ದೀಪಾವಳಿ ಹಬ್ಬಕ್ಕೆ ಜಿಯೋವಿನಿಂದ ಮತ್ತೊಂದು ಬಿಗ್ ಆಫರ್ ಪ್ರಕಟ!

|

ದಸರಾ ಮತ್ತು ದೀಪಾವಳಿಯ ಹಬ್ಬದ ಸಮಯದಲ್ಲಿ ಜಿಯೋಫೋನ್ ಖರೀದಿಗಾಗಿ ಜಿಯೋ ಕಂಪೆನಿ ಭರ್ಜರಿ ಆಫರ್ ಪ್ರಕಟಿಸಿದೆ. ದಸರಾ ಮತ್ತು ದೀಪಾವಳಿಯ ಹಬ್ಬದ ಆಫರ್ ಅಗಿ ಜಿಯೋವಿನ ಮೊದಲ 4G ಫೀಚರ್ ಫೋನ್ 'ಜಿಯೋಫೋನ್' ಅನ್ನು ಕೇವಲ 699 ರೂಪಾಯಿಗಳ ವಿಶೇಷ ಬೆಲೆಗೆ ಲಭ್ಯವಾಗುವಂತೆ ''ಜಿಯೋಫೋನ್ ದಿಪಾವಳಿ 2019' ಆಫರ್ ಅನ್ನು ನೀಡಿದ್ದು, ನೀವೀಗ 1500 ರೂಪಾಯಿಗಳಷ್ಟು ಬೆಲೆ ಹೊಂದಿರುವ ಜಿಯೋ ಫೋನ್ ಜೊತೆಗೆ 800 ರೂ.ಗಿಂತ ಹೆಚ್ಚಿನ ಉಳಿತಾಯವಾಗುವ ಆಫರ್ ಅನ್ನು ಪಡೆಯಬಹುದಾಗಿದೆ.

ವಿಶೇಷ ಬೆಲೆಗೆ

ಹೌದು, ಈ ಮೊದಲಿನಂತೆ ನಿಮ್ಮ ಹಳೆಯ ಫೋನ್ ವಿನಿಮಯ ಮಾಡಿಕೊಳ್ಳುವಂತಹ ಯಾವುದೇ ವಿಶೇಷ ಷರತ್ತುಗಳಿಲ್ಲದೆ 'ಜಿಯೋಫೋನ್' ಅನ್ನು 699 ರೂಪಾಯಿಗಳ ವಿಶೇಷ ಬೆಲೆಗೆ ಲಭ್ಯವಾಗುವಂತೆ ಮಾಡಲು ಜಿಯೋ ಮುಂದಾಗಿದೆ. ಹಾಗಾಗಿ, ಇದೀಗ ಜಿಯೋ ಫೋನ್ ಖರೀದಿಸುವವರಿಗೆ 800 ರೂ ಮೌಲ್ಯದ ಡೇಟಾ ಪ್ರಯೋಜನಗಳನ್ನು ಉಚಿತವಾಗಿ ನೀಡುತ್ತಿದೆ. ಅಂದರೆ, ನೀವೀಗ ಜಿಯೋಫೋನ್ ಖರೀದಿಸಿದರೆ ನಿಮ್ಮ ಜಿಯೋ ಪೋನ್ ಜೊತೆಗೆ ಏಳು ತಿಂಗಳುಗಳ ಕಾಲ ಪ್ರತಿ ತಿಂಗಳು 99 ರೂ.ಗಳ ಹೆಚ್ಚುವರಿ ಡೇಟಾ ಉಚಿತವಾಗಿ ಸಿಗಲಿದೆ.

 700 ರೂ ಮೌಲ್ಯದ ಡೇಟಾ

ದೀಪಾವಳಿ 2019 ಆಫರ್ ಮೂಲಕ ಜಿಯೋಗೆ ಸೇರುವ ಜಿಯೋಫೋನ್ ಗ್ರಾಹಕರಿಗೆ, ಜಿಯೋ 800 ರೂ ಮೌಲ್ಯದ ಡೇಟಾ ಪ್ರಯೋಜನಗಳನ್ನು ನೀಡುತ್ತದೆ. ಈ ಪ್ರಯೋಜನವು ಜಿಯೋ ಫೋನ್ ಗ್ರಾಹಕರು ಮಾಡುವ ಮೊದಲ 7 ರೀಚಾರ್ಜ್‌ಗಳ ಜೊತೆಗೆ ಸಿಗಲಿದೆ. ಅಂದರೆ, ಜಿಯೋಫೋನ್ ಗ್ರಾಹಕರು ಪ್ರತಿ ತಿಂಗಳು ರೀಚಾರ್ಜ್ ಮಾಡಿಸಿದರೆ, ಆ ರೀಚಾರ್ಜ್ ಮೇಲೆ 99 ರೂ ಮೌಲ್ಯದ ಹೆಚ್ಚುವರಿ ಜಿಯೋ ಡೇಟಾ ಸೇರಿಸುತ್ತದೆ. ಹೀಗೆ ಒಟ್ಟಾರೆಯಾಗಿ 700 ರೂ. ಮೌಲ್ಯದ ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ.

 2ಜಿ ಸೇವೆಗಳಿಂದ 4G

ಈ ಬೆಲೆಯು ಮಾರುಕಟ್ಟೆಯಲ್ಲಿ ಪ್ರಸ್ತುತ ಇರುವ 2 ಜಿ ಫೀಚರ್ ಫೋನ್‌ಗಳಿಗಿಂತ ತೀರಾ ಕಡಿಮೆಯಾಗಿದ್ದು, ಕೇವಲ 1,500 ರೂ.ಗಳಲ್ಲಿ ಜಿಯೋಫೋನ್ ಗ್ರಾಹಕರು 4G ಫೋನ್ ಜೊತೆಗೆ ಉಚಿತ ಹೆಚ್ಚುವರಿ ಡೇಟಾವನ್ನು ಸಹ ಪಡೆಯಲಿದ್ದಾರೆ. 1,500 ರೂ.ಗಳ ಈ ಪ್ರಯೋಜನವು ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಇಂಡಿಯಾಕ್ಕೆ ದೀಪಾವಳಿ ಉಡುಗೊರೆಯಾಗಿದೆ. ಹಬ್ಬದ ತಿಂಗಳಲ್ಲಿ ಒಂದು ಬಾರಿಯ ಕೊಡುಗೆಯಾಗಿ ಬಂದಿರುವ ಈ ಆಫರ್ ಮೂಲಕ 2ಜಿ ಸೇವೆಗಳಿಂದ 4G ಸೇವೆಗೆ ಅಪ್‌ಗ್ರೇಡ್ ಆಗುವಂತೆ ಭಾರತೀಯರನ್ನು ಜಿಯೋ ಆಹ್ವಾನಿಸಿದೆ.

35 ಕೋಟಿ ಭಾರತೀಯರು

ಎಲ್ಲಾ ಭಾರತೀಯರ ಒಟ್ಟು ಡಿಜಿಟಲ್ ಒಳಗೊಳ್ಳುವಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಜಿಯೋ ಮತ್ತೊಂದು ಪ್ರಮುಖ ಹೆಜ್ಜೆ ಇಡುತ್ತಿದೆ. 2ಜಿ ನೆಟ್‌ವರ್ಕ್‌ಗಳಲ್ಲಿರುವ 35 ಕೋಟಿ ಭಾರತೀಯರು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿಲ್ಲ. ಅವರಿಗೆ ಜಿಯೋಫೋನ್‌ನ ಕಡಿಮೆ ಬೆಲೆ ಸಹ ನಿಭಾಯಿಸಲಾಗುವುದಿಲ್ಲ. ಹಾಗಾಗಿ, ದಸರಾ ಮತ್ತು ದೀಪಾವಳಿಯ ಹಬ್ಬದ ಸಮಯದಲ್ಲಿ, ಜಿಯೋ ಜಿಯೋಫೋನ್ ಅನ್ನು 699 ರೂಗಳ ವಿಶೇಷ ಬೆಲೆಗೆ ಲಭ್ಯವಾಗುವಂತೆ ಜಿಯೋ ಮಾಡುತ್ತಿದೆ ಎಂದು 'ಜಿಯೋಫೋನ್ ದಿಪಾವಳಿ 2019' ಆಫರ್ ಪ್ರಕಟಣೆಯಲ್ಲಿ ಕಂಪೆನಿ ಹೇಳಿಕೊಂಡಿದೆ.

Best Mobiles in India

English summary
During the festive season of Dussehra and Diwali, Jio is making the JioPhone available for a special price of only Rs 699 as against the current price of Rs. 1500. This is a clear saving of over Rs. 800 without any special conditions like having to exchange your old phone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X