ಐಬಾಲ್ ಆಂಡಿ ದೊರೆಯಲಿದೆ ರೂ 6,299 ಕ್ಕೆ

Written By:

ಈ ತಿಂಗಳಲ್ಲೇ ನಾಲ್ಕು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿರುವ ಭಾರತೀಯ ಸ್ಮಾರ್ಟ್‌ಫೋನ್ ಮೇಕರ್ ಐಬಾಲ್ ಇನ್ನೊಂದು ತನ್ನ ಹೊಸ ಫೋನ್‌ನೊಂದಿಗೆ ಮಾರುಕಟ್ಟೆಗೆ ಕಾಲಿಡಲಿದೆ. ಇದರ ಹೆಸರು ಆಂಡಿ4 IPS Tiger ಆಗಿದೆ.

ಇದು ಕಪ್ಪು ಬಣ್ಣದಲ್ಲಿದ್ದು ಇದರ ಮೌಲ್ಯ ರೂ. 6,299 ಆಗಿದೆ. ಆನ್‌ಲೈನ್‌ನಲ್ಲಿ ಈ ದರದಲ್ಲಿ ದೊರೆಯುವ ಫೋನ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಕಂಪೆನಿ ಈಗಾಗಲೇ ಆಂಡಿ IPS Velvet ಮತ್ತು ಆಂಡಿ4 IPS GEM ಫೋನ್ ಅನ್ನು ಬಿಡುಗಡೆ ಮಾಡಿದೆ.

ಐಬಾಲ್ ಆಂಡಿ ದೊರೆಯಲಿದೆ ರೂ 6,299 ಕ್ಕೆ

ಭಾರತದ ಮಾರುಕಟ್ಟೆಯಲ್ಲಿ ಫೋನ್‌ಗಳ ಈ ಸಂಘರ್ಷ ಮುಂದುವರಿಯುತ್ತಿದ್ದು ಸಣ್ಣ ಹಾಗೂ ದೊಡ್ಡ ಮಟ್ಟಿನ ಫೋನ್‌ಗಳು ತೀವ್ರತರವಾದ ಪೈಪೋಟಿಯನ್ನು ಒಡ್ಡುತ್ತಿವೆ. ಮೈಕ್ರೋಮ್ಯಾಕ್ಸ್ ಕೂಡ ಮೊಟೋರೋಲಾ ಮೋಟೋ ಇ ಮಾರಾಟಕ್ಕೆ ಹೆಚ್ಚಿನ ಪೈಪೋಟಿಯನ್ನು ಒಡ್ಡಿದ್ದು ಈ ತರದ ತೀವ್ರ ಪೈಪೋಟಿಗಳು ಫೋನ್ ಜಗದಲ್ಲಿ ಸಾಮಾನ್ಯವಾಗಿವೆ.

ಹೀಗೆಯೇ ಐಬಾಲ್‌ ವಿಷಯಕ್ಕೆ ಬಂದಾಗ ಫೋನ್ ನಿರ್ದೇಶನಗಳು ತುಂಬಾ ಆಕರ್ಷಕವಾಗಿವೆ. ಇದು ನಾಲ್ಕು ಇಂಚಿನ ಟಚ್ ಸ್ಕ್ರೀನ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇದರ ಕ್ವಾಡ್ ಕೋರ್ ಪ್ರೊಸೆಸರ್ 1.3 GHz ನೊಂದಿಗೆ ಬಂದಿದೆ. 512ಎಂಬಿ ರ್‌ಯಾಮ್ ಈ ಫೋನ್‌ನಲ್ಲಿದ್ದು, ಆಂಡ್ರಾಯ್ಡ್ 4.2.2 (ಜೆಲ್ಲಿ ಬೀನ್ ) ಓಎಸ್ ಇದರಲ್ಲಿ ಕಾರ್ಯನಿರ್ವಹಿಸುತ್ತದೆ. 5ಎಂಪಿ ರಿಯರ್ ಕ್ಯಾಮೆರಾ ಫೋನ್‌ನಲ್ಲಿದ್ದು ಎಲ್‌ಇಡಿ ಫ್ಲ್ಯಾಶ್ ಹಾಗೂ ಮುಂಭಾಗದಲ್ಲಿ VGA ಶೂಟರ್ ಇದೆ.

4ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯವಿದ್ದು ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 32ಜಿಬಿಗೆ ವಿಸ್ತರಿಸಬಹುದು. ಈ ಫೋನ್‌ನಲ್ಲಿ 3G HSPA+,ವೈಫೈ 802.11 b/g/n, A2DP ಹಾಗೂ GPS ಬ್ಲುಟೂತ್ 4.0 ನೊಂದಿಗೆ ಫೋನ್ ಆಕರ್ಷಕವಾಗಿದೆ. ಡ್ಯುಯೆಲ್ ಸಿಮ್ ಸ್ಲಾಟ್ ಕೂಡ ಫೋನ್‌ನ ಆಕರ್ಷಣೆಯಲ್ಲಿ ಒಂದಾಗಿದೆ. 1300 mAh ಬ್ಯಾಟರಿಯೊಂದಿಗೆ ಈ ಫೋನ್ ಆಕರ್ಷಕವಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot