ವಾಟ್ಸಪ್ ಬಳಕೆಗೂ ಶುಲ್ಕ..? ಏನೀನು ಹರಿದಾಡುತ್ತಿರುವ ಸುದ್ದಿ..?

ವಾಟ್ಸಪ್ ಕಾರ್ಯ ಆರಂಭಿಸಿದ ಕಾಲದಲ್ಲಿ ಮೊದಲು ಒಂದು ವರ್ಷ ಉಚಿತ ಸೇವೆ, ನಂತರ ವರ್ಷದ ಬಳಕೆಗೆ 55 ರೂ ನೀಡಬೇಕಾಗುತ್ತದೆ ಎನ್ನುವ ನಿಯಮವೊಂದು ಇತ್ತು.

|

ಫೇಸ್‌ಬುಕ್ ಒಡೆತನಕ್ಕೆ ಸೇರಿದ ಮೇಸೆಜಿಂಗ್ ಆಪ್‌ಗಳ ಕಿಂಗ್ ವಾಟ್ಸಪ್ ಬಳಕೆಗೂ ಇನ್ನು ಮುಂದೆ ಶುಲ್ಕ ವಿಧಿಸಲಾಗುತ್ತೆ ಎನ್ನುವ ಸುದ್ಧಿ ಮತ್ತೊಮ್ಮೆ ವೈರಲ್ ಆಗಿದ್ದು, ವಾಟ್ಸಪ್ ನಿಂದ ಕಳಿಸುವ ಪ್ರತಿ ಮೇಸೆಜಿಗೂ ಶುಲ್ಕ ವಿಧಿಸಲಾಗುತ್ತದೆ ಎಂಬ ಸಂದೇಶವೊಂದು ವಾಟ್ಸಪ್ ನಲ್ಲಿ ಒಡಾಡುತ್ತಿದ್ದು, ಇದು ನಿಜವೇ, ವಾಟ್ಸಪ್ ನನ್ನ ಬಳಕೆದಾರರ ಮೇಲೆ ದರ ವಿಧಿಸುವ ಕಾರ್ಯಕ್ಕೆ ಮುಂದಾಗುವುದೇ...?

ವಾಟ್ಸಪ್ ಬಳಕೆಗೂ ಶುಲ್ಕ..? ಏನೀನು ಹರಿದಾಡುತ್ತಿರುವ ಸುದ್ದಿ..?

ಎಚ್ಚರ..! ವಾಟ್ಸಪ್ ಮೂಲಕವೇ ನಿಮ್ಮ ಬ್ಯಾಂಕಿಗ್ ಡಿಟೈಲ್ಸ್ ಕದಿಬಹುದು...!

ಈ ಹಿಂದೆ ವಾಟ್ಸಪ್ ಕಾರ್ಯ ಆರಂಭಿಸಿದ ಕಾಲದಲ್ಲಿ ಮೊದಲು ಒಂದು ವರ್ಷ ಉಚಿತ ಸೇವೆ, ನಂತರ ವರ್ಷದ ಬಳಕೆಗೆ 55 ರೂ ನೀಡಬೇಕಾಗುತ್ತದೆ ಎನ್ನುವ ನಿಯಮವೊಂದು ಇತ್ತು. ನಂತರ ವಾಟ್ಸಪ್ ಬೆಳೆಯುತ್ತಿದ್ದ ವೇಗವನ್ನ ನೋಡಿದ ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ವಾಟ್ಸಪ್ ಅನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಇದಾದ ನಂತರ ಫೇಸ್‌ಬುಕ್ ವಾಟ್ಸಪ್ ಬಳಕೆಯನ್ನು ಸಂಪೂರ್ಣವಾಗಿ ಉಚಿತ ಎಂದು ಘೋಷಿಸಿತು.

ಇದಾದ ನಂತರ ಈಗ ಮತ್ತೆ ವಾಟ್ಸಪ್ ಗ್ರೂಪುಗಳಲ್ಲಿ ಮೇಸೆಜ್ ವೊಂದು ಹರಿದಾಡುತ್ತಿದ್ದು, ವಾಟ್ಸಪ್ ಇನ್ನು ಮುಂದೆ ಬಳಕೆಗೆ ದರ ವಿಧಿಸಲಿದ್ದು, ಅದರಿಂದ ನೀವು ಹೊರಗೆ ಉಳಿಯಬೇಕಾದರೆ ಈ ಸಂದೇಶವನ್ನು 10 ಮಂದಿಗೆ ಕಳುಹಿಸಿ, ಆ ನಂತರ ನಿಮ್ಮ ವಾಟ್ಸಪ್ ಬಳಕೆಯೂ ಉಚಿತವಾಗಲಿದೆ ಎನ್ನುವ ಸಂದೇಶವೂ ಎಲ್ಲ ವಾಟ್ಸಪ್ ಗಳಲಿಗೂ ಹರಿದಾಡುತ್ತಿದೆ.

ವಾಟ್ಸಪ್ ಬಳಕೆಗೂ ಶುಲ್ಕ..? ಏನೀನು ಹರಿದಾಡುತ್ತಿರುವ ಸುದ್ದಿ..?
ಫೇಸ್‌ಬುಕ್ ನೋಟಿಫಿಕೇಷನ್ ಹೆಚ್ಚಾಯಿತಾ..? ಬರದಂತೆ ಮಾಡುವುದು ಹೇಗೆ..?

ಇದೊಂದು ಸುಳ್ಳು ಸಂದೇಶವಾಗಿದ್ದು, ವಾಟ್ಸಪ್ ಎಂದಿಗೂ ತನ್ನ ಬಳಕೆದಾರರಿಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ. ಈ ರೀತಿಯ ಯಾವುದೇ ಆಲೋಚನೆ ವಾಟ್ಸಪ್ ಬಳಿ ಇಲ್ಲ ಎನ್ನಾಗಿದೆ. ಇದೊಂದು ಫೇಕ್ ಮೇಸೆಜ್ ಆಗಿದ್ದು ಹಾಗಾಗಿ ವಾಟ್ಸಪ್ ಬಳಕೆದಾರರು ಈ ಬಗ್ಗೆ ಹೆಚ್ಚಿನ ತಲೆ ಕಡಿಸಿಕೊಳ್ಳಬೇಕಾಗಿಲ್ಲ. ಅಲ್ಲದೇ ಅಂತಹ ಮೇಸೆಜ್ ಬಂದ್ರೆ ಅಲ್ಲೇ ನೋಡಿ ಡೀಲಿಟ್ ಮಾಡಿ. ಮತ್ತೆ ಅದನ್ನು ಮತ್ತೊಂದು ಗ್ರೂಪಿಗೆ ಕಳುಹಿಸಿ ಅವರಲ್ಲೂ ಇದೇ ಸಂಶಯವನ್ನು ಹುಟ್ಟು ಹಾಕದಿರಿ.

Best Mobiles in India

Read more about:
English summary
Recently, a new message being circulated, which states that “WhatsApp is to begin charging users for each and every message”. Sounds really ridiculous right, as it will be. to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X