ಐವಿಯೋಮಿ i1 ಮತ್ತು i1S ಸ್ಮಾರ್ಟ್ ಫೋನ್ ನಲ್ಲಿ ಕೊಡುವ ಬೆಲೆಗೆ ಹೆಚ್ಚಿನದನ್ನೇ ಕಾಣಬಹುದು..!

Written By: Lekhaka

ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೂಲದ ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿದ್ದು, ಇದೇ ಮಾದರಿಯಲ್ಲಿ ಐವಿಯೋಮಿ ಕಂಪನಿಯೂ ಅತೀ ಕಡಿಮೆ ಬೆಲೆಗೆ ಡ್ಯುಯಲ್ ಲೈನ್ಸ್ ಕ್ಯಾಮೆರಾ ಮತ್ತು 18:9 ಅನುಪಾತದ ಡಿಸ್ ಪ್ಲೇಯನ್ನು ನೀಡುತ್ತಿದ್ದು ಈ ಮೂಲಕ ಭಾರತೀಯ ಮನಗೆಲ್ಲಲು ಮುಂದಾಗಿದೆ.

ಐವಿಯೋಮಿ i1 ಮತ್ತು i1S ಸ್ಮಾರ್ಟ್ ಫೋನ್ ನಲ್ಲಿ ಕೊಡುವ ಬೆಲೆಗೆ ಕಾಣಬಹುದು..!

ಐವಿಯೋಮಿ i1 ಮತ್ತು i1S ಸ್ಮಾರ್ಟ್ ಫೋನ್ ಗಳು ಇಂದು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಫ್ಲಿಪ್ ಕಾರ್ಟ್ ನಲ್ಲಿ ಈ ಸ್ಮಾರ್ಟ್ ಫೋನ್ ಗಳು ಕ್ರಮವಾಗಿ ರೂ.5,999 ಮತ್ತು ರೂ.7,400 ಗಳಿಗೆ ದೊರೆಯಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್ ಫೋನ್ ಗಳು ಹೇಗಿದೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿನ್ಯಾಸ:

ವಿನ್ಯಾಸ:

ಐವಿಯೋಮಿ i1 ಮತ್ತು i1S ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಗ್ಲಾಸ್ ಫಿನಿಷಿಂಗ್ ಕಾಣಬಹುದಾಗಿದೆ. ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಕಾಣಬಹುದಾಗಿದೆ. ಇದಲ್ಲದೇ 18:9 ಸ್ಕ್ರಿನ್ ಇದಕ್ಕೆ ಹೊಸ ಲುಕ್ ಕೊಟ್ಟಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ಗಳಲ್ಲಿ ಕ್ರಮವಾಗಿ 4000mAh ಮತ್ತು 3000mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಹಿಂಭಾಗದಲ್ಲಿ ಡ್ಯುಯಲ್ ಲೆನ್ಸ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬೆಲೆಗೆ ತಕ್ಕ ಡಿಸ್ ಪ್ಲೇ:

ಬೆಲೆಗೆ ತಕ್ಕ ಡಿಸ್ ಪ್ಲೇ:

ಇದಲ್ಲದೇ ಐವಿಯೋಮಿ i1 ಮತ್ತು i1S ಸ್ಮಾರ್ಟ್ ಫೋನ್ ನಲ್ಲಿ 5.45 ಇಂಚಿನ HD ಡಿಸ್ ಪ್ಲೇಯನ್ನು ಕಾಣಬಹುದಾಗಿದೆ, ಇದರೊಂದಿಗೆ 18:9 ಅನುಪಾತವನ್ನು ಹೊಂದಿದೆ. ಕೊಡುವೆ ಬೆಲೆಗೆ ತಕ್ಕ ಫೋನ್ ಇದಾಗಿದೆ. ಅಲ್ಲದೇ ವಿಡಿಯೋ ನೋಡುವ ಮತ್ತು ಗೇಮ್ ಆಡುವ ಅನುಭವವು ಉತ್ತಮವಾಗಿದೆ.

ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಐವಿಯೋಮಿ i1 ಮತ್ತು i1S ಸ್ಮಾರ್ಟ್ ಫೋನ್ ನಲ್ಲಿರುವ ಡ್ಯುಯಲ್ ಲೈನ್ಸ್ ಕ್ಯಾಮೆರಾ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಹಾಯಕವಾಗಿದ್ದು, 13 MP + 2MP ಕ್ಯಾಮೆರಾ ಸೆಟಪ್ ಕಾಣಬಹುದಾಗಿದೆ. ಬೆಲೆಯ ರೀತಿಯಲ್ಲಿ ನೋಡಿದರೆ ಇದು ಉತ್ತಮ ಕ್ಯಾಮೆರಾ ಎನ್ನಬಹುದಾಗಿದೆ.

ಆಧಾರ್ ಧೃಡೀಕರಣಕ್ಕೆ ಫಿಂಗರ್ ಪ್ರಿಂಟ್ ಬೇಕಿಲ್ಲ..!?

2GB RAM:

2GB RAM:

ಐವಿಯೋಮಿ i1 ಮತ್ತು i1S ಸ್ಮಾರ್ಟ್ ಫೋನ್ ನಲ್ಲಿ ಕ್ವಾಡ್ ಕೋರ್ ಮಿಡಿಯಾ ಟೆಕ್ 6737 ಚಿಪ್ ಸೆಟ್ ಕಾಣಬಹುದಾಗಿದ್ದು, ಅಲ್ಲದೇ ಮಾಲಿ t720 GUP ಸಹ ಅಳವಡಿಸಲಾಗಿದೆ. ಐವಿಯೋಮಿ i1 ನಲ್ಲಿ 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ, ಐವಿಯೋಮಿ i1S ಸ್ಮಾರ್ಟ್ ಫೋನ್ ನಲ್ಲಿ 3GB RAM ಮತ್ತು 32GB ಇಂಟರ್ನಲ್ ಮೊಮೆರಿ ನೀಡಲಾಗಿದೆ. ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದೆ.

ಬ್ಯಾಟರಿ:

ಬ್ಯಾಟರಿ:

ಈ ಸ್ಮಾರ್ಟ್ ಫೋನ್ ನಲ್ಲಿ ಉತ್ತಮ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಒಂದು ದಿನದ ಬ್ಯಾಕಪ್ ನೀಡುತ್ತವೆ ಎನ್ನಲಾಗಿದೆ. ಇದಲ್ಲದೇ VOLTEನಲ್ಲಿ ಕಾರ್ಯನಿರ್ವಹಿಸಲಿದ್ದು, ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಬ್ಲೂಟೂತ್, ವೈ-ಫೈ ಇದರಲ್ಲಿದೆ.

How to Activate UAN Number? KANNADA
ಕೊನೆ ಮಾತು:

ಕೊನೆ ಮಾತು:

ಕೊಡುವ ಬೆಲೆಗೆ ಈ ಸ್ಮಾರ್ಟ್ ಫೋನ್ ಗಳು ಯಾವುದೇ ನಷ್ಟವನ್ನು ಮಾಡುವುದಿಲ್ಲ. ಇದೇ ಮಾದರಿಯ ಆಯ್ಕೆಗಳಿರುವ ಸ್ಮಾರ್ಟ್ ಫೋನ್ ಗಳ ಬೆಲೆ ಮಾರುಕಟ್ಟೆಯಲ್ಲಿ ರೂ.15000 ರಿಂದ 20000ದ ವರೆಗೂ ಇದೆ, ಬೆಲೆಯ ವಿಚಾರದಲ್ಲಿ ನೋಡಿದರೆ ಈ ಸ್ಮಾರ್ಟ್ ಫೋನ್ ಗಳು ಉತ್ತಮವಾಗಿದೆ. ಆದರೆ ಗುಣಮಟ್ಟದ ಫೋನ್ ಬೇಕು ಎನ್ನುವವರಿಗೆ ಇದು ಸರಿಯಾದ ಆಯ್ಕೆಯಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
iVoomi i1 First Impressions. The budget smartphone is priced t Rs. 5,999 and offer 18:9 aspect ratio displays and dual-lens camera setup. It will exclusively sell on Flipkart
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot