Subscribe to Gizbot

ಜಿಯೋದಲ್ಲೂ ನಮೋ ಜಪ : 4G ಮೊಬೈಲ್‌ನಲ್ಲಿ 'ಏನಿದೆ-ಏನಿಲ್ಲ' ಕಂಪ್ಲೀಟ್ ರಿಪೋರ್ಟ್..!!!

Written By:

ದೇಶಿಯ ಮಾರುಕಟ್ಟೆಯಲ್ಲಿ ಈ ಹಿಂದೆ ತಮ್ಮದೇ ಛಾಪು ಮೂಡಿಸಿದ್ದ ರಿಲಯನ್ಸ್ ಸಂಸ್ಥೆ ಮತ್ತೆ ಲಯಕ್ಕೆ ಬಂದಿದ್ದು, ದೇಶಿಯ ಟೆಲಿಕಾಂ ವಲಯದಲ್ಲಿ ಭಾರೀ ಧೂಳೆಬ್ಬಿಸುವ ಮೂಲಕ ಹೊಸ ಕ್ರಾಂತಿಗೆ ಕಾರಣವಾಗಿತ್ತು. ಸದ್ಯ ಬೇರೆ ಟೆಲಿಕಾಂ ಕಂಪನಿಗಳು ತನ್ನ ವಿರುದ್ಧ ನಿಲ್ಲದ ಮಟ್ಟಕ್ಕೆ ಬೆಳೆದು ನಿಂತಿದೆ. ಈ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ.

ಜಿಯೋದಲ್ಲೂ ನಮೋ ಜಪ : 4G ಮೊಬೈಲ್‌ನಲ್ಲಿ 'ಏನಿದೆ-ಏನಿಲ್ಲ' ಕಂಪ್ಲೀಟ್ ರಿಪೋರ್ಟ್..!

ಓದಿರಿ: ಬೆಂಗಳೂರಲ್ಲಿ ಬ್ಲಾಸ್ಟ್ ಆಯ್ತು ಶಿಯೋಮಿ ರೆಡ್‌ಮಿ 4: ಇಲ್ಲಿದೇ ನೋಡಿ ಮೊಬೈಲ್ ಹತ್ತಿಉರಿದ ವಿಡಿಯೋ..!!

ಅದುವೇ ತನ್ನ ಗ್ರಾಹಕರಿಗೆ ಉಚಿತವಾಗಿ 4G VoLTE ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್ ಮಾದರಿಯ ಫೀಚರ್ ಫೋನ್ ನೀಡಲು ಮುಂದಾಗಿದೆ. ಇದರೊಂದಿಗೆ ಉಚಿತ ಕರೆ ಮಾಡುವ ಅವಕಾಶ ಸೇರಿದಂತೆ 4G ಡೇಟಾ ಬಳಕೆಗೆ ಅವಕಾಶ ನೀಡಿದೆ. ಅಲ್ಲದೇ ಸ್ಮಾರ್ಟ್‌ಫೋನ್‌ಗಳು ನಾಚಿಸುವ ಅಂಶಗಳನ್ನು ತನ್ನಲ್ಲಿ ಅಡಕ ಮಾಡಿಕೊಂಡಿದೆ.

ಈ ಹಿನ್ನಲೆಯಲ್ಲಿ ಈ ಪೋನಿನಲ್ಲಿ ಇರುವ ಅಂಶಗಳೇನು- ಇಲ್ಲದಿರುವ ಅಂಶಗಳೇನು ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
50 ಕೋಟಿ ಫೋನ್ ಮಾರಾಟದ ಗುರಿ:

50 ಕೋಟಿ ಫೋನ್ ಮಾರಾಟದ ಗುರಿ:

ರಿಲಯನ್ಸ್ ಮಾಲೀಕತ್ವದ ಜಿಯೋ ಹೊಸದಾಗಿ ಬಿಡುಗಡೆ ಮಾಡಲಿರುವ ಜಿಯೋ ಫೋನ್ ಅನ್ನು ಸುಮಾರು 50 ಭಾರತೀಯರ ಕೈಗೆ ಸೇರಿಸಲು ಮುಂದಾಗಿದೆ. 2G-3G ಗ್ರಾಹಕರಿಗೆ 4G ಸೇವೆಯ ರುಚಿ ತೋರಿಸಲು ಮುಂದಾಗಿದೆ. ಈ ಮೂಲಕ ಬೇರೆ ಕಂಪನಿಗಳ ಪತನಕ್ಕೆ ನಾಂದಿ ಹಾಡುವ ಪ್ರಯತ್ನದಲ್ಲಿದೆ.

ಟಾಪ್ ಎಂಡ್ ಆಯ್ಕೆಗಳು:

ಟಾಪ್ ಎಂಡ್ ಆಯ್ಕೆಗಳು:

ಜಿಯೋ ಫೋನ್ ಕೊಳ್ಳಲು ರೂ.1500 ಠೇವಣಿ ಇಡಬೇಕಾಗಿದ್ದು, ಇದುವೇ ಮೂರು ವರ್ಷಗಳಲ್ಲಿ ಹಿಂತಿರುಗಿ ಬರಲಿದೆ. ಹಾಗಾಗಿ ಈ ಫೋನ್ ನಲ್ಲಿ ಉತ್ತಮ ಆಯ್ಕೆಗಳು ಇರುವುದಿಲ್ಲ ಎಂದು ಕೊಂಡರೆ ಅದು ನಿಮ್ಮ ತಪ್ಪು. ಈ ಫೋನಿನಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗಳಲ್ಲಿ ಇರುವಂತಹ ಆಯ್ಕೆಗಳು ಇದರಲ್ಲದೆ.

ವಾಯ್ಸ್ ಕಮಾಂಡಿಗ್ ಇದೆ:

ವಾಯ್ಸ್ ಕಮಾಂಡಿಗ್ ಇದೆ:

ಜಿಯೋ ಫೋನಿನಲ್ಲಿ ವಾಯ್ಸ್ ಕಮಾಂಡಿಗ್ ಸೇವೆಯನ್ನು ನೀಡಲಾಗಿದೆ. ಕರೆ ಮಾಡುವ, ಮೇಸೆಜ್ ಮಾಡುವ, ಫೈಲ್ ಗಳನ್ನು ಹುಡುಕುವ ಕಾರ್ಯವನ್ನು ಇದು ಮಾಡಲು ಶಕ್ತವಾಗಿದೆ. ಇದು ಬೇರೆ ಸ್ಮಾರ್ಟ್‌ಫೋನ್ ಗಳಲ್ಲಿ ಇಲ್ಲದಿರುವ ಸೇವೆಯಾಗಿದೆ.

ಟಿವಿ ಕನೆಕ್ಟರ್:

ಟಿವಿ ಕನೆಕ್ಟರ್:

ಸ್ಮಾರ್ಟ್‌ಫೋನ್ ಗಳನ್ನ ಸಾಮಾನ್ಯ ಟಿವಿಗಳಿಗೆ ಕನೆಕ್ಟ್ ಮಾಡಲು ಸಾಧ್ಯವಿಲ್ಲ ಆದರೆ ಜಿಯೋ ಫೋನ್ ಅನ್ನು ಹಳೇಯ ಟಿವಿಗಳಿಗೆ ಕನೆಕ್ಟ್ ಮಾಡಿಕೊಂಡು ಸಿನಿಮಾ, ವಿಡಿಯೋ ಗಳನ್ನು ನೋಡುವ ಅವಕಾಶವನ್ನು ಮಾಡಿಕೊಡಲಾಗಿದೆ.

ನಮೋ ಆಪ್:

ನಮೋ ಆಪ್:

ಇದಲ್ಲದೇ ಈ ಪೋನಿನಲ್ಲಿ ನಮೋ ಆಪ್ ಇರಲಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್‌ಕೀಬಾತ್ ವಿಡಿಯೋ ಗಳನ್ನು ನೋಡಬಹುದಾಗಿದೆ. ಅಲ್ಲದೇ ನಮೋ ಗೆ ಸಂಬಂಧಿಸಿದ ವಿಡಿಯೋಗಳು ಇದರಲ್ಲಿ ದೊರೆಯಲಿದೆ.

ಫೇಸ್‌ಬುಕ್ ಆಪ್ ಇದೆ:

ಫೇಸ್‌ಬುಕ್ ಆಪ್ ಇದೆ:

ಈಗಾಗಲೇ ದೇಶ-ವಿದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಆಪ್ ಈ ಫೋನಿನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇದು ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ.

ವಾಟ್ಸ್ಆಪ್ ಸಫೋರ್ಟ್ ಮಾಡಲ್ಲ:

ವಾಟ್ಸ್ಆಪ್ ಸಫೋರ್ಟ್ ಮಾಡಲ್ಲ:

ಸದ್ಯ ದೊರಕಿರುವ ಮಾಹಿತಿಯ ಪ್ರಕಾರ ಜಿಯೋ ಫೋನ್‌ನಲ್ಲಿ ವಾಟ್ಸ್‌ಆಪ್ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನು ಸರಿಯಾದ ಮಾಹಿತಿ ಲಭ್ಯವಾಗಿಲ್ಲ, ಫೋನ್ ಬಿಡುಗಡೆಯ ನಂತರವೇ ತಿಳಿಯಲಿದೆ.

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ಜಿಯೋ ಆಪ್ ಗಳು ಇರಲಿದೆ:

ಜಿಯೋ ಆಪ್ ಗಳು ಇರಲಿದೆ:

ಜಿಯೋ ಗ್ರಾಹಕರ ಮಾದರಿಯಲ್ಲಿ ಜಿಯೋ ಫೋನ್ ಬಳಕೆದಾರರೂ ಜಿಯೋ ಆಪ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಜಿಯೋ ತನ್ನ ಆಪ್ ಗಳನ್ನು ಪ್ರಮೋಟ್ ಮಾಡಿಕೊಳ್ಳುತ್ತಿದೆ ಎನ್ನುವ ಮಾತು ಕೇಳಿಬಂದಿದೆ.

NFC ಆಯ್ಕೆಯೂ ಇದೆ:

NFC ಆಯ್ಕೆಯೂ ಇದೆ:

ಇದಲ್ಲದೇ ಈಗನ ಸ್ಮಾರ್ಟ್‌ಫೋನ್ ಗಳಲ್ಲಿ ಟ್ರೆಂಡ್ ಆಗಿರುವ ಶೇರಿಂಗ್ ಸೌಲಭ್ಯವನ್ನು ನೀಡುವ NFC ಆಯ್ಕೆಯನ್ನು ಜಿಯೋ ಫೋನಿನಲ್ಲಿ ಕಾಣಬಹುದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೆಮೊರಿ ಕಾರ್ಡ್ ಹಾಕಿಕೊಳ್ಳಬಹುದು:

ಮೆಮೊರಿ ಕಾರ್ಡ್ ಹಾಕಿಕೊಳ್ಳಬಹುದು:

ಇದಲ್ಲದೇ ಈ ಪೋನಿನಲ್ಲಿ ಮೆಮೊರಿಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಈ ಮೂಲಕ ಬಳಕೆದಾರರಿಗೆ ಹೆಚ್ಚಿನ ಅವಕಾಶವನ್ನು ನೀಡಿದೆ. ಮೆಮೊರಿ ಹೆಚ್ಚಿಸಿಕೊಂಡು ತಮ್ಮಗೆ ಬೇಕಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು.

ಡಿಜಿಟಲ್ ಪೇಮೆಂಟ್:

ಡಿಜಿಟಲ್ ಪೇಮೆಂಟ್:

ಈ ಫೋನಿನಲ್ಲಿ ಡಿಜಿಟಲ್ ಪೇಮೆಂಟ್ ಅನ್ನು ಸಂಪೂರ್ಣ ಸುರಕ್ಷಿತವಾಗಿ ಮಾಡಬಹುದು ಎನ್ನಲಾಗಿದೆ. ಇದಕ್ಕಾಗಿ ಬೇರೆ ಆಪ್ ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವ ಅವಕಶ್ಯಕತೆ ಇಲ್ಲ. ಫೋನಿನಲ್ಲಿಯೇ ಆ ಆಯ್ಕೆಯನ್ನು ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Jio Phone will also come with many mobile apps, including an inbuilt NaMo app. Find out here. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot