ದುಬಾರಿಯ ಬೆಲೆ ಐಫೋನ್ ನಲ್ಲಿ ಚಾರ್ಜಿಂಗ್ ಸಮಸ್ಯೆ: ಆಪಲ್ ಗೆ ಭಾರೀ ಹೊಡೆತ.. !

|

ಸೆಪ್ಟೆಂಬರ್ ಮಧ್ಯ ಭಾಗದಲ್ಲಿ ಕಾಣಿಸಿಕೊಂಡ ಆಪಲ್ ನೂತನ ಐಫೋನ್ ಗಳಾದ ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಮಾರುಕಟ್ಟೆಯಲ್ಲಿ ಸದ್ಯ ಬಳಕೆದಾರರಿಗೆ ದೊರೆತಿದ್ದು, ಈಗಾಗಲೇ ಹಲವು ಮಂದಿ ಐಫೋನ್ ಗಳನ್ನು ನಿತ್ಯ ಬಳಕೆ ಮಾಡುತ್ತಿದ್ದಾರೆ. ಬಳಕೆಗೆ ಸಿಕ್ಕು ಇನ್ನು ಒಂದು ವಾರವಾಗುವ ಮೊದಲ ಈ ಪೋನ್ ಗಳ ಕುರಿತು ಕಂಪ್ಲೈಟ್ ಗಳನ್ನು ಗ್ರಾಹಕರು ಹೇಳುತ್ತಿದ್ದಾರೆ ಎನ್ನಲಾಗಿದೆ. ದುಬಾರಿ ಬೆಲೆಗೆ ಮಾರಾಟವಾಗುತ್ತಿದ್ದ ಐಫೋನ್ ಗಳು ಸಹ ತೊಂದರೆಯನ್ನು ನೀಡುತ್ತಿದೆ.

ಹೊಸದಾಗಿ ಲಾಂಚ್ ಆಗಿರುವ ಫೋನ್ ಗಳು ಚಾರ್ಜಿಂಗ್ ತೊಂದರೆಯನ್ನು ಹೊಂದಿವೆ ಎನ್ನಲಾಗಿದೆ. ಬ್ಯಾಟರಿಯೂ ಬೇಗನೇ ಚಾರ್ಜ್ ಆಗುವುದಿಲ್ಲ ಮತ್ತು ಒಮ್ಮೆ ಚಾರ್ಜಗೆ ಹಾಕಿದರು ಸಹ ಸರಿಯಾಗಿ ಚಾರ್ಜ್ ಆಗುತ್ತಿಲ್ಲ ಎಂದು ಹಲವು ಮಂದಿ ಆಪಲ್ ಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಮಾರುಕಟ್ಟೆಯುತ್ತಿರುವ ಕೇಬಲ್ ಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಇವುಗಳನ್ನು ಸರಿ ಮಾಡಿಕೊಡುವಂತೆ ಆಪಲ್ ಗೆ ಬೇಡಿಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಆಪಲ್ ಗೆ ಹೊಡೆತ:

ಆಪಲ್ ಗೆ ಹೊಡೆತ:

ಈ ಮಾದರಿಯಲ್ಲಿ ಹೊಸ ಐಫೋನ್ ಗಳಲ್ಲಿ ತೊಂದರೆಯನ್ನು ಹುಡುಕುತ್ತಿರುವ ಬಳಕೆದಾರರು ಸೋಶಿಯಲ್ ಮೀಡಿಯಾದಲ್ಲಿ ಅದನ್ನು ಎತ್ತಿ ತೋರಿಸುತ್ತಿದ್ದಾರೆ. ಇದರಿಂದಾಗಿ ಆಪಲ್ ಗೆ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಯಾಗಲಿದೆ ಎನ್ನಲಾಗಿದೆ. ಇದರಿಂದಾಗಿ ಮುಂದೆ ಐಫೋನ್ ಮಾರಾಟದ ಮೇಲೆಯೂ ಪರಿಣಾಮ ಬೀರಲಿದೆ. ಆಪಲ್ ನಿಂದ ಈ ತೊಂದರೆಗಳನ್ನು ಸರಿಪಡಿಸಲಾಗುವುದು ಎನ್ನುವ ಮಾತು ಕೇಳಿ ಬಂದಿದೆ.

ಐಫೋನ್ XS ವಿಶೇಷತೆ:

ಐಫೋನ್ XS ವಿಶೇಷತೆ:

ಐಫೋನ್ XS ನಲ್ಲಿ 5.8 ಇಂಚಿನ ಸೂಪರ್ ರೆಟಿನಾ OLED ನೋಚ್ ಡಿಸ್‌ಪ್ಲೇಯನ್ನು (2436 x 1125 p) ಅಳವಡಿಸಲಾಗಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಡ್ಯುಯಲ್ ಸಿಮ್ ಹಾಕಬಹುದಾದ ಐಫೋನ್ ಇದಾಗಿದೆ, ಇದರಲ್ಲಿ ಡ್ಯುಯಲ್ ಸಿಮ್ ನೊಂದಿಗೆ eSIM ಸಪೋರ್ಟ್ ಸಹ ಇದೆ. ಐಫೋನ್ XSನಲ್ಲಿ ಆಪಲ್ A12 ಬಯೋನಿಕ್ ಪ್ರೊಸೆಸರ್ ಅನ್ನು ಕಾಣಬಹುದಾಗಿದೆ.

ಐಫೋನ್ XS ಕ್ಯಾಮೆರಾ:

ಐಫೋನ್ XS ಕ್ಯಾಮೆರಾ:

ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಐಫೋನ್ XSನಲ್ಲಿ ಅಳಡಿಸಲಾಗಿದ್ದು, 12MP + 12 MP ರಿಯರ್ ಕ್ಯಾಮೆರಾವನ್ನು ಅಳಡಿಸಲಾಗಿದೆ. ಒಂದು ವೈಡ್ ಆಗಲ್ ಲೈನ್ಸ್ ಆಗಿದ್ದು, ಮತ್ತೊಂದು ಟೆಲಿಫೋನ್‌ ಲೆನ್ಸ್ ಆಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಕ್ಲಿಕಿಸುವ ಸಲುವಾಗಿ 7 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸ್ಮಾರ್ಟ್ HDR ಫೀಚರ್ ಅನ್ನು ಇದರಲ್ಲಿ ಕಾಣಬಹುದಾಗಿದ್ದು, ಹಿಂದಿಗಿಂತಲೂ ಸುಧಾರಿತ ಬ್ಯಾಟರಿ ಅಳವಡಿಸಲಾಗಿದೆ.

ಐಫೋನ್ XS ಮ್ಯಾಕ್ಸ್ ವಿಶೇಷತೆ:

ಐಫೋನ್ XS ಮ್ಯಾಕ್ಸ್ ವಿಶೇಷತೆ:

ಐಫೋನ್ XS ಮ್ಯಾಕ್ಸ್ ನಲ್ಲಿ 6.5 ಇಂಚಿನ ಸೂಪರ್ ರೆಟಿನಾ OLED ನೋಚ್ ಡಿಸ್‌ಪ್ಲೇಯನ್ನು (2688 x 1442 p) ಅಳವಡಿಸಲಾಗಿದೆ. ಅಲ್ಲದೆ ಇದು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಅತೀ ದೊಡ್ಡ ಡಿಸ್‌ಪ್ಲೇ ಹೊಂದಿರುವ ಐಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಡ್ಯುಯಲ್ ಸಿಮ್ ಹಾಕಬಹುದಾದ ಐಫೋನ್ ಇದಾಗಿದೆ, ಇದರಲ್ಲಿ ಡ್ಯುಯಲ್ ಸಿಮ್ ನೊಂದಿಗೆ eSIM ಸಪೋರ್ಟ್ ಸಹ ಇದೆ. ಐಫೋನ್ XSನಲ್ಲಿ ಆಪಲ್ A12 ಬಯೋನಿಕ್ ಪ್ರೊಸೆಸರ್ ಅನ್ನು ಕಾಣಬಹುದಾಗಿದೆ.

ಐಫೋನ್ XS ಮ್ಯಾಕ್ಸ್ ಕ್ಯಾಮೆರಾ:

ಐಫೋನ್ XS ಮ್ಯಾಕ್ಸ್ ಕ್ಯಾಮೆರಾ:

ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಐಫೋನ್ XS ಮ್ಯಾಕ್ಸ್ ನಲ್ಲಿ ಅಳಡಿಸಲಾಗಿದ್ದು, 12MP + 12 MP ರಿಯರ್ ಕ್ಯಾಮೆರಾವನ್ನು ಅಳಡಿಸಲಾಗಿದೆ. ಒಂದು ವೈಡ್ ಆಗಲ್ ಲೈನ್ಸ್ ಆಗಿದ್ದು, ಮತ್ತೊಂದು ಟೆಲಿಫೋನ್‌ ಲೆನ್ಸ್ ಆಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಕ್ಲಿಕಿಸುವ ಸಲುವಾಗಿ 7 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸ್ಮಾರ್ಟ್ HDR ಫೀಚರ್ ಅನ್ನು ಇದರಲ್ಲಿ ಕಾಣಬಹುದಾಗಿದ್ದು, ಹಿಂದಿಗಿಂತಲೂ ಸುಧಾರಿತ ಬ್ಯಾಟರಿ ಅಳವಡಿಸಲಾಗಿದೆ.

ಬೆಲೆ:

ಬೆಲೆ:

ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಮಾರುಕಟ್ಟೆಯಲ್ಲಿ 64GB, 256GB ಮತ್ತು 512 GB ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ. ಐಫೋನ್ Xs ರೂ.99,900 ರಿಂದ ರೂ.1,34,900 ವರೆಗೆ ದೊರೆಯಲಿದೆ. ಇದೇ ಮಾದರಿಯಲ್ಲಿ ಐಫೋನ್ Xs ಮ್ಯಾಕ್ಸ್ ರೂ.1,09,900 ದಿಂದ ರೂ.1,44,900 ವರೆಗೂ ಲಭ್ಯವಿರಲಿದೆ.

Best Mobiles in India

Read more about:
English summary
iPhone XS Charging Issues Reported by Some Users, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X