ಆಂಡ್ರಾಯ್ಡ್ ನಲ್ಲೂ ಇಲ್ಲದೇ ಗೂಗಲ್‌ನ ಈ ಸೇವೆ ಜಿಯೋ ಫೋನಿನಲ್ಲಿ..!!

|

ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಅಬ್ಬರ ಹೆಚ್ಚಾಗಿದೆ, ಮೊದಲ ಹಂತದ ಜಿಯೋ ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಔಟ್ ಆಫ್ ಸ್ಟಾಕ್ ಆಗಿದ್ದು, ಎರಡನೇ ಹಂತದಲ್ಲಿ ಬುಕ್ಕಿಂಗ್ ಆರಂಭವಾಗಿದೆ. ಈ ಬೆನ್ನಲ್ಲೇ ಜಿಯೋ ತನ್ನ ಜಿಯೋ ಫೋನ್‌ ಬಳಕೆದಾರರಿಗೆ ಹೊಸದೊಂದು ಸೇವೆಯನ್ನು ಬಳಕೆಗೆ ನೀಡಲು ಮುಂದಾಗಿದೆ.

ಆಂಡ್ರಾಯ್ಡ್ ನಲ್ಲೂ ಇಲ್ಲದೇ ಗೂಗಲ್‌ನ ಈ ಸೇವೆ ಜಿಯೋ ಫೋನಿನಲ್ಲಿ..!!

ಓದಿರಿ: ಉಚಿತ ವೈ-ಫೈನಲ್ಲಿ ಇ-ಬ್ಯಾಂಕಿಂಗ್ ಮಾಡಬೇಡಿ...!

ಜಿಯೋ ಫೋನಿನಲ್ಲಿ ಈಗಾಗಲೇ ವಾಯ್ಸ್ ಅಸಿಸ್ಟೆಂಟ್ ಅನ್ನು ಅಳವಡಿಸಿರುವ ಜಿಯೋ, ಮತ್ತೊಂದು ಖ್ಯಾತ ವಾಯ್ಸ್ ಅಸಿಸ್ಟೆಂಟ್ ಅನ್ನು ತನ್ನ ಫೋನಿನಲ್ಲಿ ನೀಡಲಿದೆ. ಹೆಚ್ಚು ಜನರು ಬಳಕೆ ಮಾಡಿಕೊಳ್ಳುತ್ತಿರುವ ಗೂಗಲ್ ಅಸಿಸ್ಟೆಂಟ್ ಆಪ್ ಅನ್ನು ತನ್ನ ಜಿಯೋ ಫೋನ್‌ನಲ್ಲಿ ನೀಡಲಿದೆ ಎನ್ನಲಾಗಿದೆ.

ಇಂಗ್ಲಿಷ್ ಮತ್ತು ಹಿಂದಿ:

ಇಂಗ್ಲಿಷ್ ಮತ್ತು ಹಿಂದಿ:

ಜಿಯೋ ಫೋನ್‌ಗಾಗಿಯೇ ಗೂಗಲ್ ಅಸಿಸ್ಟೆಂಟ್ ಬದಲಾಗುತ್ತಿದ್ದು, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಶೀಘ್ರವೇ ಜಿಯೋ ಫೋನ್‌ ಬಳಕೆದಾರರಿಗೆ ಈ ಆಪ್‌ಡೇಟ್ ದೊರೆಯಲಿದೆ ಎನ್ನಲಾಗಿದೆ.

ಎಲ್ಲಾ ಕಾರ್ಯಗಳನ್ನು ಮಾಡಬಹುದು:

ಎಲ್ಲಾ ಕಾರ್ಯಗಳನ್ನು ಮಾಡಬಹುದು:

ಗೂಗಲ್ ಈಗಾಗಲೇ ಜಿಯೋ ಫೋನಿನಲ್ಲಿ ಗೂಗಲ್ ಅಸಿಸ್ಟೆಂಟ್ ಅಳವಡಿಸುತ್ತಿರುವುದಾಗಿ ಮಾಹಿತಿಯನ್ನು ನೀಡಿದ್ದು, ಗೂಗಲ್ ಅಸಿಸ್ಟೆಂಟ್ ಮೂಲಕ ಕರೆ ಮಾಡುವ, ಮ್ಯೂಸಿಕ್ ಪ್ಲೇ ಮಾಡುವ, ಟೆಕ್ಸ್ಟ್ ಮಾಡುವ ಸೇವೆಗಳನ್ನು ಜಿಯೋ ಫೋನಿನಲ್ಲಿ ಪಡೆಯಬಹುದು ಎಂದು ತಿಳಿಸಿದೆ.

10 ಮಿಲಿಯನ್ ಜಿಯೋ ಫೋನ್‌

10 ಮಿಲಿಯನ್ ಜಿಯೋ ಫೋನ್‌

ಎರಡನೇ ಹಂತದಲ್ಲಿ ಜಿಯೋ ಒಟ್ಟು 10 ಮಿಲಿಯನ್ ಜಿಯೋ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಕಾರಣ ಮುಂದಿನ ದಿನಗಳಲ್ಲಿ ಕಡಿಮೆ ಬೆಲೆಗೆ ಆಂಡ್ರಾಯ್ಡ್ ಫೋನ್ ಅನ್ನು ಮಾರಾಟ ಮಾಡುವ ಆಲೋಚನೆ ಜಿಯೋ ಮುಂದಿದೆ.

ರೂ.1.500:

ರೂ.1.500:

ಜಿಯೋ ಫೋನ್ ಕೊಳ್ಳಲು ರೂ.1500 ಠೇವಣಿ ಇಡಬೇಕಾಗಿದ್ದು, ಇದುವೇ ಮೂರು ವರ್ಷಗಳಲ್ಲಿ ಹಿಂತಿರುಗಿ ಬರಲಿದೆ. ಹಾಗಾಗಿ ಈ ಫೋನ್ ನಲ್ಲಿ ಉತ್ತಮ ಆಯ್ಕೆಗಳು ಇರುವುದಿಲ್ಲ ಎಂದು ಕೊಂಡರೆ ಅದು ನಿಮ್ಮ ತಪ್ಪು. ಈ ಫೋನಿನಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಗಳಲ್ಲಿ ಇರುವಂತಹ ಆಯ್ಕೆಗಳು ಇದೆ.

Best Mobiles in India

English summary
Jio Phone to Get a Special Edition of Google Assistant, a First for Feature Phones. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X