಾ ಲೆನ್ಸ್
ಹುವಾಯಿಯ ಈ ಹೊಚ್ಚ ಹೊಸ ಫೋನಿನ ಹತ್ತು ಗುಣಲಕ್ಷಣಗಳನ್ನಿಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ಕಣ್ಣಾಡಿಸಿ!


Click it and Unblock the Notifications








