Subscribe to Gizbot

ವಿವೋ ಮಾರ್ಶ್ ಮಲ್ಲೊ ಸ್ಮಾರ್ಟ್‌ಫೋನ್ ಲಾಂಚ್

Written By:

ವಿವೋ ತನ್ನ ಬಜೆಟ್ ಫೋನ್ Y55L ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಫೋನ್ ಬೆಲೆ ರೂ 11,980 ಆಗಿದ್ದು, ಫೋನ್ ಚಿನ್ನ ಮತ್ತು ಆಕಾಶ ಕಂದು ಬಣ್ಣದಲ್ಲಿ ಲಭ್ಯವಿದೆ. ರೀಟೈಲ್ ಮತ್ತು ಆನ್‌ಲೈನ್ ತಾಣಗಳೆರಡರಲ್ಲಿ ಕೂಡ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ದೊರೆಯಲಿದೆ. ಅಕ್ಟೋಬರ್ 15 ರಿಂದ ವಿವೋ ಫೋನ್ ಅನ್ನು ಬಳಕೆದಾರರು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಓದಿರಿ: ಟಿಪ್ಸ್: ವಾಟ್ಸಾಪ್‌ನಲ್ಲಿ ಯಾವುದೇ ಗಾತ್ರದ ಫೈಲ್‌ಗಳನ್ನು ಕಳುಹಿಸುವುದು ಹೇಗೆ?

ವಿವೋ ಮಾರ್ಶ್ ಮಲ್ಲೊ ಸ್ಮಾರ್ಟ್‌ಫೋನ್ ಲಾಂಚ್

5.2 ಇಂಚಿನ ಎಚ್‌ಡಿ ಡಿಸ್‌ಪ್ಲೇಯನ್ನು ಫೋನ್ ಹೊಂದಿದ್ದು 720x1280 ಪಿಕ್ಸೆಲ್ ರೆಸಲ್ಯೂಶನ್ ಇದರಲ್ಲಿದೆ. ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 430 ಪ್ರೊಸೆಸರ್ ಅನ್ನು ಡಿವೈಸ್ ಒಳಗೊಂಡಿದ್ದು 2ಜಿಬಿ RAM ಇದರಲ್ಲಿದೆ. 16 ಜಿಬಿ ಆಂತರಿಕ ಸಂಗ್ರಹಣೆಯನ್ನು ಡಿವೈಸ್ ಪಡೆದಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದಾಗಿದೆ.

ಓದಿರಿ: ವೊಡಾಫೋನ್ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಹೇಗೆ?

ವಿವೋ ಮಾರ್ಶ್ ಮಲ್ಲೊ ಸ್ಮಾರ್ಟ್‌ಫೋನ್ ಲಾಂಚ್

ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊವನ್ನು ಡಿವೈಸ್ ಚಾಲನೆ ಮಾಡುತ್ತಿದ್ದು ಡ್ಯುಯಲ್ ಸಿಮ್ ಬೆಂಬಲವನ್ನು ಡಿವೈಸ್ ಪಡೆದುಕೊಳ್ಳಲಿದೆ. 8 ಎಮ್‌ಪಿ ರಿಯರ್ ಕ್ಯಾಮೆರಾದೊಂದಿಗೆ ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ ಮತ್ತು 5 ಎಮ್‌ಪಿ ಮುಂಭಾಗ ಕ್ಯಾಮೆರಾ ಡಿವೈಸ್‌ನಲ್ಲಿದೆ. 4ಜಿ, ವೋಲ್ಟ್, 3ಜಿ, ವೈಫೈ, ಬ್ಲ್ಯೂಟೂತ್ ಮತ್ತು ಜಿಪಿಎಸ್‌ಗೆ ಡಿವೈಸ್ ಸಂಪರ್ಕವನ್ನು ಪಡೆದುಕೊಳ್ಳಲಿದೆ.

ವಿವೋ ಮಾರ್ಶ್ ಮಲ್ಲೊ ಸ್ಮಾರ್ಟ್‌ಫೋನ್ ಲಾಂಚ್

 

English summary
Vivo has launched its latest budget smartphone Y55L in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot