ಐಡಿಯಾದ ನೂತನ ಸ್ಮಾರ್ಟ್‌ಫೊನ್‌ ಆರೂಸ್‌ ಬಂದಿದೆ

Posted By: Vijeth

ಐಡಿಯಾದ ನೂತನ ಸ್ಮಾರ್ಟ್‌ಫೊನ್‌ ಆರೂಸ್‌ ಬಂದಿದೆ
ಭಾರತ ಮೂಲದ ಟೆಲಿಕಾಂ ಆಪರೇಟಿಂಗ್‌ ಸಂಸ್ಥೆಯಾದ ಐಡಿಯಾ ತನ್ನಯ ನೂತನ 3G ಡ್ಯಯೆಲ್‌ ಸಿಮ್‌ ಮಾದರಿಯ ಆಂಡ್ರಾಯ್ಡ್‌ ಫೊನ್‌ ಮಾರುಕಟ್ಟೆಗೆ ಪರಿಚಯಿಸಿದ್ದು ಬೆಲೆ 7,190 ರೂ ನಿಗದಿ ಪಡಿಸಿದೆ. ಆರೂಸ್‌ ಸಂಸ್ಥೆ ಬಿಡುಗಡೆ ಮಾಡಿರುವ ನಾಲ್ಕನೇ ಸ್ಮಾರ್ಟ್‌ಫೋನ್‌ ಆಗಿದ್ದು ಐಡಿಯಾ ಬ್ಲೇಡ್‌, ಐಡಿಯಾ ID-918 ಹಾಗು ಐಡಿಯಾ ID-280 ಸಂಸ್ಥೆ ಈ ಮೊದಲು ಹೊರತಂದ ಫೋನ್‌ಗಳಾಗಿವೆ.

ಆರೂಸ್‌ನ ವಿಶೇಷತೆಗಳು.

ಸಂಸ್ಥೆಯ ಪ್ರಕಾರ ಆರೂಸ್‌ ಸ್ಮಾರ್ಟ್‌ಫೋನ್‌ 3.5 ಇಂಚಿನ ಟಚ್‌ ಸ್ಕ್ರೀನ್‌ ದರ್ಶಕ ಹಾಗೂ 320 x 480 ಪಿಕ್ಸೆಲ್‌ ರೆಸೆಲ್ಯೂಷನ್‌ ಸೇರಿದಂತೆ ಮೀಡಿಯಾ ಟೆಕ್‌ MT6573 ಪ್ರೊಸೆಸರ್‌, 512MB ROM, 256MB RAM, 32GB ವರೆಗಿನ ಮೆಮೊರಿ ವಿಸ್ತರಣೆ, 5MP ಕ್ಯಾಮೆರಾ ಹಾಗೂ ವಿಡಿಯೋ ಕರೆಗಾಗಿ 0.3MP ಮುಂಬದಿಯ ಕ್ಯಾಮೆರಾ ಒಳಗೊಂಡಿದೆ.

61.84 x 116 x 12.15mm ಸುತ್ತಳತೆ ಹೊಂದಿರುವ ಆರೂಸ್‌ 136 ಗ್ರಾಂ ತೂಕವಿದೆ, ಅಲ್ಲದೆ ಆಂಡ್ರಾಯ್ಡ್‌ ಜಿಂಜರ್‌ಬ್ರೆಡ್‌ ಆಪರೇಟಿಂಗ್‌ ಸಿಸ್ಟಂ ಒಳಗೊಂಡಿದೆ.

ಕನೆಕ್ಟಿವಿಟಿ ವಿಚಾರದಲ್ಲಿ ಆರೂಸ್‌ Wi-Fi 802.11 a/g/b/n, ಬ್ಲೂಟೂತ್‌, 3G, EDGE ಹಾಗೂ GPRS ಹೊಂದಿದೆ. ಅಲ್ಲದೆ 1,300 mAh Li-ion ಬ್ಯಾಟರಿಯಿಂದಾಗಿ ಯತ್ತಮ ಬ್ಯಾಕಪ್‌ ನೀಡುತ್ತದೆ.

ಇತರೇ ಫೀಚರ್ಸ್‌ಗಳು :

ನೂತನ ಐಡಿಯಾ ಆರೂಸ್‌ನಲ್ಲಿ ಆಪ್‌ ಮೇಲ್‌ – ಎಂಬ ಟೆಲಿಕೋ ಆಪ್‌ ಸ್ಟೋರ್‌ ಕೂಡ ಲಭ್ಯವಿದೆ, ಅಲ್ಲದೆಆಂಡ್ರಾಯ್ಡ್‌ ಮ್ಯಾನೇಜರ್‌, ಆಗ್ಯಮೆಂಟ್‌ ರಿಯಾಲಿಟಿ ಆಪ್‌ ಲೇಯರ್‌, ಕರೆನ್ಸಿ ಕನ್ವರ್ಟರ್‌, ಪಿಕ್‌ಸೇ ಫೊಟೋ ಎಡಿಟರ್‌, ಪಿನ್‌ ಬಾಲ್‌ ಗೇಮ್‌ ಸೇರಿದಂತೆ ಸಾಮಾಜಿಕ ತಾಣಗಳ ಅಪ್ಲಿಕೇಷನ್ಸ್ ಆದಂತಹ ಫೇಸ್‌ಬುಕ್‌ ಹಾಗೂ ಟ್ವಿಟ್ಟರ್‌ ಸಹ ಓಳಗೊಂಡಿದೆ.

ಬೆಲೆ ಹಾಗೂ ಲಭ್ಯತೆ :

ಆರೂಸ್‌ ಅಗ್ಗದ ಬೆಲೆಯ ಸ್ಮಾರ್ಟ್‌ಪೋನ್‌ ಆದ್ದರಿಂದ ರೂ. 7,190 ರ ಬೆಲೆಗೆ ಲಭ್ಯವಿದ್ದು ಮಾರುಕಟ್ಟೆಯಲ್ಲಿನ ಪ್ರಮುಖ ಮಳಿಗೆಗಳಲ್ಲಿ ಖರೀದಿಸ ಬಃಉದಾಗಿದೆ. ಇದರೊಂದಿಗೆ ಐಡಿಯಾ ಬಳಕೆದಾರರು 259 ರೂಪಾಯಿಯರಿಚಾರ್ಜ್‌ ಮಾಡಿಸಿದಲ್ಲಿ 2,340 ರೂ. ಬೆಲೆಯ 3G ಸೇವೆಯನ್ನು ಪಡೆಯಬಹುದಾಗಿದೆ.

Read In English...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot