Subscribe to Gizbot

3,790 ರೂ.ದರದಲ್ಲಿ ನೂತನ ಇಂಟೆಕ್ಸ್ ಆಕ್ವಾ 3.2 ಬಿಡುಗಡೆ

Posted By: Vijeth

3,790 ರೂ.ದರದಲ್ಲಿ ನೂತನ ಇಂಟೆಕ್ಸ್ ಆಕ್ವಾ 3.2 ಬಿಡುಗಡೆ

ಭಾರತೀಯ ಮೂಲದ ಕಂಪ್ಯೂಟರ್‌ ತಯಾರಿಕಾ ಸಂಸ್ಥೆಯಾದಂತಹ ಇಂಟೆಕ್ಸ್‌ ಟೆಕ್ನಾಲಜೀಸ್‌ ಇತ್ತೀಚೆಗೆ ತನ್ನಯ ಡ್ಯುಯೆಲ್‌ ಸಿಮ್‌ ಮೊಬೈಲ್‌ ಫೋನ್‌ಆಕ್ವಾ 4.0 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಅಂದಹಾಗೆ ಸಂಸ್ಥೆಯು ಇದೀಗ ತನ್ನಯ ನೂತನ ಆಂಡ್ರಾಯ್ಡ್‌ ಡ್ಯುಯೆಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಆದಂತಹ ಆಕ್ವಾ 3.2 ಬಿಡುಗಡೆ ಮಾಡಿದ್ದು, ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ರೂ. 3,790 ದರದಲ್ಲಿ ಮಾರುಕಟ್ಟೆಯಲ್ಲಿ ಈಗಾಗಲೇ ನೆಲೆಯೂರಿರುವ ಇತರೆ ಬಜೆಟ್‌ ಸ್ಮಾರ್ಟ್‌ಫೋನ್‌ಗಳೊಂದಿಗೆ ಪೈಪೋಟಿ ನಡೆಸಲಿದೆ.

ಅಂದಹಾಗೆ ಇದೀಗ ತಾನೆ ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಕಾಲಿರಿಸಿರುವ ನೂತನ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಇಂಟೆಕ್ಸ್‌ ಆಕ್ವಾ 3.2 ನಲ್ಲಿನ ವಿಶೇಷತೆಗಳೇನೆಂಬುದನ್ನು ತಿಳಿದುಕೊಳ್ಳೋಣ.

ಗಾತ್ರ ಹಾಗೂ ಸುತ್ತಳತೆ : ಆಕ್ವಾ 3.2 ಸ್ಮಾರ್ಟ್‌ಫೋನ್‌ 110.5 x 61 x 12.6 mm ಸುತ್ತಳತೆಯೊಂದಿಗೆ 125 ಗ್ರಾಂ ತೂಕವಿದೆ.

ದರ್ಶಕ :3.2 ಇಂಚಿನ 5 ಪಾಯಿಂಟ್‌ ಸಾಮರ್ತ್ಯದ ಟಚ್‌ಸ್ಕ್ರೀನ್‌ ದರ್ಶಕ ಹಾಗೂ 240 x 320 ಪಿಕ್ಸೆಲ್ಸ್‌ ಹೊಂದಿದೆ.

ಪ್ರೊಸೆಸರ್‌ : ಆಕ್ವಾ 3.2 ನಲ್ಲಿ 1GHz ನ ಉತ್ತಮ ಪ್ರೊಸೆಸರ್‌ ನೀಡಲಾಗಿದೆ.

ಆಪರೇಟಿಂಗ್‌ ಸಿಸ್ಟಂ : ಬಜೆಟ್‌ ಸ್ಮಾರ್ಟ್‌ಫೋನ್‌ ಆದ್ದರಿಂದ ಆಂಡ್ರಾಯ್ಡ್‌ 2.3.6 ಜಿಂಜರ್ಬೆಡ್‌ ಆಪರೇಟಿಂಗ್‌ ಸಿಸ್ಟಂ ಒಳಗೊಂಡಿದೆ.

ಕ್ಯಾಮೆರಾ : ನೂತನ ಆಕ್ವಾ 3.2 ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ 2MP ನ ಹಿಂಬದಿಯ ಕ್ಯಾಮೆರಾ ಹೊಂದಿದ್ದು ವಿಡಿಯೋ ಕರೆಗಾಗಿ ಮುಂಬದಿಯ ಕ್ಯಾಮೆರಾ ಇಲ್ಲವಾಗಿದೆ.

ಸ್ಟೋರೇಜ್‌ : ಆಕ್ವಾ 3.2 ನಲ್ಲಿ 75MB ಆನ್‌ಬೋರ್ಡ್‌ ಸ್ಟೋರೇಜ್‌ ನೀಡಲಾಗಿದ್ದು ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ.

ಕನೆಕ್ಟಿವಿಟಿ : ವೈ-ಫೈ, EDGE/GPRS ಹಾಗೂ ಬ್ಲೂಟ್‌ನಂತಹ ಫೀಚರ್ಸ್‌ಗಳನ್ನು ಹೊಂದಿದೆ.

ಬ್ಯಾಟರಿ : ಆಕ್ವಾ 3.2 ನಲ್ಲಿ 1,200 mAh Li-ion ಬ್ಯಾಟರಿ ಇದ್ದು 4 ಹಂಟೆಗಳ ಟಾಕ್‌ ಟೈಮ್‌ ಹಾಗೂ 180 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

ಇತರೆ ವಿಶೇಷತೆ

ನೂತನ ಇಂಟೆಕ್ಸ್‌ ಆಕ್ವಾ 3.2 ಇಂಗ್ಲೀಷ್‌ ಸೇರಿದಂತೆ ಹಿಂದಿ ಭಾಷೆಗೂ ಸಹಕರಿಸುತ್ತದೆ. ಇದಲ್ಲದೆ ಪುಷ್‌ ಮೇಲ್‌, ಎಫ್‌ಎಂ ರೇಡಿಯೋ, ಆಡಿಯೋ ವಿಡಿಯೋ ಪ್ಲೇಯರ್‌, ಸೌಂಡ್‌ ರೆಕಾರ್ಡರ್‌, ಮೊಬೈಲ್‌ ಟ್ರಾಕರ್‌, ಆಡಿಯೋ ಕಾಲ್‌ ರೆಕಾರ್ಡ್‌, ಕಾಲರ್‌ ಗ್ರೂಪ್‌, AS ಮೋಡೆಮ್‌ ಸಪೋರ್ಟ್‌, ವೈ-ಫೈ, ಹಾಗೂ ಫ್ರೀ ನಿಂಜಾ ಫ್ರೂಟ್‌ ಕಟ್‌ ಗೇಮ್‌, ನಿಂಬಜ್‌, ಜಿ ಮೇಲ್, ಯೂ ಟ್ಯೂಬ್‌, IRCTC ಸೆರಿದಂತೆ ಸಾಕಷ್ಟು ಫೀಚರ್ಸ್‌ಗಳು ಲಭ್ಯವಿದೆ.

ಬೆಲೆ ಹಾಗೂ ಲಭ್ಯತೆ

ಖರೀದಿಸುವುದಾದರೆ ಇಂಟೆಕ್ಸ್‌ ಆಕ್ವಾ 3.2 ರೂ. 3,790 ದರದಲ್ಲಿ ಹಾಗೂ ರೂ.700 ಮೌಲ್ಯದ ಉಚಿತ ಬ್ಯಾಕ್‌ ಬ್ಯಾಗ್‌ಕೂಡ ದೊರೆಯಲಿದೆ. ಬ್ಲಾಕ್‌, ಸಿಲ್ವರ್‌ ಹಾಗೂ ಬ್ಲೂ ಬಣ್ಣಗಳಲ್ಲಿ ಲಭ್ಯವಿದ್ದು. ಭಾರತದ್ಯಂತ ಇರುವ ಹೈಪರ್‌ ಮಾರ್ಕೆಟ್‌ಗಳಲ್ಲಿನ ಇಂಟೆಕ್ಸ ರಿಟೇಲ್‌ ಮಳಿಗೆಗಳಲ್ಲಿ ಕೊಂಡುಕೊಳ್ಳ ಬಹುದಾಗಿದೆ.

Read In English...

20,000 ರೂ.ದರದಲ್ಲಿನ ಬ್ಲಾಕ್‌ಬೆರಿ ಸ್ಮಾರ್ಟ್‌ಫೋನ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot