Subscribe to Gizbot

ಐಫೋನ್ 8 ಇಮೇಜ್ ನೋಡಿ ಹೇಳಿ..ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್‌ ಹೊಂದಿದೆ!?

Written By:

ಮೊಬೈಲ್ ಕ್ಷೇತ್ರದಲ್ಲಿ ಬಿಡುಗಡೆಗಿಂತಲೂ ಮೊದಲೇ ಹೆಚ್ಚು ಹೆಸರು ಮಾಡುವ ಸ್ಮಾರ್ಟ್‌ಫೋನ್‌ಗಳೆಂದರೆ ಅದು ಆಪಲ್ ಐಫೊನ್ ಸ್ಮಾರ್ಟ್‌ಫೋನ್‌ಗಳು.!! ವಿಶ್ವಮಟ್ಟದಲ್ಲಿ ಇಂದಿಗೂ ಅತ್ಯುತ್ತಮ ಸ್ಮಾರ್ಟ್‌ಫೋನ್ ಪಟ್ಟ ಉಳಿಸಿಕೊಂಡಿರುವ ಐಪೋನ್‌ ಸರಣಿಯ ಸ್ಮಾರ್ಟ್‌ಫೋನ್‌ಗಳೆಂದರೇ ಜನರಿಗೆ ಎಲ್ಲಿಲ್ಲದ ಕುತೋಹಲ.!!

ನೂತನವಾಗಿ ಬಿಡುಗಡೆಯಾಗಲಿರುವ ಆಪಲ್ ಐಫೋನ್‌ಗಳು ಯಾವ ವಿನ್ಯಾಸವನ್ನು ಹೊಂದಿರುತ್ತವೆ.ಯಾವ ಯಾವ ವಿಶೇಷತೆಗಳನ್ನು ಒಳಗೊಂಡಿರುತ್ತವೆ ಎನ್ನುವುದೇ ಪ್ರಪಂಚದಲ್ಲಿ ಬಹುದೊಡ್ಡ ಸುದ್ದಿಗಳಲ್ಲಿ ಒಂದಾಗಿರುತ್ತದೆ ಎಂದರೆ ನೀವು ನಂಬಲೇಬೇಕು.!!

ಜಿಯೋ ಕೊಟ್ರು ಗೂಗಲ್ ಕೊಡ್ತಿಲ್ಲ!!..ಇಂಟರ್‌ನೆಟ್‌ ಬಳಕೆದಾರರಿಗೆ ಆಘಾತ!

ಗ್ರಾಹಕರ ನಿರೀಕ್ಷಗೂ ಮೀರಿ ವಿನ್ಯಾಸಗೊಳ್ಳುವ ಐಪೊನ್‌ಗಳು ಪ್ರತಿಬಾರಿಯೂ ಒಂದಿಲ್ಲೊಂದು ವಿಶೇಷತೆಗಳನ್ನು ಹೊಂದಿದ್ದು, ಮುಂದಿನ ಸರಣಿ ಸ್ಮಾರ್ಟ್‌ಫೋನ್ ಐಫೋನ್ 8 ಸ್ಮಾರ್ಟ್‌ಫೋನ್ ಯಾವ ಹೆಚ್ಚಿ ಫೀಚರ್ ಹೊಂದಿರಲಿದೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಜೆಲ್‌ಲೆಸ್ ಎಲ್ಇಡಿ ಡಿಸ್‌ಪ್ಲೇ

ಬೆಜೆಲ್‌ಲೆಸ್ ಎಲ್ಇಡಿ ಡಿಸ್‌ಪ್ಲೇ

ನೂತನವಾಗಿ ಬಿಡುಗಡೆಯಾಗಲಿರುವ ನೂತನ ಆಪಲ್ 8 ಸ್ಮಾರ್ಟ್‌ಫೋನ್ ಸಂಪೂರ್ಣ ಗ್ಲಾಸ್ ಡಿಸ್‌ಪ್ಲೇಯನ್ನು ಹೋಂದಿರಲಿದೆ. ಸ್ಮಾರ್ಟ್‌ಪ್ರಿಯರ ನಿದ್ದಗೆಡಿಸಿರುವ ಬೆಜೆಲ್‌ಲೆಸ್ ಡಿಸ್‌ಪ್ಲೇ ಐಫೋನ್ 8 ರ ಪ್ರಮುಖ ವಿಶೇಷ ಎನ್ನಬಹುದು.

ಹೋಮ್ ಬಟನ್ ಲೆಸ್

ಹೋಮ್ ಬಟನ್ ಲೆಸ್

ಕೀಪ್ಯಾಡ್ ಫೋನ್‌ಗಳ ನಂತರ ಸಿಂಗಲ್ ಬಟನ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಿದ್ದವು. ಇದೀಗ ಬೆಜೆಲ್‌ಲೆಸ್ ಡಿಸ್‌ಪ್ಲೇ ಹೊಂದು ಬರುತ್ತಿರುವ ನೂತನ ಸ್ಮಾರ್ಟ್‌ಫೋನ್ ಐಫೋನ್ 8 ಹೋಮ್ ಬಟನ್ ಹೊಂದಿರುವುದಿಲ್ಲ..!!

ವೈರ್‌ಲೆಸ್ ಚಾರ್ಜ್

ವೈರ್‌ಲೆಸ್ ಚಾರ್ಜ್

ಸ್ಮಾರ್ಟ್ಫೋನ್ ಬಳಕೆದಾರರ ಬಹುದೊಡ್ಡ ಸಮಸ್ಯೆ ಎಂದರೆ ಬ್ಯಾಟರಿ ಚಾರ್ಜ್ ಬಹುಕಾಲ ಬಾಳಿಕೆ ಬರುವುದಿಲ್ಲ ಎಂಬುದು. ಸ್ಮಾರ್ಟ್‌ಫೋನ್ ಉಪಯೋಗಿಸುವಾಗ ಯಾವಾಗಲೂ ಚಾರ್ಜ್ ಹಾಕಿಯೇ ಫೋನ್ ಉಪಯೋಗಿಸಬೇಕಾದ ಪರಿಸ್ಥಿತಿ ಇದೆ. ಹಾಗಾಗಿ, ವೈರ್‌ಲೆಸ್ ಚಾರ್ಜ್ ಆಗುವ ಟೆಕ್ನಾಲಜಿ ಹೊಂದಿ ಆಪಲ್ 8 ಸ್ಮಾರ್ಟ್‌ಫೋನ್ ಹೊರಬರುತ್ತಿದೆ.

ಬಿಗ್ ಬ್ಯಾಟರಿ!

ಬಿಗ್ ಬ್ಯಾಟರಿ!

ಬಿಗ್ ಬ್ಯಾಟರಿ ಎಂದರೆ ದಪ್ಪದಾದ ಎಂಬರ್ಥದಲ್ಲಲ್ಲ.! ಸ್ಮಾರ್ಟ್‌ಫೋನ್ ಬಳಕೆಗೆ ಸಾಕಾಗುವಷ್ಟು ಶಕ್ತಿಯನ್ನು ಪ್ರಸ್ತುತ ಐಫೋನ್ ಬ್ಯಾಟರಿಗಳು ನೀಡುತ್ತಿಲ್ಲ ಎಂಬುದು ಐಫೋನ್‌ ಪ್ರಿಯರ ದೂರು. ಹಾಗಾಗಿ, ಹೆಚ್ಚು ಚಾಜ್‌ ನೀಡುವಂತಹ ಬ್ಯಾಟರಿಯನ್ನು ಆಪಲ್ ಐಫೋನ್ 8 ಹೊಂದಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple is expected to launch the upcoming iPhone 8 sometime later this year.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot