ಜಿಯೋ ಫೀಚರ್ ಫೋನ್ ಫೋಟೋ ಲೀಕ್: ಬೆಲೆ ಏಷ್ಟು..? ಬಿಡುಗಡೆ ಎಂದು..??

Written By:

ರಿಲಯನ್ಸ್ ಜಿಯೋ ದೇಶಿಯ ಟೆಲಿಕಾಂ ವಲಯದಲ್ಲಿ ಸದ್ದು ಮಾಡುತ್ತಿದ್ದು, ಈಗ ಮತ್ತೊಂದು ರೀತಿಯಲ್ಲಿ ಅಲೆಯನ್ನು ಎಬ್ಬಿಸಲು ಶುರು ಮಾಡಿದೆ. ಅದುವೇ ಕಡಿಮೆ ಬೆಲೆಗೆ 4G VoLTE ಫೀಚರ್ ಫೋನನ್ನು ಬಿಡುಗಡೆ ಮಾಡಲು ಮುಂದಾಗಿರುವ ವಿಚಾರ ತಿಳಿದಿರುವುದೇ. ಇದೇ ಮೊದಲ ಬಾರಿಗೆ ಈ ಫೋನಿನ ಫೋಟೋವೊಂದು ಬಿಡುಗಡೆಯಾಗಿದೆ.

ಜಿಯೋ ಫೀಚರ್ ಫೋನ್ ಫೋಟೋ ಲೀಕ್: ಬೆಲೆ ಏಷ್ಟು..? ಬಿಡುಗಡೆ ಎಂದು..??

ಓದಿರಿ: ಜಿಯೋ ಬಳಕೆದಾರರೇ ಇಲ್ಲಿ ನೋಡಿ..!!! ನಿಮಗೊಂದು ಅಪ್ಢೇಟ್ ಇದೆ..!!!!

ಈಗಾಗಲೇ 4G VoLTE ಸಫೋರ್ಟ್ ಮಾಡುವ ಫೀಚರ್ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಅವುಗಳ ಬೆಲೆಯೂ ಅತ್ಯಧಿಕವಾಗಿವೆ. ಈ ಹಿನ್ನಲೆಯಲ್ಲಿ ಜಿಯೋ ತನ್ನ ಚಂದಾರಿಕೆಯನ್ನು ಹೆಚ್ಚು ಮಾಡಿಕೊಳ್ಳುವ ಸಲುವಾಗಿ ಕಡಿಮೆ ಬೆಲೆಗೆ ಫೀಚರ್ ಫೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎರಡು ಫೀಚರ್ ಫೋನ್‌ಗಳ ಬಿಡುಗಡೆ:

ಎರಡು ಫೀಚರ್ ಫೋನ್‌ಗಳ ಬಿಡುಗಡೆ:

ಜಿಯೋ ಒಟ್ಟು ಎರಡು ಕಡಿಮೆ ಬೆಲೆಯ ಫೀಚರ್ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಈ ಎರಡು ಫೋನ್‌ಗಳ ಫೋಟೋಗಳು ಸದ್ಯ ಲೀಕ್ ಆಗಿದ್ದು, ಹೆಚ್ಚಿನ ಗಮನವನ್ನು ಸೆಳೆಯುತ್ತಿದೆ.

LYF ಬ್ರಾಂಡ್ ನಿಂದ ಮಾರಾಟ:

LYF ಬ್ರಾಂಡ್ ನಿಂದ ಮಾರಾಟ:

ರಿಲಯನ್ಸ್ ಜಿಯೋ ಪರಿಚಯಿಸಿದ LYF ಬ್ರಾಂಡ್ ನಿಂದಲೇ ಈ ಫೋನ್ ಗಳನ್ನು ಮಾರಾಟ ಮಾಡಲಾಗುವುದು. ಈ ಎರಡು ಫೋನ್‌ಗಳನ್ನು LYF ಬ್ರಾಂಡ್ ನಡಿಯಲ್ಲಿ ಜಿಯೋ ಪರಿಚಯಿಸಲಿದೆ ಎನ್ನುವ ಮಾಹಿತಿ ದೊರೆತಿದೆ. ಎರಡು ಫೋನಿನ ಮೇಲೆ ಇದೇ ಬ್ರಾಂಡಿನ ಲೊಗೋವನ್ನು ಕಾಣಬಹುದಾಗಿದೆ.

ಸ್ಪ್ರೆಡ್ಟ್ರಾಮ್ ಚಿಪ್ ಆವೃತ್ತಿ:

ಸ್ಪ್ರೆಡ್ಟ್ರಾಮ್ ಚಿಪ್ ಆವೃತ್ತಿ:

ಜಿಯೋ ಎರಡು ಆವೃತ್ತಿಯ ಫೋನ್ ಬಿಡುಗಡೆ ಮಾಡುತ್ತಿದೆ. ಅದರಲ್ಲಿ ಸ್ಪ್ರೆಡ್ಟ್ರಾಮ್ ಚಿಪ್ ಆವೃತ್ತಿಯೂ ಒಂದು. ಇದರಲ್ಲಿ 2.4 ಇಂಚಿನ ಸ್ಕ್ರೀನ್ ಇದೆ. ಹಿಂಭಾಗದಲ್ಲಿ 2MP ಕ್ಯಾಮೆರಾ, ಮುಂಭಾಗದಲ್ಲಿಯೂ 2 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಅಲ್ಲದೇ ಇದು ವೈಫೈ ಮತ್ತು ಬ್ಲೂಟೂಟ್ ಸಫೋರ್ಟ್ ಮಾಡಲಿದೆ.

ಕ್ವಾಲ್ಕಮ್ 205 ಚಿಪ್ ಆವೃತ್ತಿ:

ಕ್ವಾಲ್ಕಮ್ 205 ಚಿಪ್ ಆವೃತ್ತಿ:

ಇದೇ ಮಾದರಿಯಲ್ಲಿ ಕ್ವಾಲ್ಕಮ್ 205 ಚಿಪ್ ಸೆಟ್ ಆವೃತ್ತಿಯೂ ಲಭ್ಯವಿದೆ, ಈ ಎರಡು ಫೋನಿನಲ್ಲಿ ಒಂದೇ ಮಾದರಿಯ ಆಯ್ಕೆಗಳಿರಲಿದ್ದು, ಚಿಪ್ ಸೆಟ್ ಮಾತ್ರವೇ ಬದಲಾಗಲಿದೆ. 512 MP RAM 4GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಅಲ್ಲದೇ ಮೊಮೊರಿ ಕಾರ್ಡ್ ಸಫೋರ್ಟ್ ಮಾಡಲಿದೆ.

ಲಾಂಚ್ ಆಫರ್:

ಲಾಂಚ್ ಆಫರ್:

ಈಗಾಗಲೇ LYF ಸ್ಮಾರ್ಟ್‌ಫೋನ್‌ಗಳನ್ನು ಕೊಂಡರೆ 20% ಹೆಚ್ಚು ಡೇಟಾವನ್ನು ನೀಡುವುದಾಗಿ ಜಿಯೋ ಘೋಷಣೆ ಮಾಡಿದ್ದು, ಇದೇ ಮಾದರಿಯಲ್ಲಿ ಈ ಫೀಚರ್ ಫೋನ್ ಮಾರಾಟದ ಸಂದರ್ಭದಲ್ಲಿ ಆಕರ್ಷಕ ಆಫರ್ ಗಳು ದೊರೆಯಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಬೆಲೆ ಮತ್ತು ಲಾಂಚ್:

ಬೆಲೆ ಮತ್ತು ಲಾಂಚ್:

ಸ್ಪ್ರೆಡ್ಟ್ರಾಮ್ ಚಿಪ್ ಆವೃತ್ತಿಯ ಬೆಲೆಯೂ ಸುಮಾರು ರೂ. 1.700 ಆಗಲಿದ್ದು, ಇದೇ ಮಾದರಿಯಲ್ಲಿ ಕ್ವಾಲ್ಕಮ್ 205 ಚಿಪ್ ಹೊಂದಿರುವ ಆವೃತ್ತಿಯೂ ರೂ.1,800 ಗಳಾಗಲಿದೆ. ಈ ಫೋನ್‌ಗಳು ಜುಲೈ ಮೊದಲ ವಾರದಲ್ಲಿ ಜಿಯೋ ಲಾಂಚ್ ಮಾಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The feature phone in the image has LYF branding, which means that RJIL is looking to launch the device with LYF branding. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot