Subscribe to Gizbot

ಬೆಂಗಳೂರಲ್ಲಿ ಬ್ಲಾಸ್ಟ್ ಆಯ್ತು ಶಿಯೋಮಿ ರೆಡ್‌ಮಿ 4: ಇಲ್ಲಿದೇ ನೋಡಿ ಮೊಬೈಲ್ ಹತ್ತಿಉರಿದ ವಿಡಿಯೋ..!!

Written By:

ಇದೇ ಕೆಲವು ದಿನಗಳ ಹಿಂದೆ ಖ್ಯಾತ ಮೊಬೈಲ್ ತಯಾರಕ ಕಂಪನಿ ಸ್ಯಾಮ್‌ಸಂಗ್ ನ ಗ್ಯಾಲಾಕ್ಸಿ ನೋಟ್ 7 ಸ್ಮಾರ್ಟ್‌ಫೋನ್ ಗಳು ಒಂದರ ಹಿಂದೆ ಒಂದರಂತೆ ವಿವಿಧೆಡೆಯಲ್ಲಿ ಬ್ಲಾಸ್ಟ್ ಆದ ಕಾರಣ ಇಡೀ ಜಗತ್ತಿನಲ್ಲಿ ಮಾರಾಟವಾದ ಎಲ್ಲಾ ಸ್ಮಾರ್ಟ್‌ಫೋನ್ ಗಳನ್ನು ಕಂಪನಿ ಹಿಂದೆ ಪಡೆದಿತ್ತು, ಅನೇಕ ಏರ್‌ಲೈನ್ ಕಂಪನಿಗಳು ಈ ಫೋನ್ ನ್ನೊಂದಿಗೆ ಪ್ರಯಾಣಿಸುವುದನ್ನು ನಿಷೇಧಿಸಿದ್ದವು, ಈ ಸುದ್ದಿ ತಣ್ಣಾಗುತ್ತಿದ್ದಂತೆ ಶಿಯೋಮಿ ಕಂಪನಿಯ ಸ್ಮಾರ್ಟ್‌ಫೋನೊಂದು ಬೆಂಗಳೂರಿನಲ್ಲೇ ಬ್ಲಾಸ್ಟ್ ಆಗಿ ಚರ್ಚೆಗೆ ಗ್ರಾಸವಾಗಿದೆ. 

ಬೆಂಗಳೂರಲ್ಲಿ ಬ್ಲಾಸ್ಟ್ ಆಯ್ತು ಶಿಯೋಮಿ ರೆಡ್‌ಮಿ 4:

ಓದಿರಿ: ಜಿಯೋ ಫೋನ್ ಬ್ಯಾಡ್ ನ್ಯೂಸ್: ವಾಟ್ಸ್ಆಪ್ ಸಫೋರ್ಟ್ ಮಾಡಲ್ಲ, ದಿನಕ್ಕೆ 4G ಡೇಟಾ ಕೇವಲ 500MB ಮಾತ್ರ..!!!

ಬೆಂಗಳೂರಿನಲ್ಲಿ ಈಗಾಗಲೇ ಶಿಯೋಮಿ ಮೂರನೇ ಮಿ ಹೋಮ್ ತೆರೆಯುವ ಸಂಭ್ರಮದಲ್ಲಿದ್ದಾಗಲೇ ನೋಟ್ 4 ಫೋನಿನ ಸ್ಫೋಟ ಪ್ರಕರಣವು ವರದಿಯಾಗಿದ್ದು, ಈ ಸ್ಫೋಟ ಮನೆಯಲ್ಲೂ, ಮೊಬೈಲ್ ಇಟ್ಟಿರುವ ಜೇಬಿನಲ್ಲೋ ನಡೆದಿಲ್ಲ ಬದಲಿಗೆ ಫೋನ್ ಮಾರಾಟ ಮಾಡುತ್ತಿದ್ದ ಅಂಗಡಿಯಲ್ಲಿ ನಡೆದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ:

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ:

ಶಿಯೋಮಿ ನೋಟ್ 4 ಸ್ಮಾರ್ಟ್‌ಫೋನ್ ಬೆಂಗಳೂರಿನ ಶಾಪ್ ಒಂದರಲ್ಲಿ ಬ್ಲಾಸ್ಟ್ ಆಗಿರುವ ದೃಶ್ಯವು ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂಗಡಿಯಲ್ಲಿ ಗ್ರಾಹಕರಿಗೆ ನೂತನ ಫೋನ್ ಮಾರಾಟ ಮಾಡುವ ಸಂದರ್ಭದಲ್ಲಿ ಸಿಮ್ ಕಾರ್ಡ್ ಹಾಕಿ ಮೊಬೈಲ್ ಅನ್ ಮಾಡುತ್ತಿದ್ದಂತೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ.

ಧಗಧಗನೇ ಉರಿದ ಫೋನ್:

ಧಗಧಗನೇ ಉರಿದ ಫೋನ್:

ಮೊಬೈಲ್ ಖರೀದಿಸಿದ ಗ್ರಾಹಕ ಸಿಮ್ ಹಾಕಿಕೊಡುವಂತೆ ಅಂಗಡಿಯ ಹುಡುಗನಿಗೆ ನೀಡಿದ ಸಂದರ್ಭದಲ್ಲಿ ಮೊಬೈಲ್ ಆನ್ ಮಾಡುತ್ತಿದ್ದಂತೆ ಬೆಂಕಿ ಹತ್ತಿಕೊಂಡಿದ್ದು, ಧಗಧಗನೇ ಉರಿದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ನಂತರ ಬೆಂಕಿಯನ್ನು ನಂದಿಸಲೂ ಹರಸಾಹಸ ಪಟ್ಟಿದ್ದಾರೆ ಎನ್ನಲಾಗಿದೆ.

ವೈಟ್ ಫಿಲ್ಡ್‌ನಲ್ಲಿರುವ ಫೂರ್ವಿಕಾ ಶಾಪ್ ನಲ್ಲಿ:

ವೈಟ್ ಫಿಲ್ಡ್‌ನಲ್ಲಿರುವ ಫೂರ್ವಿಕಾ ಶಾಪ್ ನಲ್ಲಿ:

ಈ ಘಟನೆ ನಡೆದಿರುವುದು ಬೆಂಗಳೂರಿನ ವೈಟ್ ಫಿಲ್ಡ್ ನಲ್ಲಿರುವ ಫೂರ್ವಿಕಾ ಮೊಬೈಲ್ ವರ್ಲ್ಡ್ ಮಳಿಗೆಯಲ್ಲಿ. ಬ್ಲಾಸ್ಟ್ ಆಗಿರುವ ಫೋನ್ ರೆಡ್‌ಮಿ ನೋಟ್ 4 ಆಗಿದ್ದು, 3GB-32GB ಆವೃತ್ತಿಯ ಪೋನ್ ಆಗಿದೆ ಎನ್ನಲಾಗಿದೆ. ಆಫ್ ಲೈನ್ ಮಳಿಗೆಯಲ್ಲಿ ಈ ಫೋನ್ ರೂ.11,499ಕ್ಕೆ ಮಾರಾಟವಾಗುತ್ತಿದೆ.

ನೂತನ ಫೋನ್:

ನೂತನ ಫೋನ್:

ಸದ್ಯ ಬ್ಲಾಸ್ಟ್ ಆಗಿರುವ ಸ್ಮಾರ್ಟ್ ಫೋನ್ ಬ್ರಾಂಡ್ ನ್ಯೂ ಎನ್ನಲಾಗಿದೆ. ಆಗತಾನೆ ಬಿಲ್ ಮಾಡಿ ಬಾಕ್ಸ್ ಓಪನ್ ಮಾಡಲಾಗಿತ್ತು. ಹೊಸದಾಗಿ ಖರೀದಿಸಿದ ಗ್ರಾಹಕರು ಅಂಗಡಿಯಲ್ಲಿ ಸಿಮ್ ಹಾಕಿಕೊಳ್ಳಲು ಮುಂದಾದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಕೊಂಡಿದೆ.

ಮೊದಲು ವರದಿಯಾಗಿದ್ದು ಇಲ್ಲಿ:

ಶಿಯೋಮಿ ನೋಟ್ 4 ಸ್ಮಾರ್ಟ್ ಫೋನ್ ಬೆಂಗಳೂರಿನಲ್ಲಿ ಬ್ಲಾಸ್ಟ್ ಆಗಿದೆ ಎನ್ನುವ ವರದಿಯನ್ನು ಮೊದಲಿಗೆ ಟ್ವೀಟರ್ ನಲ್ಲಿ ಹಾಕಲಾಗಿತ್ತು, ನಂತರ ಯೂಟ್ಯೂಬಿನಲ್ಲಿ ಈ ವಿಡಿಯೋ ಕಾಣಿಸಿಕೊಂಡಿತ್ತು.

ಕಳೆದ ವರ್ಷವೂ ನಡೆದಿತ್ತು.

ಕಳೆದ ವರ್ಷವೂ ನಡೆದಿತ್ತು.

ಇದೇ ಮಾದರಿಯಲ್ಲಿ ಶಿಯೋಮಿ ಕಂಪನಿಯ ಶಿಯೋಮಿ ಮಿ 4i ಸ್ಮಾರ್ಟ್‌ಫೋನ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದ್ದ ಪ್ರಕರಣವು ವರದಿಯಾಗಿತ್ತು. ಟೇಬಲ್ ಮೇಲೆ ಇಟ್ಟದ ಸ್ಮಾರ್ಟ್‌ಫೋನ್ ಇದಕ್ಕೆ ಇದ್ದಾ ಹಾಗೇ ಬ್ಲಾಸ್ಟ್ ಆಗಿತ್ತು.

Xiaomi Redmi 4 Features !! ರೆಡ್‌ಮಿ 4 ಫೀಚರ್ಸ್ ಏನೇನಿದೆ? ಇಲ್ಲಿದೆ ಡಿಟೇಲ್ಸ್!!
ಶಿಯೋಮಿ ಫೋನ್ ಗಳ ಸಮಸ್ಯೆ:

ಶಿಯೋಮಿ ಫೋನ್ ಗಳ ಸಮಸ್ಯೆ:

ಶಿಯೋಮಿ ಫೋನ್ ಗಳು ಬೇಗ ಹೀಟ್ ಆಗುತ್ತವೆ ಎನ್ನುವ ಮಾತುಗಳು ತೀರಾ ಹಿಂದಿನಿಂದಲೂ ಕೇಳಿ ಬರುತ್ತಿದೆ. ಚಾರ್ಜಿಂಗ್ ಸಮಯದಲ್ಲಿ ಮತ್ತು ಹೆಚ್ಚಿನ ಬಳಕೆ ಮಾಡಿದ ಸಂದರ್ಭದಲ್ಲಿ ಓವರ್ ಹೀಟ್ ಆಗುವ ಲಕ್ಷಣಗಳನ್ನು ಹೊಂದಿದೆ ಎಂಬುದು ಬಳಕೆದಾರರ ಅಭಿಪ್ರಾಯವಾಗಿದೆ.

ವಿಡಿಯೋ ನೋಡಿ:

ಶಿಯೋಮಿ ನೋಟ್ 4 ಬ್ಲಾಸ್ಟ್ ಆಗಿರುವ ವಿಡಿಯೋ ಇಲ್ಲಿದ್ದು, ನೀವು ಒಮ್ಮೆ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The incident was captured on video and shows the smartphone completely burnt. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot