ಇನ್ಫಿನಿಕ್ಸ್‌ ನೋಟ್‌ 11 ಫಸ್ಟ್‌ ಲುಕ್: ಬಜೆಟ್‌ ದರದಲ್ಲಿ ಆಕರ್ಷಕ ಕ್ಯಾಮೆರಾ ಫೀಚರ್!

|

ಹಾಂಗ್ ಕಾಂಗ್ ಮೂಲದ ಇನ್ಫಿನಿಕ್ಸ್ ಕಂಪೆನಿಯು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ ಪರಿಚಯಿಸಿರುವ ಇನ್ಫಿನಿಕ್ಸ್‌, ಇದೀಗ ಇತ್ತೀಚಿಗಷ್ಟೆ ನೂತನವಾಗಿ 'ಇನ್ಫಿನಿಕ್ಸ್‌ ನೋಟ್‌ 11' ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಫೋನ್ ಬಜೆಟ್‌ ಪ್ರೈಸ್‌ ಟ್ಯಾಗ್‌ ಮತ್ತು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಇನ್ನು ಈ ಫೋನ್ ಮೀಡಿಯಾ ಟೆಕ್ ಹಿಲಿಯೋ G88 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ.

ಇನ್ಫಿನಿಕ್ಸ್‌

ಹೌದು, ಇನ್ಫಿನಿಕ್ಸ್‌ ಕಂಪೆನಿ ಪರಿಚಯಿಸಿರುವ ಹೊಸ 'ಇನ್ಫಿನಿಕ್ಸ್‌ ನೋಟ್‌ 11' ಬಜೆಟ್‌ ದರದ ಮಾದರಿಯ ಫೋನ್‌ ಆಗಿದೆ. ಅದಾಗ್ಯೂ ಈ ಫೋನ್ ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಫೋನ್ ಟ್ರೆಂಡಿ ಲುಕ್ ಪಡೆದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಹಾಗೆಯೇ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿರುವುದು ಪ್ಲಸ್‌ ಪಾಯಿಂಟ್ ಆಗಿ ಕಾಣಿಸಿಕೊಂಡಿದೆ. ಹಾಗಾದರೇ ಹೊಸ ಇನ್ಫಿನಿಕ್ಸ್‌ ನೋಟ್‌ 11 ಸ್ಮಾರ್ಟ್‌ಫೋನ್ ಫಸ್ಟ್‌ ಲುಕ್ ಹೇಗಿದೆ?..ಈ ಫೋನಿನ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ

ಇನ್ಫಿನಿಕ್ಸ್‌ ನೋಟ್‌ 11 ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಫುಲ್‌ HD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಪಡೆದಿದೆ. ತನ್ನ ವರ್ಗದಲ್ಲಿಯೇ ಉತ್ತಮ ಸ್ಕ್ರೀನ್ ಹೊಂದಿದ್ದು, ವಿಡಿಯೋ ವೀಕ್ಷಣೆಗೆ ಪೂರಕವಾಗಿದೆ. ಇನ್ನು ಇದರ ಡಿಸೈನ್ ಸಹ ಗ್ರಾಹಕರನ್ನು ಸೆಳೆಯುವಂತಿದೆ.

ಪ್ರೊಸೆಸರ್‌ ಪವರ್ ಯಾವುದು?

ಪ್ರೊಸೆಸರ್‌ ಪವರ್ ಯಾವುದು?

ಇನ್ಫಿನಿಕ್ಸ್‌ ನೋಟ್‌ 11 ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್‌ ಮೀಡಿಯಾ ಟೆಕ್‌ ಹಿಲಿಯೋ G88 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಕಂಪನಿಯ XOS 10 ಕಸ್ಟಮ್ ಸ್ಕಿನ್‌ನೊಂದಿಗೆ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಬಜೆಟ್ ಬೆಲೆಯ ಫೋನ್‌ ಆಗಿದ್ದರೂ ಹೆಚ್ಚುವರಿ ಸ್ಟೋರೇಜ್‌ಗೆ ಪೂರಕ ಅವಕಾಶ ನೀಡಲಾಗಿದೆ. ಗ್ರಾಹಕರು ಎಸ್‌ಡಿ ಕಾರ್ಡ್‌ ಮೂಲಕ 512GB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಪಡೆದಿದೆ. ಬಜೆಟ್‌ ಲೆವಲ್ ಮಾದರಿಯ ಸ್ಮಾರ್ಟ್‌ಫೋನ್‌ ವರ್ಗದಲ್ಲಿ ಪೈಪೋಟಿ ನೀಡುವ ಪ್ರೊಸೆಸರ್ ಎನಿಸಿದೆ.

ತ್ರಿವಳಿ ಕ್ಯಾಮೆರಾ ಸೆನ್ಸಾರ್ ಇದೆ

ತ್ರಿವಳಿ ಕ್ಯಾಮೆರಾ ಸೆನ್ಸಾರ್ ಇದೆ

ಇನ್ಫಿನಿಕ್ಸ್‌ ನೋಟ್‌ 11 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ f/1.6 ಲೆನ್ಸ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು AI ಲೆನ್ಸ್‌ನೊಂದಿಗೆ ಬರುತ್ತದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಡ್ಯುಯಲ್ LED ಫ್ಲ್ಯಾಷ್‌ನೊಂದಿಗೆ ಅಳವಡಿಸಲಾಗಿದೆ. ಹಾಗೆಯೇ ಫೋಟೊ ಫೀಲ್ಟರ್ ಹಾಗೂ ಎಡಿಟಿಂಗ್ ಆಯ್ಕೆಗಳು ಇವೆ. ತನ್ನ ವರ್ಗದಲ್ಲಿಯೇ ಆಕರ್ಷಕ ಕ್ಯಾಮೆರಾ ಫೀಚರ್‌ ಹೊಂದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಇನ್ಫಿನಿಕ್ಸ್‌ ನೋಟ್‌ 11 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, 3.5 ಎಂಎಂ ಹೆಡ್ಫೋನ್ ಜ್ಯಾಕ್ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಫೋನ್‌ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಕೂಡ ಪಡೆದಿವೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ಗಳು ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಹೊಂದಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ಫಿನಿಕ್ಸ್‌ ನೋಟ್‌ 11 ಸ್ಮಾರ್ಟ್‌ಫೋನ್‌ 4GB ಮತ್ತು 64GB ವೇರಿಯಂಟ್ ದರವು 11,999ರೂ. ಆಗಿದೆ. ಈ ಫೋನ್ ಗ್ಲೇಸಿಯರ್ ಗ್ರೀನ್, ಸೆಲೆಸ್ಟಿಯಲ್ ಸ್ನೋ, ಗ್ರ್ಯಾಫೈಟ್ ಬ್ಲ್ಯಾಕ್ ಸೇರಿದಂತೆ ಮೂರು ಬಣ್ಣಗಳ ಆಯ್ಕೆ ಪಡೆದಿದೆ. ಈ ಫೋನಿನ ಫಸ್ಟ್‌ ಸೇಲ್ ಇದೇ (ಡಿ.23) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ನಡೆಯಲಿದೆ.

Best Mobiles in India

English summary
Infinix Note 11 First Look: Attractive Camera Feature at Budget Price: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X