ಐ.ಎಫ್.ಎ 2016: 23 ಮೆಗಾಪಿಕ್ಸೆಲ್ಲಿನ ಸೋನಿ XZ ಫೋನ್ ಬಿಡುಗಡೆ.

|

ಇಲ್ಲಿಯವರೆಗೂ ಸೋನಿ ಸ್ಮಾರ್ಟ್ ಫೋನ್ ಕಂಪನಿಯ ಮಾರಾಟ ಇಳಿಮುಖವಾಗೇ ಸಾಗಿದೆ, ಇದು ಕಂಪನಿಗೆ ತಲೆ ನೋವಿನ ವಿಚಾರವೂ ಹೌದು! ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಬಲ್ಲ ಫೋನೊಂದನ್ನು ತಯಾರಿಸುವ ಪ್ರಯತ್ನ ನಡೆಸಿರುವ ಜಪಾನಿನ ಸ್ಮಾರ್ಟ್ ಫೋನ್ ಕಂಪನಿ ಸೋನಿ 'X' ಸರಣಿಯಲ್ಲಿ ಮತ್ತೊಂದು ಹೊಸ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಿದೆ.

ಐ.ಎಫ್.ಎ 2016: 23 ಮೆಗಾಪಿಕ್ಸೆಲ್ಲಿನ ಸೋನಿ XZ ಫೋನ್ ಬಿಡುಗಡೆ.

ಎಕ್ಸ್ಪೀರಿಯಾ XZ ಎಂಬ ಹೆಸರಿನ ಈ ಹೊಸ ಫೋನು ಎರಡು ತಿಂಗಳ ಹಿಂದೆ ಬಿಡುಗಡೆಗೊಂಡಿದ್ದ ಎಕ್ಸ್ಪೀರಿಯಾ X ಫೋನಿನ ಮುಂದುವರಿದ ಆವೃತ್ತಿ.

ಓದಿರಿ: ರಿಲಾಯನ್ಸ್ ಜಿಯೋ e-KYC ಆಕ್ಟಿವೇಶನ್: ಸಿಮ್ 15 ನಿಮಿಷದಲ್ಲಿ ಆಕ್ಟಿವೇಟ್‌ ಆಗುತ್ತದೆ!

ಈ ಸ್ಮಾರ್ಟ್ ಫೋನಿನಲ್ಲಿ ವಿನ್ಯಾಸ, ಕಾರ್ಯದಕ್ಷತೆ, ಕ್ಯಾಮೆರ ಮತ್ತು ಬ್ಯಾಟರಿ ಆಯಸ್ಸಿಗೆ ಸೋನಿ ಕಂಪನಿಯು ಹೆಚ್ಚಿನ ಗಮನ ನೀಡಿದೆ. ಮಿನರಲ್ ಬ್ಲಾಕ್, ಫಾರೆಸ್ಟ್ ಬ್ಲೂ ಹಾಗೂ ಪ್ಲಾಟಿನಮ್ ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್ ಫೋನ್ ಅಕ್ಟೋಬರ್ ತಿಂಗಳಿನಿಂದ ಮಾರಾಟವಾಗಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಲ್ಕಾಲೈಡೋ ಇಂದ ತಯಾರಾಗಿರುವ ಫೋನ್ ಇದು!

ಅಲ್ಕಾಲೈಡೋ ಇಂದ ತಯಾರಾಗಿರುವ ಫೋನ್ ಇದು!

ಈ ಸ್ಮಾರ್ಟ್ ಫೋನನ್ನು ಅಲ್ಕಾಲೈಡೋ ಎಂಬ ವಸ್ತುವಿನಿಂದ ತಯಾರಿಸಲಾಗಿದೆ. ಅಲ್ಕಾಲೈಡೋ ಎಂದರೆ ಅಲ್ಯುಮಿನಿಯಂನಿಂದ ಮಾಡಿರುವ ಧೂಳು ನಿರೋಧಕ ವಸ್ತು. ಈ ಸ್ಮಾರ್ಟ್ ಫೋನ್ 146 x 72 x 8.1 ಎಂ.ಎಂ ಗಾತ್ರವಿದೆ ಹಾಗೂ 161 ಗ್ರಾಮಿನಷ್ಟು ತೂಕವಿದೆ.

ಮೊಬೈಲ್ ಪಿಚ್ಚರ್ ಇಂಜಿನ್ನಿನಲ್ಲಿ ಎಕ್ಸ್ .ರಿಯಾಲಿಟಿ.

ಮೊಬೈಲ್ ಪಿಚ್ಚರ್ ಇಂಜಿನ್ನಿನಲ್ಲಿ ಎಕ್ಸ್ .ರಿಯಾಲಿಟಿ.

ಸೋನಿ ಎಕ್ಸ್ಪೀರಿಯಾ XZ ಫೋನಿನಲ್ಲಿ 5.2 ಇಂಚಿನ ಫುಲ್ ಹೆಚ್.ಡಿ ಟ್ರೈಲ್ಯುಮಿನೋಸ್ ಪರದೆಯಿದೆ; ಚಿತ್ರ ಮತ್ತು ವೀಡಿಯೋಗಳ ಉತ್ತಮ ಗುಣಮಟ್ಟಕ್ಕಾಗಿ ಮೊಬೈಲ್ ಪಿಚ್ಚರ್ ಇಂಜಿನ್ನಿನಲ್ಲಿ ಎಕ್ಸ್ .ರಿಯಾಲಿಟಿ ಇದೆ. ಈ ಸ್ಮಾರ್ಟ್ ಫೋನಿನಲ್ಲಿ ಲೈವ್ ಕಲರ್ ಎಲ್.ಇ.ಡಿ, ಲೈವ್ ಕಲರ್ ಕ್ರಿಯೇಷನ್ಸ್ ನಂತಹ ವಿಶೇಷ ತಂತ್ರಜ್ಞಾನವಿದೆ. ಇದರಿಂದ ಪರದೆಯ ನೋಟ ಉತ್ತಮವಾಗುತ್ತದೆ.

ನವೀನ ಚಿಪ್ ಸೆಟ್.

ನವೀನ ಚಿಪ್ ಸೆಟ್.

ಎಕ್ಸ್ಪೀರಿಯಾ XZ ಫೋನಿನಲ್ಲಿ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 820ಎಸ್.ಒ.ಸಿ ಇದೆ. ಜೊತೆಗೆ X12 ಎಲ್.ಟಿ.ಇ ಸೌಕರ್ಯವಿದೆ. ಇದರಿಂದ ಸಂಪರ್ಕ, ಗ್ರಾಫಿಕ್ಸ್, ಫೋಟೋಗ್ರಫಿ, ಬ್ಯಾಟರಿ ಉತ್ತಮವಾಗುತ್ತದೆ. ಸೋನಿಯ ವಿಶೇಷ ಸ್ಮಾರ್ಟ್ ಕ್ಲೀನರ್ ತಂತ್ರಜ್ಞಾನವು ಉಪಯೋಗಿಸದ ಆ್ಯಪುಗಳನ್ನು ತನ್ನಿಂತಾನೇ ಡಿಯಾಕ್ಟಿವೇಟ್ ಮಾಡಿ ಕ್ಯಾಚೆಯನ್ನು ಕ್ಲಿಯರ್ ಮಾಡುತ್ತದೆ. ಉತ್ತಮವಾಗಿ ಆಟಗಳನ್ನಾಡುವುದಕ್ಕೆ ಅಡ್ರಿನೋ 530 ಜಿಪಿಯು ಸೌಕರ್ಯವಿದೆ.

ಉತ್ತಮ ರ್ಯಾಮ್ ಹಾಗೂ ಸಂಗ್ರಹ ಸಾಮರ್ಥ್ಯ.

ಉತ್ತಮ ರ್ಯಾಮ್ ಹಾಗೂ ಸಂಗ್ರಹ ಸಾಮರ್ಥ್ಯ.

ಎಕ್ಸ್ಪೀರಿಯಾ XZ ಫೋನಿನಲ್ಲಿ 3ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿದೆ. ಮೈಕ್ರೋ ಎಸ್.ಡಿ ಕಾರ್ಡ್ ಬಳಸುವ ಮೂಲಕ 200ಜಿಬಿಯವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದು.

ಐ.ಎಮ್.ಎಕ್ಸ್ 300 ಸಂವೇದಕ.

ಐ.ಎಮ್.ಎಕ್ಸ್ 300 ಸಂವೇದಕ.

ಎಂದಿನಂತೆ ಎಕ್ಸ್ಪೀರಿಯಾ XZ ಫೋನಿನ ಪ್ರಮುಖ ವಿಶೇಷತೆಯೆಂದರೆ 23 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ. ಮುಂಬದಿಯಲ್ಲಿ 13 ಮೆಗಾಪಿಕ್ಸೆಲ್ಲಿನ ಸ್ವಂತೀ ಕ್ಯಾಮೆರಾ ಇದೆ. ಫೋಕಸ್ ಅನ್ನು ಸರಿಯಾಗಿ ಮಾಡಲು ನೆರವಾಗಲು ಎಕ್ಸ್ಪೀರಿಯಾ XZನಲ್ಲಿ ಟ್ರಿಪಲ್ ಇಮೇಜ್ ಸೆನ್ಸಿಂಗ್ ತಂತ್ರಾಜ್ಞಾನವಿದೆ.

ಟ್ರಿಪಲ್ ಇಮೇಜ್ ಸೆನ್ಸಿಂಗ್ ತಂತ್ರಜ್ಞಾನ.

ಟ್ರಿಪಲ್ ಇಮೇಜ್ ಸೆನ್ಸಿಂಗ್ ತಂತ್ರಜ್ಞಾನ.

ಜೊತೆಗೆ, ಎಕ್ಸ್ಪೀರಿಯಾ XZನಲ್ಲಿ ಬಣ್ಣವನ್ನು ಗುರುತಿಸುವ ತಂತ್ರಜ್ಞಾನವಿದೆ, ಚಲಿಸುವ ವಸ್ತುಗಳನ್ನು ಬುದ್ಧಿವಂತಿಕೆಯಿಂದ ಫೋಕಸ್ ಮಾಡಿ ಸೆರೆ ಹಿಡಿಯಲು ಲೇಸರ್ ಸೌಕರ್ಯವಿದೆ.

ಸ್ಟೆಡಿ ಶಾಟ್ ಇಂಟೆಲಿಜೆಂಟ್ ಆ್ಯಕ್ಟೀವ್ ಮೋಡ್.

ಸ್ಟೆಡಿ ಶಾಟ್ ಇಂಟೆಲಿಜೆಂಟ್ ಆ್ಯಕ್ಟೀವ್ ಮೋಡ್.

ಈ ಸ್ಮಾರ್ಟ್ ಫೋನಿನಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್ ಸೌಕರ್ಯವಿಲ್ಲ, ಬದಲಿಗೆ ಕಂಪನಿಯು ಚಿತ್ರ ಮತ್ತು ವೀಡಿಯೋಗಳು ಸ್ಪಷ್ಟವಾಗಿ ಮೂಡಿಬರಲೆಂಬ ಉದ್ದೇಶದಿಂದ 5 ಆ್ಯಕ್ಸಿಸ್ ಗೈರೋಸ್ಕೋಪ್ ಉಪಯೋಗಿಸುವ ಸ್ಟೆಡಿಶಾಟ್ ಇಂಟೆಲಿಜೆಂಟ್ ಆ್ಯಕ್ಟೀವ್ ಮೋಡನ್ನು ಫೋನಿನಲ್ಲಿ ಅಳವಡಿಸಿದೆ.

13 ಮೆಗಾಪಿಕ್ಸೆಲ್ಲಿನ ಸ್ವಂತೀ ಕ್ಯಾಮೆರ.

13 ಮೆಗಾಪಿಕ್ಸೆಲ್ಲಿನ ಸ್ವಂತೀ ಕ್ಯಾಮೆರ.

ಎಕ್ಸ್ಪೀರಿಯಾ XZನಲ್ಲಿ 1/3.06" ಲೋ ಲೈಟ್ ಸಂವೇದಕ ಹಾಗೂ 22 ಎಂಎಂ ವೈಡ್ ಆ್ಯಂಗಲ್ ಲೆನ್ಸ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ ಇದೆ. ಜೊತೆಗೆ 4ಕೆ ವೀಡಿಯೋ ಮತ್ತು 2x ಲಾಸ್ ಲೆಸ್ ಝೂಮ್ ಕೂಡ ಲಭ್ಯವಿದೆ.

ಎಕ್ಸ್ಪೀರಿಯಾ XZ ಜಲ ನಿರೋಧಕ.

ಎಕ್ಸ್ಪೀರಿಯಾ XZ ಜಲ ನಿರೋಧಕ.

ಎಕ್ಸ್ಪೀರಿಯಾ XZನಲ್ಲಿ ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋ ಇದೆ. ಜೊತೆಗೆ ಇದು ಜಲ ನಿರೋಧಕ ಮತ್ತು ವೇಗವಾಗಿ ಡಾಟಾ ಟ್ರಾನ್ಸ್ಫರ್ ಮಾಡಲು ಯು.ಎಸ್.ಬಿ ಟೈಪ್ ಸಿ ಲಭ್ಯವಿದೆ.

ಕ್ವಿಕ್ ಚಾರ್ಜ್ 3.0.

ಕ್ವಿಕ್ ಚಾರ್ಜ್ 3.0.

ಬ್ಯಾಟರಿಯ ವಿಷಯಕ್ಕೆ ಬಂದರೆ, ಎಕ್ಸ್ಪೀರಿಯಾ XZ ಫೋನಿನಲ್ಲಿ 2,900 ಎಂ.ಎ.ಹೆಚ್ ಬ್ಯಾಟರಿ ಇದೆ, ಕ್ವಿಕ್ ಚಾರ್ಜ್ 3.0 ತಂತ್ರಜ್ಞಾನವಿದೆ. ಜೊತೆಗೆ ಇದರಲ್ಲಿ ಅಡಾಪ್ಟೀವ್ ಚಾರ್ಜಿಂಗ್ ಸೌಕರ್ಯವಿದೆ. ನೀವು ಯಾವಾಗ ಚಾರ್ಜಿಗೆ ಇಡುತ್ತಿದ್ದೀರ ಎಂದರಿತು, 90 ಪರ್ಸೆಂಟಿನವರೆಗೂ ವೇಗವಾಗಿ ಚಾರ್ಜ್ ಮಾಡುತ್ತದೆ ಮತ್ತು ಉಳಿದ 10ಪರ್ಸೆಂಟ್ ಚಾರ್ಜ್ ಮಾಡಲು ಸಮಯ ತೆಗೆದುಕೊಳ್ಳುತ್ತದೆ.

Best Mobiles in India

English summary
Till now Sony's smartphone division has reported a downturn in sales, which is indeed a worrying sign for a company! In a desperate attempt to give a hit in the market, Japan-based handset maker Sony has launched yet another smartphone under 'X' series of smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X