ಚೀನಾ ಫೋನ್‌ಗಳಿಗೆ ಸೆಡ್ಡು ಹೊಡೆಯುವ ನಮ್ಮ ದೇಶದ ಸ್ಮಾರ್ಟ್‌ಫೋನ್‌ಗಳು..!

1962ರಲ್ಲಿ ನಡೆದ ಚೀನಾ-ಭಾರತದ ಯುದ್ಧದ ನಂತರ ಮತ್ತೇ ಭಾರತ-ಚೀನಾ ಗಡಿಯಲ್ಲಿ ಯುದ್ದದ ಭೀತಿ ನಿರ್ಮಾಣವಾಗಿದ್ದು, ಈ ಹಿನ್ನಲೆಯಲ್ಲಿ ನಾವು ಚೀನಾ ವಸ್ತುಗಳನ್ನು ಖರೀದಿ ಮಾಡಿದರೆ ಚೀನಾ ಆರ್ಥಿಕತೆಗೆ ಸಹಾಯ ಮಾಡಿದಂತೆ ಆಗುತ್ತದೆ ಎನ್ನುವ ವಾದ ಹೆಚ್ಚಾಗ

|

ಸದ್ಯ ದೇಶದಲ್ಲಿ ಚೀನಾ ವಸ್ತುಗಳನ್ನು ಬಳಸಬೇಡಿ, ಚೀನಾ ತಯಾರಿಸುವ ವಸ್ತುಗಳನ್ನು ಖರೀದಿಸಬೇಡಿ ಎನ್ನುವ ಆಂದೋಲನವು ಶುರುವಾಗಿದೆ. 1962ರಲ್ಲಿ ನಡೆದ ಚೀನಾ-ಭಾರತದ ಯುದ್ಧದ ನಂತರ ಮತ್ತೇ ಭಾರತ-ಚೀನಾ ಗಡಿಯಲ್ಲಿ ಯುದ್ದದ ಭೀತಿ ನಿರ್ಮಾಣವಾಗಿದ್ದು, ಈ ಹಿನ್ನಲೆಯಲ್ಲಿ ನಾವು ಚೀನಾ ವಸ್ತುಗಳನ್ನು ಖರೀದಿ ಮಾಡಿದರೆ ಚೀನಾ ಆರ್ಥಿಕತೆಗೆ ಸಹಾಯ ಮಾಡಿದಂತೆ ಆಗುತ್ತದೆ ಎನ್ನುವ ವಾದ ಹೆಚ್ಚಾಗುತ್ತಿದೆ.

ಚೀನಾ ಫೋನ್‌ಗಳಿಗೆ ಸೆಡ್ಡು ಹೊಡೆಯುವ ನಮ್ಮ ದೇಶದ ಸ್ಮಾರ್ಟ್‌ಫೋನ್‌ಗಳು..!

ಓದಿರಿ: ಮತ್ತೇ ಶುರುವಾಗಿ ಜಿಯೋ ಅಬ್ಬರ: ಮಾರುಕಟ್ಟೆಯಲ್ಲಿ ಏರ್‌ಟೆಲ್‌, ವೊಡೊ ತತ್ತರ..!!

ಈ ಹಿನ್ನಲೆಯಲ್ಲಿ ಭಾರತೀಯ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್ ಗಳ ಆರ್ಭಟವು ಹೆಚ್ಚಾಗಿದೆ. ಅದಕ್ಕಾಗಿ ಚೀನಾ ಫೋನ್ ಗಳನ್ನು ಬಿಟ್ಟರೂ ಭಾರತೀಯ ಕಂಪನಿಗಳು ಸಹ ಉತ್ತಮ ಸ್ಮಾರ್ಟ್‌ಫೋನ್ ಗಳನ್ನು ನಿರ್ಮಿಸುತ್ತಿದ್ದ ಈ ಹಿನ್ನಲೆಯಲ್ಲಿ ಭಾರತೀಯ ಮೊಬೈಲ್ ಕಂಪನಿಗಳ ಮಾಹಿತಿ ಇಲ್ಲಿದೆ.

ಭಾರತೀಯ ಮೂಲದ ಮೊಬೈಲ್ ತಯಾರಿಕಾ ಕಂಪನಿಗಳು:

ಭಾರತೀಯ ಮೂಲದ ಮೊಬೈಲ್ ತಯಾರಿಕಾ ಕಂಪನಿಗಳು:

ಒಟ್ಟು 14 ಕಂಪನಿಗಳೂ ಭಾರತದಲ್ಲಿ ಮೊಬೈಲ್ ಗಳನ್ನು ತಯಾರು ಮಾಡುತ್ತಿವೆ. ಆದರೆ ಚೀನಾ ಕಂಪನಿಗಳ ಆರ್ಭಟ ಮುಂದೆ ಸ್ವಲ್ಪ ಮಂಕಾಗಿವೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಭಾರತೀಯ ಮೂಲಕದ ಕಂಪನಿಗಳ ವಿವರ ಇಲ್ಲಿದೆ.

14 ಕಂಪನಿಗಳು ಯಾವುವು..?

14 ಕಂಪನಿಗಳು ಯಾವುವು..?

ಸಿರೋ, ಸಿಲಿಕಾನ್, ಐಬಾಲ್, ಇಂಟೆಕ್ಸ್, ಲಾವಾ, LYF, ಮೈಕ್ರೋ ಮ್ಯಾಕ್ಸ್, ಓನಿಡಾ, ರಿಂಗಿಗ್ ಬೆಲ್ಸ್, ಸ್ಪೆಸ್ ಡಿಜಿಟಲ್, ಕಾರ್ಬನ್, ವಿಡಿಯೋ ಕಾನ್, ಜೊಲೋ, Yu ಕಂಪನಿಗಳು ಭಾರತೀಯ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ಎನ್ನಲಾಗಿದೆ.

Nokia 5 !! ನಾಳೆಯಿಂದಲೇ ಬುಕ್ ಮಾಡಿ ನೋಕಿಯಾ 5 ಆಂಡ್ರಾಯ್ಡ್ !!
ಟಾಪ್ ಕಂಪನಿಗಳು: ಮೈಕ್ರೋ ಮಾಕ್ಸ್

ಟಾಪ್ ಕಂಪನಿಗಳು: ಮೈಕ್ರೋ ಮಾಕ್ಸ್

2010ರಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದ ಮೈಕ್ರೋ ಮಾಕ್ಸ್ ಸ್ಮಾರ್ಟ್‌ಪೋನ್ ತಯಾರಿಕಾ ಕಂಪನಿಯನ್ನು ರಾಹುಲ್ ಶರ್ಮ ಎನ್ನುವವರು ಸ್ಥಾಪಿಸಿದರು ಎನ್ನಲಾಗಿದೆ. ಈ ಕಂಪನಿಯೂ ಸ್ಮಾರ್ಟ್‌ಫೋನ್ ನೊಂದಿಗೆ, ಏರ್‌ ಕಂಡಿಷನರ್, ಸ್ಮಾರ್ಟ್‌ಟಿವಿಗಳು, ಲ್ಯಾಪ್ ಟಾಪ್ ಹಾಗೂ ಪವರ್ ಬ್ಯಾಂಕ್ ಗಳನ್ನು ತಯಾರಿಸುತ್ತಿದೆ ಎನ್ನಲಾಗಿದೆ.

ಮೈಕ್ರೋ ಮಾಕ್ಸ್ ಮೊಬೈಲ್ ಗಳನ್ನು ಹುಡುಕಲು ಇಲ್ಲಿ ಕ್ಲಿಕ್ ಮಾಡಿ

ಟಾಪ್ ಕಂಪನಿಗಳು: ಕಾರ್ಬನ್ ಮೊಬೈಲ್

ಟಾಪ್ ಕಂಪನಿಗಳು: ಕಾರ್ಬನ್ ಮೊಬೈಲ್

2009ರಲ್ಲಿ ಕಾರ್ಬನ್ ಫೋನ್ಸ್ ಕಂಪನಿಯನ್ನು ಪ್ರದೀಪ್ ಜೈನ್ ಎನ್ನುವವರು ಸ್ಥಾಪನೆ ಮಾಡಿದ್ದಾರೆ. ಕಾರ್ಬನ್ ಕಂಪನಿಯೂ ಮುಖ್ಯವಾಗಿ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಮೊಬೈಲ್ ಫೋನ್ ಗಳನ್ನು ತಯಾರು ಮಾಡುತ್ತಿದೆ ಎನ್ನಲಾಗಿದೆ.

ಕಾರ್ಬನ್ ಮೊಬೈಲ್ ಗಳನ್ನು ಹುಡುಕಲು ಇಲ್ಲಿ ಕ್ಲಿಕ್ ಮಾಡಿ

ಟಾಪ್ ಕಂಪನಿಗಳು: LYF ಸ್ಮಾರ್ಟ್‌ಫೋನ್

ಟಾಪ್ ಕಂಪನಿಗಳು: LYF ಸ್ಮಾರ್ಟ್‌ಫೋನ್

2015ರಲ್ಲಿ ರಿಲಯನ್ಸ್ ಕಂಪನಿ ಪರಿಚಯಿಸಿದ LYF ಸ್ಮಾರ್ಟ್‌ಫೋನ್, ಜಿಯೋ ನಂತರದಲ್ಲಿ ಸದ್ದು ಮಾಡುತ್ತಿದೆ. ಮುಖೇಶ್ ಅಂಬಾನಿ ಈ ಕಂಪನಿಯ ಸ್ಥಾಪಕರಾಗಿದ್ದು, ಈ ಕಂಪನಿ VoLTE ಸಪೋರ್ಟ್ ಮಾಡುವ ಸ್ಮಾರ್ಟ್ ಫೋನ್ ಮತ್ತು ವೈಫೈ ಡಿವೈಸ್ ಗಳನ್ನು ತಯಾರಿಸುತ್ತಿದೆ.

LYF ಮೊಬೈಲ್ ಗಳನ್ನು ಹುಡುಕಲು ಇಲ್ಲಿ ಕ್ಲಿಕ್ ಮಾಡಿ

ಟಾಪ್ ಕಂಪನಿಗಳು: ಇನ್‌ಟೆಕ್ಸ್ ಸ್ಮಾರ್ಟ್‌ಫೋನ್

ಟಾಪ್ ಕಂಪನಿಗಳು: ಇನ್‌ಟೆಕ್ಸ್ ಸ್ಮಾರ್ಟ್‌ಫೋನ್

1996ರಲ್ಲಿ ಸ್ಥಾಪನೆಗೊಂಡ ಈ ಕಂಪನಿಯನ್ನು ನರೇಂದ್ರ ಬನ್ಸಾಲ್ ಎನ್ನುವವರು ಪರಿಚಯಿಸಿದರು. ವಿಶ್ವದಾದ್ಯಂತ ಸೇವೆಯನ್ನು ನೀಡುತ್ತಿರುವ ಈ ಕಂಪನಿ ಮೊಬೈಲ್ ಫೋನ್, ಸ್ಮಾರ್ಟ್‌ಫೋನ್, ವಾಷಿಂಗ್ ಮಿಷಿನ್, ಟೆಲಿವಿಷನ್ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ನಿರ್ಮಿಸುತ್ತಿದೆ.

ಇನ್‌ಟೆಕ್ಸ್ ಮೊಬೈಲ್ ಗಳನ್ನು ಹುಡುಕಲು ಇಲ್ಲಿ ಕ್ಲಿಕ್ ಮಾಡಿ

ಟಾಪ್ ಕಂಪನಿಗಳು: ಲಾವಾ ಸ್ಮಾರ್ಟ್‌ಫೋನ್

ಟಾಪ್ ಕಂಪನಿಗಳು: ಲಾವಾ ಸ್ಮಾರ್ಟ್‌ಫೋನ್

2009ರಲ್ಲಿ ಸ್ಥಾಪನೆಗೊಂಡ ಲಾವಾ ಸ್ಮಾರ್ಟ್‌ಫೋನ್ ಪಾಲುದಾರಿಕೆಯಲ್ಲಿ ಆರಂಭವಾದ ಕಂಪನಿಯಾಗಿದೆ. ಮೊಬೈಲ್ ಫೋನ್, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಲ್ಯಾಪ್ ಟಾಪ್ ತಯಾರಿಕೆಯಲ್ಲಿ ಮುಂದಿದೆ.

ಲಾವಾ ಮೊಬೈಲ್ ಗಳನ್ನು ಹುಡುಕಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಮೂಲ:

Best Mobiles in India

Read more about:
English summary
Indian smartphone market clocked 27 million units, rising by 4.7% sequentially and 14% year-on-year. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X