Subscribe to Gizbot

ಕೇವಲ 699 ರೂ.ಗೆ 4Gವೋಲ್ಟ್ ಸ್ಮಾರ್ಟ್‌ಫೋನ್ ಖರೀದಿಸಿ!!

Written By:

ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ಜಿವಿ ಮೊಬೈಲ್ಸ್ ಕಂಪೆನಿಯು ತನ್ನ ಬಜೆಟ್ ಬೆಲೆಯ 4ಜಿ ವೋಲ್ಟ್ ಸ್ಮಾರ್ಟ್‌ಫೋನ್‌ ಅನ್ನು ಕೇವಲ 699 ರೂಪಾಯಿಗಳಿಗೆ ನೀಡಲು ಮುಂದಾಗಿದೆ. ರಿಲಯನ್ಸ್ ಜಿಯೊ ಜತೆಗಿನ ಸಹಭಾಗಿತ್ವದಲ್ಲಿ 2,200 ರೂಪಾಯಿಗಳ ಕ್ಯಾಶ್‌ಬ್ಯಾಕ್ ಹಣದೊಂದಿಗೆ ಗ್ರಾಹಕರಿಗೆ ಈ ಸೌಲಭ್ಯ ನೀಡಲಾಗಿದೆ.!!

ಗ್ರಾಮಾಂತರ ಪ್ರದೇಶಗಳ ಜನರು ಕೂಡ ಸ್ಮಾರ್ಟ್‌ಫೋನ್ ಬಳಕೆ ಮಾಡಬೇಕೆಂಬ ಉದ್ದೇಶದಿಂದ ಕೈಗೆಟುಕುವ ದರದಲ್ಲಿ ಈ ಸ್ಮಾರ್ಟ್‌ಫೋನ್ ನೀಡಲಾಗುತ್ತಿದೆ. ಇದರಿಂದ ಗ್ರಾಮಾಂತರ ಪ್ರದೇಶದಲ್ಲಿಯೂ ಇಂಟರ್‌ನೆಟ್ ಬಳಕೆ ಹೆಚ್ಚಾಗಲಿದೆ ಎಂದು ಜಿವಿ ಮೊಬೈಲ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಂಕಜ್ ಆನಂದ್ ಅವರು ಹೇಳಿದ್ದಾರೆ.!!

ಕೇವಲ 699 ರೂ.ಗೆ 4Gವೋಲ್ಟ್ ಸ್ಮಾರ್ಟ್‌ಫೋನ್ ಖರೀದಿಸಿ!!

ಗ್ರಾಹಕರಿಗೆ ಹಣ ಮರಳಿಸುವ ಕೊಡುಗೆಯಡಿ ಸ್ಮಾರ್ಟ್‌ಫೋನನ್ನು ಮಾರಟಕ್ಕಿಡಲಾಗಿದ್ದು, ಮಾರುಕಟ್ಟೆಯಲ್ಲಿ 2899 ರೂಪಾಯಿಗಳ ಬೆಲೆ ಹೊಂದಿರುವ ಈ ಪೋನ್ ಅನ್ನು 699 ರೂಪಾಯಿಗಳಿಗೆ ನೀಡಲಾಗುತ್ತಿದೆ. ಹಾಗಾದರೆ, ಜಿವಿ ಕಂಪೆನಿಯ ಮೊಬೈಲ್ ಯಾವುದು? ಕೇವಲ 699 ರೂಪಾಯಿಗಳಿಗೆ ಸ್ಮಾರ್ಟ್‌ಫೋನ್ ಖರೀದಿಸುವುದು ಹೇಗೆ? ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿವಿ ಎನರ್ಜಿ ಇ 3 (Energy E3)!!

ಜಿವಿ ಎನರ್ಜಿ ಇ 3 (Energy E3)!!

ಜಿವಿ ಮೊಬೈಲ್ಸ್ ಕಂಪೆನಿಯ ಜಿವಿ ಎನರ್ಜಿ ಇ3 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 2899 ರೂಪಾಯಿಗಳ ಬೆಲೆ ಹೊಂದಿರುವ ಬಜೆಟ್ ಬೆಲೆಯ ಸ್ಮಾರ್ಟ್‌ಪೋನ್ ಆಗಿದೆ.ರಿಲಯನ್ಸ್ ಜಿಯೊ ಜತೆಗಿನ ಸಹಭಾಗಿತ್ವದಲ್ಲಿ 2,200 ರೂಪಾಯಿಗಳ ಕ್ಯಾಶ್‌ಬ್ಯಾಕ್ ಹಣದೊಂದಿಗೆ ಈ ಮೊಬೈಲ್ ಅನ್ನು 699 ರೂ.ಗೆ ಮೊಬೈಲ್ ಖರೀದಿಸಬಹುದಾಗಿದೆ.!!

ಜಿವಿ ಎನರ್ಜಿ ಇ3 ಪೀಚರ್ಸ್ ಯಾವುವು?

ಜಿವಿ ಎನರ್ಜಿ ಇ3 ಪೀಚರ್ಸ್ ಯಾವುವು?

699 ರೂಪಾಯಿಗಳ ಪರಿಣಾಮಕಾರಿ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿವಿ ಎನರ್ಜಿ ಇ3 ಸ್ಮಾರ್ಟ್‌ಫೋನ್ ಡ್ಯುಯಲ್ 4ಜಿ ಸಿಮ್ ಸ್ಲಾಟ್, 4 ಇಂಚಿನ ಸ್ಕ್ರೀನ್, 5 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 2 ಎಂಪಿ ಫ್ರಂಟ್ ಕ್ಯಾಮೆರಾಗಳನ್ನು ಹೊಂದಿದೆ.

ಕ್ಯಾಶ್‌ಬ್ಯಾಕ್ ಹೇಗೆ ಸಿಗಲಿದೆ?

ಕ್ಯಾಶ್‌ಬ್ಯಾಕ್ ಹೇಗೆ ಸಿಗಲಿದೆ?

2899 ರೂಪಾಯಿಗಳನ್ನು ಪಾವತಿಸಿ ಜಿವಿ ಎನರ್ಜಿ ಇ3 ಸ್ಮಾರ್ಟ್‌ಫೋನ್ ಖರೀದಿಸಿದ ನಂತರ ಗ್ರಾಹಕರು ಜಿಯೋಗೆ ಮೊದಲ ರೀಚಾರ್ಜ್ ಮಾಡಿಸಬೇಕಾಗುತ್ತದೆ. ಸ್ಮಾರ್ಟ್‌ಫೋನಿಗೆ ಜಿಯೋ ಆಪ್ ಡೌನ್‌ಲೋಡ್ ಮಾಡಿ, ಆಪ್‌ ಮೂಲಕವೇ ಹಣ ಪಾವತಿಸಿದರೆ 2,200 ರೂ. ಬೆಲೆಯ ವೋಚರ್‌ಗಳು ಗ್ರಾಹಕರಿಗೆ ಸಿಗಲಿವೆ.!!

ಕ್ಯಾಶ್‌ಬ್ಯಾಕ್ ಬಳಕೆ ಹೇಗೆ?

ಕ್ಯಾಶ್‌ಬ್ಯಾಕ್ ಬಳಕೆ ಹೇಗೆ?

ಮೈಜಿಯೊ ಆಪ್‌ನಲ್ಲಿ ₹ 198 ಅಥವಾ ₹ 299 ರೀ ರೀಚಾರ್ಜ್ ಮಾಡಿಕೊಂಡರೆ ಮಾತ್ರ ಈ ಹಣ ವಾಪಸ್‌ ಕೊಡುಗೆ ಲಭ್ಯವಿರುತ್ತದೆ. ಮಾರ್ಚ್ 31 ರ ಒಳಗಾಗಿ ಜಿಯೋ ಆಪ್‌ನಲ್ಲಿ ಯಾವುದಾದರೂ ಒಂದು ರೀಚಾರ್ಜ್ ಮಾಡಿದ ನಂತರ ಗ್ರಾಹಕರ ಜಿಯೋ ಖಾತೆಗೆ 50 ರೂಪಾಯಿಗಳ 40 ವೋಚರ್‌ಗಳು ದೊರೆಯಲಿವೆ.!!

Do you know what all u can do by Downloading Hike Messenger app.?
ಎಲ್ಲಾ ಬ್ರ್ಯಾಂಡ್‌ಗಳಿಗೂ ಕ್ಯಾಶ್‌ಬ್ಯಾಕ್!!

ಎಲ್ಲಾ ಬ್ರ್ಯಾಂಡ್‌ಗಳಿಗೂ ಕ್ಯಾಶ್‌ಬ್ಯಾಕ್!!

ಜಿವಿ ಮೊಬೈಲ್ಸ್ ಕಂಪೆನಿಯ ಜಿವಿ ಎನರ್ಜಿ ಇ3 ಸ್ಮಾರ್ಟ್‌ಫೋನಿಗೆ ಮಾತ್ರವಲ್ಲದೇ ತನ್ನ 4ಜಿ ವೋಲ್ಟ್ ಸ್ಮಾರ್ಟ್‌ಫೋನ್‌ಗಳ ಎಲ್ಲಾ ಶ್ರೇಣಿಗಳ ಮೇಲೆ ರಿಲಯನ್ಸ್ ಜಿಯೊ ಕೊಡುಗೆಯಾದ ₹2,200ಗಳ ಹಣ ವಾಪಸ್‌ ಸೌಲಭ್ಯ ಆಫರ್ ಅನ್ನು ನೀಡಿದೆ. ನೀವು ಜಿವಿ ಕಂಪೆನಿಯ ಯಾವುದೇ ಫೋನ್‌ ಖರೀದಿಸಿದರು ಈ ಆಫರ್ ಸೇರಿಕೊಳ್ಳುತ್ತದೆ.!!

ಓದಿರಿ:ಪ್ರತಿಯೋರ್ವ ಭಾರತೀಯನ ಸ್ಮಾರ್ಟ್‌ಫೋನಿನಲ್ಲಿ ಇರಲೇಬೇಕಾದ ಸರ್ಕಾರಿ ಆಪ್‌ಗಳಿವು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
4G smartphones will be available for customers at an effective price starting Rs 699 a unit under an offer from Reliance Jio . to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot