ಟೈಟೆನಿಯಮ್ ಜಂಬೊ ಸ್ಮಾರ್ಟ್‌ಫೋನ್: ಬದಲಾಯಿಸಲಿದೆ ಬಜೆಟ್ ಫೋನ್ ಇತಿಹಾಸ
ಈ ಸ್ಮಾರ್ಟ್‌ಫೋನ್ 4G VoLTE ಸಪೋರ್ಟ್ ಮಾಡಲಿದ್ದು, 4000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಸುಮಾರು 400 ಗಂಟೆಗಳ ಸ್ಟಾಂಡ್ ಬೈ ನೀಡಲಿದ್ದು, 16 ಗಂಟೆಗಳ ಟಾಕ್ ಟೈಮ್ ನೀಡಲಿದೆ ಎನ್ನಲಾಗಿದೆ.
ಕಾರ್ಬನ್ ಮೊಬೈಲ್ ಈ ಹಿಂದೆ ಏರ್‌ಟೆಲ್ ಜೊತೆಗೂಡಿ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಲಾಂಚ್ ಮಾಡಿತ್ತು. ಸದ್ಯ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಅದುವೇ ಟೈಟೆನಿಯಮ್ ಜಂಬೊ ಸ್ಮಾರ್ಟ್‌ಫೋನ್. ಈ ಫೋನ್ ರೂ. 6490ಕ್ಕೆ ಮಾರಾಟವಾಗುತ್ತಿದೆ.

ಓದಿರಿ: ಉಚಿತ ವೈ-ಫೈ ಬಳಕೆ ಮುನ್ನ ಎಚ್ಚರ: ಶೇ.41 ಫೋನ್‌ಗಳು ಹ್ಯಾಕ್, ನಿಮ್ಮದು ಆಗಬಹುದು ಎಚ್ಚರ..!
ಈ ಸ್ಮಾರ್ಟ್‌ಫೋನ್ 4G VoLTE ಸಪೋರ್ಟ್ ಮಾಡಲಿದ್ದು, 4000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಸುಮಾರು 400 ಗಂಟೆಗಳ ಸ್ಟಾಂಡ್ ಬೈ ನೀಡಲಿದ್ದು, 16 ಗಂಟೆಗಳ ಟಾಕ್ ಟೈಮ್ ನೀಡಲಿದೆ ಎನ್ನಲಾಗಿದೆ.

5 ಇಂಚಿನ ಡಿಸ್‌ಪ್ಲೇ:
ಈ ಫೋನಿನಲ್ಲಿ 5 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು HD ಗುಣಮಟ್ಟದ ಡಿಸ್‌ಪ್ಲೇ ಇದಾಗಿದೆ. ಇದರೊಂದಿಗೆ 1.3GHz ವೇಗದ ಕ್ವಾಡ್ ಕೋರ್ ಪ್ರೋಸೆಸರ್ ಅನ್ನು ನೀಡಲಾಗಿದೆ.

2GB RAM- 16GB ROM:
ಕಾರ್ಬನ್ ಟೈಟೆನಿಯಮ್ ಜಂಬೊ ಸ್ಮಾರ್ಟ್‌ಫೋನಿನಲ್ಲಿ ವೇಗದ ಕಾರ್ಯಚರಣೆಗಾಗಿ 2GB RAM ನೀಡಲಾಗಿದೆ. ಇದಲ್ಲದೇ 16GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದಲ್ಲದೇ 64 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

13MP + 8 MP ಕ್ಯಾಮೆರಾ:
ಕಾರ್ಬನ್ ಟೈಟೆನಿಯಮ್ ಜಂಬೊ ಸ್ಮಾರ್ಟ್‌ಫೋನಿನ ಮುಂಭಾಗದಲ್ಲಿ ಸೆಲ್ಫಿಗಾಗಿಯೇ 8 MP ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ LED ಫ್ಲಾಷ್ ಲೈಟ್ ಸಹ ಕಾಣಬಹುದಾಗಿದೆ.

4000mAh ಬ್ಯಾಟರಿ:
ಇದಲ್ಲದೇ ಕಾರ್ಬನ್ ಟೈಟೆನಿಯಮ್ ಜಂಬೊ ಸ್ಮಾರ್ಟ್‌ಫೋನ್ ಉತ್ತಮ ಬ್ಯಾಟರಿ ಬ್ಯಾಕಪ್ ನೀಡಲಿದೆ. ಇದಕ್ಕಾಗಿ 4000mAh ಬ್ಯಾಟರಿಯನ್ನು ನೀಡಲಾಗಿದೆ. ಇದು 400 ಗಂಟೆಗಳ ಸ್ಟಾಂಡ್ ಬೈ ನೀಡಲಿದ್ದು, 16 ಗಂಟೆಗಳ ಟಾಕ್ ಟೈಮ್ ಹೊಂದಿದೆ ಎನ್ನಲಾಗಿದೆ.

4G VoLTE ಸಪೋರ್ಟ್:
ಕಾರ್ಬನ್ ಟೈಟೆನಿಯಮ್ ಜಂಬೊ ಸ್ಮಾರ್ಟ್‌ಫೋನ್ 4G VoLTE ಸಪೋರ್ಟ್ ಮಾಡಲಿದ್ದು, ಜಿಯೋ ಸಿಮ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ USB OTGಯನ್ನು ಕಾಣಬಹುದಾಗಿದೆ.

ಇತರೆ ಅಂಶಗಳು:
ಡ್ಯುಯಲ್ ಸಿಮ್ ಕಾರ್ಡ್ ಬಳಕೆ ಮಾಡಿಕೊಳ್ಳುವ ಅವಕಾಶ ಈ ಫೋನ್ ನಲ್ಲಿ ಕಾಣಬಹುದಾಗಿದೆ, EDGE/ GPRS, GPS/ A-GPS ಬ್ಲೂಟೂತ್, ವೈ-ಫೈ ಸಪೋರ್ಟ್ ಮಾಡಲಿದೆ.


Click it and Unblock the Notifications








