ಸ್ಮಾರ್ಟ್‌ಫೋನ್ ಪ್ರಿಯರೇ ಹುವಾವೆಯಲ್ಲಿದೆ ವಿಶಿಷ್ಟ ಕ್ಯಾಮೆರಾ ಲೆನ್ಸ್

By Shwetha
|

ಇಂದಿನ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ಬರಿಯ ಕರೆಗೆ ಮಾತ್ರ ಸೀಮಿತವಾಗಿರದೇ ಬಹಳಷ್ಟು ಕಾರ್ಯಗಳನ್ನು ನಡೆಸುತ್ತಿವೆ. ಸ್ಮಾರ್ಟ್ ಉತ್ಪನ್ನಗಳು ಮತ್ತು ತಂತ್ರಜ್ಞಾನ ದೈನಂದಿನ ದಿನಚರಿಯಲ್ಲಿ ಬಳಕೆಯಾಗುತ್ತಿರುವಂತೆಯೇ ಇದನ್ನು ಬಳಸುವ ಬಳಕೆದಾರರು ಹೆಚ್ಚು ಸ್ಮಾರ್ಟ್ ಆಗುತ್ತಿದ್ದಾರೆ.

ಓದಿರಿ: ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಹುವಾವೆಯೇ ಅರಸ

ಇಂದು ಮಾರುಕಟ್ಟೆಗೆ ಬರುತ್ತಿರುವ ಸ್ಮಾರ್ಟ್‌ಫೋನ್‌ಗಳು ಹಲವಾರು ರೂಪದಲ್ಲಿ ಬಳಕೆದಾರರಿಗೆ ಸ್ನೇಹಿತ ಎಂದೆನಿಸಿವೆ. ವಾಚ್, ಕ್ಯಾಮೆರಾ, ಡೆಸ್ಕ್‌ಟಾಪ್ ಅಥವಾ ಮ್ಯೂಸಿಕ್ ಪ್ಲೇಯರ್ ಹೀಗೆ ಬೇರೆ ಬೇರೆ ಪಾತ್ರಗಳನ್ನು ನಿಭಾಯಿಸುವಲ್ಲಿ ಎತ್ತಿದ ಕೈ ಎಂದೆನಿಸಿವೆ. ಅಂತೂ ಸ್ಮಾರ್ಟ್‌ಫೋನ್‌ಗಳು ಬಂದ ನಂತರ ಕ್ಯಾಮೆರಾಗಳಿಗೆ ಭರ್ಜರಿ ಪೈಪೋಟಿ ಉಂಟಾಗಿದೆ ಎಂದೇ ಹೇಳಬಹುದು. ಸ್ಮಾರ್ಟ್‌ಫೋನ್‌ಗಳಲ್ಲಿ ಬರುತ್ತಿರುವ ಲೆನ್ಸ್‌ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು ಇನ್ನಷ್ಟು ಆಸಕ್ತಿಕರವಾಗಿ ಬಳಕೆದಾರರಿಗೆ ಫೋಟೋ ತೆಗೆಯಲು ಅನುಕೂಲವನ್ನು ಒದಗಿಸುತ್ತವೆ.

ಓದಿರಿ: ಫೋನ್ ಭದ್ರತೆಯಲ್ಲಿ ಎತ್ತಿದ ಕೈ: ಹುವಾವೆ ಹೋನರ್ 7

ಇಂದಿನ ಲೇಖನದಲ್ಲಿ ಕ್ಯಾಮೆರಾ ಫೋನ್ ಆಗಿಯೇ ಪ್ರಸಿದ್ಧತೆಯನ್ನು ಪಡೆದುಕೊಂಡಿರುವ ಲೇಯಿಕಾದ ಬಗ್ಗೆ ಕೆಲವೊಂದು ಅಂಶಗಳನ್ನು ತಿಳಿಸುತ್ತಿದ್ದೇವೆ. ಪ್ರಮುಖ ಸ್ನ್ಯಾಪ್‌ಶಾಟ್ ಫೋಟೋಗ್ರಫಿಯಲ್ಲಿ ಹೆಸರು ಗಳಿಸಿಕೊಂಡಿರುವ ಈ ಕಂಪೆನಿಯು ಹುವಾವೆಯೊಂದಿಗೆ ಒಗ್ಗೂಡಿ ಹೊಸ ಬೆಂಚ್ ಮಾರ್ಕ್ ಅನ್ನು ಸಿದ್ಧಪಡಿಸಲಿದ್ದು ಫೋಟೋಗ್ರಫಿ ಕ್ಷೇತ್ರದಲ್ಲೇ ಮಹತ್ ಸಾಧನೆಯನ್ನು ಇದು ಮಾಡಲಿದೆ.

ಟ್ರೆಂಡ್ ಸೆಟ್ಟರ್

ಟ್ರೆಂಡ್ ಸೆಟ್ಟರ್

ಹುವಾವೆಯು ಟ್ರೆಂಡ್ ಸೆಟ್ಟರ್ ಎಂದೇ ಕರೆಯಿಸಿಕೊಂಡಿದ್ದು ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲೇ ಹೊಸ ಬೆಂಚ್ ಮಾರ್ಕ್ ಅನ್ನು ಮಾಡಿದೆ. ಗರಿಷ್ಟ ಪೇಟೆಂಟ್‌ಗಳನ್ನು ಗಳಿಸಿಕೊಳ್ಳುವ ಮೂಲಕ ಚೀನಾದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಮಾನ್ಯತೆಯನ್ನು ಗಳಿಸಿಕೊಂಡಿದೆ. ತನ್ನ ಅನ್ವೇಷಕ ಮತ್ತು ವಿಶೇಷ ಅಂಶಗಳಿಂದ ಈ ಫೋನ್ ಜಾಗತಿಕ ಫೋನ್ ರಂಗದಲ್ಲಿ ಉತ್ತಮ ಹೆಸರನ್ನು ಗಳಿಸಿಕೊಂಡಿದೆ.

ಡ್ಯುಯಲ್ ಲೇಯಿಕಾ ಲೆನ್ಸ್‌

ಡ್ಯುಯಲ್ ಲೇಯಿಕಾ ಲೆನ್ಸ್‌

ತನ್ನ ಫ್ಲ್ಯಾಗ್‌ಶಿಪ್ ಫೋನ್ ಆದ ಹುವಾವೆ ಪಿ9 ಹೆಚ್ಚು ಗ್ರಾಹಕರನ್ನು ಸೆಳೆದಿದ್ದು, ತನ್ನ ಸ್ಪರ್ಧಿಗಳನ್ನು ಸೋಲಿಸುವ ನಿಟ್ಟಿನಲ್ಲಿ ಸಜ್ಜಾಗಿದೆ. ತನ್ನ ಪಿ9 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಕಂಪೆನಿ ಹೊರತರಲಿದ್ದು ಡ್ಯುಯಲ್ ಲೇಯಿಕಾ ಲೆನ್ಸ್‌ನೊಂದಿಗೆ ಬರಲಿದೆ. ಇದು ಅದ್ಭುತ ಫೋಟೋಗ್ರಫಿ ಅನುಭವವನ್ನು ಬಳಕೆದಾರರಿಗೆ ನೀಡಲಿದೆ.

ಲೇಯಿಕಾ ಪ್ರಯಾಣ

ಲೇಯಿಕಾ ಪ್ರಯಾಣ

ವೈಜ್ಞಾನಿಕ ಸಂಶೋಧನೆಗಾಗಿ ಮೈಕ್ರೋಸ್ಕೋಪ್ ಲೆನ್ಸ್‌ಗಳನ್ನು ಅನ್ವೇಷಿಸಲು ಲೇಯಿಕಾ ಆರಂಭದಲ್ಲಿ ತನ್ನನ್ನು ತೊಡಗಿಸಿಕೊಂಡಿತು. ಇದರ ಸ್ಥಾಪಕರಾದ ಎರ್ನಸ್ಟ್ ಲಿಟ್ಜ್ ಹೆಸರಿನಲ್ಲೇ ಇದು ಮನೆಮಾತಾಯಿತು. 1925 ರಲ್ಲಿ ಇದು ಪ್ರಥಮ 35 ಎಮ್‌ಎಮ್ ಕ್ಯಾಮೆರಾವನ್ನು ಸಿದ್ಧಪಡಿಸಿತು. ಇದನ್ನು ಯಶಸ್ಸನ್ನು ಗಳಿಸಿದ ನಂತರ ಫೋಟೋಗ್ರಫಿ ರಂಗವನ್ನೇ ಈ ಕಂಪೆನಿ ಬದಲಾಯಿಸಿತು.

ಹೊಸ ಹೆಸರಾದ ಲೇಯಿಕಾ

ಹೊಸ ಹೆಸರಾದ ಲೇಯಿಕಾ

ನಂತರ, ಲೇಯಿಕಾಕ್ಕೆ ತನ್ನ ಹೆಸರನ್ನು ಬದಲಾಯಿಸಿಕೊಂಡ ನಂತರ, ಕಂಪೆನಿ ಅತ್ಯುತ್ತಮ ಯಶಸ್ಸನ್ನೇ ಕಂಡುಕೊಂಡಿತು. ಎರ್ನಸ್ಟ್ ಲಿಟ್ಜ್‌ನ ಮೊದಲ ಮೂರು ಅಕ್ಷರಗಳು ಮತ್ತು ಲಿಟ್ಜ್ ಸರ್‌ನೇಮ್ ಅನ್ನು ಇಟ್ಟುಕೊಂಡು ಕಂಪೆನಿ ಹೊಸ ಹೆಸರಾದ ಲೇಯಿಕಾಕ್ಕೆ ತನ್ನನ್ನು ಬದಲಾಯಿಸಿಕೊಂಡಿತು.

ಸ್ನ್ಯಾಪ್‌ಶಾಟ್ ಫೋಟೋಗ್ರಫಿ ಬದಲಾವಣೆ

ಸ್ನ್ಯಾಪ್‌ಶಾಟ್ ಫೋಟೋಗ್ರಫಿ ಬದಲಾವಣೆ

ಲೇಯಿಕಾ ಕ್ಯಾಮೆರಾದ ಹುಟ್ಟಿನ ನಂತರ ಸ್ನ್ಯಾಪ್‌ಶಾಟ್ ಫೋಟೋಗ್ರಫಿ ಬದಲಾವಣೆಯನ್ನು ಕಂಡುಕೊಂಡಿತು. ಫೋಟೋಗ್ರಫಿ ಕ್ಷೇತ್ರದಲ್ಲೇ ಮಹತ್ತರ ಸಾಧನೆಯನ್ನು ಲೇಯಿಕಾ ಮಾಡಿತು.

ಪೋಟೋಗ್ರಾಫರ್‌ನ ಕನಸು

ಪೋಟೋಗ್ರಾಫರ್‌ನ ಕನಸು

ಲೇಯಿಕಾ ಬ್ರ್ಯಾಂಡ್ ಪ್ರತಿಯೊಬ್ಬ ಫೋಟೋಗ್ರಾಫರ್‌ನ ಕನಸಾಗಿದೆ. ತಮಗೆ ಹೇಗೇ ಬೇಕೋ ಆ ಬಗೆಯಲ್ಲಿ ಫೋಟೋ ತೆಗೆಯಲು ಅನುಕೂಲಕರವಾಗಿರುವ ಲೇಯಿಕಾ ತನ್ನ ಅದ್ಭುತ ಕೌಶಲ್ಯ ಮತ್ತು ಕಾರ್ಯಕ್ಷಮತೆಯ ಗುಣಗಳಿಂದ ಫೋಟೋಗ್ರಫಿ ಕ್ಷೇತ್ರದಲ್ಲಿ ಮನೆಮಾತಾಗಿದೆ. ರಾಣಿ ಎಲಿಜಬೆತ್ ಕೂಡ ಲೇಯಿಕಾದಿಂದ ಪ್ರೇರಿತಗೊಂಡಿದ್ದು ತಮ್ಮ ಹಲವಾರು ಭಂಗಿಯುಳ್ಳ ಫೋಟೋವನ್ನು ತೆಗೆಸಿಕೊಂಡಿದ್ದಾರೆ.

Best Mobiles in India

English summary
Leica is a brand that's history and contribution to photography is unparalleled. The company is credited for leading 'snapshot' photography, letting the world to conveniently capture thousands of moments and emotions as they happen in high quality. It has changed the way people would do photography.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X