ಜನವರಿ 11ಕ್ಕೆ 5100mAh ಬ್ಯಾಟರಿ ಸಾಮರ್ಥ್ಯದ Lenovo P2 ಬಿಡುಗಡೆ

Written By:

ಚೈನಾ ಮೂಲದ ಲಿನೊವೊ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಪವರ್‌ಫುಲ್ ಬ್ಯಾಟರಿ ಸಾಮಾರ್ಥ್ಯದ ಸ್ಮಾರ್ಟ್‌ಪೋನೊಂದನ್ನು ಈ ಹಿಂದೆಯೇ ಪರಿಚಯಿಸುವುದಾಗಿ ಪ್ರಕಟಿಸಿತ್ತು. ಈ ಹಿನ್ನಲೆಯಲ್ಲಿ ಜನವರಿ 11 ರಂದು 'P' ಸರಣಿಯ Lenovo P2 ಬಿಡುಗಡೆ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ.

ಜನವರಿ 11ಕ್ಕೆ 5100mAh ಬ್ಯಾಟರಿ ಸಾಮರ್ಥ್ಯದ Lenovo P2 ಬಿಡುಗಡೆ

ವಾಟ್ಸಪ್ ಬಳಕೆಗೂ ಶುಲ್ಕ..? ಏನೀನು ಹರಿದಾಡುತ್ತಿರುವ ಸುದ್ದಿ..?

5100mAh ಬ್ಯಾಟರಿ ಸಾಮಾರ್ಥ್ಯದ Lenovo P2 ಬಿಡುಗಡೆಗೆ ಮುಂಚೆಯೇ ಸಾಕಷ್ಟು ಸದ್ದು ಮಾಡಿದ್ದು, ತನ್ನ ಪವರ್ ಫುಲ್ ಬ್ಯಾಟರಿಯಿಂದಲೇ ಖ್ಯಾತಿಯನ್ನು ಮೂಡಿಸಿದೆ. ಈಗಾಗಲೇ ಈ ಪೋನ್ ಕೊಂಡುಕೊಳ್ಳಲು ಜನರು ತುದಿಗಾಲಿನಿಂತಿದ್ದಾರೆ. ಅಲ್ಲದೇ ಪೋನ್ ಈಗಾಗಲೇ ಫ್ಲಿಪ್ ಕಾರ್ಟಿನಲ್ಲಿ ಸೇಲ್ ಆಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5100mAh ಬ್ಯಾಟರಿ:

5100mAh ಬ್ಯಾಟರಿ:

Lenovo P2 ಪೋನಿನ ಪ್ರಮುಖ ಆಕರ್ಷಣೆ ಎಂದರೆ 5100mAh ಬ್ಯಾಟರಿ. ಇದರ ಜೊತೆಗೆ ಫಾಸ್ಟ್‌ ಚಾರ್ಜಿಂಗ್ ಆಯ್ಕೆ ಸಹ ನೀಡಿರುವುದು ಉತ್ತಮ ಸಂಗತಿಯಾಗಿದೆ. ಹೆಚ್ಚಿನ ಬ್ಯಾಟರಿ ಬಾಳಿಕೆ ಈ ಪೋನಿನಲ್ಲಿ ಲಭ್ಯವಿದ್ದು, ಹಾಗಾಗಿ ದೀರ್ಘಕಾಲದ ವಿಡಿಯೋ ನೋಡಲು ಇದು ಸಹಾಯಕವಾಗಿದೆ.

ಡೀಸ್‌ಪ್ಲೇ

ಡೀಸ್‌ಪ್ಲೇ

5.5 ಇಂಚಿನ AMOLED ಸ್ಕ್ರಿನ್ ಈ ಪೋನಿನಲ್ಲಿದ್ದು, 1920 x 1080 p ಗುಣಮಟ್ಟದ Full HD ರೆಲ್ಯೂಷನ್ ಹೊಂದಿದೆ. ಗುಟಮಟ್ಟದ ವಿಡಿಯೋ ವಿಕ್ಷಣೆಗೆ, ಆಟವಾಡಲು ಈ ಸ್ಕ್ರಿನ್ ಹೇಳಿ ಮಾಡಿಸಿದಂತೆ ಇದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

Lenovo P2 ಪೋನಿನಲ್ಲಿ 2GHz ವೇಗದ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ ಚಿಪ್ ಸೆಟ್ ಇದೆ. ಅಲ್ಲದೇ ಈ ಪೋನು ಎರಡು ಮಾದರಿಯಲ್ಲಿ ಲಭ್ಯವಿದ್ದು, 3GB RAM ಜೊತೆಗೆ 32GB ಇಂಟರ್ನಲ್ ಮೆಮೊರಿ ಒಂದು ಮಾದರಿಯಾದರೆ, 4GB RAM ಜೊತೆಯಲ್ಲಿ 64GB ಮೆಮೊರಿ ಸಾಮರ್ಥ್ಯದ ಇನ್ನೊಂದು ಮಾದರಿಯಲ್ಲಿ ಲಭ್ಯವಿದೆ. ಅಲ್ಲದೇ ಕಾರ್ಡ್‌ ಹಾಕಿಕೊಂಡು ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವಿದೆ.

ಕ್ಯಾಮೆರಾ:

ಕ್ಯಾಮೆರಾ:

ಈ ಪೋನಿಲ್ಲಿ ಹಿಂಭಾಗದಲ್ಲಿ 13MP ಕ್ಯಾಮೆರಾ ಇದೆ. ಜೊತೆಗೆ ಡುಯಲ್ ಟೋನ್ ಎಲ್‌ಇಡಿ ಪ್ಲಾಷ್ ಇದೆ. ಇದರೊಂದಿಗೆ ಮುಂಭಾಗದಲ್ಲಿ 5MP ಕ್ಯಾಮೆರಾ ಇದೆ. ಸೆಲ್ಫಿತೆಗೆದುಕೊಳ್ಳಲು ಹೇಳಿ ಮಾಡಿಸಿದಂತಿದೆ. ಹಿಂಭಾಗದ ಕ್ಯಾಮೆರಾ ಕೆಳಭಾಗದಲ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Lenovo India is now rolling out press invites to an event to be held in New Delhi on January 11. Last week, the company’s India unit released a teaser on social media. to more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot