Subscribe to Gizbot

ಆಚ್ಚರಿ ಬೆಲೆ: ಫ್ಲಿಪ್‌ಕಾರ್ಟಿನಲ್ಲಿ ರೂ.69999ಕ್ಕೆ ಐಫೋನ್ X..!

Written By:

ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವು, ಆಪಲ್ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಲಾಂಚ್ ಆಗಿದ್ದ ಐಫೋನ್ X, ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆಯಿತು ಎಂದರೆ ತಪ್ಪಾಗುವುದಿಲ್ಲ. ಸದ್ಯ ಈ ದುಬಾರಿ ಬೆಲೆಯ ಐಫೋನಿನ ಮೇಲೆ ಫ್ಲಿಪ್‌ಕಾರ್ಟಿನಲ್ಲಿ ಭಾರೀ ರಿಯಾಯಿತಿ ಕಾಣಬಹುದಾಗಿದ್ದು, ಬಳಕೆದಾರರಿಗೆ ಐಫೋನ್ X ಖರೀದಿಸಲು ಇದಕ್ಕಿಂತ ಉತ್ತಮ ಸಂದರ್ಭ ಇನ್ನೊಂದಿಲ್ಲ ಎನ್ನಲಾಗಿದೆ.

ಆಚ್ಚರಿ ಬೆಲೆ: ಫ್ಲಿಪ್‌ಕಾರ್ಟಿನಲ್ಲಿ ರೂ.69999ಕ್ಕೆ ಐಫೋನ್ X..!

ಏಪ್ರಿಲ್ 9 ರ ವರೆಗೂ ಫ್ಲಿಪ್‌ಕಾರ್ಟಿನಲ್ಲಿ ಆಪಲ್ ಹಬ್ಬ ನಡೆಯಲಿದ್ದು, ಇಲ್ಲಿ ಐಫೋನ್ ‍X 64 GB ರೂ. 79,999ಕ್ಕೆ ಮಾರಾಟವಾಗಲಿದ್ದು, ಬೆಲೆಯಲ್ಲಿ ರೂ.10000 ಕಡಿಮೆಯಾಗಿದೆ ಎನ್ನಲಾಗಿದೆ. ಇದಲ್ಲದೇ ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಮೇಲೆಯೂ ರಿಯಾಯಿತಿಯನ್ನು ಕಾಣಬಹುದು ಎನ್ನಲಾಗಿದೆ. ಒಟ್ಟಿನಲ್ಲಿ ಎಲ್ಲಾ ಮಾದರಿಯ ಆಪಲ್ ಉತ್ಪನ್ನಗಳ ಮೇಲೆ ಆಫರ್ ಅನ್ನು ನೀಡಲಾಗಿದೆ.

ಇದಲ್ಲದೇ ICICI ಕಾರ್ಡ್ ಬಳಕೆದಾರರಿಗೆ ರೂ.10000ದ ವರೆಗೂ ಕ್ಯಾಷ್ ಬ್ಯಾಕ್ ಆಫರ್ ಅನ್ನು ಫ್ಲಿಪ್‌ಕಾರ್ಟಿನಲ್ಲಿ ಲಭ್ಯವಿದ್ದು, ಈ ಹಿನ್ನಲೆಯಲ್ಲಿ ಐಫೋನ್ X ಅನ್ನು ರೂ.69999ಕ್ಕೆ ಖರೀದಿ ಮಾಡಬಹುದಾಗಿದೆ. ಇತಿಹಾಸದಲ್ಲಿಯೇ ಈ ಸ್ಮಾರ್ಟ್‌ಫೋನ್ ಇಷ್ಟು ಕಡಿಮೆ ಬೆಲೆಗೆ ಮಾರಾಟವಾಗಿರಲಿಲ್ಲ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಈ ಆಯ್ಕೆಯೂ ICICI ಕ್ರೆಡಿಟ್ ಕಾರ್ಡುದಾರರಿಗೆ ಮಾತ್ರವೇ ದೊರೆಯಲಿದೆ.

ಆಚ್ಚರಿ ಬೆಲೆ: ಫ್ಲಿಪ್‌ಕಾರ್ಟಿನಲ್ಲಿ ರೂ.69999ಕ್ಕೆ ಐಫೋನ್ X..!

ಇದಲ್ಲದೇ ಐಫೋನ್ 8 ಸಹ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು, ರೂ.63999ಕ್ಕೆ ಮಾರಾಟವಾಗುವ ಐಫೋನ್ 8 ಅನ್ನು ICICI ಕ್ರೆಡಿಟ್ ಕಾರ್ಡುದಾರರು ರೂ.55,999ಕ್ಕೆ ಖರೀದಿ ಮಾಡಬಹುದಾಗಿದೆ. ಒಟ್ಟಿನಲ್ಲಿ ಟಾಪ್‌ ಎಂಡ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಟಾಪ್ ಐಫೋನ್‌ಗಳನ್ನು ಖರೀದಿಸಲು ಇದೇ ಸುಸಮಯ ಎನ್ನಲಾಗಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಐಫೋನ್ X ನಲ್ಲಿ ಅಮೊಲೈಡ್ ಬ್ರೈಸಿಲ್ ಲೆಸ್ ಡಿಸ್‌ಪ್ಲೇ ವಿನ್ಯಾಸವನ್ನು ಕಾಣಬಹುದಾಗಿದೆ. ಅಲ್ಲದೇ ಫೇಸ್‌ ಲಾಕ್, ಡಿಸ್‌ಪ್ಲೇ ನೋಚ್ ಸೇರಿದಂತೆ ಅನೇಕ ಹೊಸತನಗಳಿಗೆ ಈ ಐಫೋನ್ ಸಾಕ್ಷಿಯಾಗಿತ್ತು ಎನ್ನಲಾಗಿದೆ. ಒಟ್ಟಿನಲ್ಲಿ ಇಷ್ಟು ಕಡಿಮೆ ಈ ಫೋನ್ ಹಿಂದೆಂದು ಮಾರಾಟವಾಗಿರಲಿಲ್ಲ.

English summary
iPhone X at Rs 69,999 best Flipkart Apple week discounts. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot