ಇತಿಹಾಸದ ದಾಖಲೆ ಸೃಷ್ಟಿಸಿದ ಜಿಯೋ ಫೋನ್!!..ಬುಕ್ ಆದ ಸಂಖ್ಯೆ ಎಷ್ಟು ಗೊತ್ತಾ?

Posted By:

ದೇಶದಲ್ಲಿಯೇ ಬಹುನಿರೀಕ್ಷೆ ಹುಟ್ಟಿಸಿದ್ದ ಜಿಯೋ ಫೋನ್ ಬಿಡುಗಡೆಯಾದ ಕೆಲಹೊತ್ತಿನಲ್ಲಿಯೇ ದಾಖಲೆ ನಿರ್ಮಿಸಿದೆ.!! ಹೌದು, , ಗುರುವಾರ ಪ್ರಾರಂಭವಾದ 4 ಜಿ ವೊಲ್ಟ್ ಫೀಚರ್‌ಫೋನ್ ಅನ್ನು ಕಾಯ್ದಿರಿಸುವಿಕೆಯೂ ಕೆಲವೇ ಗಂಟೆಗಳಲ್ಲಿ ದಾಖಲೆ ನಿರ್ಮಿಸಿದ್ದು, ನಾಲ್ಕು ಮಿಲಿಯನ್ ಜನರು ಜಿಯೋ ಫೋನ್ ಬುಕ್ ಮಾಡಿದ್ದಾರೆ.!!

ಕೇವಲ 500 ರೂಪಾಯಿಗಳಿಗೆ ಬುಕ್ ಮಾಡಬಹುದಾಗಿದ್ದ ಜಿಯೋ ಫೋನ್ ಅನ್ನು ದೇಶದ ಜನರು ತಬ್ಬಿಹಿಡಿದಿದ್ದು, ಇದೇ ಮೊದಲ ಭಾರಿಗೆ ಫೋನ್ ಒಂದು ಈ ಪ್ರಮಾಣದಲ್ಲಿ ಬುಕ್ ಆಗಿರುವುದು ಎನ್ನಲಾಗಿದೆ.!! ಇದಕ್ಕೆ ಉದಾಹರಣೆಯಾಗಿ ಜಿಯೋ ವೆಬ್‌ಸೈಟ್ ಜನರ ಭೇಟಿಯ ತೀರ್ವತೆಯಿಂದಾಗಿ ಸ್ಥಗಿತಗೊಳ್ಳುತ್ತಿತ್ತು ಎಂದು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ.!!

ಜಿಯೋ ಫೋನ್ ಕೇವಲ 153 ರೂಪಾಯಿಗಳಿಗೆ ಪ್ರತಿತಿಂಗಳು ಅನ್‌ಲಿಮಿಟೆಡ್ ಟೆಲಿಕಾಂ ಸೇವೆಯನ್ನು ನೀಡುವುದಾಗಿ ಜಿಯೋ ಹೇಳಿದ್ದು, ಭಾರಿ ಫೋನ್ ಬೇಡಿಕೆಗೆ ಕಾರಣ ಎನ್ನಲಾಗಿದೆ.!! ಇನ್ನು ಇಂಟರ್‌ನೆಟ್‌ ಫೀಚರ್ಸ್ ಹೊಂದಿರುವ ಜಿಯೋ ಫೋನ್ ಎಲ್ಲರನ್ನು ಆಕರ್ಶಿಸಿದಸಿದೆ.!! ಹಾಗಾದರೆ, ಜಿಯೋ ಫೋನ್ ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1500 ಪಾವತಿಸಿ ಮತ್ತು ಉಚಿತವಾಗಿ ಪಡೆಯಿರಿ.!!

1500 ಪಾವತಿಸಿ ಮತ್ತು ಉಚಿತವಾಗಿ ಪಡೆಯಿರಿ.!!

500 ರೂಪಾಯಿಗೆ ಜಿಯೋ ಫೋನ್ ಅನ್ನು ಪ್ರೀ-ಬುಕಿಂಗ್ ಮಾಡಬಹುದಾಗಿದ್ದು, ಫೋನ್ ಡೆಲಿವರಿ ಸಮಯದಲ್ಲಿ ಉಳಿದ 1,000 ರೂಪಾಯಿಗಳನ್ನುಅನ್ನು ಪಾವತಿಸಬೇಕಾಗುತ್ತದೆ, ಒಟ್ಟು 1,500 ರೂ ನೀಡಿ ಮೊಬೈಲ್ ಖರೀದಿಸಬೇಕಾಗುತ್ತದೆ.ಮೂರುವರ್ಷಗಳ ನಂತರ ಈ ಹಣ ವಾಪಸ್ ದೊರೆಯಲಿದೆ.!!

ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಎಲ್ಲಾ ಫೀಚರ್ಸ್ ಇದೆ.!!

ಎಲ್ಲಾ ಫೀಚರ್ಸ್ ಇದೆ.!!

ಜಿಯೋ ಫೋನ್ ಬಹುತೇಕ ಎಲ್ಲಾ ಫೀಚರ್ಸ್ ಹೊಂದಿದ್ದು, ಜಿಯೋ ಅಪ್ಲಿಕೇಶನ್ಗಳು, ಲೈವ್ ಟಿವಿ, ಸಿನೆಮಾಗಳು ಸೇರಿದಂತೆ ವಾಟ್ಸ್‌ಆಪ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಳನ್ನು ಸಹ ಬಳಕೆ ಮಾಡಬಹುದಾಗಿದೆ. ಫೋನ್‌ ಮೂಲಕವೇ ನೇರವಾಗಿ ಟಿವಿಗೂ ಕನೆಕ್ಟ್ ಮಾಡುವ ಆಯ್ಕೆಯೂ ಇರಲಿದೆ.!!

ಮೊದಲು ಬುಕ್ ಮಾಡಿದವರಿಗೆ ಫೋನ್!!

ಮೊದಲು ಬುಕ್ ಮಾಡಿದವರಿಗೆ ಫೋನ್!!

ಜಿಯೋ ಮೊದಲೇ ಹೇಳಿದಂತೆ ಮೊದಲು ಜಿಯೋ ಫೋನ್ ಅನ್ನು ಯಾರು ಬುಕ್ ಮಾಡುತ್ತಾರೋ ಅವರಿಗೆ ಮೊದಲು ಫೋನ್ ಡೆಲಿವರಿ ನೀಡಲಿದೆ.!! ಈಗ ಬುಕ್ ಆಗಿರುವ ಜಿಯೋ ಫೋನ್‌ ಪ್ರಮಾಣವೇ 40 ಲಕ್ಷದಷ್ಟಿದ್ದು, ಅವುಗಳ ಪೂರೈಕೆಗೆ ಸಮಯ ಎಷ್ಟು ಬೇಕು ಎನ್ನುವುದೇ ಕುತೋಹಲವಾಗಿದೆ.!!

ಹೆದರಿದ ಏರ್‌ಟೆಲ್ ಮತ್ತು ಟೆಲಿಕಾಂ!!

ಹೆದರಿದ ಏರ್‌ಟೆಲ್ ಮತ್ತು ಟೆಲಿಕಾಂ!!

ಜಿಯೋ ಫೋನ್ ಈ ಪರಿಯಾಗಿ ಬುಕ್ ಆಗಿರುವುದರಿಂದ ಏರ್‌ಟೆಲ್ ಮತ್ತು ಇತರ ಟೆಲಿಕಾಂ ಕಂಪೆನಿಗಳು ಹೆದರಿವೆ.!! 2G ಮತ್ತು 3G ಗ್ರಾಹಕರನ್ನು ಹಿಡಿದಿಟ್ಟುಕೊಂಡಿದ್ದ ಅವುಗಳಿಗೆ ಜಿಯೋ ನೀಡಿರುವ ಹೊಡೆತದಿಂದ ಭಾರಿ ಪೆಟ್ಟು ಬೀಳುವ ಸಂಭವವಿದೆ.!!

ಏರ್‌ಟೆಲ್ ಮತ್ತು ಐಡಿಯಾ ಫೋನ್!!

ಏರ್‌ಟೆಲ್ ಮತ್ತು ಐಡಿಯಾ ಫೋನ್!!

ಜಿಯೋ ಫೋನ್‌ಗೆ ವಿರುದ್ದವಾಗಿ ಏರ್‌ಟೆಲ್ ಮತ್ತು ಐಡಿಯಾ ಕೂಡ ಫೋನ್ ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿವೆ.!! ಜಿಯೋ ಫೋನ್ ಈಗಾಗಲೇ ಪ್ರೀ ಬುಕ್ಕಿಂಗ್ ಸ್ಟಾರ್ಟ್‌ ಆಗಿರುವುದರಿಂದ ಜಿಯೋಗೆ ಸೆಡ್ಡು ಹೊಡೆಯಲು ಬಹುತೇಕ ಇನ್ನಷ್ಟು ಬೇಗ ಏರ್‌ಟೆಲ್ ಮತ್ತು ಐಡಿಯಾ ಫೋನ್ ಬಿಡುಗಡೆಯಾಗಬಹುದು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Pre-bookings of the much-awaited Jio Phone had crossed the 4million mark.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot